- Home
- Life
- Wedding Day Woes: ಸಹಾಯ ಮಾಡಲು ಹಸ್ತ ಚಾಚಿದ ವರನ ಮೇಲೆ ಎಂಜಲು ತುಪ್ಪಿದ ವಧು! ವಿಡಿಯೋ ನೋಡಿ ರಕ್ತ ಕುದಿಯಿತು ಎಂದ ನೆಟ್ಟಿಗರು
Wedding Day Woes: ಸಹಾಯ ಮಾಡಲು ಹಸ್ತ ಚಾಚಿದ ವರನ ಮೇಲೆ ಎಂಜಲು ತುಪ್ಪಿದ ವಧು! ವಿಡಿಯೋ ನೋಡಿ ರಕ್ತ ಕುದಿಯಿತು ಎಂದ ನೆಟ್ಟಿಗರು
ಮದುವೆ ಎನ್ನೋದು ಇಬ್ಬರು ವ್ಯಕ್ತಿಗಳ ಜೀವನದಲ್ಲಿ ಅತ್ಯಂತ ಸಂತೋಷದಾಯಕ ದಿನವಾಗಿರಬೇಕು. ಇದು ಪ್ರೀತಿ, ಗೌರವ, ನಂಬಿಕೆ, ಸಾಂಗತ್ಯದ ಬಂಧವನ್ನು ಸಂಭ್ರಮಿಸುತ್ತದೆ. ಆದರೆ ಮದುವೆ ಆಗೋ ಹೆಣ್ಣು, ತನ್ನ ಹುಡುಗನನ್ನು ಅಸಹ್ಯ, ಅಗೌರವದಿಂದ ಕಂಡರೆ ಏನಾಗುತ್ತದೆ? ಇಂತಹದ್ದೇ ಒಂದು ಘಟನೆ ವರನ ಜೊತೆ ನಡೆದಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಸದ್ಯ ವಿಡಿಯೊವೊಂದು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ, ಇದರಲ್ಲಿ ಹುಡುಗಿ, ವರನೊಂದಿಗೆ ಅನುಚಿತವಾಗಿ ವರ್ತಿಸುವ ದೃಶ್ಯ ಇದೆ. 11 ಸೆಕೆಂಡ್‌ಗಳ ಈ ವಿಡಿಯೋದಲ್ಲಿ, ವಧು ವೇದಿಕೆಯ ಮೇಲೆ ಏರುತ್ತಿದ್ದಂತೆ ವರ ತನ್ನ ಕೈಯನ್ನು ಅವಳ ಕಡೆಗೆ ಚಾಚಿರುವುದು ಕಾಣಿಸುತ್ತದೆ. ಈ ಮುಗ್ಧತೆಯನ್ನು ಅಥವಾ ಕ್ಯೂಟ್ ಮೂಮೆಂಟ್‌ನ್ನು ಹೆಚ್ಚಿನವರು ಪ್ರಶಂಸಿಸಬಹುದು, ಆದರೆ ವಧು ಮಾತ್ರ ಕೋಪಗೊಂಡು ಅವನ ಕೈ ಮೇಲೆ ಉಗಿಯುತ್ತಾಳೆ.
ವರ ತನ್ನ ಕೈಯ ಮೇಲೆ ಉಗಿದಿದ್ದನ್ನು ಭಯಬಿದ್ದು ನೋಡುತ್ತಾನೆ. ಈ ವಿಡಿಯೊ ನಿಜವೋ ಅಥವಾ ನಾಟಕೀಯವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇದು ಎಲ್ಲಿ ಆಗಿದೆ ಎಂದು ಗೊತ್ತಾಗಿಲ್ಲ. ಮೇ 12, 2025 ರಂದು ಮದುವೆ ನಡೆದಿದೆ ಎನ್ನಲಾಗುತ್ತಿದೆ. ಕ್ಲಿಪ್ ಯೂಟ್ಯೂಬ್‌ನಲ್ಲಿ TeamWork 120 ಖಾತೆಯಿಂದ ಒಂದು ತಿಂಗಳ ಹಿಂದೆ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ ಎಂದು ಗೊತ್ತಾಗಿದೆ.
ಇದನ್ನು ನೋಡಿ ಕೆಲವರು ಈ ದೃಶ್ಯವು ನಾಟಕೀಯ ಕ್ಲಿಪ್‌ನಿಂದ ಇರಬೇಕು ಎಂದು ಊಹಿಸಿದರೆ, ಇತರರು ವಿಡಿಯೊದ ಸ್ವರೂಪದ ಹೊರತಾಗಿಯೂ ಇದು ಎಷ್ಟು ಅಗೌರವದಿಂದ ಕೂಡಿದೆ ಎಂದು ತಿಳಿಸಿದ್ದಾರೆ. ಒಬ್ಬರು "ಅವನ ಬಟ್ಟೆಯ ಮೇಲೆ ಎಂಜಲು ಒರೆಸಿಬಿಡಬೇಕಿತ್ತು, ಮಜಾ ಬರುತ್ತಿತ್ತು, ಅಥವಾ ಅವಳ ಕೆನ್ನೆಗೆ ಬಾರಿಸಬೇಕಿತ್ತು" ಎಂದು ಹೇಳಿದ್ದಾರೆ. ಮತ್ತೊಬ್ಬರು "ಎಲ್ಲರ ಮುಂದೆ ಅವನ ಮೇಲೆ ಉಗುಳುವ ಧೈರ್ಯ ಇದ್ದರೆ, ನಿನ್ನ ಆಯ್ಕೆಯ ಬಗ್ಗೆ ನಿನ್ನ ಪೋಷಕರಿಗೆ ಹೇಳಲು ಧೈರ್ಯ ಇರಲಿಲ್ಲವಾ? ಎಂದು ಪ್ರಶ್ನೆ ಮಾಡಿದ್ದಾರೆ.
“ಅವಳು ತಾನು ತುಂಬಾ ಸುಂದರವಾಗಿದ್ದೇನೆ ಎಂದು ಭಾವಿಸಿದರೆ, ಇಲ್ಲ, ನಿನ್ನ ಕಾರ್ಯಗಳು ಬೇರೆಯೇ ಸಾಬೀತು ಮಾಡಿವೆ" ಒಂದು ಕಾಮೆಂಟ್ ಹೇಳಿದೆ, "ಈ ಹುಡುಗಿಯರು ಯೋಗ್ಯವಾದ ಕೆಲಸ ಮಾಡುವ ವ್ಯಕ್ತಿಗಳನ್ನು ಬಯಸುವುದಿಲ್ಲ, ಅವರು ಚಪ್ರಿಗಳಿಗೆ ಆದ್ಯತೆ ನೀಡುತ್ತಾರೆ , ಎಲ್ಲಾ ಚಪ್ರಿಗಳು ಎಲ್ಲ ಮುಗಿದ ನಂತರ ಯಾವುದಾದರೂ ಒಬ್ಬ ಯೋಗ್ಯ ವ್ಯಕ್ತಿಯೊಂದಿಗೆ ಸೆಟಲ್ ಆಗುತ್ತಾರೆ, ಆ ವ್ಯಕ್ತಿಗೆ ಅವಳ ಹಳೆ ವಿಷಯದ ಬಗ್ಗೆ ತಿಳಿದಿರುತ್ತದೆ” ಎಂದು ಬರೆದಿದ್ದಾರೆ.
"ಹುಡುಗನ ಬಳಿ ಈ ಹುಡುಗಿಯು ಕ್ಷಮೆ ಕೇಳಬೇಕು, ಆ ಹುಡುಗಿಗೆ ಕಪಾಳಮೋಕ್ಷ ಮಾಡಬೇಕು ಅಂತ ನಾನು ಬಯಸ್ತೀನಿ. ಇದು ವರ್ತಿಸುವ ರೀತಿಯಲ್ಲ, ವಿವಾಹವಾಗಲು ಇಷ್ಟವಿಲ್ಲದಿದ್ದರೆ, ನೇರವಾಗಿ ಅವರ ಮುಖದ ಮೇಲೆ ತಿರಸ್ಕರಿಸಿ, ಇಂತಹ ಗದ್ದಲ ಸೃಷ್ಟಿಸುವ ಬದಲು” ಎಂದು ಓರ್ವರು ಕಾಮೆಂಟ್ ಮಾಡಿದ್ದಾರೆ.
"ಲಿಂಗ ಸಮಾನತೆ ಎಲ್ಲಿ? ಪುರುಷರಿಗೆ ಸಮಾಜದಲ್ಲಿ ಯಾವುದೇ ಗೌರವವಿಲ್ಲವೇ? ವರನೇ ಆ ವ್ಯಕ್ತಿಯ ಮೇಲೆ ಉಗಿಳಿದ್ದರೆ, ಅವಳ ಇಡೀ ಕುಟುಂಬವು ದೊಡ್ಡ ಗಲಾಟೆ ಮಾಡುತ್ತಿತ್ತು. ಗೌರವ, ಲಜ್ಜೆ, ಸಿಗ್ಗು ಎಂಬುದು ಕೇವಲ ಮಹಿಳೆಯರಿಗೆ ಮಾತ್ರ ಇದೆಯೇ? ಇಂತಹ ಕೃತ್ಯಗಳನ್ನು ನೋಡಿದರೆ ರಕ್ತ ಕುದಿಯುತ್ತದೆ. ಈ ಎರಡು ಕಾಸಿನವರಿಂದಾಗಿ ಇಡೀ ಮಹಿಳಾ ಸಮಾಜದ ಹೆಸರು ಕೆಡುತ್ತದೆ" ಎಂದು ಓರ್ವರು ಹೇಳಿದ್ದಾರೆ.