MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಬೆಂಗಳೂರಿನಲ್ಲಿ ನಿಮ್ಮ ಮನೆ ಕಾಂಪೌಂಡ್ ಹೇಗಿದೆ? 1.5 ಮೀ.ಗಿಂತ ಎತ್ತರವಿದ್ರೆ ನೆಲಸಮ ಫಿಕ್ಸ್!

ಬೆಂಗಳೂರಿನಲ್ಲಿ ನಿಮ್ಮ ಮನೆ ಕಾಂಪೌಂಡ್ ಹೇಗಿದೆ? 1.5 ಮೀ.ಗಿಂತ ಎತ್ತರವಿದ್ರೆ ನೆಲಸಮ ಫಿಕ್ಸ್!

ರಾಷ್ಟ್ರೀಯ ಕಟ್ಟಡ ಸಂಹಿತೆ ಉಲ್ಲಂಘಿಸಿ ನಿರ್ಮಿಸಲಾದ 1.5 ಮೀಟರ್‌ಗಿಂತ ಎತ್ತರದ ಕಾಂಪೌಂಡ್‌ಗಳನ್ನು ಬೆಂಗಳೂರಿನಲ್ಲಿ ನೆಲಸಮಗೊಳಿಸಲು ಜಿಬಿಎ ಮುಂದಾಗಿದೆ. ಸಚಿವರ ನಿವಾಸಗಳು ಮತ್ತು ಸರ್ಕಾರಿ ಅತಿಥಿಗೃಹಗಳೂ ಸೇರಿದಂತೆ ನಿಯಮ ಮೀರಿದ ಎಲ್ಲಾ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಿ, ಕ್ರಮ ಕೈಗೊಳ್ಳಲಾಗುತ್ತಿದೆ.

2 Min read
Author : Gowthami K
Published : Jun 12 2026, 10:03 AM IST
Share this Photo Gallery
  • FB
  • TW
  • Linkdin
  • Whatsapp
14
ವರದಿ: ಉಮಾಶಂಕರ ಕಾರ್ಯ
Image Credit : Asianet News

ವರದಿ: ಉಮಾಶಂಕರ ಕಾರ್ಯ

ಬೆಂಗಳೂರು: ಮನೆ ಸುಭದ್ರವಾಗಿರಲೆಂದು ಮುಗಿಲೆತ್ತರದ ಕಾಂಪೌಂಡ್ ನಿರ್ಮಿಸಿದ್ದರೆ ಅದು ರಾಷ್ಟ್ರೀಯ ಕಟ್ಟಡ ಸಂಹಿತೆ ಉಲ್ಲಂಘನೆಯಾಗಲಿದೆ ಎಂದು ನಗರದಲ್ಲಿ ಅಳತೆ ಮೀರಿ ನಿರ್ಮಿಸಿರುವ ಕಾಂಪೌಂಡ್‌ಗಳನ್ನು ನೆಲಸಮ ಮಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಆದರೆ, ನಗರದಲ್ಲಿ ಹಲವು ಸಚಿವರು, ಅಧಿಕಾರಿಗಳ ಮನೆ ಅತಿಥಿಗೃಹಗಳ ಕಾಂಪೌಂಡ್‌ಗಳೇ 8 ರಿಂದ 10 ಅಡಿ ಎತ್ತರ ನಿರ್ಮಾಣವಾಗಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ರಾಷ್ಟ್ರೀಯ ಕಟ್ಟಡ ಸಂಹಿತೆ ಪ್ರಕಾರ ಯಾವುದೇ ಮನೆ, ಅಪಾರ್ಟ್‌ಮೆಂಟ್, ಖಾಸಗಿ ಅತಿಥಿಗೃಹ, ಸರ್ಕಾರಿ ಅತಿಥಿಗೃಹ, ಹೋಟೆಲ್, ಕಲ್ಯಾಣ ಮಂಟಪ ಹೀಗೆ ಯಾವುದೇ ಕಟ್ಟಡವಿರಲಿ ಇವುಗಳ ಸುತ್ತ ಭದ್ರತೆಗಾಗಿ ನಿರ್ಮಿಸುವ ಕಾಂಪೌಂಡ್‌ಗಳ ಎತ್ತರ ರಸ್ತೆ ಮಟ್ಟಕ್ಕಿಂತ 1.5 ಮೀಟರ್ ಎತ್ತರ ಮಾತ್ರ ಇರಬೇಕು.1.5 ಮೀಟರ್ ಎತ್ತರದ ನಂತರ 0.9 ಮೀಟರ್ ಗ್ರಿಲ್ಸ್ ನಿರ್ಮಾಣ ಮಾಡಬಹುದು. ಆದರೆ, ಆ ಗ್ರಿಲ್ಸ್ ಒಳಗೆ ಗಾಳಿ ಸರಾಗವಾಗಿ ಸಂಚರಿಸುವಂತಿರಬೇಕು ಎಂದು ತಿಳಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ರಾಷ್ಟ್ರೀಯ ಕಟ್ಟಡ ಸಂಹಿತೆ ನಿಯಮ
Image Credit : Asianet News

ರಾಷ್ಟ್ರೀಯ ಕಟ್ಟಡ ಸಂಹಿತೆ ನಿಯಮ

ರಾಷ್ಟ್ರೀಯ ಕಟ್ಟಡ ಸಂಹಿತೆಯ ನಿಯಮಗಳನ್ನೇ ಅಧಿಕೃತವಾಗಿ ಪಾಲಿಸುತ್ತಿರುವ ಜಿಬಿಎ ಅಧಿಕಾರಿಗಳು ಮೊದಲು ಸಂಹಿತೆ ಉಲ್ಲಂಘಿಸಿದ ಕಾಂಪೌಂಡ್ ಮಾಲೀಕರಿಗೆ ನೋಟೀಸ್ ನೀಡಿ ನಂತರ ಕಾಂಪೌಂಡ್ ಕೆಡವಲು ಸೂಚಿಸುತ್ತದೆ. ಕೆಡವದಿದ್ದರೆ ಜಿಬಿಎ ಅಧಿಕಾರಿಗಳಿಗೆ ಕೆಡವುವ ಅಧಿಕಾರ ಹೊಂದಿದ್ದು, ಅದರ ವೆಚ್ಚವನ್ನು ಮಾಲೀಕರು ಭರಿಸುವಂತೆ ಮಾಡುವ ಅಧಿಕಾರವಿದೆ.

ಅಲ್ಲದೆ, ನಗರದ ಕುಮಾರ ಕೃಪ ಅತಿಥಿ ಗೃಹದಲ್ಲೂ 8 ಅಡಿ ಎತ್ತರದ ಕಾಂಪೌಂಡ್ ನಿರ್ಮಿಸಲಾಗುತ್ತಿದೆ. ಇದು ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಕಟ್ಟಡವಾಗಿದೆ. ಈ ಅತಿಥಿಗೃಹದ ಸುತ್ತಲೂ 1.5 ಮೀಟರ್ ಇದ್ದ ಎತ್ತರವನ್ನು ಈಗ 2 ಮೀಟರ್‌ಗೆ ಹೆಚ್ಚಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆ ಈ ಎತ್ತರವನ್ನು 10 ಅಡಿಗೆ ಎತ್ತರಿಸಲು ನಿರ್ಧರಿಸಿದ್ದು, ಸದ್ಯಕ್ಕೆ 8 ಅಡಿ ಎತ್ತರಿಸಿದೆ. ಇದು ರಾಷ್ಟ್ರೀಯ ಕಟ್ಟಡ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ.

Related Articles

Related image1
ಗ್ರೇಟರ್ ಬೆಂಗಳೂರು ಆಸ್ತಿ ತೆರಿಗೆ: ಪ್ರಸಕ್ತ ಹಣಕಾಸು ವರ್ಷದ ಎರಡೂವರೆ ತಿಂಗಳಲ್ಲೇ ದಾಖಲೆಯ ₹2,949 ಕೋಟಿ ಸಂಗ್ರಹ
Related image2
ಗ್ರೇಟರ್ ಬೆಂಗಳೂರು ಚುನಾವಣೆ ಮತ್ತೆ ಮುಂದೂಡಿಕೆಯಾಗ್ತಾ? ಸಿಬ್ಬಂದಿ ಕೊರತೆನಾ… ಇಲ್ಲ ಬೇರೆ ಕಾರಣವಾ? ಸುಪ್ರೀಂ ಮೆಟ್ಟಿಲೇರಿದ ಸರ್ಕಾರದ ಅಸಲಿ ಕಾರಣವೇನು?
34
ಕಟ್ಟಡಗಳ ಮಾಲೀಕರಿಗೆ ನೋಟಿಸ್
Image Credit : Asianet News

ಕಟ್ಟಡಗಳ ಮಾಲೀಕರಿಗೆ ನೋಟಿಸ್

ಕ್ರೆಸೆಂಟ್ ರಸ್ತೆಯಲ್ಲಿರುವ ಕೆಲ ಸಚಿವರ ವಸತಿ ಕಟ್ಟಡದ ಕಾಂಪೌಂಡ್ ಸುಮಾರು 8-9 ಅಡಿ ಎತ್ತರವಿದೆ. ಇದಲ್ಲದೆ, ನಗರದ ಹಲವು ಖಾಸಗಿ ಕಟ್ಟಡಗಳ ಎತ್ತರ 10 ರಿಂದ 15 ಅಡಿ ಇದೆ. ಈಗಾಗಲೇ ಪೂರ್ವ ಪಾಲಿಕೆ ವಿಭಾಗದಲ್ಲಿ ಕಟ್ಟಡ ಸಂಹಿತೆ ಉಲ್ಲಂಘಿಸಿ ನಿರ್ಮಾಣ ಮಾಡಿರುವ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಲಾಗುತ್ತಿದ್ದು, ಕಟ್ಟಡ ನೆಲಸಮ ಮಾಡಲಾಗುತ್ತಿದೆ.

ಈ ಸಂಬಂಧ ಹೆಚ್ಚುವರಿ ಆಯುಕ್ತ ಎಲ್.ಎಸ್.ಸುಧಾಕರ್ ಕನ್ನಡಪ್ರಭ ಜೊತೆ ಮಾತನಾಡಿ, ರಾಷ್ಟ್ರೀಯ ಕಟ್ಟಡ ಸಂಹಿತೆ ಪ್ರಕಾರ 1.5 ಎತ್ತರಕ್ಕಿಂತ ಹೆಚ್ಚಿದ್ದರೆ, ಅದು ಸರ್ಕಾರಿ ಕಟ್ಟಡವಿರಲಿ ಅಥವಾ ಖಾಸಗಿ ಕಟ್ಟಡವಿರಲಿ ನೋಟೀಸ್ ನೀಡಿ ಕೆಡವಲಾಗುವುದು. ನೀತಿ ಸಂಹಿತೆ ಎಲ್ಲರಿಗೂ ಒಂದೇ ಎಂದರು.

ಕುಮಾರಕೃಪ ಅತಿಥಿ ಗೃಹ ಸೇರಿದಂತೆ ನಗರದ ಸರ್ಕಾರಿ ವಸತಿಗೃಹ ಕಟ್ಟಡಗಳ ಉಸ್ತುವಾರಿ ಎಂಜಿನಿಯರ್ ನರೇಂದ್ರಕುಮಾರ್ ಅವರನ್ನು ಸಂಪರ್ಕಿಸಿದರೂ ಅವರು ಮಾಹಿತಿ ನೀಡಲಿಲ್ಲ.

44
ಬೆಂಗಳೂರು ವ್ಯಾಪ್ತಿಯಲ್ಲಿ ಬಹುಪಾಲು ಕಟ್ಟಡಗಳಲ್ಲಿ ನಿಯಮ ಉಲ್ಲಂಘನೆ
Image Credit : Asianet News

ಬೆಂಗಳೂರು ವ್ಯಾಪ್ತಿಯಲ್ಲಿ ಬಹುಪಾಲು ಕಟ್ಟಡಗಳಲ್ಲಿ ನಿಯಮ ಉಲ್ಲಂಘನೆ

ಬೆಂಗಳೂರು ವ್ಯಾಪ್ತಿಯಲ್ಲಿ 98 ಟೆಕ್ ಪಾರ್ಕ್‌ಗಳು, 3,876 ಐಟಿ ಕಂಪನಿಗಳು, 103 ಬಿಟಿ ಕಂಪನಿಗಳು, 4500ಕ್ಕೂ ಹೆಚ್ಚು ವಾಣಿಜ್ಯ ಸಂಕೀರ್ಣಗಳು, 217 ಮಾಲ್ ಮತ್ತು ಮಲ್ಟಿಫ್ಲೆಕ್ಸ್‌ಗಳು, 1.10 ಲಕ್ಷ ಕೈಗಾರಿಕಾ ಕಟ್ಟಡಗಳು, 540 ಸ್ಟಾರ್ ಹೋಟೆಲ್‌ಗಳು, 2,850 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಹಾಗೂ 1,350 ಕಲ್ಯಾಣ ಮಂಟಪಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಬಹುಪಾಲು ಕಟ್ಟಡಗಳಲ್ಲಿ ರಾಷ್ಟ್ರೀಯ ಕಟ್ಟಡ ಸಂಹಿತೆ ಪ್ರಕಾರ ಕಾಂಪೌಂಡ್ ನಿರ್ಮಾಣವಾಗಿಲ್ಲ ಎಂದು ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದರು.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ
ಬೆಂಗಳೂರು ಮಹಾನಗರ
ಬೆಂಗಳೂರು
ಸುದ್ದಿ

Latest Videos
Recommended Stories
Recommended image1
ಶಿವಮೊಗ್ಗದಲ್ಲಿ ವಿಚಿತ್ರ ಘಟನೆ: ಕೈದಿ ಮಾತು ಕೇಳಿ ಪತ್ನಿಗೆ ಬೆದರಿಸಲು ಬಂದು ಗೂಸಾ ತಿಂದ ಬುರ್ಖಾಧಾರಿಗಳು!
Recommended image2
2 ಇಲಾಖೆಗಳ ವಿರುದ್ಧ 19 ವರ್ಷಗಳ ಹೋರಾಟ, ಬೆಂಗಳೂರಿನ ಆಟೋ ಚಾಲಕನಿಗೆ ₹25 ಲಕ್ಷ ಪರಿಹಾರ ನೀಡಲು ಸುಪ್ರೀಂ ಆದೇಶ
Recommended image3
300 ಮಕ್ಕಳಿದ್ದಾರೆ ಶಿಕ್ಷಕರಿಲ್ಲ, ಒಂದೇ ಕೊಠಡಿ ಎರಡು ತರಗತಿಗಳಿಗೆ ಪಾಠ, ಇದು ಸರ್ಕಾರಿ ಶಾಲೆಯೋ, ಕುರಿದೊಡ್ಡಿಯೋ?
Related Stories
Recommended image1
ಗ್ರೇಟರ್ ಬೆಂಗಳೂರು ಆಸ್ತಿ ತೆರಿಗೆ: ಪ್ರಸಕ್ತ ಹಣಕಾಸು ವರ್ಷದ ಎರಡೂವರೆ ತಿಂಗಳಲ್ಲೇ ದಾಖಲೆಯ ₹2,949 ಕೋಟಿ ಸಂಗ್ರಹ
Recommended image2
ಗ್ರೇಟರ್ ಬೆಂಗಳೂರು ಚುನಾವಣೆ ಮತ್ತೆ ಮುಂದೂಡಿಕೆಯಾಗ್ತಾ? ಸಿಬ್ಬಂದಿ ಕೊರತೆನಾ… ಇಲ್ಲ ಬೇರೆ ಕಾರಣವಾ? ಸುಪ್ರೀಂ ಮೆಟ್ಟಿಲೇರಿದ ಸರ್ಕಾರದ ಅಸಲಿ ಕಾರಣವೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved