MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ನೆಲಮಂಗಲದಲ್ಲಿ ರಾಶಿ ರಾಶಿ ಕೊಳಕು ಮಂಡಲ ಹಾವುಗಳು ಪತ್ತೆ; ಕೇವಲ 16 ಹಾವು ರಕ್ಷಣೆ, ಉಳಿದೆಲ್ಲವೂ ಪರಾರಿ!

ನೆಲಮಂಗಲದಲ್ಲಿ ರಾಶಿ ರಾಶಿ ಕೊಳಕು ಮಂಡಲ ಹಾವುಗಳು ಪತ್ತೆ; ಕೇವಲ 16 ಹಾವು ರಕ್ಷಣೆ, ಉಳಿದೆಲ್ಲವೂ ಪರಾರಿ!

ನೆಲಮಂಗಲದ ಹಿಪ್ಪೆ ಆಂಜನೇಯ ಬಡಾವಣೆಯಲ್ಲಿ, ಅತ್ಯಂತ ವಿಷಕಾರಿ ಕೊಳಕು ಮಂಡಲ ಜಾತಿಗೆ ಸೇರಿದ 16 ಹಾವಿನ ಮರಿಗಳನ್ನು ರಕ್ಷಿಸಲಾಗಿದೆ. ಇನ್ನೂ 20ಕ್ಕೂ ಹೆಚ್ಚು ಮರಿಗಳು ತಪ್ಪಿಸಿಕೊಂಡಿದ್ದು, ಈ ಹಾವು ಕಚ್ಚಿದರೆ 30 ನಿಮಿಷದಲ್ಲಿ ಚಿಕಿತ್ಸೆ ಸಿಗದಿದ್ದರೆ ಸಾವು ನಿಶ್ಚಿತ ಎಂದು ತಜ್ಞರು ಎಚ್ಚರಿಸಿದ್ದಾರೆ.

2 Min read
Author : Sathish Kumar KH
Published : May 24 2026, 11:12 AM IST
Share this Photo Gallery
  • FB
  • TW
  • Linkdin
  • Whatsapp
15
ನೆಲಮಂಗಲದಲ್ಲಿ ಕೊಳಕು ಮಂಡಲ ಹಾವಿನ ರಾಶಿ
Image Credit : Asianet News

ನೆಲಮಂಗಲದಲ್ಲಿ ಕೊಳಕು ಮಂಡಲ ಹಾವಿನ ರಾಶಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ನಿವಾಸಿಗಳು ತೀವ್ರ ಆತಂಕಕ್ಕೊಳಗಾಗುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಹಿಪ್ಪೆ ಆಂಜನೇಯ ಬಡಾವಣೆಯಲ್ಲಿ ತೀರಾ ವಿಷಪೂರಿತ ಜಾತಿಗೆ ಸೇರಿದ ಬರೋಬ್ಬರಿ 16 ಹಾವಿನ ಮರಿಗಳನ್ನು ರಕ್ಷಿಸಲಾಗಿದೆ. ಇವೆಲ್ಲವೂ ಜಗತ್ತಿನ ಅತ್ಯಂತ ಅಪಾಯಕಾರಿ ಹಾವಿನ ತಳಿಗಳಲ್ಲಿ ಒಂದಾದ ‘ರೆಸಲ್ ವೈಪರ್’ (Russell's Viper) ಅಂದರೆ ಕನ್ನಡದಲ್ಲಿ ‘ಕೊಳಕು ಮಂಡಲ’ ಜಾತಿಗೆ ಸೇರಿದ ಹಾವಿನ ಮರಿಗಳಾಗಿವೆ.

Add Asianetnews Kannada as a Preferred SourcegooglePreferred
25
ಫಾರ್ಮ್ ಹೌಸ್ ಬಳಿ ಕಂಡ ಉರಗಗಳ ರಾಶಿ
Image Credit : Asianet News

ಫಾರ್ಮ್ ಹೌಸ್ ಬಳಿ ಕಂಡ ಉರಗಗಳ ರಾಶಿ

ಬಡಾವಣೆಯ ನಿವಾಸಿ ಸುಬ್ರಮಣಿ ಎಂಬುವವರಿಗೆ ಸೇರಿದ ಫಾರ್ಮ್ ಹೌಸ್ ಬಳಿ ಈ ಹಾವಿನ ಮರಿಗಳು ಮೊದಲು ಕಾಣಿಸಿಕೊಂಡಿವೆ. ಕೇವಲ ಮೂರು ನಾಲ್ಕು ದಿನಗಳ ಹಿಂದಷ್ಟೇ ಜನಿಸಿರುವ ಈ ಮರಿಗಳನ್ನು ಕಂಡು ಸ್ಥಳೀಯರು ತಕ್ಷಣವೇ ಭಯಭೀತರಾಗಿದ್ದಾರೆ. ಕೂಡಲೇ ಅವರು ನೆಲಮಂಗಲದ ಪ್ರಸಿದ್ಧ ಉರಗ ರಕ್ಷಕ ಸ್ನೇಕ್ ಶಿವರುದ್ರಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಶಿವರುದ್ರಪ್ಪ ಅವರು ಹಾವಿನ ಮರಿಗಳನ್ನು ಹಿಡಿಯುವ ಕಾರ್ಯಾಚರಣೆ ಆರಂಭಿಸಿದರು.

Related Articles

Related image1
ಗಾಯಗೊಂಡಿದ್ದ ಕೊಳಕು ಮಂಡಲ ಹಾವಿನಿಂದ 41 ಮರಿಗಳ ಜನನ
Related image2
ಮನೆಯಲ್ಲಿ ಮಲಗಿದ್ದ ಬಾಲಕನನ್ನು ಕಚ್ಚಿಕೊಂದ ವಿಷಕಾರಿ ಕೊಳಕು ಮಂಡಲ ಹಾವು
35
ನೆಲದ ಅಡಿಯಲ್ಲಿ ಅಡಗಿದ್ದವು 40ಕ್ಕೂ ಹೆಚ್ಚು ಹಾವುಗಳು!
Image Credit : Asianet News

ನೆಲದ ಅಡಿಯಲ್ಲಿ ಅಡಗಿದ್ದವು 40ಕ್ಕೂ ಹೆಚ್ಚು ಹಾವುಗಳು!

ಕಾರ್ಯಾಚರಣೆಯ ಆಘಾತಕಾರಿ ಸತ್ಯವನ್ನು ಬಿಚ್ಚಿಟ್ಟ ಉರಗ ತಜ್ಞ ಶಿವರುದ್ರಪ್ಪ, 'ನಾವು ಆರಂಭದಲ್ಲಿ ಸ್ಥಳಕ್ಕೆ ಬಂದು ಕೇವಲ 2-3 ಹಾವುಗಳನ್ನು ಹಿಡಿದು ರಕ್ಷಣೆ ಮಾಡಲು ಮುಂದಾದೆವು. ಆದರೆ ಅಲ್ಲಿನ ನೆಲದ ಅಡಿಯಲ್ಲಿ ಪರಿಶೀಲಿಸಿದಾಗ ನಮಗೆ ತಲೆತಿರುಗಿದಂತಾಯಿತು. ಅಲ್ಲಿ ಬರೋಬ್ಬರಿ 30 ರಿಂದ 40 ಕೊಳಕು ಮಂಡಲ ಹಾವಿನ ಮರಿಗಳು ಅಡಗಿಕೊಂಡಿದ್ದವು! ಎಲ್ಲ ಹಾವುಗಳನ್ನು ಒಟ್ಟಿಗೆ ಹಿಡಿಯುವಷ್ಟರಲ್ಲಿ ಬಹುತೇಕ ಮರಿಗಳು ಬೇರೆ ಬೇರೆ ದಿಕ್ಕಿನಲ್ಲಿ ತಪ್ಪಿಸಿಕೊಂಡು ಓಡಿಹೋದವು. ಸದ್ಯಕ್ಕೆ ನಾವು 16 ಹಾವಿನ ಮರಿಗಳನ್ನು ಮಾತ್ರ ಸುರಕ್ಷಿತವಾಗಿ ಹಿಡಿದು ಸಂರಕ್ಷಿಸಿದ್ದೇವೆ' ಎಂದು ತಿಳಿಸಿದರು. ರಕ್ಷಿಸಲಾದ ಈ ಎಲ್ಲಾ ಮರಿಗಳನ್ನು ಜನವಸತಿ ಇಲ್ಲದ ದಟ್ಟ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಿಡಲಾಗುವುದು ಎಂದು ಹೇಳಿದ್ದಾರೆ.

45
30 ನಿಮಿಷದಲ್ಲಿ ಚಿಕಿತ್ಸೆ ಸಿಗದಿದ್ದರೆ ಸಾವು ನಿಶ್ಚಿತ!
Image Credit : Asianet News

30 ನಿಮಿಷದಲ್ಲಿ ಚಿಕಿತ್ಸೆ ಸಿಗದಿದ್ದರೆ ಸಾವು ನಿಶ್ಚಿತ!

ಕೊಳಕು ಮಂಡಲ ಹಾವುಗಳ ಭೀಕರತೆಯ ಬಗ್ಗೆ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವ ಉರಗ ತಜ್ಞ ಶಿವರುದ್ರಪ್ಪ, ಈ ಹಾವು ಕಚ್ಚಿದರೆ ಎಷ್ಟು ಅಪಾಯಕಾರಿ ಎಂಬುದನ್ನು ವಿವರಿಸಿದ್ದಾರೆ.

'ಈ ಕೊಳಕು ಮಂಡಲ (Russell's Viper) ಹಾವು ಅತ್ಯಂತ ತೀಕ್ಷ್ಣವಾದ ವಿಷವನ್ನು ಹೊಂದಿರುತ್ತದೆ. ಒಂದು ವೇಳೆ ಈ ಹಾವು ಕಚ್ಚಿದರೆ ತಕ್ಷಣವೇ ಅಂದರೆ ಕೇವಲ 20 ರಿಂದ 30 ನಿಮಿಷಗಳ ಒಳಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಾಗಿ ಆ್ಯಂಟಿ-ವೆನಮ್ ಚಿಕಿತ್ಸೆ ಪಡೆಯಬೇಕು. ನಿರ್ಲಕ್ಷ್ಯ ಮಾಡಿದರೆ ಕಿಡ್ನಿ ವೈಫಲ್ಯ (Kidney Failure), ಬಹು ಅಂಗಾಂಗ ವೈಫಲ್ಯ, ಉಸಿರಾಟದ ತೊಂದರೆ ಉಂಟಾಗುತ್ತದೆ ಹಾಗೂ ಬಾಯಲ್ಲಿ ರಕ್ತ ಬಂದು ಮನುಷ್ಯರು ಸಾವನ್ನಪ್ಪುತ್ತಾರೆ' ಎಂದು ಶಿವರುದ್ರಪ್ಪ ಆತಂಕ ಹಂಚಿಕೊಂಡಿದ್ದಾರೆ

55
20 ಪರಾರಿ, ಜನರಲ್ಲಿ ಗಾಬರಿ
Image Credit : Asianet News

20 ಪರಾರಿ, ಜನರಲ್ಲಿ ಗಾಬರಿ

ಸದ್ಯ 16 ಹಾವುಗಳನ್ನು ಹಿಡಿದಿರುವುದರಿಂದ ಬಡಾವಣೆಯ ಜನರು ನಿಟ್ಟುಸಿರು ಬಿಟ್ಟಿದ್ದಾರಾದರೂ, ಇನ್ನೂ 20ಕ್ಕೂ ಹೆಚ್ಚು ಮರಿಗಳು ಸುತ್ತಮುತ್ತಲೇ ತಪ್ಪಿಸಿಕೊಂಡಿರುವುದರಿಂದ ಆತಂಕದ ನೆರಳು ಸಂಪೂರ್ಣವಾಗಿ ಸರಿದಿಲ್ಲ. ಸಾರ್ವಜನಿಕರು ತಮ್ಮ ಮನೆ ಸುತ್ತಮುತ್ತಲಿನ ಪೊದೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಅರಣ್ಯ ಇಲಾಖೆ ಸೂಚಿಸಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಬೆಂಗಳೂರು ಗ್ರಾಮಾಂತರ
ಕರ್ನಾಟಕ ಸುದ್ದಿ
ಹಾವು

Latest Videos
Recommended Stories
Recommended image1
ಮಾದಾವರ-ತುಮಕೂರು ಮೆಟ್ರೋ ಡಿಪಿಆರ್ ಸಿದ್ಧ: ಮಹತ್ವದ ಯೋಜನೆಗೆ ಸರ್ಕಾರದ ಒಪ್ಪಿಗೆ ಮಾತ್ರ ಬಾಕಿ
Recommended image2
ಚಾಮರಾಜನಗರ: ಬಾಲಕನ ಬಲಿ ಪಡೆದಿದ್ದ ನರಭಕ್ಷಕ ಚಿರತೆ ಸೆರೆ? 15 ದಿನಗಳ ಬಳಿಕ ತಾನೇ ತಾನಾಗಿ ಬೋನಿಗೆ ಬಿದ್ದಿದ್ದು ಹೇಗೆ?
Recommended image3
ಕಾಳಿ ನದಿ ರಾಫ್ಟಿಂಗ್: ಕರೆಂಟ್ ಶಾಕ್ ಮೂಲಕ ಓರ್ವನ ಸಾವಿನಲ್ಲಿ ಅಂತ್ಯವಾದ ಬೆಂಗಳೂರು ಟೆಕ್ಕಿಗಳ ಸಾಹಸ ಯಾತ್ರೆ!
Related Stories
Recommended image1
ಗಾಯಗೊಂಡಿದ್ದ ಕೊಳಕು ಮಂಡಲ ಹಾವಿನಿಂದ 41 ಮರಿಗಳ ಜನನ
Recommended image2
ಮನೆಯಲ್ಲಿ ಮಲಗಿದ್ದ ಬಾಲಕನನ್ನು ಕಚ್ಚಿಕೊಂದ ವಿಷಕಾರಿ ಕೊಳಕು ಮಂಡಲ ಹಾವು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved