MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಜಿ.ಟಿ.ದೇವೇಗೌಡ ಭದ್ರಕೋಟೆಯಲ್ಲಿ ದಳಪತಿಗಳ ರಣಕಹಳೆ; ತಂದೆ ವಿರುದ್ಧ ಹೋಗ್ತಾರಾ ಜಿಡಿ ಹರೀಶ್‌ಗೌಡ?

ಜಿ.ಟಿ.ದೇವೇಗೌಡ ಭದ್ರಕೋಟೆಯಲ್ಲಿ ದಳಪತಿಗಳ ರಣಕಹಳೆ; ತಂದೆ ವಿರುದ್ಧ ಹೋಗ್ತಾರಾ ಜಿಡಿ ಹರೀಶ್‌ಗೌಡ?

ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡರು ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿರುವ ಬೆನ್ನಲ್ಲೇ, ಅವರ ಪುತ್ರ ಜಿ.ಡಿ.ಹರೀಶ್‌ಗೌಡರ ನೇತೃತ್ವದಲ್ಲಿ ಪಕ್ಷವು ಬೃಹತ್ ಕಾರ್ಯಕ್ರಮ ಆಯೋಜಿಸಿದೆ. ಹೆಚ್.ಡಿ. ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

1 Min read
Author : Mahmad Rafik
Published : May 17 2026, 10:00 AM IST
Share this Photo Gallery
  • FB
  • TW
  • Linkdin
  • Whatsapp
16
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ
Image Credit : Social Media

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ

ಮಾಜಿ ಸಚಿವರು, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಜಿ.ಟಿ.ದೇವೇಗೌಡರು ಜೆಡಿಎಸ್‌ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದೀಗ ಜಿ.ಟಿ.ದೇವೇಗೌಡರ ಕ್ಷೇತದಲ್ಲಿಯೇ ಜೆಡಿಎಸ್ ಕಾರ್ಯಕ್ರಮ ಆಯೋಜನೆ ಮಾಡಿದೆ. ಈ ಕಾರ್ಯಕ್ರಮದ ಮುಂದಾಳತ್ವವನ್ನು ಜಿ.ಟಿ.ದೇವೇಗೌಡರ ಅವರ ಪುತ್ರ ಜಿ.ಡಿ.ಹರೀಶ್‌ಗೌಡ ತೆಗೆದುಕೊಂಡಿದ್ದಾರೆ.

Add Asianetnews Kannada as a Preferred SourcegooglePreferred
26
ಜಿ.ಡಿ.ಹರೀಶ್‌ಗೌಡ
Image Credit : Social Media

ಜಿ.ಡಿ.ಹರೀಶ್‌ಗೌಡ

ಜಿಡಿ.ಹರೀಶ್‌ಗೌಡ ಮುಂದಾಳತ್ವದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಬೋಗಾದಿಯ ಭೋಗ ನಂದೀಶ್ವರ ದೇವಸ್ಥಾನದ ಬಳಿ ಜೆಡಿಎಸ್ ಪಕ್ಷದ ಕಾರ್ಯಕ್ರಮ ನಡೆಯಲಿದೆ. ಜಿ.ಟಿ.ದೇವೇಗೌಡರನ್ನು ಪಕ್ಕಕ್ಕೆ ಸರಿಸಿ ಈ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಸಚಿವ ಸಾ.ರಾ.ಮಹೇಶ್ ಬಣದ ನಾಯಕರು ಸೇರಿದಂತೆ ದಳಪತಿಗಳು ಭಾಗಿಯಾಗಲಿದ್ದಾರೆ.

Related Articles

Related image1
ಜೆಡಿಎಸ್‌ ಹಾಸನ ಸಮಾವೇಶಕ್ಕೆ ಆಹ್ವಾನವಿಲ್ಲ: ಜಿ.ಟಿ.ದೇವೇಗೌಡ
Related image2
ಮಾತು ಮಾತಿನಲ್ಲಿಯೂ ದಳಪತಿಗಳಿಗೆ ತಿವಿದು, ಮಹತ್ವದ ಸುಳಿವು ಕೊಟ್ಟ ಶಾಸಕ ಜಿ.ಟಿ.ದೇವೇಗೌಡ
36
ಜಿ.ಟಿ.ದೇವೇಗೌಡರ ನೆಲದಲ್ಲಿಯೇ ತಿರುಗೇಟು
Image Credit : Social Media

ಜಿ.ಟಿ.ದೇವೇಗೌಡರ ನೆಲದಲ್ಲಿಯೇ ತಿರುಗೇಟು

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‌ಡಿ ಕುಮಾರಸ್ವಾಮಿ, ಇಡೀ ರಾಜ್ಯ ಸುತ್ತಿ ಬಂದಿರುವ ಜನತಾದಳ ಯುವ ಘಟದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಾರ್ಯಕ್ರಮದಲ್ಲಿರಲಿದೆ. ನಿಖಿಲ್ ಕುಮಾರಸ್ವಾಮಿ ರಾಜ್ಯ ಪ್ರವಾಸದ ಸಮಾರೋಪವನ್ನು ಜಿ.ಟಿ.ದೇವೇಗೌಡರ ನೆಲದಲ್ಲಿಯೇ ಆಯೋಜಿಸಿರೋದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

46
ಮಾಜಿ ಸಚಿವ ಸಾ.ರಾ.ಮಹೇಶ್ ಟೀಕೆ
Image Credit : Social Media

ಮಾಜಿ ಸಚಿವ ಸಾ.ರಾ.ಮಹೇಶ್ ಟೀಕೆ

ಈ ಸಮಾವೇಶದಲ್ಲಿ ಸುಮಾರು 30 ಸಾವಿರ ಜನರು ಸೇರುವ ಸಾಧ್ಯತೆಗಳಿವೆ. ಈ ಮೂಲಕ ಪಕ್ಷದಿಂದ ದೂರವಾಗಿರುವ ಜಿ.ಟಿ.ಡಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದೆ. ಇತ್ತ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರೂ, ಜಿಟಿಡಿ ಕೆಲ ದಿನಗಳ ಹಿಂದೆಯಷ್ಟೇ ಹೆಚ್‌ಡಿ ದೇವೇಗೌಡರನ್ನು ಭೇಟಿ ಮಾಡಿದ್ದರು. ಜಿ.ಟಿ.ದೇವೇಗೌಡರ ಈ ನಡೆಯನ್ನು ಮಾಜಿ ಸಚಿವ ಸಾ.ರಾ.ಮಹೇಶ್ ಟೀಕಿಸಿದ್ದರು.

56
35 ರಿಂದ 40 ಸಾವಿರ ಜನರು ಸೇರುವ ಸಾಧ್ಯತೆ
Image Credit : Harish Gowda FB

35 ರಿಂದ 40 ಸಾವಿರ ಜನರು ಸೇರುವ ಸಾಧ್ಯತೆ

ಶಾಸಕ ಜಿ.ಡಿ. ಹರೀಶ್ ಗೌಡ ಮಾತನಾಡಿ, ಜನರೊಂದಿಗೆ ಜನತಾದಳ ಕಾರ್ಯಕ್ರಮದಲ್ಲಿ ಚಾಮರಾಜನಗರ, ಮೈಸೂರು, ಮಂಡ್ಯ, ಸುತ್ತಮುತ್ತಲ ಕ್ಷೇತ್ರದಿಂದ ಜನರು ಬರುತ್ತಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. 35 ರಿಂದ 40 ಸಾವಿರ ಜನರು ಸೇರುವ ಸಾಧ್ಯತೆಯಿದೆ ಎಂದು ತಿಳಿಸಿದರು.

66
 ಸಾಮೂಹಿಕ ನಾಯಕತ್ವ
Image Credit : FB

ಸಾಮೂಹಿಕ ನಾಯಕತ್ವ

ಶಾಸಕ ಜಿ.ಟಿ.ದೇವೇಗೌಡರು ತಾವು ಮಾಡಿದ ತಪ್ಪನ್ನು ತಿದ್ದಿಕೊಂಡು ಜೆಡಿಎಸ್ ಪಕ್ಷದಲ್ಲೇ ಉಳಿಯುವುದಾದರೆ ನಮ್ಮ ಅಭ್ಯಂತರವೇನೂ ಇಲ್ಲ. . ಜಿ.ಟಿ.ದೇವೇಗೌಡರಿಂದ ಪಕ್ಷಕ್ಕೆ ಬಹಳ ದೊಡ್ಡ ನಷ್ಟವಾಗಿದೆ. ಅವರು ಒಂದೊಂದು ಚುನಾವಣೆಗೆ ಒಂದೊಂದು ತೀರ್ಮಾನ ಮಾಡುತ್ತಾರೆ. ಅವರ ತೀರ್ಮಾನಗಳಿಂದ ಕಾರ್ಯಕರ್ತರಿಗೆ ಆಘಾತವಾಗಿದೆ. ಈ ಕಾರಣದಿಂದ ಈ ಭಾಗದಲ್ಲಿ ಸಾಮೂಹಿಕ ನಾಯಕತ್ವ ಕಟ್ಟಿಕೊಂಡಿದ್ದೇವೆ ಎಂದು ಸಾ.ರಾ.ಮಹೇಶ್ ಹೇಳಿದ್ದರು.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಜನತಾದಳ (ಜಾತ್ಯತೀತ)
ಜಿ. ಟಿ. ದೇವೇಗೌಡ
ಮೈಸೂರು

Latest Videos
Recommended Stories
Recommended image1
ಮಳೆರಾಯನ ಕೃಪೆ: ಬೇಸಿಗೆಯ ತಾಪಕ್ಕೆ ಬತ್ತಿ ಹೋಗಿದ್ದ ನೇತ್ರಾವತಿ ನದಿಗೆ ಮರಳಿದ ಜೀವಕಳೆ
Recommended image2
ಲಕ್ಕುಂಡಿಯ 100 ಗುಡಿ, 100 ಬಾವಿಗಳ ಪತ್ತೆಗಾಗಿ ಉತ್ಖನನ; ಈವರೆಗೆ ಸಿಕ್ಕಿದ್ದೆಷ್ಟು?
Recommended image3
ಬಂಗಾಳಕೊಲ್ಲಿ ವಾಯುಭಾರ ಕುಸಿತದಿಂದ ಬೆಂಗಳೂರಿಗೆ ಯೆಲ್ಲೋ ಅಲರ್ಟ್, ಹಲೆವೆಡೆ ಭಾರೀ ಮಳೆ ಸೂಚನೆ
Related Stories
Recommended image1
ಜೆಡಿಎಸ್‌ ಹಾಸನ ಸಮಾವೇಶಕ್ಕೆ ಆಹ್ವಾನವಿಲ್ಲ: ಜಿ.ಟಿ.ದೇವೇಗೌಡ
Recommended image2
ಮಾತು ಮಾತಿನಲ್ಲಿಯೂ ದಳಪತಿಗಳಿಗೆ ತಿವಿದು, ಮಹತ್ವದ ಸುಳಿವು ಕೊಟ್ಟ ಶಾಸಕ ಜಿ.ಟಿ.ದೇವೇಗೌಡ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved