ಬೀದಿಯಲ್ಲಿ ಮಾರೋ ಬಟ್ಟೆ ಸತ್ತವರದ್ದಾ? ನಟಿ Kavya Shastri ಹೇಳೋ ಟಿಪ್ಸ್ ಫಾಲೋ ಮಾಡಿ
ಬೀದಿ ಬದಿಯಲ್ಲಿ ಕಡಿಮೆ ಬೆಲೆಗೆ ಬಟ್ಟೆ ಸಿಗುತ್ತೆ ಅಂತ ಒಂದಿಷ್ಟು ಬಟ್ಟೆಯನ್ನು ಮನೆಗೆ ತರ್ತೇವೆ. ವಾಶ್ ಮಾಡ್ದೆ ಹೊಸ ಬಟ್ಟೆಯನ್ನು ಹಾಗೆ ಧರಿಸ್ತೇವೆ ಕೂಡ. ಆದ್ರೆ ಇದ್ರಿಂದ ಆಗೋ ಸಮಸ್ಯೆ ಏನು? ಬಟ್ಟೆ ಎಲ್ಲಿಂದ ಬರುತ್ತೆ? ಇದಕ್ಕೆಲ್ಲ ಉತ್ತರ ಇಲ್ಲಿದೆ.

ಬೀದಿ ಬದಿ ಶಾಪಿಂಗ್
ನೂರಕ್ಕೆ ಒಂದು, ಐದುನೂರಕ್ಕೆ ಮೂರು ಅಂತ ಕೂಗಿದಾಗ ಕಿವಿ ನೆಟ್ಟಗಾಗುತ್ತೆ. ಬಟ್ಟೆ ಹೇಗಿದೆ ಅಂತ ನೋಡೋಕೆ ಹೋದವರು, ಪ್ರತಿನಿತ್ಯ ಬಳಸೋಕೆ ತೊಂದ್ರೆ ಇಲ್ಲ ಅಂತ ಖರೀದಿ ಮಾಡ್ತಾರೆ. ಬಡವರಿಗೆ ಇಂಥ ಬಟ್ಟೆ ಖರೀದಿ ಅನಿವಾರ್ಯವಾದ್ರೆ ಮಧ್ಯಮವರ್ಗದವರು ದುಡ್ಡು ಉಳಿಸೋ ಕಾರಣ ಹೇಳಿ ಇಂಥ ಬಟ್ಟೆ ಖರೀದಿ ಮಾಡ್ತಾರೆ.
ಹೆಣಕ್ಕೆ ಹಾಕಿರೋ ಬಟ್ಟೆ
ಇತ್ತೀಚಿಗೆ ಬೀದಿ ಬದಿಯಲ್ಲಿ ರಾಶಿ ಹಾಕಿಕೊಂಡು ಮಾರಾಟ ಮಾಡುವ ಕಡಿಮೆ ಬೆಲೆ ಬಟ್ಟೆಗಳು ಹೆಣಕ್ಕೆ ಹಾಕಿದ ಬಟ್ಟೆಗಳು ಎನ್ನುವ ಮಾತು ಕೇಳಿ ಬರ್ತಿದೆ. ಸತ್ತವರ ಬಟ್ಟೆಯನ್ನು ತಂದ ಇಲ್ಲಿ ಮಾರಾಟ ಮಾಡಲಾಗ್ತಿದೆ ಅಂತ ಅನೇಕರು ಆರೋಪ ಮಾಡ್ತಿದ್ದಾರೆ.
ಬೀದಿ ಬಟ್ಟೆ ಬಗ್ಗೆ ನಟಿ ಕಾವ್ಯ ಹೇಳಿದ್ದೇನು?
ಬೀದಿ ಬದಿಯಲ್ಲಿ ಮಾರಾಟವಾಗುವ ಈ ಬಗ್ಗೆ ನಟಿ ಕಾವ್ಯ ಶಾಸ್ತ್ರಿ ಜನರಿಗೆ ಮಾಹಿತಿ ನೀಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಅವರು ಪೋಸ್ಟ್ ಮಾಡಿದ್ದಾರೆ. ಬೀದಿ ಬದಿ ಬಟ್ಟೆ ಖರೀದ ಮಾಡುವ ವೇಳೆ ಎಚ್ಚರಿಕೆವಹಿಸುವಂತೆ ಅವರು ಸಲಹೆ ನೀಡಿದ್ದಾರೆ.
ಎಲ್ಲಿಂದ ಬರುತ್ವೆ ಈ ಬಟ್ಟೆ?
ನಟಿ ಕಾವ್ಯ ಪ್ರಕಾರ, ಬೀದಿ ಬದಿಯಲ್ಲಿ ರಾಶಿ ರಾಶಿ ಹಾಕಿಕೊಂಡು ಮಾರಾಟ ಮಾಡುವ ಎಲ್ಲ ಬಟ್ಟೆಗಳು ಹೆಣಕ್ಕೆ ಹಾಕಿದ ಬಟ್ಟೆ ಅನ್ನೋದಕ್ಕೆ ಸಾಧ್ಯವಿಲ್ಲ. ಆದ್ರೆ ಹೆಣಕ್ಕೆ ಹಾಕಿದ ಬಟ್ಟೆ ಅಲ್ವೇ ಅಲ್ಲ ಅನ್ನೋದಕ್ಕೂ ಸಾಧ್ಯವಿಲ್ಲ. ಅವರ ಪ್ರಕಾರ, ಫ್ಯಾಕ್ಟರಿಯಿಂದ ರಿಜೆಕ್ಟ್ ಆಗಿರುವ, ಆಮದು – ರಫ್ತಿನಲ್ಲಿ ಕ್ವಾಲಿಟಿ ಕಾರಣಕ್ಕೆ ರಿಜೆಕ್ಟ್ ಆಗಿರುವ ಬಟ್ಟೆ, ಸಣ್ಣ ಡ್ಯಾಮೇಜ್ ಅಥವಾ ಹೊಲಿಗೆ ಸರಿಯಾಗಿಲ್ಲದ ಬಟ್ಟೆಯನ್ನು ಬೀದಿಯಲ್ಲಿ ಮಾರಾಟ ಮಾಡಲಾಗುತ್ತೆ. ಇದಲ್ದೆ ತುಂಬಾ ದಿನಗಳಿಂದ ಸೇಲ್ ಆಗದಿರುವ ಬಟ್ಟೆಗಳು, ದೊಡ್ಡ ದೊಡ್ಡ ದೇಶಗಳಲ್ಲಿ ಡೊನೆಟ್ ಮಾಡುವ ಹಳೆ ಬಟ್ಟೆಗಳು ಹಾಗೂ ಸತ್ತವರ ಬಟ್ಟೆಗಳನ್ನು ಮನೆಯವರು ಡೊನೆಟ್ ಮಾಡಿದಾಗ ಆ ಎಲ್ಲ ಬಟ್ಟೆಗಳನ್ನು ಬೀದಿಯಲ್ಲಿ ಮಾರಾಟ ಮಾಡಲಾಗುತ್ತೆ.
ಇಂಥ ಬಟ್ಟೆ ಖರೀದಿಸಿದ್ರೆ ಏನಾಗುತ್ತೆ?
ಸಾಮಾನ್ಯವಾಗಿ ಈಗಾಗಲೇ ಒಬ್ಬರು ಧರಿಸಿದ್ದ ಬಟ್ಟೆಯನ್ನು ನೀವು ಧರಿಸಿದಾಗ ಅವರ ಕರ್ಮ ಬಟ್ಟೆಯಲ್ಲಿರುತ್ತೆ. ಅವ್ರ ಕರ್ಮ ನಮಗೆ ಅಂಟಿಕೊಲ್ಳುವ ಅಪಾಯ ಇದೆ. ಅಲ್ದೆ ಬ್ಯಾಕ್ಟೀರಿಯಾ ಹಾಗೂ ವೈರಾಣುಗಳು ಇದ್ರಲ್ಲಿರುತ್ವೆ. ಇಂಥ ಬಟ್ಟೆ ಧರಿಸಿದಾಗ ಅನಾರೋಗ್ಯ ಬರುವ ಸಾಧ್ಯತೆ ಹೆಚ್ಚು.
ಪರಿಹಾರ ಏನು?
ಬಟ್ಟೆ ಖರೀದಿ ಮುನ್ನ ಇಂಥ ಬಟ್ಟೆ ಎಲ್ಲಿಂದ ಬಂದಿದೆ ಎಂಬುದನ್ನು ಮೊದಲು ಪತ್ತೆ ಮಾಡ್ಬೇಕು. ಬಟ್ಟೆ ಹಾಳಾಗಿದ್ಯಾ, ವಾಸನೆ ಬರ್ತಿದ್ಯಾ ಎಂಬುದನ್ನು ಚೆಕ್ ಮಾಡ್ಕೊಳ್ಬೇಕು. ಬೀದಿ ಬದಿಯಲ್ಲಿ ಖರೀದಿ ಮಾಡಿ ಇಲ್ಲ ದೊಡ್ಡ ಬ್ರ್ಯಾಂಡ್ ಬಟ್ಟೆ ಖರೀದಿ ಮಾಡಿ, ಮನೆಗೆ ಬಂದ್ಮೇಲೆ ಹೊಸ ಬಟ್ಟೆಯನ್ನು ಹಾಗೇ ಬಳಸ್ಬೇಡಿ ಅಂತಾರೆ ಕಾವ್ಯ. ನೀವು ಖರೀದಿ ಮಾಡಿದ ಹೊಸ ಬಟ್ಟೆಯನ್ನು ನೀರಿನಲ್ಲಿ ವಾಶ್ ಮಾಡ್ಬೇಕು. ನೀರಿಗೆ ಚಿಟಕಿ ಉಪ್ಪನ್ನು ಹಾಕಿ, ಬಟ್ಟೆ ನೆನೆಸಿಟ್ಟು ವಾಶ್ ಮಾಡಿದ ನಂತ್ರ ಬಿಸಿಲಿನಲ್ಲಿ ಒಣಗಿಸಿ ಬಳಸಬೇಕು.
ಇದು ಅಪಾಯಕಾರಿ
ಯಾವುದೇ ನಕಲಿ ಬ್ರ್ಯಾಂಡ್ ಬಟ್ಟೆಗಳನ್ನು ಬಳಸಬಾರದು. ಇದು ನಿಮ್ಮ ಅಭಿವೃದ್ಧಿಗೆ ಅಡ್ಡಿಯುಂಟು ಮಾಡುತ್ತೆ. ಪ್ರತಿ ದಿನ ಮನೆಯಿಂದ ಹೊರಗೆ ಹೋಗಿ ಬಂದ್ಮೇಲೆ ಆ ಬಟ್ಟೆಯನ್ನು ವಾಶ್ ಮಾಡಿ. ಕಾಲು – ಕೈ ತೊಳೆದು ಬೇರೆ ಕೆಲ್ಸ ಶುರು ಮಾಡಿ ಎನ್ನುತ್ತಾರೆ ಕಾವ್ಯ ಶಾಸ್ತ್ರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

