MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Yash Dharmasthala Visit
NICE Land Row
BJP vs Minister B Nagendra
Mangaluru Railway Division
Viral UPSC Interview Question
Airport Privatisation India
Doddaballapur-Dabaspet Kwin City
Indian Space Sector
Gurmeet Ram Rahim
Karnataka Assembly Speaker
India Sugar Prices
Government KPS Schools
Central Government Jobs
Karnataka SIR 2026
  • Home
  • Karnataka Districts
  • ಬಸ್ಸಿನ ಮೇಲೆ ಡಿ-ಗ್ಯಾಂಗ್ ಕ್ರೇಜ್: ಚಿಕ್ಕಮಗಳೂರಿನಲ್ಲಿ ದೇಶದ್ರೋಹಿಯನ್ನು ಹೀರೋ ರೀತಿ ಬಿಂಬಿಸಿದ ಬಸ್ ಜಪ್ತಿ!

ಬಸ್ಸಿನ ಮೇಲೆ ಡಿ-ಗ್ಯಾಂಗ್ ಕ್ರೇಜ್: ಚಿಕ್ಕಮಗಳೂರಿನಲ್ಲಿ ದೇಶದ್ರೋಹಿಯನ್ನು ಹೀರೋ ರೀತಿ ಬಿಂಬಿಸಿದ ಬಸ್ ಜಪ್ತಿ!

ಚಿಕ್ಕಮಗಳೂರಿನಲ್ಲಿ, ಅಂಡರ್ ವರ್ಲ್ಡ್ ಡಾನ್ ದಾವುದ್ ಇಬ್ರಾಹಿಂನನ್ನು ವೈಭವೀಕರಿಸುವ ಚಿತ್ರ ಮತ್ತು ಬರಹಗಳಿದ್ದ ತಮಿಳುನಾಡು ಮೂಲದ ಖಾಸಗಿ ಬಸ್ಸನ್ನು ಹಿಂದೂ ಸಂಘಟನೆಗಳು ತಡೆಹಿಡಿದಿವೆ. ಈ ಘಟನೆಯ ನಂತರ, ಪೊಲೀಸರು ಸ್ಥಳಕ್ಕೆ ಆಗಮಿಸಿ ಬಸ್ಸನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

1 Min read
Author : Santosh Naik
Published : Mar 26 2026, 04:49 PM IST
Share this Photo Gallery
  • FB
  • TW
  • Linkdin
  • Whatsapp
16
ಅಂಡರ್ ವರ್ಲ್ಡ್ ಡಾನ್ ವೈಭವೀಕರಣ
Image Credit : X

ಅಂಡರ್ ವರ್ಲ್ಡ್ ಡಾನ್ ವೈಭವೀಕರಣ

ಚಿಕ್ಕಮಗಳೂರಿನಲ್ಲಿ ಅಂಡರ್ ವರ್ಲ್ಡ್ ಡಾನ್ ದಾವುದ್ ಇಬ್ರಾಹಿಂ ಚಿತ್ರವಿರುವ ತಮಿಳುನಾಡು ಮೂಲದ ಖಾಸಗಿ ಬಸ್ಸನ್ನು ಹಿಂದೂ ಸಂಘಟನೆಗಳು ತಡೆಹಿಡಿದ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ದಾವುದ್ ಚಿತ್ರಣವಿದ್ದ ಬಸ್ ಲಾಕ್
Image Credit : X

ದಾವುದ್ ಚಿತ್ರಣವಿದ್ದ ಬಸ್ ಲಾಕ್

ಅಂಡರ್ ವರ್ಲ್ಡ್ ಡಾನ್ ದಾವುದ್ ಇಬ್ರಾಹಿಂನನ್ನು ಹೀರೊ ರೀತಿ ಬಿಂಬಿಸುವ ಚಿತ್ರ ಹಾಗೂ ಬರಹಗಳಿದ್ದ ತಮಿಳುನಾಡು ಮೂಲದ ಖಾಸಗಿ ಬಸ್ಸನ್ನು ಚಿಕ್ಕಮಗಳೂರಿನ ಎನ್.ಎಂ.ಸಿ. (NMC) ಸರ್ಕಲ್‌ನಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ತಡೆದು ಆಕ್ರೋಶ ಹೊರಹಾಕಿದ್ದಾರೆ.

Related Articles

Related image1
ಚಿಕ್ಕಮಗಳೂರು ರೆಸಾರ್ಟ್‌ನಲ್ಲಿ ನಾಗಾಲ್ಯಾಂಡ್ ಯುವತಿ ದುರಂತ ಅಂತ್ಯ, ಡೈರಿಯಲ್ಲಿ ಮಹತ್ವದ ಸುಳಿವು
Related image2
ಬೆಂಗಳೂರಿನಲ್ಲಿ ಭೀಕರ ಜೋಡಿ ಕೊಲೆ: ಅಮ್ಮನ ಲವ್‌ ಮಾಡ್ತಿದ್ದ ವ್ಯಕ್ತಿಯ ಪತ್ನಿ, ತಮ್ಮನಿಗೆ ಚಾಕು ಇರಿದು ಕೊಂದ ಬಾಲಕ!
36
ಪ್ರಚೋದನಾಕಾರಿ ಸ್ಟಿಕರ್ ಮತ್ತು ಬರಹ
Image Credit : X

ಪ್ರಚೋದನಾಕಾರಿ ಸ್ಟಿಕರ್ ಮತ್ತು ಬರಹ

ಬಸ್ಸಿನ ಮೇಲೆ ‘ಲೈವ್ ಬೈ ಎ ಗನ್, ಡೈ ಬೈ ಎ ಗನ್’ (Live by a gun, Die by a gun) ಎಂಬ ಪ್ರಚೋದನಾಕಾರಿ ಸ್ಟಿಕರ್ ಅಂಟಿಸಲಾಗಿತ್ತು. ಅಲ್ಲದೆ ‘ಕ್ರೈಮ್ ಲಾರ್ಡ್ ಕ್ರಾನಿಕಲ್ಸ್’ ಹಾಗೂ ‘ದಾವುದ್ ದಿ ರಿಯಲ್ ಡಾನ್’ ಎಂಬ ಬರಹಗಳು ಕಂಡುಬಂದಿವೆ.

46
ಡಿ-ಗ್ಯಾಂಗ್ ಪರ ಪೇಂಟಿಂಗ್
Image Credit : X

ಡಿ-ಗ್ಯಾಂಗ್ ಪರ ಪೇಂಟಿಂಗ್

ಬಸ್ಸಿನ ಹಿಂಭಾಗದಲ್ಲಿ ‘ಡಿ ಗ್ಯಾಂಗ್ ಆಫ್ ಮುಂಬೈ’ (D-Gang of Mumbai) ಎಂದು ಬರೆಯಲಾಗಿದ್ದು, ‘ಬಾಂಬೆ ಅಂಡರ್ ವರ್ಲ್ಡ್ ದಾವುದ್ ರಿಯಲ್ ಡಾನ್’ ಎಂದು ಪೇಂಟ್ ಮಾಡಿಸುವ ಮೂಲಕ ದೇಶದ್ರೋಹಿ ಚಟುವಟಿಕೆಯ ಡಾನ್‌ನನ್ನು ವೈಭವೀಕರಿಸಲಾಗಿತ್ತು.

56
ಪೊಲೀಸ್ ವಶಕ್ಕೆ ವಾಹನ
Image Credit : X

ಪೊಲೀಸ್ ವಶಕ್ಕೆ ವಾಹನ

ಬಸ್ಸಿನ ಮೇಲೆ ದಾವುದ್‌ನನ್ನು ಹೀರೋನಂತೆ ಬಿಂಬಿಸಿರುವುದನ್ನು ಕಂಡ ಸಾರ್ವಜನಿಕರು ಮತ್ತು ಸಂಘಟನೆಗಳು ಪ್ರತಿಭಟಿಸಿದ ಬೆನ್ನಲ್ಲೇ, ಪೊಲೀಸರು ಸ್ಥಳಕ್ಕೆ ಧಾವಿಸಿ ಬಸ್ಸನ್ನು ವಶಕ್ಕೆ ಪಡೆದು ಠಾಣೆಯತ್ತ ಕೊಂಡೊಯ್ದಿದ್ದಾರೆ.

66
ಬಸವನಹಳ್ಳಿ ಠಾಣೆಯಲ್ಲಿ ತನಿಖೆ
Image Credit : X

ಬಸವನಹಳ್ಳಿ ಠಾಣೆಯಲ್ಲಿ ತನಿಖೆ

ಪ್ರಸ್ತುತ ಈ ವಿವಾದಿತ ಬಸ್ಸನ್ನು ಚಿಕ್ಕಮಗಳೂರು ನಗರದ ಬಸವನಹಳ್ಳಿ ಪೊಲೀಸ್ ಠಾಣೆಯ ಆವರಣದಲ್ಲಿ ನಿಲ್ಲಿಸಲಾಗಿದ್ದು, ಬಸ್ ಮಾಲೀಕರು ಮತ್ತು ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಕರ್ನಾಟಕ ಸುದ್ದಿ
ಚಿಕ್ಕಮಗಳೂರು
ಅಪಘಾತ
ಸುದ್ದಿ
ಪೊಲೀಸ್

Latest Videos
Recommended Stories
Recommended image1
Now Playing
ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
Recommended image2
'ಮೇ ಹೆಚ್ ಪಿ ಬೋಲ್ ರಹಾ ಹೂಂ...! 2013ರಲ್ಲೇ ಸತ್ತಿದ್ದ ಭೂಗತ ಪಾತಕಿ ಹೇಮಂತ್ ಪೂಜಾರಿ ಬದುಕಿದ್ದಾನಾ?
Recommended image3
SSLC, PUCಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 'ನಮ್ಮೂರ ಹೆಮ್ಮೆ' ಪೌರ ಸನ್ಮಾನ; ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!
Related Stories
Recommended image1
ಚಿಕ್ಕಮಗಳೂರು ರೆಸಾರ್ಟ್‌ನಲ್ಲಿ ನಾಗಾಲ್ಯಾಂಡ್ ಯುವತಿ ದುರಂತ ಅಂತ್ಯ, ಡೈರಿಯಲ್ಲಿ ಮಹತ್ವದ ಸುಳಿವು
Recommended image2
ಬೆಂಗಳೂರಿನಲ್ಲಿ ಭೀಕರ ಜೋಡಿ ಕೊಲೆ: ಅಮ್ಮನ ಲವ್‌ ಮಾಡ್ತಿದ್ದ ವ್ಯಕ್ತಿಯ ಪತ್ನಿ, ತಮ್ಮನಿಗೆ ಚಾಕು ಇರಿದು ಕೊಂದ ಬಾಲಕ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved