ಕೋರೋನಾ ಸಮಯದ 3 ತಿಂಗಳಲ್ಲಿ ಬಿಲಿಯೇನರ್‌ ಆದ ಬಡ ದಂಪತಿ

First Published 6, Jul 2020, 5:07 PM

ಕೊರೋನಾ ವೈರಸ್ ವಿಶ್ವದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಪರಿಣಾಮ ಬೀರಿದೆ. ಈ ವೈರಸ್‌ನಿಂದಾಗಿ ಕೆಲವರು ಪ್ರೀತಿಪಾತ್ರರನ್ನು ಕಳೆದುಕೊಳ್ಳುತ್ತಿದ್ದರೆ, ಮತ್ತೆ ಕೆಲವು ಕುಟುಂಬಗಳ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಸಾಂಕ್ರಾಮಿಕ ರೋಗವು ಅನೇಕ ದೇಶಗಳ ಆರ್ಥಿಕ ಪರಿಸ್ಥಿತಿಯನ್ನೇ ಬುಡ ಮೇಲು ಮಾಡಿದೆ. ಆದರೆ ಇಂತಹ ಪರಿಸ್ಥಿತಿಯಲ್ಲಿಯೂ ಕೆಲವು ಅದೃಷ್ಟವಂತರು ಇದ್ದಾರೆ. ಯುಕೆಯಲ್ಲಿ ವಾಸಿಸುವ ಈ ದಂಪತಿಗಳ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ರಾಚೆಲ್ ಮಾಂಟೇಗ್, 48, ಮತ್ತು ಅವಳ ಪತಿ ಆಂಡ್ರ್ಯೂ, 47, ಮಾರ್ಚ್‌ನಲ್ಲಿ ಹೊಸ ವ್ಯವಹಾರವೊಂದನ್ನು ಪ್ರಾರಂಭಿಸಿದರು. ಕೇವಲ ಮೂರು ತಿಂಗಳಲ್ಲಿಯೇ,  ಬಾರೀ ಯಶಸ್ಸು ಕಂಡು, ಜೂನ್ ಅಂತ್ಯದಲ್ಲಿ ಕೋಟ್ಯಾಧಿಪತಿಯಾಗಿದ್ದಾರೆ. ಅಷ್ಟಕ್ಕೂ ಇಷ್ಟು ಬೇಗ ಈ ದಂಪತಿಯನ್ನು ಸಿರವಂತರಾಗಿಸಿರುವ ವ್ಯವಹಾರ ಯಾವುದು?

ಯುಕೆ ಯಲ್ಲಿ, ಮಾರ್ಚ್ ತಿಂಗಳಲ್ಲಿ ಕೊರೋನಾ ಗಂಭೀರವಾದಾಗ ಆಂಡ್ರ್ಯೂ ಮತ್ತು ಪತ್ನಿ ರಾಚೆಲ್ ಹ್ಯಾಂಡ್ ಸ್ಯಾನಿಟೈಜರ್ ವ್ಯವಹಾರ ಪ್ರಾರಂಭಿಸಿದರು. ಈ ವ್ಯವಹಾರವು ಈಗ ತಮ್ಮ ಜೀವನವನ್ನು ಬದಲಾಯಿಸುತ್ತದೆ ಎಂದು ಈ ಬ್ರಿಟಿಷ್ ದಂಪತಿ ಕನಸು ಮನಸ್ಲಿನಲ್ಲಿಯೂ ಎಂದು ಕೊಂಡಿರಲಿಲ್ಲ.

ದಂಪತಿ ಕಳೆದ 15 ವರ್ಷಗಳಿಂದ ಆಸ್ತಿ ಹೂಡಿಕೆಯಲ್ಲಿ ಕೆಲಸ ಮಾಡುತ್ತಿದ್ದು, ಕಷ್ಟಪಡುತ್ತಿದ್ದರು. ಲಾಕ್‌ಡೌನ್‌ನಲ್ಲಿ, ಅವರು ವ್ಯವಹಾರವನ್ನು ಬದಲಾಯಿಸಲು ನಿರ್ಧರಿಸಿದರು.

ನಾಲ್ಕು ಮಕ್ಕಳ ಪೋಷಕರಾದ ಈ ಜೋಡಿ ಸ್ನೇಹಿತರ ಡಿಕೆಡ್‌ ಡಿಸ್ಟಿಲರಿ ಎಂಬ ಸಂಸ್ಥೆಯಲ್ಲಿ ಕೆಲಸ ಪ್ರಾರಂಭಿಸಿದರು. ಇಬ್ಬರೂ ಮಾರ್ಚ್‌ನಿಂದ ಹ್ಯಾಂಡ್ ಸ್ಯಾನಿಟೈಜರ್ ವ್ಯವಹಾರದತ್ತ ಗಮನ ಹರಿಸಿದರು. ಕಾರ್ಮಿಕರಿಗೆ ಮತ್ತು ಸಾರ್ವಜನಿಕರಿಗೆ ಕ್ಲಿಯರ್‌ ವಾಟರ್‌ ಹೈಜೀನ್‌ ಸ್ಯಾನಿಟೈಜರ್‌ ತಯಾರಿಸಿದರು.

ಈ ಪ್ರಾಡೆಕ್ಟ್‌ ಬಹಳ ಜನಪ್ರಿಯವಾಯಿತು. ಇದರ ಅರ್ಧ ಲೀಟರ್ ಬಾಟಲಿಯ ಬೆಲೆ 27 ನೂರು ರೂಪಾಯಿ. ಈ ಸ್ಯಾನಿಟೈಜರ್‌ ನಿರ್ಮಿಸುತ್ತಿದ್ದ ಕಂಪನಿಯು ಹಣಕಾಸಿನ ಕಾರಣಗಳಿಂದಾಗಿ ಮುಚ್ಚುವ ಅಂಚಿನಲ್ಲಿತ್ತು.

ಆದರೆ ಈ ದಂಪತಿ, ಸಮಯದ ಅವಶ್ಯಕತೆಯನ್ನು ಅರ್ಥಮಾಡಿಕೊಂಡು, ಅದನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ಜೂನ್‌ ವೇಳೆಗೆ, ಈ ದಂಪತಿಗಳು 2 ಬಿಲಿಯನ್ 80 ಕೋಟಿಗಳ ಮಾರುಕಟ್ಟೆಯನ್ನು ವ್ಯಾಪಿಸಿದ್ದರು.

ತಮ್ಮ ಯಶಸ್ಸಿನ ಬಗ್ಗೆ ಜನರಿಗೆ ತಿಳಿಸಿದ ಕಪಲ್, ವ್ಯವಹಾರದಲ್ಲಿ ಹಲವು ಸಮಸ್ಯೆಗಳಿವೆ ಎಂದು ಹೇಳಿದರು. ಪ್ಲಾಸ್ಟಿಕ್ ಬಾಟಲಿಗಳಿಗಾಗಿ ಬ್ರಿಟನ್ ಚೀನಾವನ್ನು ಹೆಚ್ಚು ಅವಲಂಬಿಸಿತ್ತು. ಆದರೆ ನಂತರ ಅವರು ಸ್ಥಳೀಯ ಮಾರುಕಟ್ಟೆಯನ್ನು ಸಂಪರ್ಕಿಸುವ ಮೂಲಕ ಮರುಬಳಕೆ ಮಾಡಬಹುದಾದ ಬಾಟಲಿಗಳನ್ನು ಆರಿಸಿಕೊಂಡರು.

ಅವರ ಉತ್ಪನ್ನಕ್ಕೆ ಯುಕೆಯಲ್ಲಿ ಹೆಚ್ಚಿನ ಬೇಡಿಕೆಯಿದ್ದು ಈಗ  ಸ್ಯಾನಿಟೈಜರ್ ದೇಶದ ಅನೇಕ ಭಾಗಗಳಿಗೆ ಸರಬರಾಜು ಮಾಡಲಾಗುತ್ತಿದೆ.

ಆಶ್ಚರ್ಯಕರ ಅಂದರೆ ಚೀನಾ ವೈರಸ್ ಹರಡಿತು. ಆದರೂ ಚೀನಾವೇ ಬೇರೆ ದೇಶಗಳಿಗೆ ಸ್ಯಾನಿಟೈಜರ್ ಮತ್ತು ಪಿಪಿಇ ಕಿಟ್ ಪೂರೈಸುತ್ತಿದೆ ಎನ್ನುತ್ತಾರೆ ಈ ಕಪಲ್‌.

ಮುಂದೆ ಹೆಚ್ಚಿನ ಹೈಜೀನ್‌ ಪ್ರಾಡೆಕ್ಟ್‌ಗಳನ್ನು ಪ್ರಾರಂಭಿಸಲಿದ್ದಾರೆ. ಅಂಗಡಿಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳ ಹೊರಗೆ ಇಡುವ ಸ್ಮಾರ್ಟ್ ಸ್ಟ್ಯಾಂಡ್‌ಗಳೂ ಇದರಲ್ಲಿ ಒಳಗೊಂಡಿವೆ. ಮುಂದಿನ ವಾರ  ಇದನ್ನು ಬಿಡುಗಡೆ ಮಾಡಲಾಗುವುದು. ಪ್ರಸ್ತುತ ದಂಪತಿಗಳ ವ್ಯವಹಾರದ ಯಶಸ್ಸು ಸುದ್ದಿಯಲ್ಲಿದ್ದು ಜನರು ಇವರ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ.

loader