MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಕರ್ನಾಟಕದ ಬರಗಾಲವನ್ನು ಮೆಟ್ಟಿನಿಂತ ಆಲಮಟ್ಟಿ: ಜಲಾಶಯಕ್ಕೆ ಹರಿದು ಬಂತು 40 ಸಾವಿರ ಕ್ಯೂಸೆಕ್ ನೀರು!

ಕರ್ನಾಟಕದ ಬರಗಾಲವನ್ನು ಮೆಟ್ಟಿನಿಂತ ಆಲಮಟ್ಟಿ: ಜಲಾಶಯಕ್ಕೆ ಹರಿದು ಬಂತು 40 ಸಾವಿರ ಕ್ಯೂಸೆಕ್ ನೀರು!

ಕರ್ನಾಟಕದಲ್ಲಿ ತೀವ್ರ ಬರಗಾಲದ ಆತಂಕವಿದ್ದರೂ, ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ನದಿಯ ಆಲಮಟ್ಟಿ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದ್ದು, ವಿಜಯಪುರ ಮತ್ತು ಬಾಗಲಕೋಟೆ ಭಾಗದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.

2 Min read
Author : Sathish Kumar KH
Published : Jul 20 2026, 10:23 AM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ವಿಜಯಪುರ (ಜು.20): ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಮಳೆಯ (Monsoon Rain) ಕೊರತೆಯಿಂದಾಗಿ ಬರಗಾಲದ (Drought) ಛಾಯೆ ಆವರಿಸಿದೆ. ಆದರೆ, ಈ ಆತಂಕದ ನಡುವೆಯೂ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯ ಒಡಲು ತುಂಬುತ್ತಿರುವುದು ವಿಜಯಪುರ ಮತ್ತು ಬಾಗಲಕೋಟೆ ಭಾಗದ ಜನರಲ್ಲಿ ಹೊಸ ಭರವಸೆ ಮೂಡಿಸಿದೆ. ಏಷ್ಯಾದಲ್ಲೇ ಅತಿದೊಡ್ಡ ಜಲಾಶಯಗಳಲ್ಲಿ ಒಂದಾದ ಆಲಮಟ್ಟಿ ಜಲಾಶಯದ (Almatti Reservoir) ನೀರಿನ ಮಟ್ಟದಲ್ಲಿ ಭಾರೀ ಏರಿಕೆ ಕಂಡುಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : Asianet News

ಒಳಹರಿವು ಭಾರೀ ಹೆಚ್ಚಳ (Huge Inflow):

ಕಳೆದ ಕೆಲವು ದಿನಗಳಿಂದ ಜಲಾಶಯದ ಮೇಲ್ಭಾಗದಲ್ಲಿ (Upper Catchment Areas) ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಲಮಟ್ಟಿ ಅಣೆಕಟ್ಟೆಗೆ ಬರೋಬ್ಬರಿ 40,173 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಸದ್ಯ ಜಲಾಶಯದ ನೀರಿನ ಮಟ್ಟ 517.78 ಮೀಟರ್‌ಗೆ ತಲುಪಿದೆ. ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಆಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಣೆಕಟ್ಟು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವ ಸಾಧ್ಯತೆಯಿದೆ.

Related Articles

Related image1
Karnataka Budget: ಆಲಮಟ್ಟಿ ಸಂತ್ರಸ್ತರಿಗೆ ಬಂಪರ್ ಪರಿಹಾರ, ಮೇಕೆದಾಟುಗೆ ವೇಗ; ರಾಜ್ಯ ನೀರಾವರಿ ಕ್ಷೇತ್ರಕ್ಕೆ ಬಜೆಟ್ ಆನೆಬಲ!
Related image2
ಬರಗಾಲ ನಡುವೆಯೂ ತುಂಬಿದ ರಾಜ್ಯದ ಮೊದಲ ಆಣೆಕಟ್ಟು; ಶಿವಮೊಗ್ಗದ ತುಂಗಾ ಜಲಾಶಯದಿಂದ ನೀರು ಬಿಡುಗಡೆ!
36
Image Credit : Asianet News

ನೀರಿನ ಸಂಗ್ರಹದ ಅಂಕಿ-ಅಂಶಗಳು (Storage Statistics):

  • ಒಟ್ಟು ಸಂಗ್ರಹ ಸಾಮರ್ಥ್ಯ (Total Capacity): 123.081 ಟಿಎಂಸಿ (TMC)
  • ಪ್ರಸ್ತುತ ನೀರಿನ ಸಂಗ್ರಹ (Current Storage): 94.642 ಟಿಎಂಸಿ
  • ಬಳಕೆಗೆ ಲಭ್ಯವಿರುವ ನೀರು (Live Storage): 77.022 ಟಿಎಂಸಿ
46
Image Credit : Asianet News

ಹೊರಹರಿವು (Outflow): 16,458 ಕ್ಯೂಸೆಕ್

ಜಲಾಶಯದಿಂದ ಹೊರಹೋಗುವ ನೀರಿನಲ್ಲಿ ಕೆಪಿಸಿಎಲ್ (KPCL) ವಿದ್ಯುತ್ ಘಟಕಕ್ಕೆ 13,250 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಇನ್ನು ಕೆರೆ ತುಂಬಿಸುವ ಯೋಜನೆಗೆ (Tank Filling) 2,800 ಕ್ಯೂಸೆಕ್ ಹಾಗೂ ಕುಡಿಯುವ ನೀರು ಮತ್ತು ಆವಿಯಾಗುವಿಕೆಗಾಗಿ (Evaporation) ಸುಮಾರು 408 ಕ್ಯೂಸೆಕ್ ನೀರು ಬಳಕೆಯಾಗುತ್ತಿದೆ.

56
Image Credit : Asianet News

ಬರದ ನಡುವೆ ಸಿಹಿ ಸುದ್ದಿ (Good news amidst Drought):

ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆಯು ಶೇ. 60 ರಷ್ಟು ಕೊರತೆಯಾಗಿದೆ (Rainfall Deficit). ಸುಮಾರು 178 ತಾಲೂಕುಗಳಲ್ಲಿ ಮಳೆಯೇ ಆಗಿಲ್ಲದ ಕಾರಣ ಸರ್ಕಾರ ಈಗಾಗಲೇ ರಾಜ್ಯವನ್ನು ಬರಪೀಡಿತ ಎಂದು ಘೋಷಿಸಿದೆ. ಬರದ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಕೇಂದ್ರದ ತಂಡವನ್ನು (Central Team) ಕಳುಹಿಸುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದಾರೆ.

66
Image Credit : Asianet News

ಇಂತಹ ಸಂಕಷ್ಟದ ಸಮಯದಲ್ಲಿ ಆಲಮಟ್ಟಿ ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದು ರೈತ ಸಮುದಾಯಕ್ಕೆ (Farmers) ದೊಡ್ಡ ಸಮಾಧಾನ ತಂದಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಮಳೆಯಿಲ್ಲದೆ ಕಂಗಾಲಾಗಿದ್ದ ಉತ್ತರ ಕರ್ನಾಟಕದ ರೈತರು, ಈಗ ಕೃಷ್ಣಾ ನದಿಗೆ ಜೀವ ಕಳೆ ಬಂದಿರುವುದನ್ನು ಕಂಡು ನಿಟ್ಟುಸಿರು ಬಿಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಮಹಾರಾಷ್ಟ್ರದ ಭಾಗಗಳಲ್ಲಿ ಮಳೆ ಹೆಚ್ಚಾದರೆ ಜಲಾಶಯವು ಶೀಘ್ರದಲ್ಲೇ ಗರಿಷ್ಠ ಮಟ್ಟವನ್ನು (Maximum Level) ತಲುಪಲಿದೆ ಎಂದು ಅಂದಾಜಿಸಲಾಗಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕದ ಜಲಾಶಯಗಳು
ಕರ್ನಾಟಕ ಸುದ್ದಿ
ಮುಂಗಾರು ಮಳೆ
ವಿಜಯಪುರ

Latest Videos
Recommended Stories
Recommended image1
ಅಜ್ಜಿ ಚೆನ್ನಮ್ಮ ನಿಧನರಾದರೂ ಪ್ರಜ್ವಲ್‌ಗೆ ಪೆರೋಲ್ ಅರ್ಜಿ ಸಲ್ಲಿಸಲು ಈ ಕಾರಣಕ್ಕೆ ಅವಕಾಶ ಸಿಗಲಿಲ್ಲ; ಟಿವಿ ವೀಕ್ಷಣೆ!
Recommended image2
ಬೆಂಗಳೂರು ಜನಗಳೇ, ಅಲರ್ಟ್‌.. ಇವತ್ತು ಈ ಏರಿಯಾಗಳಲ್ಲಿ ಕರೆಂಟ್ ಇರೋದಿಲ್ಲ..!
Recommended image3
ಚೆನ್ನಮ್ಮ ನಿಧನ ಹಿನ್ನಲೆಯಲ್ಲಿ ಹೊಳೆನರಸೀಪುರದಲ್ಲಿ ಸ್ವಯಂಪ್ರೇರಿತ ಬಂದ್, ಕಷ್ಟಕ್ಕೆ ಸ್ಪಂದಿಸುತ್ತಿದ್ದ ಅಮ್ಮ
Related Stories
Recommended image1
Karnataka Budget: ಆಲಮಟ್ಟಿ ಸಂತ್ರಸ್ತರಿಗೆ ಬಂಪರ್ ಪರಿಹಾರ, ಮೇಕೆದಾಟುಗೆ ವೇಗ; ರಾಜ್ಯ ನೀರಾವರಿ ಕ್ಷೇತ್ರಕ್ಕೆ ಬಜೆಟ್ ಆನೆಬಲ!
Recommended image2
ಬರಗಾಲ ನಡುವೆಯೂ ತುಂಬಿದ ರಾಜ್ಯದ ಮೊದಲ ಆಣೆಕಟ್ಟು; ಶಿವಮೊಗ್ಗದ ತುಂಗಾ ಜಲಾಶಯದಿಂದ ನೀರು ಬಿಡುಗಡೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved