ಹೊಸ ಪಾತ್ರೆಯ ಸ್ಟಿಕರ್ ಸುಲಭವಾಗಿ ತೆಗೆಯುವ ರಹಸ್ಯ ವಿಧಾನ ಇಲ್ಲಿದೆ! ಅರ್ಧ ನಿಮಿಷದಲ್ಲೇ ಮಾಯ
ಹೊಸ ಪಾತ್ರೆಗಳ ಮೇಲಿರುವ ಸ್ಟಿಕರ್ ತೆಗೆಯುವುದು ದೊಡ್ಡ ಸಮಸ್ಯೆಯಾಗಿದ್ದು, ಇದು ಆಹಾರದಲ್ಲಿ ವಿಷಕಾರಿ ಅಂಶ ಸೇರಲು ಕಾರಣವಾಗಬಹುದು. ಆದರೆ ಕೇವಲ ಅರ್ಧ ನಿಮಿಷ ಗ್ಯಾಸ್ ಶಾಖ ತಾಗಿಸುವ ಮೂಲಕ ಈ ಸ್ಟಿಕರ್ ಸುಲಭವಾಗಿ ತೆಗೆಯಬಹುದು. ಪಾತ್ರೆ ಹಾಳಾಗದಂತೆ ಅಂಟು ಸಹಿತ ಸ್ಟಿಕರ್ ತೆಗೆಯಲು ಅತ್ಯುತ್ತಮ ವಿಧಾನವಾಗಿದೆ.

ಸ್ಟಿಕರ್ ತೆಗೆಯುವ ಸಮಸ್ಯೆ
ಹೊಸ ಪಾತ್ರೆಯನ್ನು ತಂದಾಗ ಅದರ ಮೇಲೆ ಇರುವ ಸ್ಟಿಕರ್ ತೆಗೆಯುವುದೇ ದೊಡ್ಡ ಸಮಸ್ಯೆ ಆಗುತ್ತದೆ. ಸ್ಟಿಕರ್ ತೆಗೆಯಲು ಹೋದರೆ ಅರ್ಧಂಬರ್ಧ ಬರುತ್ತದೆ, ಇಲ್ಲದೇ ಹೋದರೆ ಅಂಟು ಅಂಟು ಅಲ್ಲೇ ಇರುತ್ತದೆ. ಇದಕ್ಕಾಗಿ ಬೇಸತ್ತು ಹೋಗುವುದು ಇದೆ.
ಸಾಂಬಾರಿನಲ್ಲಿ ಸ್ಟಿಕರ್
ಎಷ್ಟೋ ಮಂದಿ ಹಾಗೆಯೇ ಬಿಟ್ಟಾಗ ಅದರಲ್ಲಿ ಸಾಂಬಾರೋ, ಪಲ್ಯನೋ ಇನ್ನೇನೋ ಮಾಡಿದಾಗ, ಆ ಸ್ಟಿಕರ್ ಜೊತೆಗೆ ಅದರ ಮೇಲೆ ಇರುವ ವಿಷಕಾರಿ ಅಂಶಗಳೂ ಪದಾರ್ಥಗಳ ಜೊತೆ ಸೇರುವುದು ಉಂಟು. ಇದು ದೊಡ್ಡ ಸಮಸ್ಯೆಯನ್ನು ತಂದೊಡ್ಡಬಲ್ಲದು.
ಉಜ್ಜಿ ಉಜ್ಜಿ ಪಾತ್ರೆ ಹಾಳಾಗತ್ತೆ
ಕೆಲವೊಮ್ಮೆ ಸ್ಟಿಕರ್ ಅರ್ದಂಬರ್ಧ ಬಂದಾಗ, ಉಳಿದ ಸ್ಟಿಕ್ಕರ್ ತೆಗೆಯಲು ಉಜ್ಜಿ ಉಜ್ಜಿ ಪಾತ್ರೆ ಹಾಳಾಗುತ್ತದೆಯೇ ವಿನಾ ಸ್ಟಿಕರ್ ಬರುವುದೇ ಇಲ್ಲ. ಇವೆಲ್ಲಾ ದೊಡ್ಡ ಸಮಸ್ಯೆಯೆಂದು ಎನ್ನಿಸುವುದು ಉಂಟು.
ಚಿಂತೆ ಕಾಡ್ತಿದೆಯಾ?
ಇಂಥ ಸಂದರ್ಭದಲ್ಲಿ ಏನು ಮಾಡಬೇಕು ಎನ್ನುವ ಚಿಂತೆ ಬಹುತೇಕ ಮಂದಿಯನ್ನು ಕಾಡುವುದು ಇದೆ. ಅದಕ್ಕಾಗಿ ನೀವು ಚಿಂತೆ ಮಾಡಬೇಕಿಲ್ಲ. ಒಂದು ಕೇವಲ ಅರ್ಧ ನಿಮಿಷದ ಕೆಲಸವಷ್ಟೇ.
ಹೀಗೆ ಮಾಡಿ
ನೀವು ಮಾಡಬೇಕಿರುವುದು ಇಷ್ಟೇ. ಸ್ಟಿಕರ್ ಇರುವ ಪಾತ್ರೆಯನ್ನು ಅರ್ಧ ನಿಮಿಷ ಗ್ಯಾಸ್ ಆನ್ ಮಾಡಿ ಅದರ ಮೇಲೆ ಇಡಿ. ಅಂದರೆ, ಪಾತ್ರೆ ಇಡುವುದಲ್ಲ. ಬದಲಿಗೆ ಗ್ಯಾಸ್ ಆನ್ ಮಾಡಿ, ಬಳಿಕ ಸ್ಟಿಕರ್ ಇದು ಭಾಗವನ್ನು, ಬೆಂಕಿಗೆ ತಗುಲದಂತೆ ಶಾಖ ಮಾತ್ರ ತಗಲುವಂತೆ ಹಿಡಿದುಕೊಳ್ಳಿ. (ಉದಾಹರಣೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ)
ಎಷ್ಟೊಂದು ಸುಲಭ ಅಲ್ವಾ
ಅರ್ಧ ನಿಮಿಷ ಹೀಗೆ ಹಿಡಿದುಕೊಂಡರೆ, ಸ್ಟಿಕರ್ ತಾನಾಗಿಯೇ ಬರುತ್ತದೆ. ಎಷ್ಟೊಂದು ಸುಲಭ ಅಲ್ವಾ? ಇದರ ಜೊತೆ ಸ್ಟಿಕರ್‌ನ ಅಂಟು ಕೂಡ ಹೆಚ್ಚು ತಾಗದೇ ಅದು ಕೂಡ ಹೋಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

