Kannada

ಮಾವಿನಹಣ್ಣು ತಿಂದರೆ ದಪ್ಪ ಆಗ್ತೀರಾ?

Kannada

ಅಸಲಿ ಸತ್ಯ ಏನು ಗೊತ್ತಾ?

ಬೇಸಿಗೆಯಲ್ಲಿ ಮಾತ್ರ ಸಿಗುವ ಹಣ್ಣು ಮಾವು. ಹಾಗಾಗಿ ಸಿಕ್ಕ ಎರಡು ತಿಂಗಳು ಹೊಟ್ಟೆ ತುಂಬಾ ತಿನ್ನುವವರೇ ಹೆಚ್ಚು. ಆದರೆ ತೂಕ ಹೆಚ್ಚಾಗುತ್ತೆ ಅನ್ನೋ ಸಣ್ಣ ಭಯ ಎಲ್ಲರಲ್ಲೂ ಇರುತ್ತೆ. ನಿಜಕ್ಕೂ ಏನಾಗುತ್ತೆ ಗೊತ್ತಾ?
Image credits: Our own
Kannada

ಮಾವಿನ ಹಣ್ಣಿನಲ್ಲಿ ಫ್ಯಾಟ್ ಇಲ್ಲ!

ಅನೇಕರು ಮಾವಿನ ಹಣ್ಣಿನಲ್ಲಿ ಕೊಬ್ಬಿನಾಂಶ (ಫ್ಯಾಟ್) ಹೆಚ್ಚಾಗಿರುತ್ತೆ ಎಂದು ಭಾವಿಸುತ್ತಾರೆ. ಆದರೆ ನಿಜ ಹೇಳಬೇಕೆಂದರೆ, ಇದರಲ್ಲಿ ಕೊಲೆಸ್ಟ್ರಾಲ್ ಅಥವಾ ಫ್ಯಾಟ್ ಅಂಶಗಳು ಇರುವುದೇ ಇಲ್ಲ.
Image credits: stockPhoto
Kannada

ಕ್ಯಾಲರಿಗಳೇ ಇಲ್ಲಿ ಮುಖ್ಯ

ಒಂದು ಮಧ್ಯಮ ಗಾತ್ರದ ಮಾವಿನ ಹಣ್ಣಿನಲ್ಲಿ ಸುಮಾರು 150 ಕ್ಯಾಲರಿಗಳು ಇರುತ್ತವೆ. ಹಾಗಾಗಿ, ನೀವು ತಿನ್ನುವ ಆಹಾರದ ಜೊತೆಗೆ ಹೆಚ್ಚುವರಿಯಾಗಿ ಹೆಚ್ಚು ಮಾವಿನ ಹಣ್ಣುಗಳನ್ನು ತಿಂದರೆ ತೂಕ ಹೆಚ್ಚಾಗುವ ಸಾಧ್ಯತೆ ಇದೆ.
Image credits: Getty
Kannada

ಹೇಗೆ ತಿಂದರೆ ದಪ್ಪ ಆಗಲ್ಲ?

ನೀವು ತೂಕ ಹೆಚ್ಚಾಗಬಾರದು ಎಂದು ಬಯಸಿದರೆ, ಮಾವಿನ ಹಣ್ಣನ್ನು ಊಟದ ಜೊತೆ ತಿನ್ನಬೇಡಿ. ಬದಲಿಗೆ, ಬೆಳಿಗ್ಗೆ ಅಥವಾ ಸಂಜೆ ಸ್ನ್ಯಾಕ್ಸ್ ರೀತಿ ಪ್ರತ್ಯೇಕವಾಗಿ ತಿನ್ನಿ. ಆಗ ತೂಕ ಹೆಚ್ಚಾಗುವುದಿಲ್ಲ.
Image credits: stockPhoto
Kannada

ಜ್ಯೂಸ್ ಬೇಡ.. ಹೋಳುಗಳನ್ನೇ ತಿನ್ನಿ

ಮಾವಿನ ಹಣ್ಣನ್ನು ಜ್ಯೂಸ್ / ಮಿಲ್ಕ್‌ಶೇಕ್ ರೂಪದಲ್ಲಿ ಕುಡಿದರೆ, ಅದರಲ್ಲಿರುವ ಫೈಬರ್ ಅಂಶ ನಾಶವಾಗುತ್ತದೆ, ಕ್ಯಾಲರಿ ಹೆಚ್ಚುತ್ತದೆ. ಹೋಳುಗಳನ್ನಾಗಿ ಕತ್ತರಿಸಿ ತಿನ್ನಿ. ಜ್ಯೂಸ್‌ಗೆ ಸಕ್ಕರೆ ಸೇರಿಸಿದ್ರೆ ಒಳ್ಳೆಯದಲ್ಲ. 

Image credits: Our own
Kannada

ರಾತ್ರಿ ಹೊತ್ತು ತಿನ್ನಬೇಡಿ

ದಿನಕ್ಕೆ ಒಂದು ಮಾವಿನ ಹಣ್ಣು ತಿಂದರೆ ತೂಕ ಹೆಚ್ಚಾಗುವುದಿಲ್ಲ. ಇದರಲ್ಲಿರುವ ವಿಟಮಿನ್-ಸಿ ಮತ್ತು ಫೈಬರ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ತೂಕ ಇಳಿಸಿಕೊಳ್ಳಲು ಬಯಸುವವರು ರಾತ್ರಿ ಹೊತ್ತು ಮಾವಿನ ಹಣ್ಣು ತಿನ್ನಬೇಡಿ.

Image credits: Instagram

Capsicum Benefits: ಕ್ಯಾಪ್ಸಿಕಂನ ಈ ಆರೋಗ್ಯ ಪ್ರಯೋಜನಗಳನ್ನು ಮಿಸ್ ಮಾಡ್ಕೋಬೇಡಿ!

ಟೀ ರುಚಿಯಾಗಿ, Creamy ಆಗಲು ಹೋಟೆಲ್‌ನಲ್ಲಿ ಸೇರಿಸುವ ರಹಸ್ಯ ಪದಾರ್ಥ ಏನು?

Kitchen Hack: ಹೀಗೆ ಮಾಡಿದ್ರೆ ಬಾಳೆಕಾಯಿ ಕಟ್‌ ಮಾಡೋವಾಗ, ಮೇಣ ಕೈಗೆ ಅಂಟೋದಿಲ್ಲ

Health Drinks: ಬೇಸಿಗೆಯಲ್ಲಾಗುವ ದೇಹದ ಉರಿಯೂತ ಕಡಿಮೆ ಮಾಡಲು ಈ 5 ಪಾನೀಯ ಸೇವಿಸಿ