ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಒಂಟಿಯಾಗಿರುವ ಗೌರಿ ಎಂಬ ಹೆಣ್ಣು ಜಿರಾಫೆಗೆ ಹೊಸ ಸಂಗಾತಿಯನ್ನು ತರಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಅಮೆರಿಕದಿಂದ ಪ್ರಾಣಿ ವಿನಿಮಯ ಮೂಲಕ ಗಂಡು ಜಿರಾಫೆಯನ್ನು ತರಿಸಿಕೊಳ್ಳಲು ಯತ್ನಿಸಲಾಗುತ್ತಿದೆ.

ಬನ್ನೇರುಘಟ್ಟ: ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳಿಗೂ ಸಂಗಾತಿ ಬೇಕು. ತಮ್ಮದೇ ಜಾತಿಯ ಮತ್ತೊಂದು ಪ್ರಾಣಿಯ ಜೊತೆ ಕಾಲ ಕಳೆಯಬೇಕು. ಆದರೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜಿರಾಫೆಯೊಂದು ಸಂಗಾತಿಯಿಲ್ಲದೆ ಒಂಟಿಯಾಗಿತ್ತು. ಇದೀಗ ಈ ಜಿರಾಫೆಯ ಒಂಟಿತನಕ್ಕೆ ಕೊನೆ ಹಾಡಲು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಮುಂದಾಗಿದ್ದಾರೆ. ಬೇರೆ ಉದ್ಯಾನವನದಿಂದ ಜಿರಾಫೆಯನ್ನು ವಿನಿಮಯ ಮಾಡಿಕೊಳ್ಳಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹಾಗಾದ್ರೆ ಜಿರಾಫೆಗೆ ಯಾವಾಗ ಸಿಗಲಿದೆ ಹೊಸ ಸಂಗಾತಿ?

ಬನ್ನೇರುಘಟ್ಟ ಗೌರಿ ಜಿರಾಫೆಗೆ ಹೊರದೇಶದ ಜೋಡಿ ಕರೆತರಲು ಸಿದ್ಧತೆ

ಹೌದು ದೇಶದ ಪ್ರತಿಷ್ಠಿತ ಬಯೋಲಾಜಿಕಲ್ ಪಾರ್ಕ್ಗಳ ಪೈಕಿಒಂದಾಗಿರುವ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜಿರಾಫೆಯ ಕಥೆಯೇ ಈಗ ವಿಶೇಷ ಸುದ್ದಿಯಾಗಿದೆ. ಈ ಹಿಂದೆ ಗೌರಿ ಎಂಬ ಹೆಣ್ಣು ಜಿರಾಫೆಗೆ ಸಂಗಾತಿಯಾಗಿ ಮೈಸೂರಿನಿಂದ ಯದುನಂದನ ಎಂಬ ಗಂಡು ಜಿರಾಫೆಯನ್ನು ಕರೆತರಲಾಗಿತ್ತು. ಆದರೆ ಅನಾರೋಗ್ಯದಿಂದ ಯದುನಂದನ ಮೃತಪಟ್ಟಿತ್ತು.

ಅಮೆರಿಕದಿಂದ ಪ್ರಾಣಿ ವಿನಿಮಯ ಮಾಡಿಕೊಳ್ಳಲು ಸಕಲ ಸಿದ್ಧತೆ

ಬಳಿಕ ಶಿವಾನಿ ಎಂಬ ಹೆಣ್ಣು ಜಿರಾಫೆಯನ್ನು ಸಂಗಾತಿಯಾಗಿ ಕರೆತರಲಾಗಿತ್ತು. ಆದರೆ 2026ರ ಮೇ ತಿಂಗಳಲ್ಲಿ ಶಿವಾನಿ ಕೂಡ ಮೃತಪಟ್ಟಿತ್ತು. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಒಂಟಿಯಾಗಿ ದಿನ ಕಳೆಯುತ್ತಿದ್ದ ಜಿರಾಫೆಗೆ ಇದೀಗ ಸಂಗಾತಿ ಸಿಗುವ ನಿರೀಕ್ಷೆ ಮೂಡಿದೆ. ಸಂಗಾತಿಯಿಲ್ಲದೆ ಒಂಟಿಯಾಗಿದ್ದ ಜಿರಾಫೆಗೆ ಮತ್ತೊಂದು ಜಿರಾಫೆಯನ್ನು ಕರೆತರುವ ಪ್ರಸ್ತಾವನೆಗೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಪ್ರಾಣಿ ವಿನಿಮಯ ಪದ್ಧತಿಯಡಿ ಬೇರೆ ಉದ್ಯಾನವನದಿಂದ ಜಿರಾಫೆಯನ್ನು ವಿನಿಮಯ ಮಾಡಿಕೊಳ್ಳಲು ಸಿದ್ಧತೆ ನಡೆಯುತ್ತಿದೆ. ಇದರಿಂದ ಜಿರಾಫೆಯ ಒಂಟಿತನಕ್ಕೆ ಮುಕ್ತಿ ಸಿಗುವ ಆಶಾಭಾವನೆ ಮೂಡಿದ್ದು, ಪ್ರಾಣಿ ಪ್ರಿಯರಲ್ಲಿ ಸಂತಸ ಮನೆಮಾಡಿದೆ.

ಇನ್ನೂ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಐದಾರು ಒಂಟಿ ಪ್ರಾಣಿಗಳಿದ್ದು, ಆಸ್ಟ್ರಿಚ್ ರಿಯಾ ಅದ್ರಲ್ಲೂ ಗೌರಿ ಪ್ರಮುಖವಾಗಿ ಜಿರಾಫೆ ಒಂಟಿಯಾಗಿದೆ. ಇದು ಅಪರೂಪದ ಜಿರಾಫೆ ಆಗಿದ್ದು, ಎಲ್ಲಾ ತರದ ಜಿರಾಫೆ ಅಲ್ಲ. ಇದು ಸೌತ್ ಆಫ್ರಿಕಾ ಕಂಡುಬರುವ ಅಪರೂಪದ ಜಿರಾಫೆ. ಈಗಾಗಲೇ ಅಬ್ರಾಡ್ ಮತ್ತು ಏಷ್ಯನ್ ದೇಶಗಳಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕ ಜೊತೆಗೆ ಮಾತುಕತೆಯನ್ನು ಮಾಡುತ್ತಿದ್ದೇವೆ ಆದಷ್ಟು ಬೇಗ ಪ್ರಾಣಿ ವಿನಯ ಮೂಲಕ ಗಂಡು ಜಿರಾಫೆಯನ್ನು ತರಿಸಿಕೊಳ್ಳಲು ಎಲ್ಲ ಪ್ಲಾನ್ ಗಳನ್ನು ಮಾಡಲಾಗಿದೆ. ಟೆಕ್ನಿಕಲ್ ವಿಷಯ ಏನಂದರೆ ಅವರು ಕೇಳುವಂತಹ ಪ್ರಾಣಿಗಳು ನಮ್ಮಲ್ಲಿ ಕೊಡುವುದಕ್ಕೆ ಆಗುತ್ತಿಲ್ಲ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯ ಸೇನ್ ತಿಳಿಸಿದರು.

ಒಟ್ಟಿನಲ್ಲಿ ಬನ್ನೇರುಘಟ್ಟದ ಜಿರಾಫೆಯ ಒಂಟಿ ಜೀವನಕ್ಕೆ ಬ್ರೇಕ್ ಬೀಳುವ ಕಾಲ ಹತ್ತಿರವಾಗಿದೆ. ಹೊಸ ಸಂಗಾತಿಯ ಆಗಮನಕ್ಕಾಗಿ ಪ್ರಾಣಿ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.