MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಹಂಪಿಯ ಉತ್ಖನನದಲ್ಲಿ ಭಗ್ನಗೊಂಡ 2 ಆಳ್ವರ್‌ ವಿಗ್ರಹ, ಮೂರು ಪ್ರತಿಷ್ಠಾನ ಪೀಠ ಪತ್ತೆ

ಹಂಪಿಯ ಉತ್ಖನನದಲ್ಲಿ ಭಗ್ನಗೊಂಡ 2 ಆಳ್ವರ್‌ ವಿಗ್ರಹ, ಮೂರು ಪ್ರತಿಷ್ಠಾನ ಪೀಠ ಪತ್ತೆ

ಹಂಪಿಯ ಹಜಾರರಾಮ ದೇಗುಲದ ಬಳಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ನಡೆಸಿದ ಉತ್ಖನನದಲ್ಲಿ, ಭಗ್ನಗೊಂಡ ಪುರಾತನ ಆಳ್ವರ್ ವಿಗ್ರಹಗಳು ಮತ್ತು ಪೀಠಗಳು ಪತ್ತೆಯಾಗಿವೆ. 1565ರ ತಾಳಿಕೋಟೆ ಕದನದ ನಂತರ ನಡೆದ ದಾಳಿಗೆ ಸಾಕ್ಷಿಯಾಗಿವೆ.

1 Min read
Author : Kannadaprabha News
Published : May 21 2026, 07:27 AM IST
Share this Photo Gallery
  • FB
  • TW
  • Linkdin
  • Whatsapp
14
ಹಂಪಿ ಉತ್ಖನನ
Image Credit : Social Media

ಹಂಪಿ ಉತ್ಖನನ

ಹೊಸಪೇಟೆ: ಹಂಪಿಯ ಹಜಾರರಾಮ ದೇಗುಲ ಬಳಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯಿಂದ ಕಳೆದ ಕೆಲ ದಿನಗಳಿಂದ ಉತ್ಖನನ ನಡೆಯುತ್ತಿದ್ದು, ಭಗ್ನಗೊಂಡಿರುವ ಪುರಾತನ ಕಾಲದ ಎರಡು ಆಳ್ವರ್ (ತಮಿಳುನಾಡಿನ ಒಂದು ಭಕ್ತಿ ಪಂಥದವರು ಕೆತ್ತಿದ ವಿಗ್ರಹ), ವಿಗ್ರಹ ಪ್ರತಿಷ್ಠಾಪನೆ ಮಾಡುವ ಮೂರು ಪೀಠಗಳು ಪತ್ತೆಯಾಗಿವೆ.

Add Asianetnews Kannada as a Preferred SourcegooglePreferred
24
 ಶಿರಚ್ಛೇದನಗೊಂಡ ವಿಗ್ರಹಗಳು
Image Credit : Social Media

ಶಿರಚ್ಛೇದನಗೊಂಡ ವಿಗ್ರಹಗಳು

ಕಳೆದ ಮೂರು ದಿನಗಳ ಹಿಂದೆ ಕಲ್ಲಿನ ಚಾವಣಿ, ಆನೆಯ ವಿಗ್ರಹಗಳು ಪತ್ತೆ ಆಗಿದ್ದವು. 1565ರ ತಾಳಿಕೋಟೆ ಕದನದಲ್ಲಿ ವಿಜಯನಗರ ಅರಸರು ಪರಾಭವಗೊಂಡರು. ನಂತರ ಬಹುಮನಿ ಸುಲ್ತಾನರ ಆಕ್ರಮಣಕ್ಕೆ ತುತ್ತಾಗಿ ಸಾವಿರಾರು ವಿಗ್ರಹಗಳು, ದೇವರ ಮೂರ್ತಿಗಳ ಶಿರಚ್ಛೇದನಗೊಳಿಸಿ, ನಾಶಪಡಿಸಲಾಯಿತು. ಬಳಿಕ ಈಗ ನಡೆಯುತ್ತಿರುವ ಉತ್ಖನನದಲ್ಲಿ ವಿಗ್ರಹಗಳು ಪತ್ತೆಯಾಗುತ್ತಿವೆ.

Related Articles

Related image1
ಕಲ್ಯಾಣ ಕರ್ನಾಟಕ ಹೆಬ್ಬಾಗಿಲಲ್ಲಿ ಹೊಸ ವಿಮಾನ ನಿಲ್ದಾಣ; ಬಳ್ಳಾರಿ, ಹಂಪಿ, ಹೊಸಪೇಟೆ, ಕೊಪ್ಪಳಕ್ಕೂ ಹತ್ತಿರ!
Related image2
ಹಂಪಿ ಉತ್ಖನನ: ಪುರಾತನ ದೇವಾಲಯದ ಕಲ್ಲಿನ ಚಾವಣಿ, ಅಪರೂಪದ ಆನೆಯ ಕಲಾಕೃತಿಗಳು ಪತ್ತೆ
34
ಆಳ್ವರ್ ಮೂರ್ತಿ
Image Credit : Social Media

ಆಳ್ವರ್ ಮೂರ್ತಿ

ಈಗ ದೊರೆತ ಮೂರ್ತಿಗಳು ಆಳ್ವರ್ ಮೂರ್ತಿಗಳಾಗಿವೆ. ಸುಮಾರು 11 ಜನ ಆಳ್ವರ್‌ ಸಂತರು ವೈಷ್ಣವ ಮತ ಪ್ರಚಾರಕರಾಗಿದ್ದರು. ಹಂಪಿ ಪ್ರದೇಶದಲ್ಲಿ ವೈಷ್ಣವ ಪರಂಪರೆಯ ಪ್ರಭಾವ ಬಹಳ ಗಾಢವಾಗಿತ್ತು. ವಿಶೇಷವಾಗಿ ವಿಜಯನಗರ ಕಾಲದಲ್ಲಿ ವೈಷ್ಣವ ಸಂಪ್ರದಾಯ, ವಿಷ್ಣು ಭಕ್ತಿ ಮತ್ತು ಆಳ್ವರ್‌ಗಳ ಭಕ್ತಿಗೀತೆಗಳಿಗೆ ಹೆಚ್ಚಿನ ಗೌರವ ಇತ್ತು ಎಂದು ಇತಿಹಾಸಕಾರರು ಹೇಳಿದ್ದಾರೆ.

44
ವಿಜಯನಗರ ಸಾಮ್ರಾಜ್ಯದ ವೈಭವ, ಶ್ರೀಮಂತಿಕೆ
Image Credit : Social Media

ವಿಜಯನಗರ ಸಾಮ್ರಾಜ್ಯದ ವೈಭವ, ಶ್ರೀಮಂತಿಕೆ

ಉತ್ಖನನದ ವೇಳೆ ದೊರೆತ ವಿಗ್ರಹಗಳನ್ನು ನೋಡಿದರೆ ಅಂದಿನ ದಾಳಿಯ ಭೀಕರತೆಯನ್ನು ತಿಳಿಯಬಹುದು. ಇನ್ನೂ ಹೆಚ್ಚಿನ ಮಟ್ಟದಲ್ಲಿ ದೊರೆಯುವ ವಿಗ್ರಹಗಳಿಂದ ಮತ್ತು ಕುರುಹುಗಳಿಂದ ವಿಜಯನಗರ ಸಾಮ್ರಾಜ್ಯದ ವೈಭವ, ಶ್ರೀಮಂತಿಕೆಯನ್ನು ತಿಳಿಯಬಹುದು ಎಂದು ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ವಿರೂಪಾಕ್ಷಿ ಹೇಳುತ್ತಾರೆ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ವಿಜಯನಗರ

Latest Videos
Recommended Stories
Recommended image1
15000 ಶಿಕ್ಷಕರ ತಕ್ಷಣ ನೇಮಕಕ್ಕೆ ಓಕೆ ಎಂದ ಸಿಎಂ, ಪ್ರಸ್ತಾವನೆ ಸಲ್ಲಿಸಲು ಸೂಚನೆ, ಕೆಪಿಎಸ್‌ ಶಾಲೆಗೂ ಟೆಂಡರ್‌
Recommended image2
ಅಭಾವದ ಮಧ್ಯೆ ದುಬಾರಿಯಾದ ರಸಗೊಬ್ಬರ ಹೊಡೆತ - ಕಾಂಪ್ಲೆಕ್ಸ್, ಪೋಟ್ಯಾಷ್ ದರ ₹1400 ರಿಂದ ₹2200ಕ್ಕೇರಿಕೆ!
Recommended image3
ರೇಷ್ಮೆ ಕೃಷಿಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ವಿಶೇಷ ಆದ್ಯತೆ: ಸಚಿವ ಕೆ.ವೆಂಕಟೇಶ್ ಘೋಷಣೆ
Related Stories
Recommended image1
ಕಲ್ಯಾಣ ಕರ್ನಾಟಕ ಹೆಬ್ಬಾಗಿಲಲ್ಲಿ ಹೊಸ ವಿಮಾನ ನಿಲ್ದಾಣ; ಬಳ್ಳಾರಿ, ಹಂಪಿ, ಹೊಸಪೇಟೆ, ಕೊಪ್ಪಳಕ್ಕೂ ಹತ್ತಿರ!
Recommended image2
ಹಂಪಿ ಉತ್ಖನನ: ಪುರಾತನ ದೇವಾಲಯದ ಕಲ್ಲಿನ ಚಾವಣಿ, ಅಪರೂಪದ ಆನೆಯ ಕಲಾಕೃತಿಗಳು ಪತ್ತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved