- Home
- Life
- Mosquito Prevention: ಗುಡ್‌ನೈಟ್, ಸೊಳ್ಳೆ ಬತ್ತಿ ಎಲ್ಲ ಬೇಡ; ರಾತ್ರಿ ಸೊಳ್ಳೆ ಕಚ್ಚಬಾರದು ಅಂದ್ರೆ ಇಷ್ಟು ಮಾಡಿ ಸಾಕು!
Mosquito Prevention: ಗುಡ್‌ನೈಟ್, ಸೊಳ್ಳೆ ಬತ್ತಿ ಎಲ್ಲ ಬೇಡ; ರಾತ್ರಿ ಸೊಳ್ಳೆ ಕಚ್ಚಬಾರದು ಅಂದ್ರೆ ಇಷ್ಟು ಮಾಡಿ ಸಾಕು!
ಮಳೆಗಾಲ ಬಂತೆಂದರೆ ಸಾಕು, ಮನೆಯಲ್ಲಿ ಸೊಳ್ಳೆಗಳ ಕಾಟ ಶುರು. ರಾತ್ರಿಯೆಲ್ಲ ಕಣ್ಣಿಗೆ ನಿದ್ದೆಯೇ ಇರಲ್ಲ. ಅಬ್ಬಾ, ಒಂದೆರಡಲ್ಲ ಇವುಗಳ ಕಾಟ. ಇವುಗಳನ್ನು ಓಡಿಸಲು ಕಾಯಿಲ್, ಎಲೆಕ್ಟ್ರಿಕ್ ರಿಪೆಲ್ಲೆಂಟ್ ಬಳಸಿದ್ರೂ ಪ್ರಯೋಜನವಿಲ್ಲ. ಸೊಳ್ಳೆ ಓಡಿಸಲು ಇಲ್ಲಿದೆ ಸಿಂಪಲ್ ಟ್ರಿಕ್ಸ್ ಇಷ್ಟು ಮಾಡಿ ಸಾಕು.

ಮನೇಲಿ ಸೊಳ್ಳೆಕಾಟಕ್ಕೆ ಬ್ರೇಕ್ ಹಾಕಿ೧
ಮನೇಲಿ ರಾತ್ರಿಯಾಗ್ತಿದ್ದಂತೆ ವಿಪರೀತ ಸೊಳ್ಳೆಗಳ ಕಾಟವಿದ್ರೆ ನೀವು ಈ ಲೇಖನ ಓದ್ತಿರೋದು ಒಳ್ಳೆಯದು. ಸೊಳ್ಳೆಗಳ ಕಾಟ ತಡೆಯಲು ಇದು ಅತ್ಯಂತ ಮುಖ್ಯವಾದ ವಿಷಯ. ನಿಂತ ನೀರಲ್ಲಿ ಸೊಳ್ಳೆಗಳು ಮೊಟ್ಟೆ ಇಟ್ಟು ತಮ್ಮ ಸಂತಾನವನ್ನು ಹೆಚ್ಚಿಸಿಕೊಳ್ಳುತ್ತವೆ. ಮನೆಯ ಸುತ್ತಮುತ್ತ ಇರುವ ಸಣ್ಣ ನೀರಿನ ಗುಂಡಿಗಳು, ಹೂವಿನ ಕುಂಡಗಳ ಕೆಳಗಿನ ಪ್ಲೇಟ್‌ಗಳು, ಹಳೆಯ ಬಕೆಟ್‌ಗಳು, ವಾಟರ್ ಕೂಲರ್‌ಗಳು ಮತ್ತು ಚರಂಡಿಗಳಲ್ಲಿ ನೀರು ನಿಲ್ಲದಂತೆ ಆಗಾಗ ಸ್ವಚ್ಛಗೊಳಿಸುತ್ತಿರಿ. ವಾರಕ್ಕೆ ಎರಡು ಬಾರಿಯಾದರೂ ಸ್ವಚ್ಛಗೊಳಿಸುವುದು ಉತ್ತಮ.
ಸೊಳ್ಳೆ ಕಾಟ ತಪ್ಪಿಸಲು ಹೀಗೆ ಮಾಡಿ
ಕೆಲವು ಸುವಾಸನೆ ಬೀರುವ ಗಿಡಗಳನ್ನು ಮನೆಯ ಮುಂದೆ, ಕಿಟಕಿ ಹಾಗೂ ಬಾಲ್ಕನಿ ಬಳಿ ಇಡುವುದರಿಂದ ಸೊಳ್ಳೆಗಳು ಬರುವುದನ್ನು ತಡೆಯಬಹುದು. ತುಳಸಿ, ಪುದೀನಾ, ಲೆಮನ್‌ಗ್ರಾಸ್, ಚೆಂಡೂ ಹೂವಿನಂತಹ ಗಿಡಗಳನ್ನು ಮನೆಯ ಸುತ್ತ ಬೆಳೆಸಬಹುದು. 'ಸೋಪು ನೀರಿನ ಟ್ರ್ಯಾಪ್' ಮನೆಯಲ್ಲಿ ಸೊಳ್ಳೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಜಾಗದಲ್ಲಿ, ಒಂದು ಸಣ್ಣ ಬಟ್ಟಲಿನಲ್ಲಿ ನೀರು ತೆಗೆದುಕೊಂಡು ಅದಕ್ಕೆ ಸ್ವಲ್ಪ ಡಿಶ್‌ವಾಶ್ ಲಿಕ್ವಿಡ್ ಸೇರಿಸಿ ಇಡಿ. ಸೊಳ್ಳೆಗಳು ಅದರ ಮೇಲೆ ಕುಳಿತರೆ ಮತ್ತೆ ಹಾರಲು ಸಾಧ್ಯವಾಗುವುದಿಲ್ಲ.
ಸೊಳ್ಳೆ ಕಾಟಕ್ಕೆ ಬ್ರೇಕ್ ಹಾಕಲು ನಿಂಬೆ
ಒಂದು ನಿಂಬೆಹಣ್ಣನ್ನು ಅರ್ಧಕ್ಕೆ ಕತ್ತರಿಸಿ, ಅದರಲ್ಲಿ ಕೆಲವು ಲವಂಗಗಳನ್ನು ಚುಚ್ಚಿ. ಇದನ್ನು ಕಿಟಕಿ, ಟೇಬಲ್ ಅಥವಾ ಸೊಳ್ಳೆಗಳು ಹೆಚ್ಚಾಗಿ ಕಾಣಿಸುವ ಜಾಗದಲ್ಲಿ ಇಡಿ. ನಿಂಬೆ ಮತ್ತು ಲವಂಗದ ವಾಸನೆಗೆ ಸೊಳ್ಳೆಗಳು ಮನೆಯೊಳಗೆ ನುಸುಳುವುದಿಲ್ಲ.
ರಾತ್ರಿ ಹೊತ್ತು ಫ್ಯಾನ್ ಗಾಳಿ ಹೆಚ್ಚಿಸಿ
ಫ್ಯಾನ್‌ನ ಗಾಳಿ ಸ್ವಲ್ಪ ಜೋರಾಗಿದ್ದರೆ ಸೊಳ್ಳೆಗಳಿಗೆ ಮನುಷ್ಯರ ಮೇಲೆ ಕೂರಲು ಆಗುವುದಿಲ್ಲ. ಹಾಗಾಗಿ ಸೊಳ್ಳೆಗಳು ಹೆಚ್ಚಾಗಿರುವ ಸಮಯದಲ್ಲಿ ಸೀಲಿಂಗ್ ಅಥವಾ ಟೇಬಲ್ ಫ್ಯಾನ್ ಬಳಸುವುದರಿಂದ ಸ್ವಲ್ಪ ಮಟ್ಟಿಗೆ ಪ್ರಯೋಜನವಾಗುತ್ತದೆ. ವಿಶೇಷವಾಗಿ ಮುಂಜಾನೆ ಮತ್ತು ಸಂಜೆ ಹೊತ್ತು ಸೊಳ್ಳೆಗಳು ಹೆಚ್ಚಾಗಿರುತ್ತವೆ. ಆ ಸಮಯದಲ್ಲಿ ಫ್ಯಾನ್ ಸ್ಪೀಡ್ ಹೆಚ್ಚಿಸಿಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

