MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಹುಬ್ಬಳ್ಳಿ ಲವ್ ಜಿಹಾದ್ ಕೇಸಿಗೆ ಟ್ವಿಸ್ಟ್: ಸಮೀರನ ಅತ್ಯಾ*ಚಾರ, ಬ್ಲ್ಯಾಕ್‌ಮೇಲ್ ತಂತ್ರ ಬಿಚ್ಚಿಟ್ಟ ಸಂತ್ರಸ್ತ ಯುವತಿ!

ಹುಬ್ಬಳ್ಳಿ ಲವ್ ಜಿಹಾದ್ ಕೇಸಿಗೆ ಟ್ವಿಸ್ಟ್: ಸಮೀರನ ಅತ್ಯಾ*ಚಾರ, ಬ್ಲ್ಯಾಕ್‌ಮೇಲ್ ತಂತ್ರ ಬಿಚ್ಚಿಟ್ಟ ಸಂತ್ರಸ್ತ ಯುವತಿ!

ಹುಬ್ಬಳ್ಳಿಯಲ್ಲಿ, ಜಿಮ್ ಟ್ರೈನರ್ ಸಮೀರ್ ಮುಲ್ಲಾ ಯುವತಿಗೆ ಅಮಲು ಪದಾರ್ಥ ನೀಡಿ ಅತ್ಯಾ*ಚಾರ ಎಸಗಿ, ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡಿರುವ ಆರೋಪ ಕೇಳಿಬಂದಿದೆ. ಸಂತ್ರಸ್ತ ಯುವತಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಈ ಪ್ರಕರಣವನ್ನು ಹಿಂದೂ ಸಂಘಟನೆಗಳು 'ಲವ್ ಜಿಹಾದ್' ಎಂದು ಆಕ್ರೋಶ ಹೊರಹಾಕಿವೆ.

2 Min read
Author : Sathish Kumar KH
Published : Apr 03 2026, 03:51 PM IST
Share this Photo Gallery
  • FB
  • TW
  • Linkdin
  • Whatsapp
18
ಹುಬ್ಬಳ್ಳಿ ಲವ್ ಜಿಹಾದ್
Image Credit : Asianet News

ಹುಬ್ಬಳ್ಳಿ ಲವ್ ಜಿಹಾದ್

ಧಾರವಾಡ/ಹುಬ್ಬಳ್ಳಿ (ಏ.03): ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಜಿಮ್ ಟ್ರೈನಿಂಗ್ ಮಾಡುವ ನೆಪದಲ್ಲಿ ಹಿಂದೂ ಹುಡುಗಿಯರನ್ನು ಪ್ರೀತಿ ಮಾಡುವುದಾಗಿ ನಂಬಿಸಿ ಅತ್ಯಾ*ಚಾರ ಮಾಡಿ, ಅದರ ವಿಡಿಯೋ ತೋರಿಸಿ ಬೆದರಿಕೆ ಹಾಕಿ ಲವ್ ಜಿಹಾದ್ ಮಾಡತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. 

ಪ್ರೀತಿಯ ಹೆಸರಿನಲ್ಲಿ ಯುವತಿಯನ್ನು ನಂಬಿಸಿ, ಅಮಲು ಪದಾರ್ಥ ನೀಡಿ ಅತ್ಯಾ*ಚಾರ ಎಸಗಿದ ಜಿಮ್ ಟ್ರೈನರ್ ಸಮೀರ್‌ನ ಕೃತ್ಯವನ್ನು ಸಂತ್ರಸ್ತ ಯುವತಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

28
ಅತ್ಯಾ*ಚಾರದ ಎಳೆಎಳೆ ಬಿಚ್ಚಿಟ್ಟ ಸಂತ್ರಸ್ತೆ
Image Credit : Asianet News

ಅತ್ಯಾ*ಚಾರದ ಎಳೆಎಳೆ ಬಿಚ್ಚಿಟ್ಟ ಸಂತ್ರಸ್ತೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿರುವ ಸಂತ್ರಸ್ತ ಯುವತಿ, ಜಿಮ್ ಟ್ರೈನರ್ ಸಮೀರ್ ಎಸಗಿರುವ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. 'ಸಮೀರ್ ಅಕ್ಕ ತೈಸೀಮ್ ಮುಲ್ಲಾ ನನ್ನ ಸ್ನೇಹಿತೆಯಾಗಿದ್ದರು. ಅವಳ ಮೂಲಕವೇ ಸಮೀರ್ ಪರಿಚಯವಾಗಿದ್ದ. ನಾವು ಸ್ನೇಹಿತರಾಗಿ ಬರ್ತ್‌ಡೇ ಪಾರ್ಟಿ, ವೀಕೆಂಡ್ ಪಾರ್ಟಿಗಳಲ್ಲಿ ಭಾಗಿಯಾಗಿದ್ದೆವು. ಈ ವೇಳೆ ಸಮೀರ್ ಕೂಡ ಬರುತ್ತಿದ್ದರಿಂದ ನಮ್ಮ ನಡುವೆ ಆತ್ಮೀಯತೆ ಬೆಳೆದಿತ್ತು' ಎಂದು ಯುವತಿ ತಿಳಿಸಿದ್ದಾಳೆ.

Related Articles

Related image1
ಮೂಡಿಗೆರೆ ಲವ್ ಜಿಹಾದ್ ಕೇಸಿಗೆ ಟ್ವಿಸ್ಟ್: ಅಪ್ಪ-ಅಮ್ಮನ ಕುಮ್ಮಕ್ಕಿನಿಂದ ಹಿಂದೂ ಯುವತಿ ಮತಾಂತರಕ್ಕೆ ಅಪ್ರಾಪ್ತನ ಯತ್ನ!
Related image2
ಆತ್ಮೀಯವಾಗಿದ್ದ ಹಿಂದೂ ಕುಟುಂಬದ ಯುವತಿ ಜೊತೆಗೆ ಜಿಮ್ ಟ್ರೈನರ್ ಲವ್‌ಜಿಹಾದ್ ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಗಲಾಟೆ!
38
ಪ್ರಜ್ಞೆ ತಪ್ಪಿದಾಗ ನನ್ನ ಮೇಲೆ ಅತ್ಯಾ*ಚಾರ
Image Credit : Asianet News

ಪ್ರಜ್ಞೆ ತಪ್ಪಿದಾಗ ನನ್ನ ಮೇಲೆ ಅತ್ಯಾ*ಚಾರ

'ಒಂದು ದಿನ ತೈಸೀಮ್ ಅವರ ತಮ್ಮ ಸಮೀರ್ ಮುಲ್ಲಾ ತನನ್ನ ಪಿಕ್ ಮಾಡುವುಂತೆ ತನ್ನ ಮನೆಗೆ ಕರೆಸಿಕೊಂಡು ನನಗೆ ಅಮಲು ಪದಾರ್ಥ ಬೆರೆಸಿದ ಪಾನೀಯ ನೀಡಿದ್ದನು. ನಾನು ಪ್ರಜ್ಞೆ ತಪ್ಪಿದಾಗ ನನ್ನ ಮೇಲೆ ಅತ್ಯಾ*ಚಾರ ಎಸಗಿ, ಅದನ್ನು ವಿಡಿಯೋ ಮಾಡಿಕೊಂಡಿದ್ದನು. ಇದು ನನಗೆ ಮೊದಲು ಗೊತ್ತಿರಲಿಲ್ಲ. ನಂತರ ಆತನೇ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್ ಮಾಡಲು ಶುರು ಮಾಡಿದಾಗ ನನ್ನ ಮೇಲಾದ ದೌರ್ಜನ್ಯದ ಅರಿವಾಯಿತು. ಆ ವಿಡಿಯೋ ಇಟ್ಟುಕೊಂಡು ನನಗೆ ಮೋಸ ಮಾಡಿದ್ದಾನೆ' ಎಂದು ಯುವತಿ ಕಣ್ಣೀರು ಹಾಕಿದ್ದಾಳೆ.

48
'ಲವ್ ಜಿಹಾದ್' ಆರೋಪ ಮತ್ತು ಹಲ್ಲೆ:
Image Credit : Asianet News

'ಲವ್ ಜಿಹಾದ್' ಆರೋಪ ಮತ್ತು ಹಲ್ಲೆ:

ಈ ವಿಷಯ ತಿಳಿಯುತ್ತಿದ್ದಂತೆಯೇ ಶ್ರೀರಾಮ ಸೇನೆ ಸಂಘಟನೆ ಕಾರ್ಯಕರ್ತರು ಮಧ್ಯಪ್ರವೇಶಿಸಿದ್ದಾರೆ. ಯುವಕ ಸಮೀರ್‌ನನ್ನು ಹಿಡಿದು ವಿಚಾರಣೆ ನಡೆಸಿದ ಸಂಘಟನೆಯವರು, ನಂತರ ಆತನನ್ನು ಹಳೆ ಹುಬ್ಬಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಜಿಮ್‌ಗಳು ಈಗ ಲವ್ ಜಿಹಾದ್‌ನ ಕೇಂದ್ರಗಳಾಗುತ್ತಿವೆ ಎಂದು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

58
ಆರೋಪ ಮಾಡಿದ ಯುವತಿ ಮನೆಗೆ ನುಗ್ಗಿ ಹಲ್ಲೆ
Image Credit : Asianet News

ಆರೋಪ ಮಾಡಿದ ಯುವತಿ ಮನೆಗೆ ನುಗ್ಗಿ ಹಲ್ಲೆ

ಇನ್ನು ಸಮೀರ್‌ನನ್ನು ಪೊಲೀಸರಿಗೆ ಒಪ್ಪಿಸಿದ್ದರಿಂದ ರೊಚ್ಚಿಗೆದ್ದ ಆತನ ಕುಟುಂಬಸ್ಥರು ಮತ್ತು ಬೆಂಬಲಿಗರು, ವಿಕಾಸ ನಗರದಲ್ಲಿರುವ ಯುವತಿಯ ಮನೆಗೆ ನುಗ್ಗಿ ದಾಂದಲೆ ನಡೆಸಿದ್ದಾರೆ. ಯುವತಿಯ ಪೋಷಕರು ಮತ್ತು ಸಂಬಂಧಿಕರ ಮೇಲೆ ಮನಬಂದಂತೆ ಹಲ್ಲೆ ನಡೆಸಲಾಗಿದ್ದು, 'ನಿಮ್ಮ ಮಗಳೇ ನಮ್ಮ ಹುಡುಗನ ಹಿಂದೆ ಬಂದಿದ್ದಾಳೆ, ಅದಕ್ಕೆ ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ' ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

68
ಪೊಲೀಸ್ ಬಿಗಿ ಬಂದೋಬಸ್ತ್
Image Credit : Asianet News

ಪೊಲೀಸ್ ಬಿಗಿ ಬಂದೋಬಸ್ತ್

ಸದ್ಯ ಸಮೀರ್ ಪೊಲೀಸ್ ವಶದಲ್ಲಿದ್ದಾನೆ. ಯುವತಿಯ ಮನೆಯವರು ತಮಗಾದ ಅನ್ಯಾಯ ಮತ್ತು ಹಲ್ಲೆಯ ವಿರುದ್ಧ ದೂರು ನೀಡಿದ್ದಾರೆ. ಹುಬ್ಬಳ್ಳಿಯ ವಿಕಾಸ ನಗರ ಮತ್ತು ವಿಜಯನಗರದ ಸುತ್ತಮುತ್ತ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಪ್ರೀತಿಯ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

78
ಮೊಬೈಲ್‌ನಲ್ಲಿ ಸ್ಕ್ಯಾನಿಂಗ್ ರಿಪೋರ್ಟ್
Image Credit : Asianet News

ಮೊಬೈಲ್‌ನಲ್ಲಿ ಸ್ಕ್ಯಾನಿಂಗ್ ರಿಪೋರ್ಟ್

ಇನ್ನು ಆರೋಪಿ ಸಮೀರ್ ಮುಲ್ಲಾನ ಮೊಬೈಲ್ ಅನ್ನು ಪರಿಶೀಲನೆ ಮಾಡಿದಾಗ ಅದರಲ್ಲಿ ಹಲವು ಪ್ರಗ್ನೆನ್ಸಿ ಸ್ಕ್ಯಾನಿಂಗ್ ರಿಪೋರ್ಟ್‌ಗಳು ಕೂಡ ಲಭ್ಯವಾಗಿವೆ. ಹಲವು ಹುಡುಗಿಯರನ್ನು ಈತ ಹೀಗೆಯೇ ಅತ್ಯಾ*ಚಾರಕ್ಕೆ ಬಳಸಿಕೊಂಡು ಲವ್ ಜಿಹಾದ್‌ಗೆ ಬಲವಂತ ಮಾಡಿದ್ದಾನೆ ಎಂಬ ಆರೋಪಗಳಿಗೆ ಸಾಕ್ಷಿ ಸಿಕ್ಕಂತಾಗಿವೆ.

88
ಗರ್ಭ ನಿರೋಧಕ ಮಾತ್ರೆಗಳು
Image Credit : Asianet News

ಗರ್ಭ ನಿರೋಧಕ ಮಾತ್ರೆಗಳು

ಜಿಮ್ ಟ್ರೈನರ್ ಆಗಿದ್ದ ಸಮೀರ್ ಮುಲ್ಲಾನ ಬಳಿ ಮಹಿಳೆಯರ ಗರ್ಭ ನಿರೋಧಕ ಮಾತ್ರೆಗಳು ಕೂಡ ಲಭ್ಯವಾಗಿವೆ. ಆದರೆ, ಆತನ ಅಕ್ಕ ತೈಸಿಮ್ ಮುಲ್ಲಾ ನನ್ನ ತಮ್ಮ ಇನ್ನೂ 24 ವರ್ಷದವನು. ಆತನ ಮೇಲೆ ಗಂಭೀರ ಆರೋಪ ಮಾಡುವುದು ಸರಿಯಲ್ಲ. ಗರ್ಭ ನಿರೋಧಕ ಮಾತ್ರೆ ಇಟ್ಟುಕೊಳ್ಳುವ ಪ್ರಮೇಯ ಆತನಿಗಿಲ್ಲ ಎಂದೆಲ್ಲಾ ವಾದ ಮಾಡಿದ್ದಾಳೆ. ಆದರೆ, ಇದೀಗ ಸಂತ್ರಸ್ತೆಯೇ ಅತ್ಯಾ*ಚಾರ ಪ್ರಕರಣದ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರಕರಣ ಮತ್ತಷ್ಟು ರೋಚಕ ತಿರುವು ಪಡೆದುಕೊಂಡಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಹುಬ್ಬಳ್ಳಿ
ಲವ್ ಜಿಹಾದ್
ಪ್ರೀತಿ

Latest Videos
Recommended Stories
Recommended image1
ಚಿತ್ರದುರ್ಗ: ಅತ್ತೆ ಮಗಳನ್ನು ಪ್ರೀತಿಸಿ ರಿಜಿಸ್ಟರ್ ಮದುವೆಯಾದ ಅಳಿಯ, ಮದುವೆ ಒಪ್ಪದ ಪೋಷಕರಿಂದ ರಕ್ತಸಿಕ್ತ ಸಂಧಾನ!
Recommended image2
ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಬಿಗಿಯಾದ ಕಾನೂನು ಉರುಳು: ಲ್ಯಾಂಬೋರ್ಗಿನಿ ಕಾರು ಸೀಜ್, 35 ಲಕ್ಷ ದಂಡ!
Recommended image3
ಹುಬ್ಬಳ್ಳಿ: ಸರಕು ಸಾಗಾಣಿಕೆಯಲ್ಲಿ ನೈಋತ್ಯ ರೈಲ್ವೆ ದೇಶಕ್ಕೆ ಟಾಪ್, 9487 ಕೋಟಿ ರೂ ದಾಟಿದ ಆದಾಯ, ಏನೆಲ್ಲ ಸಾಗಿಸಿದೆ?
Related Stories
Recommended image1
ಮೂಡಿಗೆರೆ ಲವ್ ಜಿಹಾದ್ ಕೇಸಿಗೆ ಟ್ವಿಸ್ಟ್: ಅಪ್ಪ-ಅಮ್ಮನ ಕುಮ್ಮಕ್ಕಿನಿಂದ ಹಿಂದೂ ಯುವತಿ ಮತಾಂತರಕ್ಕೆ ಅಪ್ರಾಪ್ತನ ಯತ್ನ!
Recommended image2
ಆತ್ಮೀಯವಾಗಿದ್ದ ಹಿಂದೂ ಕುಟುಂಬದ ಯುವತಿ ಜೊತೆಗೆ ಜಿಮ್ ಟ್ರೈನರ್ ಲವ್‌ಜಿಹಾದ್ ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಗಲಾಟೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved