MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಕಾಂಗ್ರೆಸ್‌ಗೆ ಬಿಗ್ ಶಾಕ್ ನೀಡಿದ ಅಲ್ಪಸಂಖ್ಯಾತ ಮುಖಂಡರು; ಅಧಿಕೃತವಾಗಿ BJP ಸೇರ್ಪಡೆ

ಕಾಂಗ್ರೆಸ್‌ಗೆ ಬಿಗ್ ಶಾಕ್ ನೀಡಿದ ಅಲ್ಪಸಂಖ್ಯಾತ ಮುಖಂಡರು; ಅಧಿಕೃತವಾಗಿ BJP ಸೇರ್ಪಡೆ

ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ, ಶಾಸಕ ಸಿದ್ದು ಸವದಿ ಸಮ್ಮುಖದಲ್ಲಿ 50ಕ್ಕೂ ಹೆಚ್ಚು ಅಲ್ಪಸಂಖ್ಯಾತ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಕಾಂಗ್ರೆಸ್ ದುರಾಡಳಿತ, ಬೆಲೆ ಏರಿಕೆ ಮತ್ತು ಅಲ್ಪಸಂಖ್ಯಾತರಿಗೆ ಸಹಕಾರವಿಲ್ಲದಿರುವುದೇ ಪಕ್ಷ ತೊರೆಯಲು ಕಾರಣವೆಂದು ಅವರು ತಿಳಿಸಿದ್ದಾರೆ.

1 Min read
Author : Kannadaprabha News
Published : May 03 2026, 05:55 PM IST
Share this Photo Gallery
  • FB
  • TW
  • Linkdin
  • Whatsapp
16
ತೇರದಾಳ ವಿಧಾನಸಭಾ ಕ್ಷೇತ್ರ
Image Credit : Siddu Savadi FB

ತೇರದಾಳ ವಿಧಾನಸಭಾ ಕ್ಷೇತ್ರ

ತೇರದಾಳ ವಿಧಾನಸಭಾ ಕ್ಷೇತ್ರದ ಕುಲಹಳ್ಳಿ ಗ್ರಾಮದಲ್ಲಿ ಶಾಸಕ ಸಿದ್ದು ಸವದಿ ಉಪಸ್ಥಿತಿಯಲ್ಲಿ ಶುಕ್ರವಾರ ರಾತ್ರಿ ಅಲ್ಪಸಂಖ್ಯಾತ ಸಮುದಾಯದ 50ಕ್ಕೂ ಅಧಿಕ ಕಾರ್ಯಕರ್ತರು ಸೇರಿದಂತೆ ಅನೇಕ ಸಂಘಟನೆ ಮುಖಂಡರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

26
 ಬಿಜೆಪಿಗೆ ಸೇರ್ಪಡೆ
Image Credit : Siddu Savadi FB

ಬಿಜೆಪಿಗೆ ಸೇರ್ಪಡೆ

ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ಬೇಸತ್ತು ಹಾಗೂ ಗ್ಯಾರಂಟಿಗಳ ಗೋಜಿನಲ್ಲಿ ದೈನಂದಿನ ಬೆಲೆ ಗಗನಕ್ಕೇರುವ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿರುವುದಲ್ಲದೇ ತೇರದಾಳ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಸಮರ್ಪಕ ಸಹಕಾರವಿಲ್ಲದ ಕಾರಣ ಬಿಜೆಪಿಗೆ ಸೇರ್ಪಡೆಯಾಗುವುದು ಅನಿವಾರ್ಯವಾಯಿತು ಎಂದು ಪಿಕೆಪಿಎಸ್ ಅಧ್ಯಕ್ಷ ನಸರುದ್ದೀನ್ ಸಂತಿ ಹೇಳಿದರು.

Related Articles

Related image1
Karnataka News Live: ಅಲ್ಪಸಂಖ್ಯಾತ ಸಮುದಾಯಕ್ಕೆ ಸರ್ಕಾರದ ಕೊಡುಗೆ - ಕಾಲೋನಿಗಳ ಅಭಿವೃದ್ಧಿಗೆ 600 ಕೋಟಿ ರೂ. ಅನುಮೋದನೆ!
Related image2
ಅಲ್ಪಸಂಖ್ಯಾತ ಮುಖಂಡರ ಹೊರಹಾಕಿದ್ದುಸರಿಯಲ್ಲ ಡಿಕೆಶಿಗೆ ಹೇಳಿರುವೆ: ಸತೀಶ್
36
ಶಾಸಕ ಸಿದ್ದು ಸವದಿ
Image Credit : Siddu Savadi FB

ಶಾಸಕ ಸಿದ್ದು ಸವದಿ

ಶಾಸಕ ಸಿದ್ದು ಸವದಿ ಮಾತನಾಡಿ, ಈಗಿನ ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಬಡವರಿಗಾಗಿ ಒಂದು ಮನೆ ಕೂಡ ಮಂಜೂರಾಗಿಲ್ಲ. ಆಸ್ತಿ ತೆರಿಗೆ ಹೆಚ್ಚಳವಾಗಿದೆ. ಜನರ ಮೇಲೆ ಆರ್ಥಿಕ ಹೊರೆ ಹೆಚ್ಚಾಗಿದೆ. ಪಕ್ಷ ಸಂಘಟನೆ ಬಲಪಡಿಸುವ ದಿಸೆಯಲ್ಲಿ ಈ ಸೇರ್ಪಡೆ ಮಹತ್ವದ್ದಾಗಿದೆ ಎಂದರು.

46
ಬಿಜೆಪಿ ಸೇರಿದ ನಾಯಕರು
Image Credit : Siddu Savadi FB

ಬಿಜೆಪಿ ಸೇರಿದ ನಾಯಕರು

ಕುಲಹಳ್ಳಿ ಗ್ರಾಮದ ನಸರುದ್ದೀನ್ ಸಂತಿ, ಹಣಮಂತ ಕಂಕಣವಾಡಿ, ಬಸಪ್ಪ ಬಿಳ್ಳೂರ ನೇತೃತ್ವದಲ್ಲಿ ಹಣಮಂತ ಜಕಾತಿ, ಮಹ್ಮದ್ ಕಾಲಿಖಾನ್, ಮೈಬೂಬ್‌ ಸಂತಿ, ಹಾಜಿಸಾಬ್‌ ಹಳಿಂಗಳಿ, ಗುಲಾಬ್‌ ಅಪರಾಜ, ಮಹಾದೇವ ಗಸ್ತಿ, ಆದಂ ಸಂತಿ, ಹುಮಾಯೂನ್ ಸಂತಿ, ಆಸೀಫ್ ಸಂತಿ, ಲಾಲಸಾಬ್‌ ಸನದಿ, ಸಲೀಂ ಸಂತಿ, ಇಮಾಮ್‌ ಸಂತಿ ಸೇರಿದಂತೆ ಅನೇಕರು ಬಿಜೆಪಿಗೆ ಸೇರ್ಪಡೆಗೊಂಡರು.

56
ಹಲವರ ಉಪಸ್ಥಿತಿ
Image Credit : Siddu Savadi FB

ಹಲವರ ಉಪಸ್ಥಿತಿ

ಪಕ್ಷದ ಮುಖಂಡರಾದ ಗಿರಮಲ್ಲಪ್ಪ ಕೆರೂರ, ಚಂದ್ರಯ್ಯ ಮಠಪತಿ, ಹೊಳಬಸಪ್ಪ ಜಂಬಗಿ, ಶಿವಪ್ಪ ಬಾಗಲಕೋಟ, ಹಣಮಂತ ತೇಲಿ, ಕಲ್ಲಪ್ಪ ಕಂಕಣವಾಡಿ, ಚಿನ್ನಪ್ಪ ಕಂಕಣವಾಡಿ, ವಿಠ್ಠಲ ಅಡಗಲಿ, ಚನ್ನಪ್ಪ ನಿಂಬರಗಿ, ಮಹಾದೇವ ಕಾತ್ರಾಳ, ಸಿದ್ದಪ್ಪ ನಿಂಬರಗಿ, ಶಿವಲಿಂಗಪ್ಪ ಪಾಯಗೊಂಡ, ಮುತ್ತಪಪ್ ಕಂಕಣವಾಡಿ, ಭಾರತಿ ಗಸ್ತಿ, ಶ್ರೀಶೈಲ ಮಗದುಮ್, ಮುತ್ತಪ್ಪ ಸವದಿ, ಬಸಯ್ಯ ಪೂಜಾರಿ, ಶಿವಲಿಂಗ ಕಾಲತಿಪ್ಪಿ, ಚಿದಾನಂದ ಕಾಂಬಳೆ, ಲಲಿತಾ ಮೊಳೆ ಉಪಸ್ಥಿತರಿದ್ದರು.

66
 ಸಿದ್ದು ಸವದಿ ಪೋಸ್ಟ್
Image Credit : Siddu Savadi FB

ಸಿದ್ದು ಸವದಿ ಪೋಸ್ಟ್

ಕುಲಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ನಸರುದ್ದೀನ್ ಸಂತಿ ಹಾಗೂ ಉಪಾಧ್ಯಕ್ಷರಾದ ಹಣುಮಂತ ಜಕಾತಿ ಅವರು ಹಾಗೂ ಅವರ ಬೆಂಬಲಿಗರೊಂದಿಗೆ ಪಕ್ಷದ ತತ್ವ ಸಿದ್ಧಾಂತ ಮೆಚ್ಚಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು ಎಂದು ಶಾಸಕ ಸಿದ್ದು ಸವದಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಕಾಂಗ್ರೆಸ್
ಬಿಜೆಪಿ
ಕರ್ನಾಟಕ ರಾಜಕೀಯ
ಬಾಗಲಕೋಟೆ

Latest Videos
Recommended Stories
Recommended image1
ಲಕ್ಕುಂಡಿಗೆ ಸಂಬಂಧಿಸಿದ ವಿಶೇಷ ಸುದ್ದಿ; ಗ್ರಾಮಸ್ಥರು ತಿಳಿದುಕೊಳ್ಳಲೇಬೇಕಾದ ನ್ಯೂಸ್
Recommended image2
ತುಂಗಭದ್ರಾ ಡ್ಯಾಂಗೆ ಆಯ್ತು ಹೊಸ ಗೇಟ್: ನವಲಿ ಸಮಾನಾಂತರ ಜಲಾಶಯದ ಕನಸು ನನಸಾಗುವುದೇ?
Recommended image3
ಮೈಸೂರು ಬೆಂಗಳೂರು ಎಕ್ಸ್‌‍‌ಪ್ರೆಸ್‌ವೇನಲ್ಲಿ ಪಲ್ಟಿ ಹೊಡೆದ ಎಳನೀರು ವಾಹನ, ಭೀಕರ ದೃಶ್ಯ ಸೆರೆ
Related Stories
Recommended image1
Karnataka News Live: ಅಲ್ಪಸಂಖ್ಯಾತ ಸಮುದಾಯಕ್ಕೆ ಸರ್ಕಾರದ ಕೊಡುಗೆ - ಕಾಲೋನಿಗಳ ಅಭಿವೃದ್ಧಿಗೆ 600 ಕೋಟಿ ರೂ. ಅನುಮೋದನೆ!
Recommended image2
ಅಲ್ಪಸಂಖ್ಯಾತ ಮುಖಂಡರ ಹೊರಹಾಕಿದ್ದುಸರಿಯಲ್ಲ ಡಿಕೆಶಿಗೆ ಹೇಳಿರುವೆ: ಸತೀಶ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved