- Home
- Karnataka Districts
- Shivamogga: ನಾನ್‌ವೆಜ್ ತಿನ್ನೋವಾಗ ಗಂಟಲಿನಲ್ಲಿ ಮೂಳೆ ಸಿಲುಕಿ ಪ್ರಾಣಬಿಟ್ಟ 21 ವರ್ಷದ ಯುವಕ
Shivamogga: ನಾನ್‌ವೆಜ್ ತಿನ್ನೋವಾಗ ಗಂಟಲಿನಲ್ಲಿ ಮೂಳೆ ಸಿಲುಕಿ ಪ್ರಾಣಬಿಟ್ಟ 21 ವರ್ಷದ ಯುವಕ
ಶಿವಮೊಗ್ಗ ಜಿಲ್ಲೆಯ ಚೆನ್ನಹಳ್ಳಿ ಗ್ರಾಮದಲ್ಲಿ, ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ 21 ವರ್ಷದ ಸಚಿನ್ ಎಂಬ ಯುವಕ ಮೃತಪಟ್ಟಿದ್ದಾನೆ. ನಾನ್‌ವೆಜ್ ತಿನ್ನುವಾಗ ಗಂಟಲಿನಲ್ಲಿ ಚಿಕನ್ ಮೂಳೆ ಸಿಲುಕಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಾಣಬಿಟ್ಟ 21 ವರ್ಷದ ಯುವಕ
21 ವರ್ಷದ ಯುವಕ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಕುಂಸಿ ಸಮೀಪದ ಚೆನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಸಚಿನ್ ಎಂದು ಗುರುತಿಸಲಾಗಿದೆ. ನಾನ್‌ವೆಜ್ ತಿನ್ನುವಾಗ ಗಂಟಲಿನಲ್ಲಿ ಚಿಕನ್ ಮೂಳೆ ಸಿಲುಕಿ ಯುವಕನ ಜೀವ ಹೋಗಿದೆ ಎಂದು ಹೇಳಲಾಗುತ್ತಿದೆ.
ಬರ್ತ್ ಡೇ ಪಾರ್ಟಿ
ಏಪ್ರಿಲ್ 17ರಂದು ಚೆನ್ನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ನಿರ್ಮಾಣ ಹಂತದ ಕಟ್ಟಡದಲ್ಲಿ ರಾತ್ರಿ ಬರ್ತ್ ಡೇ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಗ್ರಾಮಸ್ಥರೊಂದಿಗೆ ಸಚಿನ್ ಸಹ ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದನು. ಪಾರ್ಟಿಯಲ್ಲಿ ಮಾಂಸದಡುಗೆಯನ್ನು ಸಿದ್ಧಪಡಿಸಲಾಗಿತ್ತು.
ಬೆಳಗ್ಗೆ ಸಚಿನ್ ಶವ ಪತ್ತೆ
ರಾತ್ರಿ ಪಾರ್ಟಿ ಬಳಿಕ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದರು. ಆದ್ರೆ ಸಚಿನ್ ಮಾತ್ರ ನಿರ್ಮಾಣ ಹಂತದ ಕಟ್ಟದಲ್ಲಿಯೇ ಇದ್ದನು ಎಂದು ಹೇಳಲಾಗುತ್ತಿದೆ. ಶುಕ್ರವಾರ ಬೆಳಗ್ಗೆ ಅಂದ್ರೆ ಏಪ್ರಿಲ್ 18ರಂದು ಕಟ್ಟಡ ಕಾರ್ಮಿಕರು ಆಗಮಿಸಿದಾಗ ಸಚಿನ್ ಶವ ಪತ್ತೆಯಾಗಿದೆ.
ಇದನ್ನೂ ಓದಿ: ನಾನು ರಾಜಾ ಮಾನ್ಸಿಂಗ್! ಅಕ್ಬರನ ನಿಷ್ಠಾವಂತ ಸೈನಿಕ, ಶೀಲಾ ದೇವಿಯ ರಹಸ್ಯ ಗೊತ್ತು.. ಪುನರ್ಜನ್ಮದ ಕಥೆ ಹೇಳಿದ ಬಾಲಕ!
ಅನುಮಾನ
ಕೂಡಲೇ ಕಟ್ಟಡ ಕಾರ್ಮಿಕರು ಸಚಿನ್ ಕುಟುಂಬಸ್ಥರಿಗೂ ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು, ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಶಿಫ್ಟ್ ಮಾಡಿದ್ದಾರೆ. ಗಂಟಲಿನಲ್ಲಿ ಚಿಕನ್ ಮೂಳೆ ಸಿಲುಕಿ ಮೃತಪಟ್ಟಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ.
ಇದನ್ನೂ ಓದಿ: ದೇಶವನ್ನುದ್ದೇಶಿ ಪ್ರಧಾನಿ ಮೋದಿ ಮಾತು ; ಈ ಬಾರಿ ಸಮಯ ರಾತ್ರಿ 8 ಗಂಟೆ ಅಲ್ಲ, 8.30 ಯಾಕೆ?

