MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Yash Dharmasthala Visit
NICE Land Row
BJP vs Minister B Nagendra
Mangaluru Railway Division
Viral UPSC Interview Question
Airport Privatisation India
Doddaballapur-Dabaspet Kwin City
Indian Space Sector
Gurmeet Ram Rahim
Karnataka Assembly Speaker
India Sugar Prices
Government KPS Schools
Central Government Jobs
Karnataka SIR 2026
  • Home
  • Karnataka Districts
  • ಡಿಸಿಎಂ ತವರಲ್ಲಿ 12 ಜೀತ ಕಾರ್ಮಿಕರ ರಕ್ಷಣೆ; ಪ್ರಪಂಚವನ್ನೇ ನೋಡದೆ 20 ವರ್ಷ ಕಲ್ಲು ಕ್ವಾರಿಯಲ್ಲಿ ಕೆಲಸ!

ಡಿಸಿಎಂ ತವರಲ್ಲಿ 12 ಜೀತ ಕಾರ್ಮಿಕರ ರಕ್ಷಣೆ; ಪ್ರಪಂಚವನ್ನೇ ನೋಡದೆ 20 ವರ್ಷ ಕಲ್ಲು ಕ್ವಾರಿಯಲ್ಲಿ ಕೆಲಸ!

ತುಮಕೂರು ಜಿಲ್ಲೆಯಲ್ಲಿ ಕಳೆದ 20 ವರ್ಷಗಳಿಂದ ಅಕ್ರಮ ಕಲ್ಲುಗಣಿಗಾರಿಕೆಯಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ 12 ಕಾರ್ಮಿಕರನ್ನು ಅಧಿಕಾರಿಗಳ ತಂಡ ರಕ್ಷಿಸಿದೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

2 Min read
Author : Sathish Kumar KH
Published : Jul 22 2026, 12:33 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ತುಮಕೂರು (ಜು.22): ರಾಜ್ಯದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರ ತವರು ಜಿಲ್ಲೆಯಲ್ಲಿ ಮನುಷ್ಯತ್ವವೇ ತಲೆತಗ್ಗಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಕಳೆದ ಎರಡು ದಶಕಗಳಿಂದ ಅಕ್ರಮ ಕಲ್ಲುಗಣಿಗಾರಿಕೆಯಲ್ಲಿ (Illegal Stone Quarrying) ಜೀತಕ್ಕಿದ್ದ 12 ಮಂದಿ ಕಾರ್ಮಿಕರನ್ನು ಅಧಿಕಾರಿಗಳ ತಂಡ ಸಿನಿಮೀಯ ಮಾದರಿಯಲ್ಲಿ ದಾಳಿ ನಡೆಸಿ ರಕ್ಷಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : Asianet News

20 ವರ್ಷಗಳ ಸುದೀರ್ಘ ನರಕಯಾತನೆ:

ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ (KRS, Mandya) ಮೂಲದ ಕಾರ್ಮಿಕರನ್ನು ಈ ಗಣಿ ಮಾಲೀಕರು ಮುಂಗಡ ಹಣ (Advance Money) ನೀಡಿ ಈ ಹಿಂದೆ ಕರೆತಂದಿದ್ದರು. ಅಂದಿನಿಂದ ಇಂದಿನವರೆಗೆ, ಅಂದರೆ ಬರೋಬ್ಬರಿ 20 ವರ್ಷಗಳಿಂದ ಈ ಕಾರ್ಮಿಕರನ್ನು ಜೀತಕ್ಕೆ (Bonded Labor) ದುಡಿಸಿಕೊಳ್ಳಲಾಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.

Related Articles

Related image1
ವಿಜಯನಗರದಲ್ಲಿ ಇನ್ನೂ ಜೀವಂತ ಕರಾಳ ಜೀತ ಪದ್ಧತಿ, ಎನ್‌ಜಿಒ ಸಂಸ್ಥೆ ನೆರವಿನಿಂದ ಒಡಿಶಾದ 37 ಜೀವಗಳಿಗೆ ಮುಕ್ತಿ!
Related image2
ತಂದೆ ಮಾಡಿದ ಸಾಲಕ್ಕಾಗಿ ಇಬ್ಬರು ಮಕ್ಕಳು ಜೀತ, ದಂಪತಿ ಸೆರೆ
36
Image Credit : Asianet News

ತುಮಕೂರಿನ ಕುಣಿಗಲ್ ತಾಲ್ಲೂಕಿನ (Kunigal Taluk) ಹುಲಿಯೂರುದುರ್ಗದ ಸಮೀಪದ ಪಾವಸಂದ್ರ ಗ್ರಾಮದ ಸರ್ಕಾರಿ ಜಮೀನಿನಲ್ಲಿ ನಡೆಯುತ್ತಿದ್ದ ಈ ಅಕ್ರಮ ಗಣಿಗಾರಿಕೆಯಲ್ಲಿ ಕಾರ್ಮಿಕರಿಗೆ ಕನಿಷ್ಠ ಸ್ವಾತಂತ್ರ್ಯವೂ ಇರಲಿಲ್ಲ ಎಂದು ಹೇಳಲಾಗುತ್ತಿದೆ.

46
Image Credit : Asianet News

ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ :

'ಮುಕ್ತಿ' (MUKTI NGO) ಎಂಬ ಸ್ವಯಂಸೇವಾ ಸಂಸ್ಥೆ ನೀಡಿದ ದೂರಿನ ಆಧಾರದ ಮೇಲೆ, ತುಮಕೂರು ಉಪವಿಭಾಗಾಧಿಕಾರಿ (Assistant Commissioner) ನಹಿದಾ ಜಮ್ ಜಮ್ ಅವರ ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿ ದಾಳಿ ನಡೆಸಿತು. ಈ ಕಾರ್ಯಾಚರಣೆಯಲ್ಲಿ ಇಬ್ಬರು ಮಕ್ಕಳು, ಐವರು ಮಹಿಳೆಯರು ಹಾಗೂ ನಾಲ್ವರು ಪುರುಷರು ಸೇರಿದಂತೆ ಒಟ್ಟು 12 ಕಾರ್ಮಿಕರನ್ನು ರಕ್ಷಿಸಲಾಗಿದೆ.

56
Image Credit : Asianet News

ರಕ್ಷಣೆಗೊಳಗಾದವರ ವಿವರ:

ರಕ್ಷಣೆಗೊಳಗಾದವರಲ್ಲಿ ಚೆಲುವಾ ಭೋವಿ (45), ಸರಸ್ವತಿ (40), ಪಳನಿ (50), ಸರೋಜಾ (40), ಸೌಮ್ಯ (40), ಪುರುಷೋತ್ತಮ (20), ರವಿ (20), ಪವಿತ್ರಾ (25), ಕೃಷ್ಣ (25), ಮಂಜುಳಾ (35), ಆರ್ಮುಗಮ್ (56) ಮತ್ತು ಭಾಗ್ಯಮ್ಮ (47) ಸೇರಿದ್ದಾರೆ. ಇವರೆಲ್ಲರನ್ನೂ ಸದ್ಯ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಅವರಿಗೆ ಸರ್ಕಾರಿ ಸವಲತ್ತುಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

66
Image Credit : Asianet News

ಪೊಲೀಸ್ ಠಾಣೆಯಲ್ಲಿ ದೂರು ದಾಖಲು:

ಈ ಅಕ್ರಮ ಗಣಿಗಾರಿಕೆ ಮತ್ತು ಜೀತ ಪದ್ಧತಿಯ (Jeeta System) ಕುರಿತು ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸರ್ಕಾರಿ ಜಮೀನಿನಲ್ಲಿ ಇಷ್ಟು ವರ್ಷಗಳ ಕಾಲ ಅಕ್ರಮವಾಗಿ ಗಣಿಗಾರಿಕೆ ಹೇಗೆ ನಡೆಯಿತು? ಅಧಿಕಾರಿಗಳ ಗಮನಕ್ಕೆ ಇದು ಏಕ ಬರಲಿಲ್ಲ? ಎಂಬ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ. ಜೀತ ಪದ್ಧತಿ ಕಾನೂನುಬಾಹಿರವಾಗಿದ್ದರೂ, ಇಂದಿನ ಕಾಲದಲ್ಲೂ ಇಂತಹ ದೌರ್ಜನ್ಯಗಳು ನಡೆಯುತ್ತಿರುವುದು ನಿಜಕ್ಕೂ ದುರಂತ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ (Legal Action) ಜರುಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಕಾರ್ಮಿಕ
ತುಮಕೂರು
ಜಿ. ಪರಮೇಶ್ವರ್

Latest Videos
Recommended Stories
Recommended image1
Now Playing
ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
Recommended image2
'ಮೇ ಹೆಚ್ ಪಿ ಬೋಲ್ ರಹಾ ಹೂಂ...! 2013ರಲ್ಲೇ ಸತ್ತಿದ್ದ ಭೂಗತ ಪಾತಕಿ ಹೇಮಂತ್ ಪೂಜಾರಿ ಬದುಕಿದ್ದಾನಾ?
Recommended image3
SSLC, PUCಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 'ನಮ್ಮೂರ ಹೆಮ್ಮೆ' ಪೌರ ಸನ್ಮಾನ; ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!
Related Stories
Recommended image1
ವಿಜಯನಗರದಲ್ಲಿ ಇನ್ನೂ ಜೀವಂತ ಕರಾಳ ಜೀತ ಪದ್ಧತಿ, ಎನ್‌ಜಿಒ ಸಂಸ್ಥೆ ನೆರವಿನಿಂದ ಒಡಿಶಾದ 37 ಜೀವಗಳಿಗೆ ಮುಕ್ತಿ!
Recommended image2
ತಂದೆ ಮಾಡಿದ ಸಾಲಕ್ಕಾಗಿ ಇಬ್ಬರು ಮಕ್ಕಳು ಜೀತ, ದಂಪತಿ ಸೆರೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved