MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Kitchen
  • ಸುಟ್ಟ ಬಾಣಲೆಯನ್ನು ಹೊಸದಾಗಿಸುವ ಅಡುಗೆಮನೆ ರಹಸ್ಯ! ತಿಕ್ಕೋದು, ಉಜ್ಜೋದು ಬೇಡವೇ ಬೇಡ!

ಸುಟ್ಟ ಬಾಣಲೆಯನ್ನು ಹೊಸದಾಗಿಸುವ ಅಡುಗೆಮನೆ ರಹಸ್ಯ! ತಿಕ್ಕೋದು, ಉಜ್ಜೋದು ಬೇಡವೇ ಬೇಡ!

ಬಾಣಲೆಯಲ್ಲಿನ ಹಠಮಾರಿ ಸುಟ್ಟ ಕಲೆಗಳನ್ನು ಹೆಚ್ಚು ಶ್ರಮವಿಲ್ಲದೆ ತೆಗೆದುಹಾಕಲು ಅಡುಗೆಮನೆಯಲ್ಲಿರುವ ಪದಾರ್ಥಗಳೇ ಸಾಕು. ಸರಳ ವಸ್ತುಗಳನ್ನು ಬಳಸಿ ಪಾತ್ರೆಗಳನ್ನು ಹೊಸದರಂತೆ ಹೊಳೆಯುವಂತೆ ಮಾಡುವ ಸುಲಭ ಉಪಾಯಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

2 Min read
Author : Mahmad Rafik
Published : Jul 12 2026, 02:46 PM IST
Share this Photo Gallery
  • FB
  • TW
  • Linkdin
  • Whatsapp
16
ತಿಕ್ಕಿ, ಉಜ್ಜಿ ತೊಳೆದರೂ ಬಾಣಲೆಯಲ್ಲಿನ ಸುಟ್ಟ ಕಲೆಗಳು
Image Credit : Gemini

ತಿಕ್ಕಿ, ಉಜ್ಜಿ ತೊಳೆದರೂ ಬಾಣಲೆಯಲ್ಲಿನ ಸುಟ್ಟ ಕಲೆಗಳು

ಕೆಲವೊಮ್ಮೆ ಎಷ್ಟೇ ತಿಕ್ಕಿ, ಉಜ್ಜಿ ತೊಳೆದರೂ ಬಾಣಲೆಯಲ್ಲಿನ ಸುಟ್ಟ ಕಲೆಗಳು ಹೋಗುವುದಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಸಾಬೂನು,ಲಿಕ್ವಿಡ್ ತಂದ್ರೂ ಪಾತ್ರೆಗಳು ಕ್ಲೀನ್ ಆಗಲ್ಲ. ಅಡುಗೆಮನೆಯಲ್ಲಿರುವ ಕೆಲವು ಪದಾರ್ಥಗಳೊಂದಿಗೆ ಬಾಣಲೆಯನ್ನು ಹೊಸದರಂತೆ ಫಳ ಫಳ ಅಂತ ಹೊಳೆಯುವಂತೆ ಮಾಡಬಹುದು. ಆ ಸರಳ ಉಪಾಯಗಳು ಯಾವವು ಎಂಬುದನ್ನು ನೋಡೋಣ ಬನ್ನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ನಾನ್ ಸ್ಟಿಕ್ ಮತ್ತು ಅಲ್ಯೂಮಿನಿಯಂ ಪಾತ್ರೆಗಳು
Image Credit : Gemini

ನಾನ್ ಸ್ಟಿಕ್ ಮತ್ತು ಅಲ್ಯೂಮಿನಿಯಂ ಪಾತ್ರೆಗಳು

ಪ್ಯಾನ್ ಅಥವಾ ಬಾಣಲೆ ಹೊರಗೂ ಮತ್ತು ಒಳಗೂ ಸುಟ್ಟ ಕಲೆಗಳಿಂದ ಕಪ್ಪಾಗಿರೋದನ್ನು ಸ್ಟೀಲ್ ಸ್ಕ್ರಬರ್‌ನಿಂದ ಉಜ್ಜುವ ಅಗತ್ಯ ಇನ್ಮುಂದೆ ಬರಲ್ಲ. ಈ ರೀತಿ ಜೋರಾಗಿ ಉಜ್ಜೋದರಿಂದ ಬಾಣಲೆ ತಳಪಾಯ ಮತ್ತು ಒಳಭಾಗವನ್ನು ತೆಳುವನ್ನಾಗಿ ಮಾಡುತ್ತದೆ. ಈ ರೀತಿ ಉಜ್ಜುವಿಕೆಯಿಂದ ನಾನ್ ಸ್ಟಿಕ್ ಮತ್ತು ಅಲ್ಯೂಮಿನಿಯಂ ಪಾತ್ರೆಗಳು ಬೇಗನೇ ಹಾಳಾಗುತ್ತವೆ.

Related Articles

Related image1
Cleaning Hacks : ಅಡುಗೆಮನೆಯಲ್ಲಿರುವ ಬಟ್ಟೆ ಕೊಳಕಾಗಿದ್ಯಾ? ಹೀಗೆ ಕ್ಲೀನ್ ಮಾಡಿ
Related image2
Plastic Bucket Cleaning Tips: ಬಕೆಟ್, ನಲ್ಲಿ ಫುಲ್‌ ಬಿಳಿಯಾಗಿದ್ಯಾ? ಹಾರ್ಪಿಕ್-ಸೋಪ್‌ನಿಂದಲೇ ಹೊಸ ತರ ಮಾಡ್ಬೋದು!
36
ಬಿಸಿನೀರು ಮತ್ತು ನಿಂಬೆ ರಸ
Image Credit : Gemini

ಬಿಸಿನೀರು ಮತ್ತು ನಿಂಬೆ ರಸ

ಕಲೆಗಳಿರುವ ಪಾತ್ರೆಗಳನ್ನು ತೊಳೆಯುವ ಮುನ್ನ ಅಂದ್ರೆ ಸುಮಾರು 20 ರಿಂದ 30 ನಿಮಿಷ ಬಿಸಿನೀರಿನಲ್ಲಿ ಹಾಕಿಡಬೇಕು. ಈ ಬಿಸಿನೀರಿಗೆ ನಿಂಬೆಹಣ್ಣಿನ ರಸ ಅಥವಾ ಮಾರುಕಟ್ಟೆಯಲ್ಲಿ ಸಿಗುವ ಲಿಕ್ವಿಡ್‌ನ್ನು ಸೇರಿಸಿಕೊಳ್ಳಿ. ಹುಳಿ ಮಿಶ್ರಿತ ಬಿಸಿನೀರು ಕಲೆಯನ್ನು ಮೃದುಗೊಳಿಸುತ್ತವೆ. ಅರ್ಧ ಗಂಟೆ ಬಳಿಕ ಹೆಚ್ಚು ಶ್ರಮ ಹಾಕದೇ ಪಾತ್ರೆಯನ್ನು ಸ್ವಚ್ಛಗೊಳಿಸಬಹುದು.

46
ಬೇಕಿಂಗ್ ಸೋಡಾ ಪೇಸ್ಟ್
Image Credit : Gemini

ಬೇಕಿಂಗ್ ಸೋಡಾ ಪೇಸ್ಟ್

ಅತಿಹೆಚ್ಚು ಸುಟ್ಟ ಕಲೆಗಳಿದ್ರೆ ಬೇಕಿಂಗ್ ಸೋಡಾ ಪೇಸ್ಟ್‌ನಿಂದ ಸ್ವಚ್ಛ ಮಾಡಬಹುದು. ಬೇಕಿಂಗ್ ಸೋಡಾಗೆ ಸ್ವಲ್ವವೇ ನೀರು ಸೇರಿಸಿ ಗಟ್ಟಿಯಾದ ಪೇಸ್ಟ್ ಮಾಡಿಕೊಳ್ಳಿ. ನಂತರ ಸುಟ್ಟ ಕಲೆಯ ಮೇಲೆ ಬೇಕಿಂಗ್ ಸೋಡಾ ಪೇಸ್ಟ್‌ನ್ನು ತೆಳುವಾಗಿ ಸವರಿ ಸುಮಾರಿ 20 ರಿಂದ 30 ನಿಮಿಷ ಎತ್ತಿಟ್ಟುಕೊಳ್ಳಿ. ನಂತರ ತೊಳೆದ್ರೆ ಸರಳವಾಗಿ ಜಿಡ್ಡುಕಲೆ ಹೋಗುತ್ತದೆ. (ಬೇಕಿಂಗ್ ಸೋಡಾ ಸವರಿದ ನಂತ್ರ ಬೇಕಿದ್ರೆ ನಿಂಬೆಹಣ್ಣಿನ ರಸ ಸಿಂಪಡಿಸಬಹುದು)

56
ಉಪ್ಪು ಮತ್ತು ನಿಂಬೆ
Image Credit : Gemini

ಉಪ್ಪು ಮತ್ತು ನಿಂಬೆ

ಮನೆಯಲ್ಲಿ ಕಾರ್ಯಕ್ರಮಗಳಿದ್ದಾಗ ತೊಳೆಯುವ ಪಾತ್ರೆಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ಕಲ್ಲುಪ್ಪುಗೆ ಒಂದಿಷ್ಟು ನಿಂಬೆಹಣ್ಣ ಸೇರಿಸಿಕೊಂಡು ಪಾತ್ರೆಗಳನ್ನು ತೊಳೆಯಬಹುದು. ಕಡಿಮೆ ಖರ್ಚಿನಲ್ಲಿ ಮತ್ತು ಸುಲಭವಾಗಿ ಪಾತ್ರೆಗಳನ್ನು ಸ್ವಚ್ಛ ಮಾಡಬಹುದಾಗಿದೆ. (ಕಲ್ಲುಪ್ಪು ಇಲ್ಲದಿದ್ರೆ ಪುಡಿ ಉಪ್ಪು ಬಳಸಿಕೊಳ್ಳಬಹುದು)

66
ಕಬ್ಬಿಣದ ಪಾತ್ರೆಗಳು
Image Credit : Gemini

ಕಬ್ಬಿಣದ ಪಾತ್ರೆಗಳು

ಇನ್ನು ಕಬ್ಬಿಣದ ಪಾತ್ರೆಗಳನ್ನು ಬಳಸುವ ಮುನ್ನ ಮತ್ತು ನಂತರವೂ ಸ್ವಚ್ಛವಾಗಿ ತೊಳೆಯಬೇಕಾಗುತ್ತದೆ. ಕಬ್ಬಿಣದ ಪಾತ್ರೆಗಳಲ್ಲಿರುವ ತುಕ್ಕು ತೆಗೆಯಲು ಅಡುಗೆಎಣ್ಣೆಯನ್ನು ಬಳಸಬೇಕಾಗುತ್ತದೆ. ತುಕ್ಕು ಕಂಡು ಬಂದ ಪ್ರದೇಶದಲ್ಲಿ ಎಣ್ಣೆಯನ್ನು ಸವರಿ, ಒಲೆ ಮೇಲೆ ಇರಿಸಿ 15 ರಿಂದ 20 ನಿಮಿಷ ಬಿಸಿ ಮಾಡಿಕೊಂಡು ನಂತರ ನೀರು ಹಾಕಿ ಸ್ವಚ್ಛಗೊಳಿಸಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಡುಗೆಮನೆ ಸಲಹೆಗಳು
ಜೀವನಶೈಲಿ

Latest Videos
Recommended Stories
Recommended image1
ಪಲ್ಯ ಬೇಯುವಾಗ ಇಷ್ಟು ಮಾಡಿ.. ಬೆಂಡೆಕಾಯಿ ತುಂಡು ಒಂದಕ್ಕೊಂದು ಅಂಟಿಕೊಳ್ಳದೆ, ಕ್ರಿಸ್ಪಿಯಾಗಿ ಬರುತ್ತೆ
Recommended image2
ಫ್ರಿಡ್ಜ್ ಇಲ್ಲದೇ ಇದ್ದರೂ ಹಿಂದಿನ ಕಾಲದಲ್ಲಿ ಹಾಲು ತಾಜಾ ಇರುತ್ತಿದ್ದಿದ್ದು ಹೇಗೆ?
Recommended image3
ಹೊರಗೆ ಗರಿಗರಿ, ಒಳಗೆ ಸಾಫ್ಟ್! ಶೇ. 90 ರಷ್ಟು ಜನರಿಗೆ ಗೊತ್ತಿಲ್ಲದ ಹೋಟೆಲ್ ಶೈಲಿಯ ಈರುಳ್ಳಿ ಪಕೋಡದ ಸೀಕ್ರೆಟ್ ಇಲ್ಲಿದೆ
Related Stories
Recommended image1
Cleaning Hacks : ಅಡುಗೆಮನೆಯಲ್ಲಿರುವ ಬಟ್ಟೆ ಕೊಳಕಾಗಿದ್ಯಾ? ಹೀಗೆ ಕ್ಲೀನ್ ಮಾಡಿ
Recommended image2
Plastic Bucket Cleaning Tips: ಬಕೆಟ್, ನಲ್ಲಿ ಫುಲ್‌ ಬಿಳಿಯಾಗಿದ್ಯಾ? ಹಾರ್ಪಿಕ್-ಸೋಪ್‌ನಿಂದಲೇ ಹೊಸ ತರ ಮಾಡ್ಬೋದು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved