MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Asian Games 2026
Today's Horoscope
Srirangapatna Dasara 2026
Shivamogga Rain Deficit
Karnataka Power Crisis
Satish Jarkiholi ED Probe
Sharavathi Back Water Muppane
Yeswantpur-Mangaluru Vande Bharat
Kasturi Rangan Report
Siddaramaiah vs Dr HC Mahadevappa
Actress Krishi Thapanda
  • Home
  • Karnataka Districts
  • ಕರ್ನಾಟಕದಲ್ಲಿ ಬರಗಾಲವಿದ್ದರೂ, ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಕೃಷ್ಣಾ ನದಿಗೆ ಹರಿದು ಬಂತು 60 ಸಾವಿರ ಕ್ಯೂಸೆಕ್ ನೀರು!

ಕರ್ನಾಟಕದಲ್ಲಿ ಬರಗಾಲವಿದ್ದರೂ, ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಕೃಷ್ಣಾ ನದಿಗೆ ಹರಿದು ಬಂತು 60 ಸಾವಿರ ಕ್ಯೂಸೆಕ್ ನೀರು!

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಕೃಷ್ಣಾ, ದೂದಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಚಿಕ್ಕೋಡಿ ತಾಲೂಕಿನ ನಾಲ್ಕು ಪ್ರಮುಖ ಕೆಳಹಂತದ ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

1 Min read
Author : Sathish Kumar KH
Published : Jul 21 2026, 01:08 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : Asianet News

ಬೆಳಗಾವಿ/ಚಿಕ್ಕೋಡಿ (ಜು.21): ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ (Western Ghats) ಮಳೆಯ ಆರ್ಭಟ ಮುಂದುವರಿದಿದ್ದು, ಇದರ ಪರಿಣಾಮವಾಗಿ ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಗೆ ಅಪಾರ ಪ್ರಮಾಣದ ನೀರು (Inflow) ಹರಿದು ಬರುತ್ತಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ (Chikkodi) ತಾಲೂಕಿನ ಕೃಷ್ಣಾ, ದೂದಗಂಗಾ ಮತ್ತು ವೇದಗಂಗಾ ನದಿಗಳ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ ಏರಿಕೆಯಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
Image Credit : Asianet News

ನದಿಗಳಿಗೆ ಹರಿದು ಬರುತ್ತಿದೆ ಭಾರೀ ನೀರು:

ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಕೃಷ್ಣಾ ನದಿಗೆ (Krishna River) ಒಟ್ಟು 60,000 ಕ್ಯೂಸೆಕ್ (Cusecs) ಒಳಹರಿವು ದಾಖಲಾಗಿದೆ. ನದಿಗಳ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿರುವುದರಿಂದ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ.

Related Articles

Related image1
ಕೃಷ್ಣಾ ನದಿಗೆ ಹರಿದು ಬರುತ್ತಿದೆ 60 ಸಾವಿರ ಕ್ಯೂಸೆಕ್ಸ್ ನೀರು; ಸೇತುವೆಗಳು ಜಾಲವೃತ
Related image2
ಕರ್ನಾಟಕದ ಬರಗಾಲವನ್ನು ಮೆಟ್ಟಿನಿಂತ ಆಲಮಟ್ಟಿ: ಜಲಾಶಯಕ್ಕೆ ಹರಿದು ಬಂತು 40 ಸಾವಿರ ಕ್ಯೂಸೆಕ್ ನೀರು!
35
Image Credit : Asianet News

ನಾಲ್ಕು ಸೇತುವೆಗಳು ಜಲಾವೃತ್ತ:

ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಚಿಕ್ಕೋಡಿ ತಾಲೂಕಿನ ನಾಲ್ಕು ಕೆಳ ಹಂತದ ಸೇತುವೆಗಳು (Low-level bridges) ಈಗಾಗಲೇ ಸಂಪೂರ್ಣವಾಗಿ ಜಲಾವೃತ್ತಗೊಂಡಿವೆ (Submerged).

ದೂದಗಂಗಾ ನದಿ: 

  1. ಕಾರದಗಾ-ಭೋಜ (Karadga-Bhoj), 
  2. ಭೋಜವಾಡಿ-ಕುಣ್ಣೂರ (Bhojwadi-Kunnur) ಮತ್ತು 
  3. ಬಾರವಾಡ-ಕುಣ್ಣೂರು (Barwad-Kunnur) ಸೇತುವೆಗಳು ಮುಳುಗಡೆಯಾಗಿವೆ.

ಕೃಷ್ಣಾ ನದಿ: 

ಇಲ್ಲಿನ ಕಲ್ಲೋಳ-ಯಡೂರ (Kallol-Yadur) ಸೇತುವೆಯೂ ನೀರಿನ ಅಡಿಯಲ್ಲಿ ಸಿಲುಕಿದೆ.

45
Image Credit : Asianet News

ಸಂಚಾರ ವ್ಯತ್ಯಯ ಮತ್ತು ಪರ್ಯಾಯ ಮಾರ್ಗ:

ಸೇತುವೆಗಳು ಮುಳುಗಡೆಯಾಗಿರುವುದರಿಂದ ಈ ಭಾಗದ ಗ್ರಾಮಗಳ ನಡುವಿನ ನೇರ ಸಂಪರ್ಕ ಕಡಿತಗೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಮತ್ತು ಅಧಿಕಾರಿಗಳು ಈ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ. ವಾಹನ ಸವಾರರು ಮತ್ತು ಶಾಲಾ ಮಕ್ಕಳು ಹಲವು ಕಿಲೋಮೀಟರ್ ಸುತ್ತು ಬಳಸಿ ಪರ್ಯಾಯ ಮಾರ್ಗಗಳ (Alternative Routes) ಮೂಲಕ ಸಂಚರಿಸುತ್ತಿದ್ದಾರೆ.

55
Image Credit : Asianet News

ಮುಂದಿನ ಕೆಲವು ದಿನಗಳ ಕಾಲ ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ, ನದಿ ತೀರದ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾಡಳಿತ ಸೂಚನೆ ನೀಡಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕೃಷ್ಣಾ ನದಿ
ಕರ್ನಾಟಕದ ನದಿಗಳು
ವಿಜಯಪುರ
ಬೆಳಗಾವಿ
ಕರ್ನಾಟಕ ಮಳೆ
 

Latest Videos
Recommended Stories
Recommended image1
ಚಿನ್ನದ ಅಂಬಾರಿ ಕಳ್ಳತನ ಆಗಿದ್ಯಾ? ವದಂತಿಗಳಿಗೆ ಖಡಕ್ ಉತ್ತರ ಕೊಟ್ಟ ಪ್ರಮೋದಾ ದೇವಿ
Recommended image2
ದೇವರನ್ನಾದರೂ ಹುಡುಕಬಹುದು, ಬಾಡಿಗೆ ಮನೆಯನ್ನಲ್ಲ! ಬೆಂಗಳೂರಲ್ಲಿ ಮನೆ ಹುಡುಕಲು ಹೋಗಿ ಕಂಗೆಟ್ಟ ಮಹಿಳೆ ಹೇಳಿದ್ದೇನು?
Recommended image3
ಮುಂಬೈ-ಅಹಮದಾಬಾದ್‌ ಬುಲೆಟ್‌ ಟ್ರೇನ್‌ ಪ್ರಾಜೆಕ್ಟ್‌ನಲ್ಲಿ ₹5400 ಕೋಟಿ ಒಪ್ಪಂದ ಪಡೆದುಕೊಂಡ ಬೆಂಗಳೂರಿನ BEML
Related Stories
Recommended image1
ಕೃಷ್ಣಾ ನದಿಗೆ ಹರಿದು ಬರುತ್ತಿದೆ 60 ಸಾವಿರ ಕ್ಯೂಸೆಕ್ಸ್ ನೀರು; ಸೇತುವೆಗಳು ಜಾಲವೃತ
Recommended image2
ಕರ್ನಾಟಕದ ಬರಗಾಲವನ್ನು ಮೆಟ್ಟಿನಿಂತ ಆಲಮಟ್ಟಿ: ಜಲಾಶಯಕ್ಕೆ ಹರಿದು ಬಂತು 40 ಸಾವಿರ ಕ್ಯೂಸೆಕ್ ನೀರು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved