MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • GESCOM Shocking: ಕರೆಂಟ್‌ ಕಟ್‌ ಮಾಡಿದ್ದಕ್ಕೆ ಜೆಸ್ಕಾಂ ಕಚೇರಿಗೇ ಬೆಂಕಿ ಹಚ್ಚಿ ಸುಟ್ಟ ರೈತ!

GESCOM Shocking: ಕರೆಂಟ್‌ ಕಟ್‌ ಮಾಡಿದ್ದಕ್ಕೆ ಜೆಸ್ಕಾಂ ಕಚೇರಿಗೇ ಬೆಂಕಿ ಹಚ್ಚಿ ಸುಟ್ಟ ರೈತ!

ಬಿಲ್‌ ಬಾಕಿ ಉಳಿಸಿಕೊಂಡಿದ್ದಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಜೆಸ್ಕಾಂ ಸಿಬ್ಬಂದಿ ಕ್ರಮದಿಂದ ಕೋಪಗೊಂಡ ರೈತನೊಬ್ಬ ಜೆಸ್ಕಾಂ (ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪನಿ) ಕಚೇರಿಗೇ ಬೆಂಕಿ ಇಟ್ಟ ಘಟನೆ ರಾಯಚೂರು ಜಿಲ್ಲೆಯ ಮಲ್ಲಟ ಗ್ರಾಮದಲ್ಲಿ ನಡೆದಿದೆ.

1 Min read
Author : Kannadaprabha News| Kannada Prabha
Published : Jun 25 2026, 05:22 AM IST
Share this Photo Gallery
  • FB
  • TW
  • Linkdin
  • Whatsapp
15
ರಾಯಚೂರು: ಸಿಬ್ಬಂದಿಗೆ ಸಪ್ಪಲಿಯಿಂದ ಹೊಡೆಯಲು ಯತ್ನ
Image Credit : Asianet News

ರಾಯಚೂರು: ಸಿಬ್ಬಂದಿಗೆ ಸಪ್ಪಲಿಯಿಂದ ಹೊಡೆಯಲು ಯತ್ನ

ಬಿಲ್‌ ಬಾಕಿ ಉಳಿಸಿಕೊಂಡಿದ್ದಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಜೆಸ್ಕಾಂ ಸಿಬ್ಬಂದಿ ಕ್ರಮದಿಂದ ಕೋಪಗೊಂಡ ರೈತನೊಬ್ಬ ಜೆಸ್ಕಾಂ (ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪನಿ) ಕಚೇರಿಗೇ ಬೆಂಕಿ ಇಟ್ಟ ಘಟನೆ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಮಲ್ಲಟ ಗ್ರಾಮದ ಜೆಸ್ಕಾಂ ಉಪ ಕಚೇರಿಯಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ವಿದ್ಯುತ್ ಬಿಲ್ ಬಾಕಿ
Image Credit : Asianet News

ವಿದ್ಯುತ್ ಬಿಲ್ ಬಾಕಿ

ಹಳ್ಳಿಹೊಸೂರು ಗ್ರಾಮದ ಶಿವಪ್ಪ ಬಸನಗೌಡ ಗಡಿಗಿ ಎಂಬಾತ 11 ಸಾವಿರ ರು.ಗಳ ವಿದ್ಯುತ್ ಬಿಲ್‌ ಬಾಕಿ ಉಳಿಸಿಕೊಂಡಿದ್ದ. ಬಾಕಿ ಬಿಲ್‌ ಹಣ ಪಾವತಿಸುವಂತೆ ಹಲವು ಬಾರಿ ನೋಟಿಸ್ ನೀಡಲಾಗಿತ್ತು. 

Related Articles

Related image1
Hindalco protest: ಕಂಪನಿಯಲ್ಲಿ ಕೆಲಸ ಮುಂದುವರಿಸಲು ₹5ಲಕ್ಷಕ್ಕೆ ಬೇಡಿಕೆ ಆರೋಪ; ಹಿಂಡಾಲ್ಕೋ ಆವರಣದಲ್ಲೇ ಕಾರ್ಮಿಕ ಸಾವು, ಉದ್ವಿಗ್ನ!
Related image2
ನಾಳೆ, ನಾಡಿದ್ದು ಈ ಪ್ರದೇಶಗಳಲ್ಲಿ ವಿದ್ಯುತ್​ ಕಡಿತ: ದಿನಪೂರ್ತಿ ಇರಲ್ಲ ಕರೆಂಟ್​ - ನಿಮ್​ ಏರಿಯಾ ಇದ್ಯಾ ಚೆಕ್​ ಮಾಡಿಕೊಳ್ಳಿ
35
ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದ ಜೆಸ್ಕಾಂ ಸಿಬ್ಬಂದಿ
Image Credit : Asianet News

ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದ ಜೆಸ್ಕಾಂ ಸಿಬ್ಬಂದಿ

ಆದರೂ, ಬಾಕಿ ಬಿಲ್‌ ಹಣ ಪಾವತಿಸಿರಲಿಲ್ಲ. ಹೀಗಾಗಿ, ಜೆಸ್ಕಾಂ ಸಿಬ್ಬಂದಿ ರಿಚರ್ಡ್ ಎಂಬುವರು ಮೇಲಧಿಕಾರಿಗಳ ಸೂಚನೆ ಮೇರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು.

45
ಸಿಬ್ಬಂದಿ ಮೇಲೆ ಹಲ್ಲೆ
Image Credit : Asianet News

ಸಿಬ್ಬಂದಿ ಮೇಲೆ ಹಲ್ಲೆ

ಇದರಿಂದ ಆಕ್ರೋಶಗೊಂಡ ಶಿವಪ್ಪ ಬುಧವಾರ ಮಲ್ಲಟ ಗ್ರಾಮದ ಜೆಸ್ಕಾಂ ಉಪ ಕಚೇರಿಗೆ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ. ಹಲ್ಲೆಗೆ ಹೆದರಿ ಸಿಬ್ಬಂದಿ ತಪ್ಪಿಸಿಕೊಂಡು ಕಚೇರಿಯಿಂದ ಹೊರಗೆ ಬರುತ್ತಿದ್ದಂತೆ ಕಚೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಪುಂಡಾಟ ಮೆರೆದಿದ್ದಾನೆ.

55
ಜೆಸ್ಕಾಂ ದಾಖಲೆಗಳು, ಲ್ಯಾಪ್‌ಟಾಪ್ ಸುಟ್ಟು ಭಸ್ಮ
Image Credit : Asianet News

ಜೆಸ್ಕಾಂ ದಾಖಲೆಗಳು, ಲ್ಯಾಪ್‌ಟಾಪ್ ಸುಟ್ಟು ಭಸ್ಮ

ಇದರಿಂದಾಗಿ ಕಚೇರಿಯ ದಾಖಲೆಗಳು, ಕಂಪ್ಯೂಟರ್, ಲ್ಯಾಪ್‌ಟಾಪ್, ಬ್ಯಾಟರಿ ಮತ್ತು ನಗದು ಸೇರಿದಂತೆ ಸುಮಾರು 1 ಲಕ್ಷ ರು. ಮೌಲ್ಯದ ಸಾರ್ವಜನಿಕ ಸ್ವಾಮ್ಯದ ಆಸ್ತಿ ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಿರವಾರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಘಟನೆ ಕುರಿತು ತನಿಖೆ ಮುಂದುವರಿದಿದೆ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ರಾಯಚೂರು
ಕರ್ನಾಟಕ ಸುದ್ದಿ

Latest Videos
Recommended Stories
Recommended image1
Harihara: ಹಿಂದೂಗಳ ಆರಾಧ್ಯ ದೈವ ಅಯೋಧ್ಯಾ ರಾಮಮಂದಿರ ಸ್ಫೋಟಕ್ಕೆ ಸಂಚು! ಶಂಕಿತ ಉಗ್ರನ ಬಗ್ಗೆ ಪೊಲೀಸರಿಂದ ಸ್ಫೋಟಕ ಮಾಹಿತಿ
Recommended image2
Chikkamagaluru: ಸಚಿವ ಜಾರ್ಜ್‌ ತೋಟದಲ್ಲಿ ಅಪರಿಚಿತ ಬಂದೂಕುಧಾರಿಗಳ ಓಡಾಟ!
Recommended image3
Hindalco protest: ಕಂಪನಿಯಲ್ಲಿ ಕೆಲಸ ಮುಂದುವರಿಸಲು ₹5ಲಕ್ಷಕ್ಕೆ ಬೇಡಿಕೆ ಆರೋಪ; ಹಿಂಡಾಲ್ಕೋ ಆವರಣದಲ್ಲೇ ಕಾರ್ಮಿಕ ಸಾವು, ಉದ್ವಿಗ್ನ!
Related Stories
Recommended image1
Hindalco protest: ಕಂಪನಿಯಲ್ಲಿ ಕೆಲಸ ಮುಂದುವರಿಸಲು ₹5ಲಕ್ಷಕ್ಕೆ ಬೇಡಿಕೆ ಆರೋಪ; ಹಿಂಡಾಲ್ಕೋ ಆವರಣದಲ್ಲೇ ಕಾರ್ಮಿಕ ಸಾವು, ಉದ್ವಿಗ್ನ!
Recommended image2
ನಾಳೆ, ನಾಡಿದ್ದು ಈ ಪ್ರದೇಶಗಳಲ್ಲಿ ವಿದ್ಯುತ್​ ಕಡಿತ: ದಿನಪೂರ್ತಿ ಇರಲ್ಲ ಕರೆಂಟ್​ - ನಿಮ್​ ಏರಿಯಾ ಇದ್ಯಾ ಚೆಕ್​ ಮಾಡಿಕೊಳ್ಳಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved