MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಹೊಸಪೇಟೆಯಲ್ಲಿ ಭೀಕರ ರೈಲು ಅಪಘಾತ ಅಣುಕು ಪ್ರದರ್ಶನ; ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ ಪ್ರತ್ಯಕ್ಷಿಕೆ!

ಹೊಸಪೇಟೆಯಲ್ಲಿ ಭೀಕರ ರೈಲು ಅಪಘಾತ ಅಣುಕು ಪ್ರದರ್ಶನ; ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ ಪ್ರತ್ಯಕ್ಷಿಕೆ!

ವಿಜಯನಗರದ ಹೊಸಪೇಟೆ ರೈಲ್ವೇ ನಿಲ್ದಾಣದಲ್ಲಿ ರೈಲು ಅಪಘಾತದ ರಕ್ಷಣಾ ಕಾರ್ಯಾಚರಣೆ ಅಣುಕು ಪ್ರದರ್ಶನ ನಡೆಯಿತು. ಎನ್‌ಡಿಆರ್‌ಎಫ್, ರೈಲ್ವೇ ಇಲಾಖೆ, ಅಗ್ನಿಶಾಮಕ ದಳ ಮತ್ತು ಪೊಲೀಸರ ಜಂಟಿ ಸಹಯೋಗದಲ್ಲಿ ಗಾಯಾಳುಗಳ ರಕ್ಷಣೆ ಹಾಗೂ ಪ್ರಥಮ ಚಿಕಿತ್ಸೆಯ ಪ್ರಾತ್ಯಕ್ಷಿಕೆ ನಡೆಸಲಾಯಿತು.

1 Min read
Author : Sathish Kumar KH
Published : Sep 30 2026, 01:20 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : Asianet News

ವಿಜಯನಗರ (ಸೆ.30): ರೈಲು ಅಪಘಾತದಂತಹ ತುರ್ತು ವಿಪತ್ತುಗಳು ಸಂಭವಿಸಿದಾಗ ಜೀವಹಾನಿ ತಡೆಯಲು ಮತ್ತು ಗಾಯಾಳುಗಳನ್ನು ತ್ವರಿತವಾಗಿ ರಕ್ಷಿಸುವ ನಿಟ್ಟಿನಲ್ಲಿ ಹೊಸಪೇಟೆ ರೈಲ್ವೇ ನಿಲ್ದಾಣದಲ್ಲಿ ಸೋಮವಾರ ಬೃಹತ್ 'ರಕ್ಷಣಾ ಕಾರ್ಯಾಚರಣೆ ಅಣುಕು ಪ್ರದರ್ಶನ' (Mock Drill) ಯಶಸ್ವಿಯಾಗಿ ನಡೆಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
Image Credit : Asianet News

ನೈಋತ್ಯ ರೈಲ್ವೇಯ ಹುಬ್ಬಳ್ಳಿ ವಿಭಾಗ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಹಾಗೂ ಕೈಗಾ ಘಟಕದ ಜಂಟಿ ಸಹಯೋಗದಲ್ಲಿ ಈ ತುರ್ತು ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಳ ಕುರಿತ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು.

Related Articles

Related image1
ಬಿಲಾಸಪುರದಲ್ಲಿ ರೈಲು ಅಪಘಾತ, ಹಳಿ ತಪ್ಪಿದ ಮೂರು ಬೋಗಿಗಳಿಂದ ಸಂಚಾರದಲ್ಲಿ ವ್ಯತ್ಯಯ
Related image2
ಟೆಸ್ಟ್ ರೈಡ್ ವೇಳೆ ಮೊನೊ ರೈಲು ಅಪಘಾತ : ರೈಲಿನಲ್ಲಿದ್ದ ಹಲವರಿಗೆ ಗಾಯ
35
Image Credit : Asianet News

ಕಾರ್ಯಾಚರಣೆ ಹೇಗಿತ್ತು?

ರೈಲ್ವೇ ಅಪಘಾತ ಸಂಭವಿಸಿದ ತಕ್ಷಣ ರಕ್ಷಣಾ ಪಡೆಗಳು ಹೇಗೆ ಕಾರ್ಯೋನ್ಮುಖವಾಗಬೇಕು ಎಂಬುದನ್ನು ಇಲ್ಲಿ ಅಚ್ಚುಕಟ್ಟಾಗಿ ಪ್ರದರ್ಶಿಸಲಾಯಿತು. ಅಪಘಾತಕ್ಕೀಡಾದ ರೈಲಿನ ಬೋಗಿಗಳಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಹಾಗೂ ಗಾಯಾಳುಗಳನ್ನು ಸುರಕ್ಷಿತವಾಗಿ ಹೊರತೆಗೆಯುವುದು, ಸ್ಥಳದಲ್ಲಿಯೇ ಅವರಿಗೆ ಪ್ರಥಮ ಚಿಕಿತ್ಸೆ ಒದಗಿಸುವುದು ಮತ್ತು ತುರ್ತು ವಾಹನಗಳ (ಆಂಬ್ಯುಲೆನ್ಸ್) ಮೂಲಕ ತ್ವರಿತವಾಗಿ ಆಸ್ಪತ್ರೆಗೆ ಸ್ಥಳಾಂತರಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಸಿಬ್ಬಂದಿ ಮಾಡಿ ತೋರಿಸಿದರು.

45
Image Credit : Asianet News

ಯಾವುದೇ ವಿಪತ್ತು ಸಂಭವಿಸಿದಾಗ ಇಲಾಖೆಗಳ ನಡುವಿನ ಸಮನ್ವಯತೆ ಅತ್ಯಂತ ಮುಖ್ಯವಾಗಿರುತ್ತದೆ. ಇದನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ನಡೆದ ಈ ಅಣುಕು ಪ್ರದರ್ಶನದಲ್ಲಿ ರೈಲ್ವೇ ಪೊಲೀಸರು (RPF), ಗೃಹ ರಕ್ಷಕ ದಳದ ಸಿಬ್ಬಂದಿ (Home Guards), ಅಗ್ನಿಶಾಮಕ ದಳ ಹಾಗೂ ಹೊಸಪೇಟೆ ಸ್ಥಳೀಯ ಪೊಲೀಸರು ಸಕ್ರಿಯವಾಗಿ ಪಾಲ್ಗೊಂಡಿದ್ದರು.

55
Image Credit : Asianet News

ತುರ್ತು ಸೇವೆಗಳ ನಿರ್ವಹಣೆ, ವಿಪತ್ತು ನಿರ್ವಹಣಾ ಸಾಧನಗಳ ಬಳಕೆ ಹಾಗೂ ರಕ್ಷಣಾ ತಂಡಗಳ ಸನ್ನದ್ಧತೆಯನ್ನು ಪರಿಶೀಲಿಸಲು ಈ ಅಣುಕು ಪ್ರದರ್ಶನ ಅತ್ಯಂತ ಸಹಕಾರಿಯಾಯಿತು. ರೈಲ್ವೇ ನಿಲ್ದಾಣದ ಬಳಿ ನಡೆದ ಈ ಕಾರ್ಯಾಚರಣೆಯನ್ನು ಸ್ಥಳೀಯರು ಮತ್ತು ಪ್ರಯಾಣಿಕರು ಕುತೂಹಲದಿಂದ ವೀಕ್ಷಿಸಿದರು.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಭಾರತೀಯ ರೈಲ್ವೆ
ನೈಋತ್ಯ ರೈಲ್ವೆ
ರೈಲು
ಅಪಘಾತ
 

Latest Videos
Recommended Stories
Recommended image1
Breaking: ಮಂಗಳೂರು MRPL ನಲ್ಲಿ ಭಾರೀ ಸ್ಫೋಟ, ಆಕಾಶದೆತ್ತರ ದಟ್ಟ ಹೊಗೆ, ವಿಮಾನ ನಿಲ್ದಾಣದ ಗಾಜುಗಳು ಪುಡಿ ಪುಡಿ!
Recommended image2
ಟ್ರಾಫಿಕ್ ಜಾಮ್‌ಗೆ ಕಾರು ಬಿಟ್ಟು ಬೈಕ್ ಏರಿದ ಕಮಿಷನರ್; ಬೆಂಗಳೂರಿನ ಕುಕ್ಕೆ ಟೌನ್‌ನಲ್ಲಿ ಅಧಿಕಾರಿ ಸರಳತೆಗೆ ಜನ ಫಿದಾ!
Recommended image3
ಕೆಪಿಎಸ್ ಮಕ್ಕಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಉಚಿತ ಬಸ್: ಸಚಿವ ಮಧು ಬಂಗಾರಪ್ಪ
Related Stories
Recommended image1
ಬಿಲಾಸಪುರದಲ್ಲಿ ರೈಲು ಅಪಘಾತ, ಹಳಿ ತಪ್ಪಿದ ಮೂರು ಬೋಗಿಗಳಿಂದ ಸಂಚಾರದಲ್ಲಿ ವ್ಯತ್ಯಯ
Recommended image2
ಟೆಸ್ಟ್ ರೈಡ್ ವೇಳೆ ಮೊನೊ ರೈಲು ಅಪಘಾತ : ರೈಲಿನಲ್ಲಿದ್ದ ಹಲವರಿಗೆ ಗಾಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved