ರೈಲಿನಲ್ಲಿ ವಾಟರ್ ಟ್ಯಾಂಕ್ ಎಲ್ಲಿದೆ? ಮೇಲಿಲ್ಲ, ಹಾಗಿದ್ರೆ ನಲ್ಲಿಯಲ್ಲಿ ನೀರು ಬರೋದು ಹೇಗೆ?
ರೈಲಿನಲ್ಲಿ ಪ್ರಯಾಣಿಸುವಾಗ ವಾಶ್‌ಬೇಸಿನ್ ಮತ್ತು ಟಾಯ್ಲೆಟ್‌ಗಳಲ್ಲಿ ನೀರು ಬಳಸುತ್ತೇವಲ್ಲ, ಅಷ್ಟೊಂದು ನೀರು ಎಲ್ಲಿ ಸಂಗ್ರಹವಾಗಿರುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ? ರೈಲಿನಲ್ಲಿ ವಾಟರ್ ಟ್ಯಾಂಕ್ ಎಲ್ಲಿರುತ್ತದೆ? ಅದು ಹೇಗೆ ನಲ್ಲಿಗಳಿಗೆ ನೀರನ್ನು ಪೂರೈಸುತ್ತದೆ?
14

Image Credit : AI
ರೈಲಿನಲ್ಲಿ ವಾಟರ್ ಟ್ಯಾಂಕ್ ಎಲ್ಲಿದೆ?
ಭಾರತದಲ್ಲಿ ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ದೇಶದಲ್ಲಿ ದಿನಕ್ಕೆ 19 ಸಾವಿರಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತವೆ. ದೂರದ ಪ್ರಯಾಣದ ವೇಳೆ, ರೈಲಿನ ಟಾಯ್ಲೆಟ್ ಮತ್ತು ವಾಶ್‌ಬೇಸಿನ್‌ಗಳಲ್ಲಿ ನೀರು ಬಳಸುವಾಗ, 'ಇಷ್ಟೊಂದು ನೀರು ಎಲ್ಲಿ ಸಂಗ್ರಹಿಸಿರುತ್ತಾರೆ?' ಎಂದು ನೀವು ಎಂದಾದರೂ ಯೋಚಿಸಿದ್ದೀರಾ?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
24
Image Credit : Rounak_Kayal to Pexels
ರೈಲಿನ ಕೆಳಭಾಗದಲ್ಲಿರುವ ವಾಟರ್ ಟ್ಯಾಂಕ್
ಹಿಂದಿನ ಕಾಲದ ರೈಲುಗಳಲ್ಲಿ, ಮನೆಯಂತೆ ಮೇಲ್ಛಾವಣಿಯ ಮೇಲೆ ವಾಟರ್ ಟ್ಯಾಂಕ್ ಇತ್ತು. ಆದರೆ ಈಗಿನ ಆಧುನಿಕ ICF ಮತ್ತು LHB ಕೋಚ್‌ಗಳಲ್ಲಿ, ಪ್ರಯಾಣಿಕರು ಕುಳಿತುಕೊಳ್ಳುವ ಜಾಗದ ಕೆಳಗೆ, ಅಂದರೆ ರೈಲಿನ ಅಡಿಭಾಗದಲ್ಲಿ (Underframe) ಟ್ಯಾಂಕ್‌ಗಳನ್ನು ಅಳವಡಿಸಿದ್ದಾರೆ. ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಿದ ಈ ಸಿಲಿಂಡರ್ ಆಕಾರದ ಟ್ಯಾಂಕ್‌ಗಳು ಕೋಚ್‌ನ ಕೆಳಗೆ ಭದ್ರವಾಗಿರುತ್ತವೆ. ಪ್ರತಿ ಕೋಚ್‌ನ ಕೆಳಗೆ ತಲಾ 450 ಲೀಟರ್ ಸಾಮರ್ಥ್ಯದ 4 ಟ್ಯಾಂಕ್‌ಗಳಿದ್ದು, ಒಟ್ಟು 1,800 ಲೀಟರ್ ನೀರು ಸಂಗ್ರಹವಾಗುತ್ತದೆ. ಪ್ರಮುಖ ನಿಲ್ದಾಣಗಳಲ್ಲಿ 'ಕ್ವಿಕ್ ವಾಟರಿಂಗ್ ಸಿಸ್ಟಮ್' ಮೂಲಕ ಕೇವಲ 10 ನಿಮಿಷಗಳಲ್ಲಿ ಈ ಟ್ಯಾಂಕ್‌ಗಳನ್ನು ತುಂಬುತ್ತಾರೆ.
34
Image Credit : AI
ನೀರು ಮೇಲೆ ಬರುವುದು ಹೇಗೆ?
ಕೋಚ್‌ನ ಕೆಳಗಿರುವ ನೀರು ಮೇಲಿನ ನಲ್ಲಿಗಳಿಗೆ ಹೇಗೆ ಬರುತ್ತದೆ ಎನ್ನುವುದರಲ್ಲೇ ರೈಲ್ವೆಯ ತಂತ್ರಜ್ಞಾನ ಅಡಗಿದೆ. 'ಹೈಡ್ರೋ-ನ್ಯೂಮ್ಯಾಟಿಕ್ ಪ್ರೆಶರ್ ಪಂಪ್' ಮತ್ತು 'ಏರ್ ಅಸಿಸ್ಟೆಡ್ ಸಿಸ್ಟಮ್' ಬಳಸಿ, ಕೆಳಗಿರುವ ನೀರನ್ನು ಒತ್ತಡದಿಂದ ಮೇಲೆ ತಳ್ಳಲಾಗುತ್ತದೆ. ಇದಕ್ಕಾಗಿ ರೈಲಿನ ಬ್ರೇಕ್ ಸಿಸ್ಟಮ್‌ಗೆ ಬಳಸುವ ಏರ್ ಪ್ರೆಶರ್‌ನ ಒಂದು ಭಾಗವನ್ನೇ ಈ ವ್ಯವಸ್ಥೆಗೆ ಬಳಸುತ್ತಾರೆ. ಈ ಗಾಳಿಯ ಒತ್ತಡವು ನೀರನ್ನು ಮೇಲಕ್ಕೆ ತಳ್ಳಿ, ಟಾಯ್ಲೆಟ್ ಮತ್ತು ವಾಶ್‌ಬೇಸಿನ್ ನಲ್ಲಿಗಳಿಗೆ ನಿರಂತರವಾಗಿ ಪೂರೈಸುತ್ತದೆ. ಇದಕ್ಕಾಗಿ ಯಾವುದೇ ಪ್ರತ್ಯೇಕ ಮೋಟರ್ ಬಳಸುವುದಿಲ್ಲ.
44
Image Credit : X
ಮೇಲ್ಛಾವಣಿಯಿಂದ ಕೆಳಕ್ಕೆ ಟ್ಯಾಂಕ್ ಸ್ಥಳಾಂತರವಾಗಿದ್ದೇಕೆ?
ಹಿಂದೆ, ಮೇಲ್ಛಾವಣಿಯಲ್ಲಿ 900 ರಿಂದ 1,000 ಲೀಟರ್ ಮಾತ್ರ ನೀರು ಸಂಗ್ರಹಿಸಲು ಸಾಧ್ಯವಿತ್ತು. ಇದರಿಂದ ದೂರದ ಪ್ರಯಾಣದಲ್ಲಿ ನೀರು ಬೇಗ ಖಾಲಿಯಾಗುತ್ತಿತ್ತು. ಆದರೆ ಈಗ ಕೆಳಭಾಗದಲ್ಲಿ 1,800 ಲೀಟರ್‌ವರೆಗೆ ಸಂಗ್ರಹಿಸಬಹುದು. ಇದಲ್ಲದೆ, ರೈಲು ಗಂಟೆಗೆ 110 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಚಲಿಸುವಾಗ, ಮೇಲ್ಛಾವಣಿಯ ಮೇಲಿನ ಭಾರದಿಂದ ರೈಲು ಅಸ್ಥಿರವಾಗುತ್ತಿತ್ತು. ಇದು ಸುರಕ್ಷತೆಗೆ ಅಪಾಯಕಾರಿಯಾಗಿತ್ತು. ಈ ಕಾರಣಗಳಿಂದಾಗಿ ರೈಲ್ವೆ ಇಲಾಖೆ ವಾಟರ್ ಟ್ಯಾಂಕ್‌ಗಳನ್ನು ಕೋಚ್‌ನ ಕೆಳಭಾಗಕ್ಕೆ ಸ್ಥಳಾಂತರಿಸಿತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos