MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಕಾಮಕಾಂಡ ಬಳಿಕ ಪ್ರತಿಕ್ರಿಯೆ ಕೊಡಲು ಬಂದು ಪ್ರಶ್ನೆ ಕೇಳ್ತಿದ್ದಂತೆ ಮೂಡುಬಿದಿರೆ ಇನ್ಸ್‌ಪೆಕ್ಟರ್ ಎಸ್ಕೇಪ್

ಕಾಮಕಾಂಡ ಬಳಿಕ ಪ್ರತಿಕ್ರಿಯೆ ಕೊಡಲು ಬಂದು ಪ್ರಶ್ನೆ ಕೇಳ್ತಿದ್ದಂತೆ ಮೂಡುಬಿದಿರೆ ಇನ್ಸ್‌ಪೆಕ್ಟರ್ ಎಸ್ಕೇಪ್

ಕಾಮಕಾಂಡ ಬಳಿಕ ಪ್ರತಿಕ್ರಿಯೆ ಕೊಡಲು ಬಂದು ಪ್ರಶ್ನೆ ಕೇಳ್ತಿದ್ದಂತೆ ಮೂಡುಬಿದಿರೆ ಇನ್ಸ್‌ಪೆಕ್ಟರ್ ಎಸ್ಕೇಪ್, ಅರೆಸ್ಟ್ ಆಗಿರುವ ಪತಿಯನ್ನು ಬಿಡುಗಡೆ ಮಾಡಲು 25 ಲಕ್ಷ ರೂ ಅಥವಾ ನನ್ನ ಜೊತೆ ಮಲಗಬೇಕು, ನೀನು ಮಾತ್ರವಲ್ಲ ನಿನ್ನ ಮಗಳನ್ನು ಕಳುಹಿಸಿಕೊಡು ಎಂದ ಇನ್ಸ್‌ಪೆಕ್ಟರ್ ಘಟನೆ ಬಳಿಕ ಹೇಳಿದ್ದೇನು?

2 Min read
Author : Chethan Kumar
Published : Mar 17 2026, 10:49 AM IST
Share this Photo Gallery
  • FB
  • TW
  • Linkdin
  • Whatsapp
16
ಎಸ್ಕೇಪ್ ಆದ ಇನ್ಸ್‌ಪೆಕ್ಟರ್ ಸಂದೇಶ್
Image Credit : Asianet News

ಎಸ್ಕೇಪ್ ಆದ ಇನ್ಸ್‌ಪೆಕ್ಟರ್ ಸಂದೇಶ್

ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮೂಡುಬಿದಿರೆ ಮಾತ್ರವಲ್ಲ ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಗಿದೆ. ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಮೇಲೆ ಕೇಳಿಬಂದಿರುವ ಲೈಂಗಿಕ ಕಿರುಕುಳ ಹಾಗೂ ಕಾಮಕಾಂಡ ಆರೋಪ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಮೂಡುಬಿದಿರೆಯಲ್ಲಿ ವ್ಯಕ್ತಿಯೊಬ್ಬನನ್ನು ಅರೆಸ್ಟ್ ಮಾಡಿ ಬಿಡುಗಡೆ ಮಾಡಲು ಇದೇ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ 25 ಲಕ್ಷ ರೂಪಾಯಿ ಕೇಳಿದ್ದಾರೆ. ಇಲ್ಲದಿದ್ದರೆ ನೀನು ಮಲಗು , ನಿನ್ನ ಮಗಳನ್ನು ಕಳುಹಿಸಿಕೊಡು ಎಂದು ಅವಾಜ್ ಹಾಕಿದ್ದಾರೆ ಎನ್ನಲಾದ ಪ್ರಕರಣ ಇದೀಗ ಕಾವು ಪಡೆದುಕೊಂಡಿದೆ. ಘಟನೆ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ಚರ್ಚೆಯಲ್ಲಿ ಪಾಲ್ಗೊಂಡ ಸಂತ್ರಸ್ತ ಮಹಿಳೆಯ ಘಟನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ವೇಳೆ ಪ್ರತಿಕ್ರಿಯೆ ನೀಡಲು ಬಂದ ಸಂದೇಶ್ ಎಸ್ಕೇಪ್ ಆದ ಘಟನೆ ನಡೆದಿದೆ.

26
ನಾನು ಉತ್ತರ ಕೊಡುತ್ತೇನೆ, ಪ್ರಶ್ನೆ ಕೇಳುವ ಮೊದಲೇ ಎಸ್ಕೇಪ್
Image Credit : Asianet News

ನಾನು ಉತ್ತರ ಕೊಡುತ್ತೇನೆ, ಪ್ರಶ್ನೆ ಕೇಳುವ ಮೊದಲೇ ಎಸ್ಕೇಪ್

ಸುವರ್ಣನ್ಯೂಸ್ ಚರ್ಚೆಯಲ್ಲಿ ಸಂತ್ರಸ್ತ ಮಹಿಳೆಯರು ನಡೆದ ಘಟನೆ ಬಿಚ್ಚಿಟ್ಟಿದ್ದಾರೆ. ಈ ವೇಳೆ ಮೂಡುಬಿದಿರೆಯಿಂದ ಲೈವ್ ಮೂಲಕ ಉತ್ತರ ಕೊಡುತ್ತೇನೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಲೈವ್‌ಗೆ ಬಂದಿದ್ದಾರೆ. ಆದರೆ ಪ್ರಶ್ನೆ ಕೇಳುವ ಮೊದಲೇ ಉತ್ತರ ನೀಡಲು ಪ್ರಯತ್ನಿಸಿದ ಸಂದೇಶ್, ಬಳಿಕ ಏಕಾಏಕಿ ನನಗೆ ಅರ್ಜೆಂಟ್ ಕೆಲಸ ಇದೆ, ಅಮೇಲೆ ನಿಮಗೆ ಉತ್ತರ ಕೊಡುತ್ತೇನೆ ಎಂದು ಎಸ್ಕೇಪ್ ಆದ ಘಟನೆ ನಡೆದಿದೆ.

Related Articles

Related image1
ಮೂಡುಬಿದಿರೆ ಪೊಲೀಸಪ್ಪನ ಪೋಲಿ ಆಟ; ಗಂಡನ ಬಿಡುಗಡೆಗೆ 25 ಲಕ್ಷ ಕೊಡಿ, ಇಲ್ಲವೇ ನನ್ನೊಂದಿಗೆ ಮಲಗು ಎನ್ನುವ ಸಂದೇಶ!
Related image2
ಮೂಡುಬಿದಿರಿ ಇನ್ಸ್‌ಪೆಕ್ಟರ್ ಸಂದೇಶ್‌ ಕಾಮಕಾಂಡ: 8 ವರ್ಷ ತಾಯಿಯೊಂದಿಗೆ ಸಂಬಂಧ, ಈಗ ಮಗಳ ಮೇಲೂ ಕಣ್ಣು? ಆಡಿಯೋ ವೈರಲ್
36
ನಾನವನಲ್ಲ, ಕೆಲಸ ಇದೆ ಪ್ಲೀಸ್
Image Credit : Asianet News

ನಾನವನಲ್ಲ, ಕೆಲಸ ಇದೆ ಪ್ಲೀಸ್

ನನ್ನ ಮೇಲೆ ಕೇಳಿ ಬಂದಿರುವ ಆರೋಪ ಸುಳ್ಳು ಎಂದು ಹೇಳಿರುವ ಸಂದೇಶ್, ನನಗೆ ಕೆಲಸ ಇದೆ ಎಂದು ಎರಡೆರಡು ಬಾರಿ ಲೈವ್‌ನಿಂದ ಎಸ್ಕೇಪ್ ಆಗಿದ್ದಾರೆ. ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ನಡೆ ಇದೀಗ ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ತನ್ನ ಬಳಿ ಸ್ಪಷ್ಟ ಉತ್ತರವಿಲ್ಲದ ಕಾರಣ ಎಸ್ಕೇಪ್ ಆಗಿದ್ದಾರೆ. ಅಧಿಕಾರದ ದರ್ಪದಿಂದ ತೆರೆಮರೆಯಲ್ಲಿ ಕಿರುಕುಳ ಕೊಡುತ್ತಿದ್ದ ಸಂದೇಶ್ ಇದೀಗ ಸಾರ್ವಜನಿಕವಾಗಿ ಉತ್ತರಕೊಡಲು ಸಾಧ್ಯವಾಗದೇ ಓಡಿಹೋಗುತ್ತಿದ್ದಾರೆ ಎಂದು ಸಂತ್ರಸ್ತ ಮಹಿಳೆಯರು ಆರೋಪಿಸಿದ್ದಾರೆ.

46
ಪೊಲೀಸ್ ಠಾಣೆಯ ಸಿಸಿಟಿವಿ ಪರಿಶೀಲಿಸಿ
Image Credit : Asianet News

ಪೊಲೀಸ್ ಠಾಣೆಯ ಸಿಸಿಟಿವಿ ಪರಿಶೀಲಿಸಿ

ಸಂತ್ರಸ್ತ ಮಹಿಳೆಯರು ಇದೇ ವೇಳೆ ಮಹತ್ವದ ಒತ್ತಾಯ ಮುಂದಿಟ್ಟಿದ್ದಾರೆ. ಪೊಲೀಸ್ ಕಮಿಷನರ್ ಸೇರಿದಂತೆ ಹಲವರಿಗೆ ದೂರು ನೀಡಲಾಗಿದೆ. ಮೂಡುಬಿದಿರೆ ಪೊಲೀಸ್ ಠಾಣೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ನೋಡಿದರೆ ಸಂದೇಶ್ ಕಾಮಕಾಂಡ ಬಯಲಾಗುತ್ತೆ ಎಂದು ಸಂತ್ರಸ್ತರು ಹೇಳಿದ್ದಾರೆ.

56
ಪೊಲೀಸಪ್ಪನ ಪೋಲಿ ಆಟ
Image Credit : Asianet News

ಪೊಲೀಸಪ್ಪನ ಪೋಲಿ ಆಟ

ಇದೀಗ ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ವಿಡಿಯೋ, ಆಡಿಯೋಗಳು ವೈರಲ್ ಆಗಿದೆ. ಇತ್ತ ಸಂತ್ರಸ್ತ ಮಹಿಳೆಯರು ಅನುಭವಿಸಿದ ಕಿರುಕುಳ ಕುರಿತು ಹೇಳಿಕೊಂಡಿದ್ದಾರೆ. ಇವೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಮೂಡುಬಿದಿರೆ ಪೊಲೀಸಪ್ಪನ ಪೋಲಿ ಆಟ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಸಾರ್ವಜನಿಕವಾಗಿ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಇಷ್ಟೇ ಅಲ್ಲ ಹಿರಿಯ ಅಧಿಕಾರಿಗಳು, ಸರ್ಕಾರ ತಕ್ಷಣಕ್ಕೆ ಕ್ರಮ ಕೈಗೊಳ್ಳದೇ ಮೀನಮೇಷ ಎಣಿಸುತ್ತಿರುವುದೇಕೆ ಎಂದು ಹಲವರು ಪ್ರಶ್ನಿಸಿದ್ದಾರೆ.

66
ಹಲವರಿಗೆ ಪೊಲೀಸನ ಕಾಮದಾಟ ಕಿರಿಕುಳ
Image Credit : Asianet News

ಹಲವರಿಗೆ ಪೊಲೀಸನ ಕಾಮದಾಟ ಕಿರಿಕುಳ

ಗಂಡಸರನ್ನು ಬಂಧಿಸಿ ಬಳಿಕ ಅವರ ಪತ್ನಿಗೆ ಲೈಂಗಿಕ ಕಿರುಕುಳ ನೀಡಿತ್ತಿದ್ದಾನೆ ಎಂಬ ಗಂಭೀರ ಆರೋಪ ಸಂದೇಶ್ ಮೇಲಿದೆ. ಹಲವು ಮಹಿಳೆಯರಿಗೆ ಈ ರೀತಿ ಕಿರುಕುಳ ನೀಡಿದ್ದಾರೆ ಎನ್ನಲಾಗುತ್ತಿದೆ. ರಾತ್ರಿ ವೇಳೆ ಕೌಂಪೌಂಡ್ ಹಾರಿ ಮನೆಗೆ ನುಗ್ತುತ್ತಿದ್ದ. ಬಳಿಕ ಬಲವಂತವಾಗಿ ಮಹಿಳೆಯರ ಮುಟ್ಟಿ ಕಿರುಕುಳ ನೀಡುತ್ತಿದ್ದ. ಪೊಲೀಸ್ ಕಾರಣ ಹಲವರು ಸಹಿಸಿಕೊಂಡಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.

ಹಲವರಿಗೆ ಪೊಲೀಸನ ಕಾಮದಾಟ ಕಿರಿಕುಳ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಪೊಲೀಸ್
ದಕ್ಷಿಣ ಕನ್ನಡ
ಕರ್ನಾಟಕ ಸುದ್ದಿ
ಮಹಿಳೆಯರು
Latest Videos
Recommended Stories
Recommended image1
ಇಸ್ರೇಲ್-ಇರಾನ್ ಯುದ್ಧದಿಂದ ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ದೊಡ್ಡ ಹೊಡೆತ! ರಫ್ತು ಸ್ಥಗಿತ, ಕಚ್ಚಾ ವಸ್ತುಗಳ ಕೊರತೆ, ನೆಲಕಚ್ಚಿದ ಬ್ಯುಸಿನೆಸ್!
Recommended image2
ಕೊಡಗು ಬೇಸಿಗೆ ಮಳೆ: ಸಿಡಿಲು ಬಡಿದು ಹೊತ್ತಿ ಉರಿದ ವಿದ್ಯುತ್ ಟ್ರಾನ್ಸ್ಫಾರ್ಮರ್
Recommended image3
ಯುವ ನಿಧಿ ಯೋಜನೆ ಕೈಬಿಟ್ರಾ?: ಬಜೆಟ್‌ನಲ್ಲಿ ಅನುದಾನದ ನೀಡದ ಬಗ್ಗೆ ಬಿಜೆಪಿ ಶಾಸಕನ ಪ್ರಶ್ನೆಗೆ ಸರ್ಕಾರ ಮೌನ!
Related Stories
Recommended image1
ಮೂಡುಬಿದಿರೆ ಪೊಲೀಸಪ್ಪನ ಪೋಲಿ ಆಟ; ಗಂಡನ ಬಿಡುಗಡೆಗೆ 25 ಲಕ್ಷ ಕೊಡಿ, ಇಲ್ಲವೇ ನನ್ನೊಂದಿಗೆ ಮಲಗು ಎನ್ನುವ ಸಂದೇಶ!
Recommended image2
ಮೂಡುಬಿದಿರಿ ಇನ್ಸ್‌ಪೆಕ್ಟರ್ ಸಂದೇಶ್‌ ಕಾಮಕಾಂಡ: 8 ವರ್ಷ ತಾಯಿಯೊಂದಿಗೆ ಸಂಬಂಧ, ಈಗ ಮಗಳ ಮೇಲೂ ಕಣ್ಣು? ಆಡಿಯೋ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved