Chamarajanagar: ಅಪರಿಚಿತ ಶವ ಸಂಸ್ಕಾರ ನಡೆಸಿ ಮಾನವೀಯತೆ ಮೆರೆದ ಮುಸ್ಲಿಂ ಯುವಕರು
ಚಾಮರಾಜನಗರ (ಜು.4): ಗುಂಡ್ಲುಪೇಟೆ ತಾಲೋಕು ಮಲ್ಲಯ್ಯನಪುರ ಬಳಿ ಅಪಘಾತದಲ್ಲಿ ಮೃತಪಟ್ಟಿದ್ದ ಅಪರಿಚಿತ ವ್ಯಕ್ತಿಯ ಶವ ಸಂಸ್ಕಾರ ನಡೆಸಿ ಮುಸ್ಲಿಂ ಯುವಕರು ಮಾನವೀಯತೆ ಮೆರೆದಿದ್ದಾರೆ.
ಕೋಮು ಸೌಹಾರ್ದ ಕದಡುವ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇವೆ. ಇದಕ್ಕೆಲ್ಲ ಅಪವಾದ ಎಂಬಂತೆ ಚಾಮರಾಜನಗರ ದಲ್ಲೊಂದು ಮಾನವೀಯ ಕಾರ್ಯ ನೆರವೇರಿದೆ.
ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಾಸುದಾರರು ಬಾರದ ಕಾರಣ ಅಂತ್ಯಕ್ರಿಯೆ ನಡೆಸಲಾಗಿದೆ.
ಚಾಮರಾಜನಗರದ ಖಬರ್‌ಸ್ತಾನ್‌ನಲ್ಲಿ ಪೊಲೀಸರ ಸಮಕ್ಷಮ ಮುಸ್ಲಿಂ ಯುವಕರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಗುಂಡ್ಲುಪೇಟೆ ಮುಸ್ಲಿಂ ಗುರು ಇಮ್ರಾನ್ ಪಾಷಾ, ಚಾಮರಾಜನಗರದ ಇಸ್ರಾರ್ ಪಾಷಾ, ಕಲೀಲ್‌ವುಲ್ಲಾ, ಸಿರಾಜ್, ಇಮ್ರಾನ್ ಪಾಷಾ, ಏಜಾಸ್ ಮೊದಲಾದವರಿಂದ ಅಂತ್ಯ ಸಂಸ್ಕಾರ.
ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದಿರುವುದಕ್ಕೆ ಗುಂಡ್ಲುಪೇಟೆ ಮುಸ್ಲಿಂ ಯುವಕರು ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.