ಮಹಿಳೆಯರೇ 'ಗೃಹಲಕ್ಷ್ಮಿ' 3 ಲಕ್ಷ ಸಾಲದ ಬಲೆಯಲ್ಲಿ ಸಿಲುಕಿಕೊಳ್ಳಬೇಡಿ; ಇಲ್ಲಿದೆ ಸತ್ಯಾಂಶ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗೃಹಲಕ್ಷ್ಮಿ ಲೋನ್ ಯೋಜನೆ ಅಡಿಯಲ್ಲಿ 3 ಲಕ್ಷದವರೆಗೆ ಸಾಲ ಸಿಗುತ್ತದೆ ಎಂಬುದು ಸುಳ್ಳು ಸುದ್ದಿ. ಸರ್ಕಾರದಿಂದ ಇಂತಹ ಯಾವುದೇ ಅಧಿಕೃತ ಯೋಜನೆ ಪ್ರಕಟವಾಗಿಲ್ಲ.

30 ಸಾವಿರದಿಂದ 3 ಲಕ್ಷದವರೆಗೆ ಸಾಲ
ಗೃಹಲಕ್ಷ್ಮಿ ಲೋನ್ ಯೋಜನೆಯಿಂದ 30 ಸಾವಿರದಿಂದ 3 ಲಕ್ಷದವರೆಗೆ ಸಾಲ ಸಿಗುತ್ತದೆ ಎಂಬ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಗಮನಕ್ಕೆ ಬಂದಿದ್ದು, ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಕರೆ ಮಾಡುತ್ತಿರುತ್ತಾರೆ.
ಮೋಸ ಹೋಗಬೇಡಿ,
ಗೃಹಲಕ್ಷ್ಮಿ ಲೋನ್ ಯೋಜನೆ ಎಂಬ ಅಧಿಕೃತ ಯೋಜನೆ ಪ್ರಕಟವಾಗಿರುವುದಿಲ್ಲ. ಜನರು ಮೋಸ ಹೋಗಬೇಡಿ, ಇದು ಸುಳ್ಳು ಸುದ್ದಿಯಾಗಿದ್ದು, ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಪ್ರಕಟವಾಗಿರುವುದಿಲ್ಲ ಹಾಗೂ ಯಾವುದೇ ಅಪರಿಚಿತ ಎಪಿಕೆ ಫೈಲ್ ಲಿಂಕ್ ಗಳನ್ನು ಇನ್ ಸ್ಟಾಲ್ ಮಾಡಬೇಡಿ ಮತ್ತು ಓಟಿಪಿ ಬ್ಯಾಂಕ್ ಡಿಟೇಲ್ಸ್ ಹಾಗೂ ಪರ್ಸನಲ್ ಇನ್ ಫರ್ ಮೇಷನ್ ಗಳನ್ನು ಯಾರೊಂದಿಗೂ ಷೇರ್ ಮಾಡಬೇಡಿ.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷೆ ಪುಷ್ಪವಲ್ಲಿ
ಸಾಮಾಜಿಕ ಜಾಲತಾಣಗಳಾದ ಇನ್ ಸ್ಟಾ ಗ್ರಾಮ್, ಫೇಸ್ ಬುಕ್, ಯುಟ್ಯೂಬ್ ಗಳನ್ನು ನಂಬಿ ಹಣ ಪಾವತಿಸಬೇಡಿ. ಸರ್ಕಾರದಿಂದ ಅಧಿಕೃತ ಆದೇಶ ಅಥವಾ ನ್ಯೂಸ್ ಪೇಪರ್ ಸ್ಟೇಟ್ ಮೆಂಟ್ ಬಂದಾಗ ಮಾತ್ರ ನಂಬಿಕೆ ಇಡಿ. ಯಾರಿಗೂ ದುಡ್ಡು ಕೊಟ್ಟು ಮೋಸ ಹೋಗಬೇಡಿ ಎಂದು ಮೈಸೂರು ಮಹಾನಗರ ಪಾಲಿಕೆಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷೆ ಪುಷ್ಪವಲ್ಲಿ ತಿಳಿಸಿದ್ದಾರೆ.

