ಶುರುವಾಗಿದೆ ಹೊಸ ಫುಡ್ ಟ್ರೆಂಡ್; ನಾನ್ ವೆಜ್‌ನಿಂದ ವೆಜ್ ಕಡೆ ಬರ್ತಿದ್ದಾರೆ ಸೆಲಬ್ರಿಟಿಗಳು!
veganism ದಿನ ದಿನ ಜನಪ್ರಿಯ ಗೊಳುತ್ತಿದೆ. ಮೊಟ್ಟೆ, ಮಾಂಸ, ಹಾಲಿನ ಉತ್ಪನ್ನಗಳನ್ನು ಆಹಾರದಲ್ಲಿ ತ್ಯಜಿಸುವುದು ಇದರ ಮುಖ್ಯ ಅಂಶ. ಆದರೆ ವೀಗನ್ ಯಾವುದೇ ಡಯಟ್ ಅಲ್ಲ ಒಂದು ಜೀವನಶೈಲಿ. ಕೆಲವರು ಆರೋಗ್ಯದ ದೃಷ್ಟಿಯಿಂದ ವೀಗನ್ ಆದರೆ, ಇನ್ನೂ ಕೆಲವರು ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕಿದೆ ಎಂಬ ನೈತಿಕ ಸಿದ್ಧಾಂತ ಪಾಲಿಸಿದರೆ, ಸ್ವಲ್ಪ ಜನ ಪರಿಸರದ ಸಮತೋಲನಕ್ಕಾಗಿ ವೀಗನ್ ಜೀವನಶೈಲಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹಲವು ಸೆಲಬ್ರೆಟಿಗಳು ಈ ಜೀವನಶೈಲಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಫಿಟ್‌ನೆಸ್ ದೃಷ್ಟಿಯಿಂದ ವೀಗೆನ್ ಆಗಿರುವುದು ತಿಳಿದಿರುವ ವಿಷಯ. ಈ ಜೀವನಶೈಲಿಯಲ್ಲಿ ಹೇಗೆ ಗೊತ್ತಾ.
1944ರಲ್ಲಿ ಮೊದಲಿಗೆ ಇಂಗ್ಲೆಂಡ್‌ನಲ್ಲಿ ಒಂದು ಸಣ್ಣ ಗುಂಪಿನಿಂದ ಪ್ರಾರಂಭವಾಗಿದು ವೀಗನ್ ಜೀವನಶೈಲಿ.
ಎಲ್ಲಾ ಪ್ರಾಣಿ ಉತ್ಪನ್ನಗಳನ್ನು ಹೊರತುಪಡಿಸುವುದು ಮತ್ತು ಪ್ರಾಣಿಗಳ ಶೋಷಣೆಯನ್ನು ಸಾಧ್ಯವಾದಷ್ಟು ಮಿತಿಗೊಳಿಸಲು ಪ್ರಯತ್ನಿಸುವುದು ಜೀವನಶೈಲಿಯಲ್ಲಿಯ ಉದ್ದೇಶ.
ಪ್ರಾಣಿ ಮೂಲದ ಆಹಾರಗಳನ್ನು ಬಿಟ್ಟು ಎಲ್ಲಾ ಹಣ್ಣು, ತರಕಾರಿಗಳು ಧವಸ ಧ್ಯಾನಗಳು ಆಹಾರದಲ್ಲಿ ಬಳಸುವುದು ವೀಗನ್ ಜೀವನ ಕ್ರಮ.
ನೀವು ವೀಗನ್ ಆಗಿದ್ದಲ್ಲಿ ಹೊರಗೆ ತಿನ್ನಲು ಯೋಚಿಸ ಬೇಕಿಲ್ಲ. ಈಗ ವೀಗನ್‌ಗಳಿಂದೇ ಹಲವು ಹೋಟಲ್‌ಗಳಿವೆ.
ಬೆಂಗಳೂರಿನಲ್ಲೂ ವೀಗನ್ ರೆಸ್ಟೋರೆಂಟ್‌ಗಳು ಜನಪ್ರಿಯಗೊಳ್ಳುತ್ತಿವೆ.
ಸಸ್ಯ ಆಧಾರಿತ ಆಹಾರವು ಹೃದ್ರೋಗ, ಟೈಪ್ 2 ಡಯಾಬಿಟಿಸ್, ಕ್ಯಾನ್ಸರ್ ಮತ್ತು ಅಕಾಲಿಕ ಮರಣದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಾಬಿತಾಗಿದೆ.
ನಮ್ಮ ತಿಂಡಿಗಳಾದ ಇಡ್ಲಿ, ಪೂರಿ ದೋಸೆಗಳು ಬೆಸ್ಟ್ ವೀಗನ್ ಪುಡ್.
ವೀಗನ್ ಬೇಕರಿ ಪ್ರಾಡೆಕ್ಟ್‌ಗಳು ಸಹ ಮಾರುಕಟ್ಟೆಯಲ್ಲಿ ದೊರೆಯುತ್ತವೆ.
ಸೋಯಾ, ಬಾದಾಮಿ, ತೆಂಗಿನಕಾಯಿ ಮತ್ತು ಓಟ್ಸ್ ಮಿಲ್ಕ್‌ಗಳು ಹಾಲಿನ ಬದಲಾಗಿ ಬಳಸಲಾಗುತ್ತದೆ
ಮದ್ಯ ಪ್ರಿಯರಿಗಾಗಿ ಸಂಪೂರ್ಣ ಸಸ್ಯಹಾರಿ ವೀಗನ್ ಬಿಯರ್‌ಗಳು ಸಹ ಲಭ್ಯ.