MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • State
  • ಅಂಜನಾದ್ರಿ ಹನುಮ ದೇವರಿಗೆ ₹2.5 ಕೋಟಿ ಮೌಲ್ಯದ ಬಂಗಾರದ ಕಿರೀಟ, ಗದೆ: ಎ.ಎಂ.ಆರ್ ಗ್ರೂಪ್ ಮಹೇಶ್ ರೆಡ್ಡಿ ಅರ್ಪಣೆ!

ಅಂಜನಾದ್ರಿ ಹನುಮ ದೇವರಿಗೆ ₹2.5 ಕೋಟಿ ಮೌಲ್ಯದ ಬಂಗಾರದ ಕಿರೀಟ, ಗದೆ: ಎ.ಎಂ.ಆರ್ ಗ್ರೂಪ್ ಮಹೇಶ್ ರೆಡ್ಡಿ ಅರ್ಪಣೆ!

ಕೊಪ್ಪಳದ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿಗೆ, ಎ.ಎಂ.ಆರ್ ಗ್ರೂಪ್‌ನ ಅಧ್ಯಕ್ಷರಾದ ಡಾ. ಎ. ಮಹೇಶ್ ರೆಡ್ಡಿ ಅವರು 2.50 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟ, ಗದೆ ಹಾಗೂ ಪ್ರಭಾವಳಿಯನ್ನು ಹರಕೆಯಾಗಿ ಸಮರ್ಪಿಸಿದ್ದಾರೆ. ಈ ಅಂಗವಾಗಿ ಮೇ 8 ರಂದು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

1 Min read
Author : Sathish Kumar KH
Published : May 07 2026, 09:30 PM IST
Share this Photo Gallery
  • FB
  • TW
  • Linkdin
  • Whatsapp
16
2.50 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣ
Image Credit : Asianet News

2.50 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣ

ಕೊಪ್ಪಳ (ಮೇ 07): ಶ್ರೀರಾಮನ ಭಂಟ ಹನುಮಂತನ ಜನ್ಮಸ್ಥಳವಾಗಿ ವಿಶ್ವವಿಖ್ಯಾತಿ ಪಡೆದಿರುವ ಅಂಜನಾದ್ರಿ ಬೆಟ್ಟದಲ್ಲಿ ಭಕ್ತಿಯ ಪರಾಕಾಷ್ಠೆ ಕಂಡುಬಂದಿದೆ. ಅಂಜನಾದ್ರಿಯ ಶ್ರೀ ಆಂಜನೇಯ ಸ್ವಾಮಿಗೆ ಭಕ್ತರೊಬ್ಬರು ಸುಮಾರು 2.50 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಕಾಣಿಕೆಯಾಗಿ ಅರ್ಪಿಸುವ ಮೂಲಕ ಹರಕೆ ತೀರಿಸಿದ್ದಾರೆ.

26
ಎ.ಎಂ.ಆರ್ ಗ್ರೂಪ್‌ನಿಂದ ಭಕ್ತಿಪೂರ್ವಕ ಕೊಡುಗೆ
Image Credit : Asianet News

ಎ.ಎಂ.ಆರ್ ಗ್ರೂಪ್‌ನಿಂದ ಭಕ್ತಿಪೂರ್ವಕ ಕೊಡುಗೆ

ಭಾರತದ ಖ್ಯಾತ ಕನ್ಸ್ಟ್ರಕ್ಷನ್ ಸಂಸ್ಥೆಯಾದ ಎ.ಎಂ.ಆರ್ (AMR) ಗ್ರೂಪ್‌ನ ಅಧ್ಯಕ್ಷರಾದ ಡಾ. ಎ. ಮಹೇಶ್ ರೆಡ್ಡಿ ಹಾಗೂ ಅವರ ಕುಟುಂಬದವರು ಈ ಧಾರ್ಮಿಕ ಕಾರ್ಯಕ್ಕೆ ಮುಂದಾಗಿದ್ದಾರೆ. ಶ್ರೀ ಸ್ವಾಮಿಯ ಮೇಲಿನ ಅತೀವ ಭಕ್ತಿಯಿಂದಾಗಿ ಅವರು ಸುಮಾರು 2.50 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿದ್ಧಪಡಿಸಲಾದ ಸುಂದರ ಬಂಗಾರದ ಕಿರೀಟ, ಗದೆ ಹಾಗೂ ಭವ್ಯವಾದ ಪ್ರಭಾವಳಿಯನ್ನು ದೇವಸ್ಥಾನಕ್ಕೆ ಸಮರ್ಪಿಸಿದ್ದಾರೆ. ಈ ಆಭರಣಗಳು ಆಂಜನೇಯ ಸ್ವಾಮಿಯ ವಿಗ್ರಹಕ್ಕೆ ಮತ್ತಷ್ಟು ಕಳೆಯನ್ನು ನೀಡಲಿವೆ.

Related Articles

Related image1
Anjanadri Hill: 90ರ ಅಜ್ಜಿಯ ಹೊತ್ತು ಅಂಜನಾದ್ರಿ 575 ಮೆಟ್ಟಿಲು ಹತ್ತಿದ ಮೊಮ್ಮಗ! ಹನುಮನ ಜನ್ಮಸ್ಥಳದ ದರ್ಶನ ಹಡೆದವ್ವ
Related image2
'ಜೈ ಹನುಮಾನ್' ಮುಹೂರ್ತಕ್ಕೆ ಆಗಮಿಸಿದ ರಿಷಬ್ ಶೆಟ್ಟಿ ದಂಪತಿಗಳು; ಅಂಜನಾದ್ರಿ ಬೆಟ್ಟದಲ್ಲಿ ಕಾಂತಾರ 'ಶಿವ'ನ ಮಿಂಚು!
36
ಮೇ 8 ರಂದು ವಿಶೇಷ ಧಾರ್ಮಿಕ ಕಾರ್ಯಕ್ರಮ:
Image Credit : Asianet News

ಮೇ 8 ರಂದು ವಿಶೇಷ ಧಾರ್ಮಿಕ ಕಾರ್ಯಕ್ರಮ:

ಈ ಕಾಣಿಕೆ ಅರ್ಪಣೆಯ ಅಂಗವಾಗಿ ಮೇ 8 ರಂದು ಬೆಳಿಗ್ಗೆಯಿಂದಲೇ ಅಂಜನಾದ್ರಿ ಬೆಟ್ಟದಲ್ಲಿ ವಿಶೇಷ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ. ಶ್ರೀ ದೇವರಿಗೆ ಅರ್ಪಿಸುವ ಮೊದಲು ಹಸಿರು ಬೆಟ್ಟದ ಮಡಿಲಲ್ಲಿ ಹವನ, ಹೋಮ ಹಾಗೂ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ. ವೇದಮೂರ್ತಿಗಳ ಸಾರಥ್ಯದಲ್ಲಿ ನಡೆಯುವ ಈ ಪೂಜಾ ಕಾರ್ಯಕ್ರಮಗಳಲ್ಲಿ ಮಹೇಶ್ ರೆಡ್ಡಿ ಅವರ ಕುಟುಂಬದವರು ಪಾಲ್ಗೊಳ್ಳಲಿದ್ದಾರೆ.

46
ಶಾಸಕ ಜನಾರ್ದನರೆಡ್ಡಿ ಭಾಗಿ:
Image Credit : Asianet News

ಶಾಸಕ ಜನಾರ್ದನರೆಡ್ಡಿ ಭಾಗಿ:

ಈ ಮಹತ್ವದ ಧಾರ್ಮಿಕ ಸಮಾರಂಭದಲ್ಲಿ ಗಂಗಾವತಿ ಕ್ಷೇತ್ರದ ಶಾಸಕರಾದ ಗಾಲಿ ಜನಾರ್ದನರೆಡ್ಡಿ ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ. ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ವಿಶೇಷ ಆಸಕ್ತಿ ಹೊಂದಿರುವ ಶಾಸಕರು, ಈ ಭಕ್ತಿಪೂರ್ವಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

56
ಅಂಜನಾದ್ರಿ ಬೆಟ್ಟಕ್ಕೆ ಹೆಚ್ಚಿದ ಭಕ್ತರ ದಂಡು
Image Credit : Asianet News

ಅಂಜನಾದ್ರಿ ಬೆಟ್ಟಕ್ಕೆ ಹೆಚ್ಚಿದ ಭಕ್ತರ ದಂಡು

ಇತ್ತೀಚಿನ ದಿನಗಳಲ್ಲಿ ಅಂಜನಾದ್ರಿ ಬೆಟ್ಟಕ್ಕೆ ದೇಶ-ವಿದೇಶಗಳಿಂದ ಭಕ್ತರ ಆಗಮನ ಹೆಚ್ಚಾಗಿದೆ. ದೇವಸ್ಥಾನಕ್ಕೆ ಬಂಗಾರದ ಆಭರಣಗಳು ಅರ್ಪಣೆಯಾಗುತ್ತಿರುವುದು ಭಕ್ತರಲ್ಲಿ ಸಂತಸ ಮೂಡಿಸಿದೆ. ಹನುಮ ಜನ್ಮಸ್ಥಳದ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯುವ ಇಂತಹ ಕಾರ್ಯಗಳು ಪ್ರವಾಸೋದ್ಯಮ ಮತ್ತು ಧಾರ್ಮಿಕ ದೃಷ್ಟಿಯಿಂದಲೂ ಮಹತ್ವ ಪಡೆದಿವೆ.

66
ಆಂಜನೇಯ ಸ್ವಾಮಿಗೆ ಬಂಗಾರದ ಮೆರುಗು
Image Credit : Asianet News

ಆಂಜನೇಯ ಸ್ವಾಮಿಗೆ ಬಂಗಾರದ ಮೆರುಗು

ಅಂಜನಾದ್ರಿ ಶ್ರೀ ಆಂಜನೇಯ ಸ್ವಾಮಿಗೆ ಬಂಗಾರದ ಮೆರುಗು ಬಂದಿರುವುದು ಹನುಮ ಮಾಲೆಧಾರಿಗಳು ಹಾಗೂ ಭಕ್ತ ಸಮೂಹಕ್ಕೆ ಹಬ್ಬದ ಸಡಗರ ತಂದಿದೆ. ಇನ್ನುಮುಂದೆ ದೇವಸ್ಥಾನಕ್ಕೆ ಭದ್ರತೆಯನ್ನೂ ಹೆಚ್ಚಿಸಲಾಗುತ್ತದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಹನುಮ ಜಯಂತಿ
ದೇವಸ್ಥಾನ
ಕೊಪ್ಪಳ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಶ್ರೀಗಂಧ ಮರಗಳ ಕಳ್ಳತನ ತಡೆಗೆ ಟೆಕ್ನಾಲಜಿ ಮೊರೆ ಹೋದ ಸರ್ಕಾರ; 'ನೀವು ಐಡಿಯಾ ಕೊಡಿ, ಖರ್ಚು ನಾವು ಕೊಡ್ತೇವೆ'!
Recommended image2
ವಿಟಿಯು ಪರೀಕ್ಷಾ ದಿನಾಂಕ ಪ್ರಕಟ: ಯುಜಿ ಹಾಗೂ ಪಿಜಿ ಕೋರ್ಸ್‌ಗಳ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ
Recommended image3
ರಾಜ್ಯದಲ್ಲಿ ಮಳೆ ಆರ್ಭಟ: ಮುಂದಿನ 5 ದಿನ ಗುಡುಗು ಸಹಿತ ಭಾರಿ ಮಳೆ ಮುನ್ನೆಚ್ಚರಿಕೆ, ಬೆಂಗಳೂರಿನಲ್ಲೂ ವರುಣನ ಸಿಂಚನ!
Related Stories
Recommended image1
Anjanadri Hill: 90ರ ಅಜ್ಜಿಯ ಹೊತ್ತು ಅಂಜನಾದ್ರಿ 575 ಮೆಟ್ಟಿಲು ಹತ್ತಿದ ಮೊಮ್ಮಗ! ಹನುಮನ ಜನ್ಮಸ್ಥಳದ ದರ್ಶನ ಹಡೆದವ್ವ
Recommended image2
'ಜೈ ಹನುಮಾನ್' ಮುಹೂರ್ತಕ್ಕೆ ಆಗಮಿಸಿದ ರಿಷಬ್ ಶೆಟ್ಟಿ ದಂಪತಿಗಳು; ಅಂಜನಾದ್ರಿ ಬೆಟ್ಟದಲ್ಲಿ ಕಾಂತಾರ 'ಶಿವ'ನ ಮಿಂಚು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved