ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ಹಾಕಿ ಕುದಿಸಿದ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ದೇಹಕ್ಕೆ ಹಲವು ಅದ್ಭುತ ಪ್ರಯೋಜನಗಳಿವೆ.
ಜಜ್ಜಿದ ಏಲಕ್ಕಿಯನ್ನು ನೀರಿನಲ್ಲಿ ನೆನೆಸಿ ಅಥವಾ ಕುದಿಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಜೊತೆಗೆ ಹೊಟ್ಟೆ ಉಬ್ಬರ ಸಮಸ್ಯೆಯನ್ನು ಇದು ತಡೆಯುತ್ತದೆ.
ಹೊಟ್ಟೆಯ ಕೆಳಭಾಗದಲ್ಲಿ ಕೊಬ್ಬು ಶೇಖರಣೆಯಾಗುವುದನ್ನು ತಡೆಯಲು ಏಲಕ್ಕಿ ನೀರು ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ಇದು ತೂಕ ಇಳಿಕೆಗೂ ಸಹಕಾರಿ.
ಏಲಕ್ಕಿಯಲ್ಲಿರುವ ಆಂಟಿ-ಬ್ಯಾಕ್ಟೀರಿಯಲ್ ಗುಣಗಳು ಬಾಯಿಯ ದುರ್ವಾಸನೆ ಮತ್ತು ಹಲ್ಲಿನ ಪ್ಲೇಕ್‌ಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ನೈಸರ್ಗಿಕವಾಗಿ ನಾಶಪಡಿಸುತ್ತವೆ.
ನಿಯಮಿತವಾಗಿ ಏಲಕ್ಕಿ ಕುದಿಸಿದ ನೀರನ್ನು ಕುಡಿಯುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಇದು ಒಟ್ಟಾರೆ ಚಯಾಪಚಯ ಕ್ರಿಯೆಯ ಆರೋಗ್ಯವನ್ನು ಸುಧಾರಿಸುತ್ತದೆ.
ಏಲಕ್ಕಿಯಲ್ಲಿರುವ ಪೋಷಕಾಂಶಗಳು ದೇಹದ ಹೆಚ್ಚುವರಿ ಕೊಬ್ಬನ್ನು ಕರಗಿಸುತ್ತವೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಏಲಕ್ಕಿ ನೀರು ತುಂಬಾ ಪರಿಣಾಮಕಾರಿ.
ಏಲಕ್ಕಿ ನೀರು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಕೂಡ ಸಹಾಯ ಮಾಡುತ್ತದೆ. ಇದು ಒತ್ತಡ ಮತ್ತು ಖಿನ್ನತೆಯಂತಹ ಸಮಸ್ಯೆಗಳನ್ನು ತಡೆಯಲು ನೆರವಾಗುತ್ತದೆ.
ತುಂಬಾ ತಲೆನೋವು ಕಾಡ್ತಿದ್ಯಾ? ಈ ಪಾನೀಯಗಳನ್ನು ಕುಡಿಯಿರಿ, ಆರಾಮ ಅನುಭವಿಸಿ!
ಪ್ರತಿದಿನ ಟೊಮೆಟೊ ತಿಂದರೆ ಸಿಗುವ 7 ಅದ್ಭುತ ಆರೋಗ್ಯ ಪ್ರಯೋಜನಗಳಿವು
Mouth Ulcers: ಬಹಳಷ್ಟು ಜನರನ್ನು ಕಾಡುವ ಸಮಸ್ಯೆ ಬಾಯಿ ಹುಣ್ಣು.. ಮನೆಮದ್ದು ಇದು!
Amla Benefits: ದಿನಕ್ಕೊಂದು ಬೆಟ್ಟದ ನೆಲ್ಲಿಕಾಯಿ ತಿಂದರೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ? ಒಮ್ಮೆ ಟ್ರೈ ಮಾಡಿ!