ಅಡುಗೆಮನೆ ಡಸ್ಟ್ಬಿನ್ನಿಂದ ದುರ್ವಾಸನೆ ಬರ್ತಿದ್ಯಾ? ಈ ಟಿಪ್ಸ್ ಫಾಲೋ ಮಾಡಿದ್ರೆ ಸಾಕು
ಅಡುಗೆಮನೆಯ ಕಸದಬುಟ್ಟಿಯಿಂದ ಬರುವ ದುರ್ವಾಸನೆಯನ್ನು ತಡೆಯಲು ಕೆಲವೊಂದು ಸರಳ ಉಪಾಯಗಳನ್ನು ಬಳಸಿಕೊಳ್ಳಬೇಕು. ನಿಮ್ಮ ಮನೆಯಲ್ಲಿನ ಕಸದ ಬುಟ್ಟಿಯಿಂದ ಕೆಟ್ಟ ವಾಸನೆ ಬರುತ್ತಿದ್ರೆ, ನೀವು ಸಹ ಈ ಟಿಪ್ಸ್ ಫಾಲೋ ಮಾಡೋದನ್ನು ಮರೀಬೇಡಿ

ಕಸದಬುಟ್ಟಿಯ ದುರ್ವಾಸನೆ
ಕೆಲವೊಮ್ಮೆ ಅಡುಗೆಮನೆಯಲ್ಲಿರುವ ಕಸದಬುಟ್ಟಿಯ ದುರ್ವಾಸನೆ ಮನೆಯಾದ್ಯಂತ ಹರಡುತ್ತದೆ. ಈ ದುರ್ವಾಸನೆ ಮನೆಗೆ ಅತಿಥಿಗಳು ಬಂದಾಗ ನಿಮ್ಮನ್ನು ಮುಜುಗರಕ್ಕೊಳಗಾಗುವಂತೆ ಮಾಡುತ್ತದೆ. ಡಸ್ಟ್ಬಿನ್ ವಾಸನೆ ತಡೆಯಲು ಏನು ಮಾಡಬೇಕು ಎಂದು ನೋಡೋಣ ಬನ್ನಿ.
24 ಗಂಟೆಗಿಂತಲೂ ಹೆಚ್ಚು ಸಮಯ ಕಸ ಸಂಗ್ರಹ
ಹಣ್ಣು ಮತ್ತು ತರಕಾರಿ ಸಿಪ್ಪೆಗಳು ಮತ್ತು ಉಳಿದ ಆಹಾರ ಕಸದ ಬುಟ್ಟಿಯಲ್ಲಿನ ವಾಸನೆಗೆ ಕಾರಣವಾಗಬಹುದು. ಹೆಚ್ಚು ಹಸಿಕಸ ಅಥವಾ 24 ಗಂಟೆಗಿಂತಲೂ ಹೆಚ್ಚು ಸಮಯ ಕಸ ಸಂಗ್ರಹಿಸಿದಾಗ ದುರ್ವಾಸನೆಗೆ ಕಾರಣವಾಗುತ್ತದೆ. ಆದ್ರೆ ಸರಳ ಉಪಾಯಗಳಿಂದ ಈ ದುರ್ವಾಸನೆಯನ್ನು ಹೋಗಲಾಡಿಸಬಹುದು. ಆ ವಿಧಾನಗಳು ಏನು ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
ಕಸದ ಬ್ಯಾಗ್ ಮತ್ತು ಕಸದ ವಿಂಗಡನೆ
ಕಸದಬುಟ್ಟಿಯೊಳಗೆ ಕಸ ಹಾಕುವ ಮುನ್ನ ಕಸದ ಚೀಲವನ್ನು ಹಾಕಿಕೊಳ್ಳಿ. ಈ ಚೀಲದಲ್ಲಿ ಕಸ ಹಾಕಿ, ಕಟ್ಟಬೇಕು. ಇದರಿಂದ ಕಸದ ವಾಸನೆ ಹರಡುವುದಿಲ್ಲ. ಮುಖ್ಯವಾಗಿ ಹಸಿ ಮತ್ತು ಒಣ ಕಸಕ್ಕಾಗಿ ಎರಡು ಪ್ರತ್ಯೇಕ ಬುಟ್ಟಿಗಳನ್ನು ಮಾಡಿಕೊಳ್ಳಿ. ಹಸಿಕಸವನ್ನು 24 ಗಂಟೆಗೂ ಹೆಚ್ಚು ಕಾಲ ಮನೆಯೊಳಗೆ ಇಟ್ಟುಕೊಳ್ಳಬೇಡಿ. ಹಸಿಕಸ ಡಬ್ಬಿಯನ್ನು ಮನೆಯ ಹೊರಗಿಟ್ಟುಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಿ.
ಅಡುಗೆಸೋಡಾ
ಕಸದಬುಟ್ಟಿ ತಳಭಾಗದಲ್ಲಿ ಅಡುಗೆಸೋಡಾ ಹಾಕಿ. ನಂತರ ಡಿಟರ್ಜೆಂಟ್ ಮಿಶ್ರಿತ ನೀರಿನಿಂದ ಡಸ್ಟ್ಬಿನ್ ತೊಳೆದುಕೊಂಡ್ರೆ ಕಸದಬುಟ್ಟಿಯಿಂದ ದುರ್ವಾಸನೆ ಬರಲ್ಲ. ಪ್ರತಿದಿನವೂ ಕಸದಬುಟ್ಟಿಯನ್ನು ಸ್ವಚ್ಚಗೊಳಿಸೋದನ್ನು ಮರೆಯಬೇಡಿ. ಡಸ್ಟ್ಬಿನ್ ತೊಳೆದ ಬಳಿಕ ಸಂಪೂರ್ಣವಾಗಿ ಒಣಗಿದ ನಂತರವೇ ಕಸ ಹಾಕಬೇಕು. ಇಲ್ಲವಾದ್ರೆ ಡಬ್ಬಿಯೊಳಗಿನ ತೇವಾಂಶ ದುರ್ವಾಸನೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ನ್ಯೂಸ್ಪೇಪರ್ ಟಿಪ್ಸ್
ಕಸದಬುಟ್ಟಿಯನ್ನು ತೊಳೆದ ನಂತರ ಒಣಗಿಸಿಕೊಳ್ಳಬೇಕು. ನಂತರ ಸ್ವಚ್ಛವಾದ ಒಣಗಿದ ನ್ಯೂಸ್ಪೇಪರ್ನ್ನು ಕೆಳಭಾಗದಲ್ಲಿ ಸಾಲಾಗಿ ಇಡಬೇಕು. ಈ ನ್ಯೂಸ್ಪೇಪರ್ ನಿಮ್ಮ ಹಸಿಕಸದ ತೇವಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ನ್ಯೂಸ್ಪೇಪರ್ ಒದ್ದೆಯಾದ್ರೆ ಬದಲಿಸಿಕೊಳ್ಳಬೇಕು. ಹಣ್ಣು ಮತ್ತು ತರಕಾರಿ ಸಿಪ್ಪೆಗಳು ಮತ್ತು ಆಹಾರವನ್ನ ದೀರ್ಘ ಸಮಯದವರೆಗೆ ಡಸ್ಟ್ಬಿನ್ನಲ್ಲಿ ಸಂಗ್ರಹಿಸಬೇಡಿ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

