MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಕೊಪ್ಪಳದ ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ ಮೌಲ್ಯದ ಚಿನ್ನದ ಆಭರಣ ದೇಣಿಗೆ ನೀಡಿದ ಹೈದರಾಬಾದ್ ಉದ್ಯಮಿ!

ಕೊಪ್ಪಳದ ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ ಮೌಲ್ಯದ ಚಿನ್ನದ ಆಭರಣ ದೇಣಿಗೆ ನೀಡಿದ ಹೈದರಾಬಾದ್ ಉದ್ಯಮಿ!

ಕೊಪ್ಪಳದ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿಗೆ, ಹೈದರಾಬಾದ್ ಮೂಲದ ಉದ್ಯಮಿ ಮಹೇಶ್ ರೆಡ್ಡಿ ಅವರು ಸುಮಾರು 2.5 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಕಿರೀಟ, ಗದೆ ಮತ್ತು ಪ್ರಭಾವಳಿಯನ್ನು ಸಮರ್ಪಿಸಿದ್ದಾರೆ. ಈ ಐತಿಹಾಸಿಕ ದೇಣಿಗೆಯ ಸಂದರ್ಭದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸೇರಿ ಗಣ್ಯರು ಉಪಸ್ಥಿತರಿದ್ದರು.

2 Min read
Author : Gowthami K
Published : May 08 2026, 03:11 PM IST
Share this Photo Gallery
  • FB
  • TW
  • Linkdin
  • Whatsapp
16
ಹೈದರಾಬಾದ್ ಉದ್ಯಮಿಯಿಂದ ಸಮರ್ಪಣೆ
Image Credit : Asianet News

ಹೈದರಾಬಾದ್ ಉದ್ಯಮಿಯಿಂದ ಸಮರ್ಪಣೆ

ಕೊಪ್ಪಳ: ತಾಲೂಕಿನ ಐತಿಹಾಸ ಪ್ರಸಿದ್ಧ ಆಂಜನೇಯಸ್ವಾಮಿ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯಸ್ವಾಮಿಗೆ ಚಿನ್ನದ ಕಿರೀಟ, ಗದೆ ಮತ್ತು ಪ್ರಭಾವಳಿಯನ್ನು ಮೇ 8 ರಂದು ಸಮರ್ಪಣೆ ಮಾಡಲಾಗಿದೆ. ಆಂಜನೇಯ ದೇಗುಲಕ್ಕೆ ಇದೇ ಮೊದಲ ಬಾರಿಗೆ ಭಾರೀ ಮೊತ್ತದ ಬಂಗಾರದ ಆಭರಣ ದೇಣಿಗೆ ನೀಡಲಾಗಿದೆ. ಹೈದರಾಬಾದ್ ನೆಲ್ಲೂರು ಮೂಲದ ಉದ್ಯಮಿ ಹಾಗೂ ಎಎಂಆರ್ ಸಮೂಹ ಸಂಸ್ಥೆಯ ಮಾಲಿಕ ಮಹೇಶ್ ರೆಡ್ಡಿ ಅವರು ಸುಮಾರು 2.5 ಕೋಟಿ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ಹನುಮಂತನಿಗೆ ಸಮರ್ಪಣೆ ಮಾಡಿದ್ದಾರೆ.

26
1.50 ಕೆಜಿ ಅಂದಾಜು ₹ 2.50 ಕೋಟಿ ಮೌಲ್ಯ
Image Credit : Asianet News

1.50 ಕೆಜಿ ಅಂದಾಜು ₹ 2.50 ಕೋಟಿ ಮೌಲ್ಯ

ಭಾರತದ ಖ್ಯಾತ ಕನ್ಸ್ಟ್ರಕ್ಷನ್ ಸಂಸ್ಥೆ ಎ.ಎಂ.ಆರ್ ಗ್ರುಪ್‌ನ ಅಧ್ಯಕ್ಷ ಡಾ. ಎ.ಮಹೇಶ್ ರೆಡ್ಡಿ ಹಾಗೂ ಕುಟುಂಬದಿಂದ ಆಂಜನೇಯ ಸ್ವಾಮಿಗೆ ಚಿನ್ನದ ಪ್ರಭಾವಳಿ, ಕಿರೀಟ ಹಾಗೂ ಗದೆಯನ್ನು ಭಕ್ತಿಪೂರ್ವಕವಾಗಿ ಅರ್ಪಿಸಲಾಗಿದೆ.1.50 ಕೆಜಿ ಅಂದಾಜು ₹ 2.50 ಕೋಟಿ ಮೌಲ್ಯದ ಆಭರಣ ಹೈದ್ರಾಬಾದನಲ್ಲಿ ತಯಾರಿಸಲಾಗಿದ್ದು, ತಯಾರಕರೇ ಆಗಮಿಸಿ ಆಂಜನೇಯಸ್ವಾಮಿಗೆ ಅಲಂಕರಿಸಲಿದ್ದಾರೆ. ಈ ಹಿನ್ನೆಲೆ ಬೆಳಗ್ಗೆ 5 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಆಂಧ್ರ, ಕರ್ನಾಟಕದಿಂದ ಪಂಡಿತರು ಆಗಮಿಸಿದ್ದು ಹೋಮ ಹವನಗಳು ಸೇರಿದಂತೆ ವಿವಿಧ ಕಾರ್ಯಕ್ರಮ ನೆರವೇರಿಸಿದರು.

Related Articles

Related image1
Anjanadri Hill: 90ರ ಅಜ್ಜಿಯ ಹೊತ್ತು ಅಂಜನಾದ್ರಿ 575 ಮೆಟ್ಟಿಲು ಹತ್ತಿದ ಮೊಮ್ಮಗ! ಹನುಮನ ಜನ್ಮಸ್ಥಳದ ದರ್ಶನ ಹಡೆದವ್ವ
Related image2
ಅಂಜನಾದ್ರಿ ಹನುಮ ದೇವರಿಗೆ ₹2.5 ಕೋಟಿ ಮೌಲ್ಯದ ಬಂಗಾರದ ಕಿರೀಟ, ಗದೆ: ಎ.ಎಂ.ಆರ್ ಗ್ರೂಪ್ ಮಹೇಶ್ ರೆಡ್ಡಿ ಅರ್ಪಣೆ!
36
ಪತ್ನಿಯೊಂದಿಗೆ ದೇಗುಲಕ್ಕೆ ಆಗಮಿಸಿ ಸಮರ್ಪಣೆ
Image Credit : Asianet News

ಪತ್ನಿಯೊಂದಿಗೆ ದೇಗುಲಕ್ಕೆ ಆಗಮಿಸಿ ಸಮರ್ಪಣೆ

ಉದ್ಯಮಿ ಮಹೇಶ್ ರೆಡ್ಡಿ ಅವರು ತಮ್ಮ ಪತ್ನಿಯೊಂದಿಗೆ ದೇಗುಲಕ್ಕೆ ಆಗಮಿಸಿ, ಅತ್ಯಂತ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ಬಂಗಾರದ ಪ್ರಭಾವಳಿ, ಚತ್ರಿ, ಕಿರೀಟ ಹಾಗೂ ಗದೆಯನ್ನು ಶ್ರೀ ಆಂಜನೇಯ ಸ್ವಾಮಿಗೆ ಅರ್ಪಿಸುವ ಮೂಲಕ ತಮ್ಮ ಸೇವೆ ಸಲ್ಲಿಸಿದರು. ಈ ವೇಳೆ ದೇವಾಲಯದ ಅರ್ಚಕರು ವೇದಮಂತ್ರಗಳೊಂದಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ಸಮರ್ಪಿತ ಆಭರಣಗಳಿಗೆ ಪೂಜೆ ಸಲ್ಲಿಸಿದರು. ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಆಭರಣಗಳನ್ನು ಹಸ್ತಾಂತರ ಮಾಡಿದರು. ಆಂಜನೇಯ ಸ್ವಾಮಿಗೆ ವಿಶೇಷ ಸಂಕಲ್ಪ ಪೂಜೆ, ಸುಪ್ರಭಾತ ಸೇವೆ ಸಲ್ಲಿಸಿ, ಭಕ್ತಿ ಭಾವದಿಂದ ಬಂಗಾರದ ಪ್ರಭಾವಳಿ, ಚಕ್ರ, ಕಿರೀಟ ಹಾಗೂ ಗದೆ ಸೇರಿದಂತೆ ವಿವಿಧ ಆಭರಣಗಳನ್ನು ಒಪ್ಪಿಸಿದರು.

46
ಗಾಲಿ ಜನಾರ್ದನ ರೆಡ್ಡಿ ಆಪ್ತ
Image Credit : Asianet News

ಗಾಲಿ ಜನಾರ್ದನ ರೆಡ್ಡಿ ಆಪ್ತ

ಈ ಸಂದರ್ಭದಲ್ಲಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಶಾಸಕ ಜನಾರ್ದನ ರೆಡ್ಡಿ ಅವರ ಆಪ್ತ ಸ್ನೇಹಿತರಾಗಿರುವ ಮಹೇಶ್ ರೆಡ್ಡಿ, ಧಾರ್ಮಿಕ ಕಾರ್ಯಗಳಲ್ಲಿ ಸದಾ ಮುಂದಿರುವ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಅವರು ಹಲವು ದೇವಾಲಯಗಳಿಗೆ ದೇಣಿಗೆ ನೀಡಿದ್ದಾರೆ.

ದೇವಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಮೊತ್ತದಲ್ಲಿ ಬಂಗಾರದ ಆಭರಣ ದೇಣಿಗೆಯಾಗಿ ಬಂದಿರುವುದು ವಿಶೇಷವಾಗಿದೆ. ದೇಣಿಗೆಯಾಗಿ ನೀಡಲಾದ ಆಭರಣಗಳನ್ನು ಗಂಗಾವತಿ ತಾಲೂಕು ಆಡಳಿತಕ್ಕೆ ಅಧಿಕೃತವಾಗಿ ಹಸ್ತಾಂತರಿಸಲಾಗಿದ್ದು, ಅವುಗಳನ್ನು ದೇವಾಲಯದ ನಿಯಮಾನುಸಾರ ಮುಂದಿನ ಕ್ರಮಗಳಲ್ಲಿ ಬಳಸಲಾಗುತ್ತದೆ.

56
ಈ ಹಿಂದೆ ಶಿರಡಿ ಸಾಯಿ ಬಾಬಾ ದೇವಸ್ಥಾನಕ್ಕೂ ದೇಣಿಗೆ
Image Credit : Asianet News

ಈ ಹಿಂದೆ ಶಿರಡಿ ಸಾಯಿ ಬಾಬಾ ದೇವಸ್ಥಾನಕ್ಕೂ ದೇಣಿಗೆ

ಹೈದರಾಬಾದ್‌ನ ನೆಲ್ಲೂರು ಮೂಲದ ಮಹೇಶ್ ರೆಡ್ಡಿ ಅವರು ಎಎಂಆರ್ ಕನ್ಸ್ಟ್ರಕ್ಷನ್ ಕಂಪನಿಯ ಮಾಲಿಕರಾಗಿದ್ದು, ಸಮಾಜ ಸೇವೆ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಶಿರಡಿ ಸಾಯಿ ಬಾಬಾ ದೇವಸ್ಥಾನಕ್ಕೂ ಸುಮಾರು 140 ಕೆ.ಜಿ. ಬಂಗಾರ ದೇಣಿಗೆ ನೀಡಿದ್ದರು. ಇದೀಗ ಅಂಜನಾದ್ರಿ ದೇವಸ್ಥಾನಕ್ಕೂ ದೇಣಿಗೆ ನೀಡುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಈ ದೇಣಿಗೆ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನೆರವೇರಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು. ಈ ಬೆಳವಣಿಗೆ ಅಂಜನಾದ್ರಿ ದೇವಸ್ಥಾನದ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ.

66
ಯಾರೆಲ್ಲ ಇದ್ದರು?
Image Credit : Asianet News

ಯಾರೆಲ್ಲ ಇದ್ದರು?

ಈ ಸಂದರ್ಭದಲ್ಲಿ ಗಂಗಾವತಿ ತಹಸಿಲ್ದಾರರಾದ ವಸಂತ ಕುಮಾರಿ, ಕನಕಗಿರಿ ತಹಸಿಲ್ದಾರರಾದ ವಿಶ್ವನಾಥ್, ಗ್ರೇಡ್ 2 ತಹಶೀಲ್ದಾರರಾದ ಮಹಾಂತಗೌಡ ಪಾಟೀಲ್, ಮಾಜಿ ಸಂಸದರಾದ ಶಿವರಾಮಗೌಡ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ವಿರುಪಾಕ್ಷಪ್ಪ ಸಿಂಗನಾಳ್, ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ಚಂದ್ರು ಹಿರೂರು, ಮುಖಂಡರಾದ ಮನೋಹರ ಗೌಡ ಹೇರೂರು, ಯಮನೂರು ಚೌಡ್ಕಿ, ವೀರೇಶ್ ಬಲಕುಂದಿ, ಮಲ್ಲಿಕಾರ್ಜುನ ಸ್ವಾಮಿ, ಬಾಬು ರೆಡ್ಡಿ, ಗಂಗಾಧರ ಸ್ವಾಮಿ, ಸಂಗಮೇಶ್ ಬಾದವಾಡಿಗಿ, ವೆಂಕಟೇಶ್ ಜಬ್ಬಲಗುಡ್ಡ, ರಮೇಶ್ ಹೊಸಮಲಿ, ಮಂಜುನಾಥ ಗೊಂದಿ, ಮಂಜುನಾಥ ಕಲಾಲ್, ಅರ್ಜುನ್ ರಾಯ್ಕರ್, ವೀರೇಶ್ ಅಂಜನಾದ್ರಿ ಹಾಗೂ ತಾಲೂಕು ಆಡಳಿತ ಸಿಬ್ಬಂದಿ ವರ್ಗದವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಕೊಪ್ಪಳ
ದೇವಸ್ಥಾನ
ಹೈದರಾಬಾದ್
ಜಿ. ಜನಾರ್ದನ ರೆಡ್ಡಿ

Latest Videos
Recommended Stories
Recommended image1
ರಾತ್ರಿಯ ಕಗ್ಗತ್ತಲು, ಸುರಿವ ಮಳೆಯಲ್ಲಿ ಹಳ್ಳದಲ್ಲಿ ಕಳೆದ ಹೋದ ಮಗು; 12 ಗಂಟೆ ಬಳಿಕ ಕಂದಮ್ಮ ಪತ್ತೆ!
Recommended image2
ಖಾನಾಪುರ–ತಾಳಗುಪ್ಪ ಹೆದ್ದಾರಿಯಲ್ಲಿ ಭೀಕರ ಅಪಘಾತ; ಕಾರು-ಟ್ರಕ್ ನಡುವೆ ಡಿಕ್ಕಿ, ಐವರಿಗೆ ಗಂಭೀರ ಗಾಯ
Recommended image3
ಚಿಕ್ಕಮಗಳೂರು: ದೇವಸ್ಥಾನ ಕಟ್ಟಲು 20 ವರ್ಷ ವಾಸವಿದ್ದ ಮನೆ ಧ್ವಂಸ, ದಲಿತ ಕುಟುಂಬದ ಸಂಸಾರ ಹಾಳು ಮಾಡಿದ ಗ್ರಾಮಸ್ಥರು!
Related Stories
Recommended image1
Anjanadri Hill: 90ರ ಅಜ್ಜಿಯ ಹೊತ್ತು ಅಂಜನಾದ್ರಿ 575 ಮೆಟ್ಟಿಲು ಹತ್ತಿದ ಮೊಮ್ಮಗ! ಹನುಮನ ಜನ್ಮಸ್ಥಳದ ದರ್ಶನ ಹಡೆದವ್ವ
Recommended image2
ಅಂಜನಾದ್ರಿ ಹನುಮ ದೇವರಿಗೆ ₹2.5 ಕೋಟಿ ಮೌಲ್ಯದ ಬಂಗಾರದ ಕಿರೀಟ, ಗದೆ: ಎ.ಎಂ.ಆರ್ ಗ್ರೂಪ್ ಮಹೇಶ್ ರೆಡ್ಡಿ ಅರ್ಪಣೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved