MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಭದ್ರಾ ನದಿ ಪ್ರವಾಹ: ಧರ್ಮಸ್ಥಳ ಸಂಘದಲ್ಲಿ ಸಾಲ ಮಾಡಿ ಬೆಳೆದ ಅಡಿಕೆ, ಕಾಫಿ ತೋಟ ಕ್ಷಣಾರ್ಧದಲ್ಲಿ ಕೊಚ್ಚಿಹೋಯ್ತು!

ಭದ್ರಾ ನದಿ ಪ್ರವಾಹ: ಧರ್ಮಸ್ಥಳ ಸಂಘದಲ್ಲಿ ಸಾಲ ಮಾಡಿ ಬೆಳೆದ ಅಡಿಕೆ, ಕಾಫಿ ತೋಟ ಕ್ಷಣಾರ್ಧದಲ್ಲಿ ಕೊಚ್ಚಿಹೋಯ್ತು!

ಚಿಕ್ಕಮಗಳೂರಿನ ಕಳಸ ತಾಲೂಕಿನಲ್ಲಿ ಭದ್ರಾ ನದಿ ಪ್ರವಾಹದಿಂದ ರೈತ ಅಶೋಕ್ ಅವರ ಸಂಪೂರ್ಣ ತೋಟ ನಾಶವಾಗಿದೆ. ಧರ್ಮಸ್ಥಳ ಸಂಘದಿಂದ ಸಾಲ ಪಡೆದು ಬೆಳೆದಿದ್ದ ಕಾಫಿ, ಅಡಿಕೆ ಬೆಳೆಗಳು ನೀರಿನಲ್ಲಿ ಕೊಚ್ಚಿಹೋಗಿದ್ದು, ಮನೆಗೂ ನೀರು ನುಗ್ಗಿ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ರೈತನ ಗೋಳು ನೀವೂ ಕೇಳಿ.

2 Min read
Author : Sathish Kumar KH
Published : Aug 02 2026, 08:18 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ಚಿಕ್ಕಮಗಳೂರು (ಆ.02): ಧರ್ಮಸ್ಥಳ ಸಂಘದಲ್ಲಿ (Dharmasthala Sangha) ಲಕ್ಷಾಂತರ ರೂ. ಸಾಲವನ್ನು ಮಾಡಿ, ಹೊಟ್ಟೆಬಟ್ಟೆ ಕಟ್ಟಿ ಮನೆಯ ಮುಂದೆ ತೆಂಗು, ಅಡಿಕೆ, ಕಾಫಿ, ಬಾಳೆ, ಏಲಕ್ಕಿ ಬೆಳೆಯನ್ನು ಬೆಳೆದಿದ್ದೆವು. ಇಷ್ಟು ವರ್ಷಗಳ ಶ್ರಮ ಇನ್ನೇನು ಫಲ ಕೊಡುತ್ತಿದೆ ಎನ್ನುವ ಈ ವರ್ಷದಲ್ಲಿ ಭಾರೀ ಮಳೆಯಿಂದಾಗಿ ಭದ್ರಾ ನದಿ (Bhadra River flood)  ಉಕ್ಕಿ ಹರಿದು ಕೇವಲ 2 ಗಂಟೆಗಳಲ್ಲಿ ಎಲ್ಲ ಬೆಳೆ ನಷ್ಟವಾಗಿದೆ. ಲಕ್ಷಾಂತರ ರೂ. ಸಾಲವನ್ನೂ ತೀರಿಸುವ ಒಂದೇ ಒಂದು ಆಸರೆಯೂ ದೂವರಾಗಿದ್ದು, ಬದುಕೇ ದುಸ್ತರವಾಗಿದೆ ಎಂದು ರೈತರು (Chikkamagaluru Farmer) ಗೋಳಾಡುವ ದೃಶ್ಯ ಮಾತ್ರ ನೋಡುಗರ ಕಣ್ಣಂಚಲ್ಲಿ ನೀರು ತರಿಸುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : Asianet News

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಕಳಸ (Kalasa) ತಾಲೂಕಿನ ಸಂಸೆ (Samse) ಸಮೀಪದ ಹೊಸಮಠ (Hosamatha) ಗ್ರಾಮದಲ್ಲಿ ಭಾರೀ ಮಳೆ (Heavy Rain) ಮತ್ತು ಭದ್ರಾ (Bhadra River) ನದಿಯ ಪ್ರವಾಹ (Flood) ರೈತ ಕುಟುಂಬದ ಬದುಕನ್ನೇ ಅಸ್ತವ್ಯಸ್ತಗೊಳಿಸಿದೆ. ಭದ್ರಾ ನದಿಯ ನೀರು ಏಕಾಏಕಿ ಕೃಷಿ ತೋಟಕ್ಕೆ ನುಗ್ಗಿದ ಪರಿಣಾಮ ಕಾಫಿ (Coffee), ಅಡಿಕೆ (Arecanut), ಬಾಳೆ (Banana) ಹಾಗೂ ಏಲಕ್ಕಿ (Cardamom) ಬೆಳೆಗಳು ಸಂಪೂರ್ಣ ನಾಶವಾಗಿವೆ. ಜೊತೆಗೆ ರೈತನ ಮನೆಗೂ ನೀರು ನುಗ್ಗಿದ್ದು, ದವಸ-ಧಾನ್ಯ ಹಾಗೂ ಮನೆಯೊಳಗಿನ ಸಾಮಗ್ರಿಗಳೂ ನಾಶವಾಗಿವೆ. ಈ ಮೂಲಕ ರೈತನ ಕುಟುಂಬದ ಬದುಕು ಅಕ್ಷರಶಃ ಬೀದಿಗೆ ಬಂದಿದೆ.

Related Articles

Related image1
ಕೊಡಗಿನಲ್ಲಿ ಮಳೆ ಅಬ್ಬರ: ಕಾವೇರಿ ಅಬ್ಬರಕ್ಕೆ ಭಾಗಮಂಡಲ ಜಲಾವೃತ, ನಾಪೋಕ್ಲು ರಸ್ತೆ ಸಂಪರ್ಕ ಕಡಿತ
Related image2
Coastal Karnataka Rain Crisis : ಮಕ್ಕಳಂತೆ ಬೆಳೆಸಿದ 800 ಅಡಿಕೆ ಮರಗಳನ್ನು ಜೆಸಿಬಿಯಿಂದ ನೆಲಸಮ ಮಾಡಿಸಿದ ರೈತ!
36
Image Credit : Asianet News

ಹೊಸಮಠ ಗ್ರಾಮದ ರೈತ ಅಶೋಕ್ (Ashok) ಅವರು ಹಲವು ವರ್ಷಗಳ ಶ್ರಮದಿಂದ ಬೆಳೆಸಿದ್ದ ತೋಟ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿದೆ. ಮಣ್ಣು ಕೊಚ್ಚಿಕೊಂಡು ಹೋದ ಪರಿಣಾಮ ಬುಡ ಸಮೇತ ಕಾಫಿ (Coffee) ಮತ್ತು ಅಡಿಕೆ (Arecanut) ಸಸಿಗಳು ನೆಲಕ್ಕುರುಳಿದ್ದು, ಫಸಲಿಗೆ (Harvest) ಬಂದಿದ್ದ ಬೆಳೆ ಸಂಪೂರ್ಣ ಹಾಳಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಕೃಷಿ (Agriculture) ಹಾನಿಯಾಗಿರುವುದಾಗಿ ಕುಟುಂಬ ಹೇಳಿಕೊಂಡಿದೆ.

46
Image Credit : Asianet News

ಧರ್ಮಸ್ಥಳ ಸಂಘದಿಂದ ಸಾಲ ಪಡೆದು ತೋಟ ಅಭಿವೃದ್ಧಿ

ಅಶೋಕ್ ಅವರು ಧರ್ಮಸ್ಥಳ ಸಂಘ (Dharmasthala Sangha)ದಿಂದ ಸಾಲ (Loan) ಪಡೆದು ತೋಟವನ್ನು ಅಭಿವೃದ್ಧಿಪಡಿಸಿದ್ದರು. ಆದರೆ ಒಂದೇ ದಿನದ ಪ್ರವಾಹ (Flood) ಅವರ ಹಲವು ವರ್ಷಗಳ ಪರಿಶ್ರಮವನ್ನು ಮಣ್ಣಿನ ಪಾಲು ಮಾಡಿದೆ. ತೋಟದ ಈಗಿನ ಸ್ಥಿತಿಯನ್ನು ಕಂಡು ಅಶೋಕ್ ದಂಪತಿ ಕಣ್ಣೀರಿಟ್ಟಿದ್ದು, ಬದುಕು ಮತ್ತೆ ಹೇಗೆ ಕಟ್ಟಿಕೊಳ್ಳುವುದು ಎಂಬ ಆತಂಕದಲ್ಲಿದ್ದಾರೆ. 

ಪ್ರವಾಹದ ನೀರು (Flood Water) ತೋಟಕ್ಕೆ ಮಾತ್ರ ಸೀಮಿತವಾಗದೆ ಮನೆಯೊಳಗೂ ನುಗ್ಗಿದೆ. ಇದರಿಂದ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು (Household Items), ಅಗತ್ಯ ಸಾಮಗ್ರಿಗಳು ಹಾಗೂ ದೈನಂದಿನ ಬಳಕೆಯ ವಸ್ತುಗಳೂ ಹಾನಿಗೊಳಗಾಗಿವೆ. ಕುಟುಂಬ ಇದೀಗ ತೀವ್ರ ಸಂಕಷ್ಟವನ್ನು ಎದುರಿಸುತ್ತಿದೆ.

56
Image Credit : Asianet News

ಸ್ಥಳೀಯ ಗ್ರಾಮಸ್ಥರು ಕೂಡ ಸರ್ಕಾರ (Government) ತಕ್ಷಣ ಹಾನಿಯ ಸಮೀಕ್ಷೆ (Survey) ನಡೆಸಿ ಸೂಕ್ತ ಪರಿಹಾರ (Compensation) ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ. ಮಳೆ (Rain) ಮತ್ತು ಪ್ರವಾಹದ (Flood) ಹೊಡೆತಕ್ಕೆ ಕೃಷಿಯನ್ನೇ ನಂಬಿಕೊಂಡಿರುವ ಕುಟುಂಬಗಳ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಶೀಘ್ರ ಆರ್ಥಿಕ ನೆರವು (Financial Assistance) ನೀಡಬೇಕೆಂದು ಒತ್ತಾಯಿಸಿದ್ದಾರೆ.

66
Image Credit : Asianet News

ಮಲೆನಾಡು (Malnad) ಭಾಗದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ (Heavy Rain) ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ರೈತರು ಹಾಗೂ ನದಿ ತೀರದ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ. ಸ್ಥಳೀಯ ಆಡಳಿತ (District Administration) ಕೂಡ ಹಾನಿಯ ವಿವರಗಳನ್ನು ಸಂಗ್ರಹಿಸುವ ಕಾರ್ಯ ಆರಂಭಿಸಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಚಿಕ್ಕಮಗಳೂರು
ಕರ್ನಾಟಕ ಮಳೆ
ಕರ್ನಾಟಕದ ನದಿಗಳು
ಪ್ರವಾಹ
ರೈತರು
Latest Videos
Recommended Stories
Recommended image1
ತೀರ್ಥಹಳ್ಳಿಯಲ್ಲಿ ಗುಡ್ಡ ಕುಸಿತ ದುರಂತ: ಕೊಪ್ಪಳದ 4 ವರ್ಷದ ಮಗು ಸೇರಿ ಮೂವರು ಸಾವು
Recommended image2
ವಿಜಯಪುರದಲ್ಲಿ ನಡೆದ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ?; ಲಾಠಿ ಚಾರ್ಜ್ ಖಂಡಿಸಿದ ಬಿಜೆಪಿ ಮುಖಂಡ ವಿಜುಗೌಡ
Recommended image3
ಸಲಿಂಗ ಕಾಮದ ಆಸೆ ಹುಟ್ಟಿಸಿ ಲಕ್ಷ ಲಕ್ಷ ಲೂಟಿ.. ಬೆಂಗಳೂರಲ್ಲಿ ಸೀಕ್ರೆಟ್ ಗ್ಯಾಂಗ್ ಆಕ್ಟೀವ್
Related Stories
Recommended image1
ಕೊಡಗಿನಲ್ಲಿ ಮಳೆ ಅಬ್ಬರ: ಕಾವೇರಿ ಅಬ್ಬರಕ್ಕೆ ಭಾಗಮಂಡಲ ಜಲಾವೃತ, ನಾಪೋಕ್ಲು ರಸ್ತೆ ಸಂಪರ್ಕ ಕಡಿತ
Recommended image2
Coastal Karnataka Rain Crisis : ಮಕ್ಕಳಂತೆ ಬೆಳೆಸಿದ 800 ಅಡಿಕೆ ಮರಗಳನ್ನು ಜೆಸಿಬಿಯಿಂದ ನೆಲಸಮ ಮಾಡಿಸಿದ ರೈತ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved