SSLC ಪರೀಕ್ಷೆ: ಕೊರೋನಾಗೆ ಹೆದರಬೇಡಿ ಮಕ್ಕಳೇ, ಧೈರ್ಯವಾಗಿರಿ, ಶುಭವಾಗಲೆಂದು ಹಾರೈಸಿದ ಪೊಲೀಸಪ್ಪ..!
ಗದಗ(ಜೂ.25): ಇಂದಿನಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿದೆ. ಮೊದಲನೇ ಪರೀಕ್ಷೆ ಕೂಡ ಮುಗಿದಿದೆ. ಕೆಲವು ವಿದ್ಯಾರ್ಥಿಗಳು ಮಹಾಮಾರಿ ಕೊರೋನಾ ವೈರಸ್‌ಗೆ ಹೆದರಿ ಪರೀಕ್ಷೆ ಬರೆಯಲು ಹಿಂದೇಟು ಹಾಕಿದ ಘಟನೆಗಳು ಕೂಡ ನಡೆದಿವೆ. ಹೀಗೆ ಕೋವಿಡ್ ವೈರಸ್‌ಗೆ ಹೆದರಿ ಪರೀಕ್ಷೆ ತೊರೆದಿದ್ದ ವಿದ್ಯಾರ್ಥಿಗೆ ಪೊಲೀಸ್ ಅಧಿಕಾರಿಯೊಬ್ಬರು ಧೈರ್ಯ ತುಂಬಿ ಪರೀಕ್ಷೆ ಬರೆಯುವಂತೆ ಮಾಡಿದ್ದಾರೆ.
ಈ ಘಟನೆ ನಡೆದಿರೋದು ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ
ಕೊರೋನಾ ವೈರಸ್‌ಗೆ ಹೆದರಿ SSLC ಪರೀಕ್ಷೆ ತೊರೆದಿದ್ದ ವಿದ್ಯಾರ್ಥಿ
ವಿದ್ಯಾರ್ಥಿಗೆ ಕೊರೋನಾ ವೈರಸ್ ಬಗ್ಗೆ ಭಯ ಪಡದಂತೆ ಆತ್ಮಸ್ಥೈರ್ಯ ತುಂಬಿದ ಪಿಎಸ್‌ಐ ಗುರುಶಾಂತ ದಾಶ್ಯಾಳ
ಮಕ್ಕಳಿಗೆ ಕೊರೋನಾ ಬಗ್ಗೆ ಭಯ ಬೇಡ, ಪರೀಕ್ಷಾ ಕೇಂದ್ರದಲ್ಲಿ ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯ ಇದೆ
ಸಾಮಾಜಿಕ ಅಂತರ ಕಾಯ್ದುಕೊಂಡು ವಿದ್ಯಾರ್ಥಿಗಳು ಪರೀಕ್ಷೆಗೆ ಬರೆಯುತ್ತಾರೆ ಹೀಗಾಗಿ ನೀನು ಕೂಡ ಪರೀಕ್ಷೆಗೆ ಹಾಜರ್ ಆಗು ಎಂದು ಹೇಳಿದ ಪಿಎಸ್‌ಐ ಗುರುಶಾಂತ ದಾಶ್ಯಾಳ
ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸರ್, ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದ್ದು, ವಿದ್ಯಾರ್ಥಿಗಳು ಮಾಸ್ಕ್ ಕಡ್ಡಾಯವಾಗಿ ಧರಸಿ ಪರೀಕ್ಷೆ ಬರೆಯುತ್ತಾರೆ ಎಂದು ತಿಳಿ ಹೇಳಿದ ಪೊಲೀಸ್ ಅಧಿಕಾರಿ
ಯಾವುದೇ ರೀತಿಯ ಭಯ ಪಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದ ಪಿಎಸ್‌ಐ ಗುರುಶಾಂತ ದಾಶ್ಯಾಳ
ಪಿಎಸ್ಐ ಸೂಚನೆಯಂತೆ ಪರೀಕ್ಷೆ ಹಾಜರ್ ಆದ ವಿದ್ಯಾರ್ಥಿ