ಕಲಬುರಗಿ: ಬೆಳ್ಳಂಬೆಳಿಗ್ಗೆ ಜವರಾಯನ ಅಟ್ಟಹಾಸ, ಗರ್ಭಿಣಿ ಸೇರಿ ಒಂದೇ ಕುಟುಂಬದ ಏಳು ಜನರ ದುರ್ಮರಣ
ಕಲಬುರಗಿ(ಸೆ.27): ಎಲ್ಲವೂ ಅವರು ಅಂದುಕೊಂಡಂತೆ ಆಗಿದ್ದರೆ ವಾಹನ ಆಸ್ಪತ್ರೆ ತಲುಪಿ ಗರ್ಭಿಣಿ ಮುದ್ದಾದ ಮಗುವಿಗೆ ಜನ್ಮ ನೀಡಬೇಕಿತ್ತು. ಆದರೆ ವಿಧಿಯಾಟ ಬಲ್ಲವರಾರು? ಆ ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದ ವಾಹನ ಅಪಘಾತಕ್ಕೀಡಾಗಿ ಗರ್ಭಿಣಿ ಸೇರಿ ಅದರಲ್ಲಿದ್ದ 7 ಜನ ಧಾರುಣವಾಗಿ ಸಾವಿಗೀಡಾದ ಘಟನೆ ನಗರದ ಆಳಂದ ರಸ್ತೆಯ ಸಾವಳಗಿ ಬಳಿ ಇಂದು(ಭಾನುವಾರ) ನಡೆದಿದೆ.
ಕಲಬುರಗಿ ಹೊರವಲಯದ ಆಳಂದ ರಸ್ತೆಯ ಸಾವಳಗಿ ಬಳಿ ನಡೆದ ಭೀಕರ ಅಪಘಾತ
ಗರ್ಭಿಣಿಯನ್ನ ಹೆರಿಗೆಗಾಗಿ ಆಳಂದ ಪಟ್ಟಣದಿಂದ ಕಲಬುರಗಿಗೆ ಕರೆದುಕೊಂಡು ಹೋಗುವಾಗ ನಡೆದ ದುರ್ಘಟನೆ
ಕಾರಿನ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ
ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಪಲ್ಟಿಯಾದ ಟ್ರಕ್
ಅತೀ ವೇಗದಿಂದ ಬಂದ ಕಾರು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಏಳು ಜನರ ಸಾವು
ದುರ್ಘಟನೆಯಲ್ಲಿ ಓರ್ವ ಗರ್ಭಿಣಿ ಸೇರಿ ನಾಲ್ವರು ಮಹಿಳೆಯರು, ಮೂರು ಜನ ಪುರಷರ ದುರ್ಮರಣ
ಅಪಘಾತದಲ್ಲಿ ಮೃತರಾದವರನ್ನ ಇರ್ಫಾನಾ ಬೇಗಂ(25) ಗರ್ಭಿಣಿ, ರುಚಿಯಾ ಬೇಗಂ(50) , ಅಬೇದಾಬಿ ಬೇಗಂ(50), ಮುನೀರ್(28), ಮಹಮ್ಮದ್ ಅಲಿ(38),ಶೌಕತ್ ಅಲಿ(29), ಜಯಚುನಬಿ(60) ಎಂದು ಗುರುತಿಸಲಾಗಿದೆ.
ಮೃತರನ್ನ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿವಾಸಿಗಳು ಎಂದು ತಿಳಿದು ಬಂದಿದೆ.
ಈ ಸಂಬಂಧ ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು