MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ವಿಜಯನಗರದಲ್ಲಿ ಇನ್ನೂ ಜೀವಂತ ಕರಾಳ ಜೀತ ಪದ್ಧತಿ, ಎನ್‌ಜಿಒ ಸಂಸ್ಥೆ ನೆರವಿನಿಂದ ಒಡಿಶಾದ 37 ಜೀವಗಳಿಗೆ ಮುಕ್ತಿ!

ವಿಜಯನಗರದಲ್ಲಿ ಇನ್ನೂ ಜೀವಂತ ಕರಾಳ ಜೀತ ಪದ್ಧತಿ, ಎನ್‌ಜಿಒ ಸಂಸ್ಥೆ ನೆರವಿನಿಂದ ಒಡಿಶಾದ 37 ಜೀವಗಳಿಗೆ ಮುಕ್ತಿ!

ವಿಜಯನಗರದ ನಂದಿಬಂಡಿ ಗ್ರಾಮದಲ್ಲಿ ಜೀತ ಪದ್ಧತಿಯಲ್ಲಿ ಸಿಲುಕಿದ್ದ ಒಡಿಶಾ ಮೂಲದ 37ಕಾರ್ಮಿಕರನ್ನು ಜಿಲ್ಲಾಡಳಿತವು 'ಸ್ಪಂದನ' ಎನ್‌ಜಿಒ ನೀಡಿದ ಮಾಹಿತಿಯ ಮೇರೆಗೆ ರಕ್ಷಿಸಿದೆ. ಮುಂಗಡ ಹಣ ನೀಡಿ ಕರೆತಂದು, ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳುತ್ತಿದ್ದ ಕಾರ್ಮಿಕರನ್ನು ಸುರಕ್ಷಿತವಾಗಿ ಅವರ ಊರಿಗೆ ಕಳುಹಿಸಲಾಗಿದೆ.

2 Min read
Author : Gowthami K
Published : May 15 2026, 05:56 PM IST
Share this Photo Gallery
  • FB
  • TW
  • Linkdin
  • Whatsapp
15
 ‘ಸ್ಪಂದನ’ ಎಂಬ ಎನ್‌ಜಿಒ ಸಂಸ್ಥೆಯಿಂದ ದೊರೆತ ಖಚಿತ ಮಾಹಿತಿ
Image Credit : Asianet News

‘ಸ್ಪಂದನ’ ಎಂಬ ಎನ್‌ಜಿಒ ಸಂಸ್ಥೆಯಿಂದ ದೊರೆತ ಖಚಿತ ಮಾಹಿತಿ

ವಿಜಯನಗರ: ಜೀತ ಪದ್ಧತಿಯಲ್ಲಿ ಸಿಲುಕಿದ್ದ ಒಡಿಶಾ ಮೂಲದ 37 ಮಂದಿ ಅಂತರ್‌ರಾಜ್ಯ ಕೂಲಿ ಕಾರ್ಮಿಕರನ್ನು ವಿಜಯನಗರ ಜಿಲ್ಲಾಡಳಿತ ರಕ್ಷಿಸಿ, ಸುರಕ್ಷಿತವಾಗಿ ಅವರ ತವರೂರುಗಳಿಗೆ ಕಳುಹಿಸಿದ ಘಟನೆ ಮರಿಯಮ್ಮನಹಳ್ಳಿ ಹೋಬಳಿಯ ನಂದಿಬಂಡಿ ಗ್ರಾಮದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ‘ಸ್ಪಂದನ’ ಎಂಬ ಎನ್‌ಜಿಒ ಸಂಸ್ಥೆಯಿಂದ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರ ಮಾರ್ಗದರ್ಶನದಲ್ಲಿ ಸಹಾಯಕ ಆಯುಕ್ತ ವಿವೇಕಾನಂದ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿತು. ನಂದಿಬಂಡಿಯಲ್ಲಿರುವ ಇಟ್ಟಿಗೆ ಭಟ್ಟಿಯಲ್ಲಿ ಜೀತ ಪದ್ಧತಿಯಲ್ಲಿ ದುಡಿಯುತ್ತಿದ್ದ ಕಾರ್ಮಿಕರನ್ನು ಪತ್ತೆಹಚ್ಚಿ ರಕ್ಷಿಸಲಾಯಿತು.

Add Asianetnews Kannada as a Preferred SourcegooglePreferred
25
ಜೀತಕ್ಕೆ ಸೆಳೆಯಲು ₹40,000 ಮುಂಗಡ
Image Credit : Asianet News

ಜೀತಕ್ಕೆ ಸೆಳೆಯಲು ₹40,000 ಮುಂಗಡ

ಸುಮಾರು ಆರು ತಿಂಗಳ ಹಿಂದೆ ಒಡಿಶಾ ರಾಜ್ಯದ ಬಲಂಗೀರ್ ಮತ್ತು ನವರಂಗಪುರ ಜಿಲ್ಲೆಗಳಿಂದ ಪ್ರತಿ ಕುಟುಂಬಕ್ಕೆ ₹40,000 ಮುಂಗಡ ಹಣ ನೀಡಿ ಕಾರ್ಮಿಕರನ್ನು ಇಲ್ಲಿ ಕರೆತರಲಾಗಿತ್ತು. ಆರಂಭದಲ್ಲಿ ಆರು ತಿಂಗಳು ಮಾತ್ರ ಕೆಲಸ ಮಾಡಿಸುವುದಾಗಿ ಭರವಸೆ ನೀಡಿದ ಮಾಲೀಕರು, ಕೆಲಸದ ಆಧಾರದ ಮೇಲೆ ಸಮರ್ಪಕ ವೇತನ ನೀಡುವುದಾಗಿ ಹೇಳಿದ್ದರು. ಆದರೆ, ವಾಸ್ತವದಲ್ಲಿ ವಾರಪೂರ್ತಿ ದುಡಿದರೂ ಕೇವಲ ₹500 ಮಾತ್ರ ನೀಡಲಾಗುತ್ತಿತ್ತು ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಕಾರ್ಮಿಕರು ತಮ್ಮ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ತವರು ರಾಜ್ಯಕ್ಕೆ ಹಿಂತಿರುಗಲು ಮುಂದಾದಾಗ ಬೆದರಿಕೆ ಹಾಕಲಾಗುತ್ತಿತ್ತು. ಹೊರಗಿನ ಜಗತ್ತಿನ ಸಂಪರ್ಕವನ್ನು ಸಂಪೂರ್ಣ ಕಡಿತಗೊಳಿಸುವ ಉದ್ದೇಶದಿಂದ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಿಸಲಾಗಿತ್ತು ಎಂಬ ಅಂಶವೂ ಬೆಳಕಿಗೆ ಬಂದಿದೆ.

Related Articles

Related image1
ಜೀತ ಪದ್ಧತಿ ಕಾಯ್ದೆ ಜಾರಿ ಸಂಬಂಧ ಎನ್ನೆಚ್ಚಾರ್ಸಿಗೆ ಹೈಕೋರ್ಟ್‌ ನೋಟಿಸ್‌
Related image2
ತಂದೆ ಮಾಡಿದ ಸಾಲಕ್ಕಾಗಿ ಇಬ್ಬರು ಮಕ್ಕಳು ಜೀತ, ದಂಪತಿ ಸೆರೆ
35
ಮಾನವೀಯತೆಯ ವಿರುದ್ಧದ ಪರಿಸ್ಥಿತಿ
Image Credit : Asianet News

ಮಾನವೀಯತೆಯ ವಿರುದ್ಧದ ಪರಿಸ್ಥಿತಿ

ಕಾರ್ಮಿಕರನ್ನು ಅತ್ಯಂತ ಹೀನಾಯ ಪರಿಸ್ಥಿತಿಯಲ್ಲಿ, ಕೇವಲ ನಾಲ್ಕು ಅಡಿ ಅಗಲದ ಸಣ್ಣ ಶೆಡ್‌ಗಳಲ್ಲಿ ವಾಸಿಸುವಂತೆ ಮಾಡಲಾಗಿತ್ತು. ಮೂಲಭೂತ ಸೌಕರ್ಯಗಳೇ ಇಲ್ಲದ ಪರಿಸ್ಥಿತಿಯಲ್ಲಿ 10 ಮಕ್ಕಳು, 11 ಮಹಿಳೆಯರು ಮತ್ತು 16 ಪುರುಷರು ಸೇರಿ ಒಟ್ಟು 37 ಮಂದಿ ಬದುಕುತ್ತಿದ್ದರು.

45
ದಾಳಿ ಮತ್ತು ರಕ್ಷಣೆ ಕಾರ್ಯಾಚರಣೆ
Image Credit : Asianet News

ದಾಳಿ ಮತ್ತು ರಕ್ಷಣೆ ಕಾರ್ಯಾಚರಣೆ

ಸ್ಪಂದನ ಸಂಸ್ಥೆಯ ಸದಸ್ಯ ಹೃದಯ ರಾಜ್ ನೀಡಿದ ಮಾಹಿತಿಯ ಮೇರೆಗೆ ಜಿಲ್ಲಾಡಳಿತ ತಂಡ ದಾಳಿ ನಡೆಸಿ ಕಾರ್ಮಿಕರನ್ನು ರಕ್ಷಿಸಿತು. ರಕ್ಷಿಸಲಾದವರನ್ನು ಅಗತ್ಯ ಸೌಲಭ್ಯಗಳೊಂದಿಗೆ ಸುರಕ್ಷಿತವಾಗಿ ಒಡಿಶಾ ರಾಜ್ಯಕ್ಕೆ ರೈಲಿನ ಮೂಲಕ ಕಳುಹಿಸಲಾಯಿತು. ಈ ಪ್ರಕರಣ ಸಂಬಂಧ ಇಟ್ಟಿಗೆ ಭಟ್ಟಿ ಮಾಲೀಕರಾದ ಶ್ರೀನಿವಾಸ್, ಮಹಾದೇವ ರಾವ್ ಹಾಗೂ ವೆಂಕಟ ಪ್ರಸಾದ್ ವಿರುದ್ಧ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜೀತ ಪದ್ಧತಿಗೆ ಬೆಂಬಲ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ತಿಳಿಸಿದ್ದಾರೆ.

55
ಆಡಳಿತದ ಕಟ್ಟುನಿಟ್ಟಿನ ನಿಗಾ
Image Credit : Asianet News

ಆಡಳಿತದ ಕಟ್ಟುನಿಟ್ಟಿನ ನಿಗಾ

ಈ ಘಟನೆ ಬೆಳಕಿಗೆ ಬಂದ ಬಳಿಕ ಜಿಲ್ಲಾಡಳಿತವು ಇಂತಹ ಅನಧಿಕೃತ ಚಟುವಟಿಕೆಗಳ ಮೇಲೆ ಹೆಚ್ಚುವರಿ ನಿಗಾವಹಿಸಿದೆ. ಅಂತರ್‌ರಾಜ್ಯ ಕಾರ್ಮಿಕರ ಶೋಷಣೆಯನ್ನು ತಡೆಗಟ್ಟಲು ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಈ ಘಟನೆ ಜೀತ ಪದ್ಧತಿಯಂತಹ ಅಮಾನವೀಯ ವ್ಯವಸ್ಥೆಗಳು ಇನ್ನೂ ಕೆಲವೆಡೆ ಮುಂದುವರಿಯುತ್ತಿರುವುದನ್ನು ತೋರಿಸುತ್ತಿದ್ದು, ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಜಾಗೃತಿ ಮತ್ತು ಕಾನೂನು ಕ್ರಮಗಳ ಅಗತ್ಯತೆಯನ್ನು ಒತ್ತಿ ಹೇಳುತ್ತದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಒಡಿಶಾ
ವಿಜಯನಗರ
ಕಾರ್ಮಿಕ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಬಂಗಾರದ ಮನುಷ್ಯನ ಸೈಕಲ್ ಸವಾರಿ ಹಿಂದಿದೆ ರಹಸ್ಯ; ಮೋದಿ ಮಾತಿನಿಂದ ಐಷಾರಾಮಿ ಕಾರಿಗೆ ಟಾಟಾ ಹೇಳಿದ ಚಿನ್ನದ ವ್ಯಾಪಾರಿ!
Recommended image2
ಬೆಳಗಾವಿಯನ್ನು ನಡುಗಿಸಿದ ಶಿವಂ ಅಸೋಸಿಯೇಟ್‌ನ 4600 ಕೋಟಿ ವಂಚನೆ ಪ್ರಕರಣ, ಕಚೇರಿ ಮೇಲೆ ದಾಳಿ ಹಣ ಹಾಕಿದವ್ರಿಗೆ ಚಿಂತೆ!
Recommended image3
ಟಿಬಿ ಡ್ಯಾಂ ಬಳಿ ಟ್ಯಾಂಕರ್, ಟ್ರಾಕ್ಟರ್ ಭೀಕರ ಅಪಘಾತ, ಮಗು ಸೇರಿ ಒಂದೇ ಕುಟುಂಬದ 6 ಸಾವು
Related Stories
Recommended image1
ಜೀತ ಪದ್ಧತಿ ಕಾಯ್ದೆ ಜಾರಿ ಸಂಬಂಧ ಎನ್ನೆಚ್ಚಾರ್ಸಿಗೆ ಹೈಕೋರ್ಟ್‌ ನೋಟಿಸ್‌
Recommended image2
ತಂದೆ ಮಾಡಿದ ಸಾಲಕ್ಕಾಗಿ ಇಬ್ಬರು ಮಕ್ಕಳು ಜೀತ, ದಂಪತಿ ಸೆರೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved