- Home
- Karnataka Districts
- Hindalco protest: ಕಂಪನಿಯಲ್ಲಿ ಕೆಲಸ ಮುಂದುವರಿಸಲು ₹5ಲಕ್ಷಕ್ಕೆ ಬೇಡಿಕೆ ಆರೋಪ; ಹಿಂಡಾಲ್ಕೋ ಆವರಣದಲ್ಲೇ ಕಾರ್ಮಿಕ ಸಾವು, ಉದ್ವಿಗ್ನ!
Hindalco protest: ಕಂಪನಿಯಲ್ಲಿ ಕೆಲಸ ಮುಂದುವರಿಸಲು ₹5ಲಕ್ಷಕ್ಕೆ ಬೇಡಿಕೆ ಆರೋಪ; ಹಿಂಡಾಲ್ಕೋ ಆವರಣದಲ್ಲೇ ಕಾರ್ಮಿಕ ಸಾವು, ಉದ್ವಿಗ್ನ!
ಬೆಳಗಾವಿಯ ಹಿಂಡಾಲ್ಕೊ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಗುತ್ತಿಗೆ ಕಾರ್ಮಿಕ ಡೆತ್ ನೋಟ್ ಬರೆದಿಟ್ಟು ಕಂಪನಿಯ ಆವರಣದಲ್ಲೇ ಮೃತಪಟ್ಟಿದ್ದಾನೆ, ಹೊಸ ಕಾರ್ಮಿಕರ ನೇಮಕ, ಕೆಲಸ ಮುಂದುವರಿಸಲು 5 ಲಕ್ಷಕ್ಕೆ ಬೇಡಿಕೆ ಇಟ್ಟಿರುವುದು ಸಾವಿಗೆ ಕಾರಣ ಎನ್ನಲಾಗದ್ದು ಉದ್ವಿಗ್ನ ಪರಿಸ್ಹಿತಿ ನಿರ್ಮಾಣವಾಗಿದೆ.

ಹಿಂಡಾಲ್ಕೋ ಕಂಪನಿ ಆವರಣದಲ್ಲೇ ಕಾರ್ಮಿಕ ಸಾವು, ಕಲ್ಲು ತೂರಾಟ
ನಗರದ ಹೊರವಲಯದಲ್ಲಿರುವ ಹಿಂಡಾಲ್ಕೋ ಕಂಪನಿ(Hindalco company)ಯ ಆವರಣದಲ್ಲಿ ಯುವ ಕಾರ್ಮಿಕನೊಬ್ಬ ನೇಣು ಬಿಗಿದು ಆತ್ಮ೧ಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ. ಈ ಘಟನೆ ಬಳಿಕ ಆಕ್ರೋಶಗೊಂಡ ಕುಟುಂಬಸ್ಥರು ಹಾಗೂ ನೂರಾರು ಜನರು ಕಂಪನಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಕಾರ್ಮಿಕನ ಸಾವಿಗೆ ಹಿಂಡಾಲ್ಕೋ ಕಾರಣ?
ಬೆಳಗಾವಿ ತಾಲೂಕಿನ ಮುತ್ತ್ಯಾನಟ್ಟಿ ಗ್ರಾಮದ ನಿವಾಸಿ ಶಂಕರ ತಳವಾರ (24) ಆತ್ಮ೧ಹತ್ಯೆ ಮಾಡಿಕೊಂಡ ಕಾರ್ಮಿಕ. ಸಾಯುವುದಕ್ಕೆ ಮುನ್ನ ಶಂಕರ ವಾಟ್ಸಾಪ್ ಸ್ಟೇಟಸ್‌ನಲ್ಲಿ ಡೆತ್ ನೋಟ್ ಹಾಕಿಕೊಂಡಿದ್ದಾನೆ.
ಡೆತ್ ನೋಟ್‌ನಲ್ಲಿ ಏನಿದೆ?
ಅದರಲ್ಲಿ ಕಂಪನಿಯಲ್ಲಿ ಹಳೆಯ ಕಾರ್ಮಿಕರನ್ನು ತೆಗೆದು ಹೊಸ ಕಾರ್ಮಿಕರನ್ನು ನೇಮಕ ಮಾಡಲಾಗುತ್ತಿದೆ. ಗುತ್ತಿಗೆದಾರ ಪೈಯಾಲ್ ನಂದಿ ತನ್ನ ಮೇಲೆ ಅನ್ಯಾಯ ಮಾಡಿದ್ದು, ಕೆಲಸ ಮುಂದುವರಿಸಬೇಕಾದರೆ ₹5 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
ಕಲ್ಲು ತೂರಾಟ
ಶಂಕರ್ ತಳವಾರ ಸಾವಿಗೆ ಕಂಪನಿ ಕಾರಣ ಎಂದು ಅಕ್ರೋಶಗೊಂಡಿರವ ಕುಟುಂಬಸ್ಥರು, ಕಾರ್ಮಿಕರು ಕಲ್ಲು ತೂರಾಟ ನಡೆಸಿದ್ದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಿಸಲು ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ ಮಾಡಿದೆ.
ಸ್ಥಳಕ್ಕೆ ಆಯುಕ್ತರು ಭೇಟಿ ಪರಿಶೀಲನೆ
ಆಯುಕ್ತ ಭೂಷಣ ಬೊರಸೆ, ಶಾಸಕ ಆಸೀಫ್ ಸೇಠ್ ಹಾಗೂ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸಂಬಂಧಿಕರು ಒತ್ತಾಯಿಸಿದ್ದಾರೆ.

