MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಲವ್ ಮಾಡಿದ ಜೋಡಿಗೆ ಮದುವೆ ಮಾತುಕತೆಗೆ ಬಂದವರು ಚಾಕು, ಚೂರಿ, ಚೇರಿನಿಂದ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದರು!

ಲವ್ ಮಾಡಿದ ಜೋಡಿಗೆ ಮದುವೆ ಮಾತುಕತೆಗೆ ಬಂದವರು ಚಾಕು, ಚೂರಿ, ಚೇರಿನಿಂದ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದರು!

ಚಾಮರಾಜನಗರದ ಕೊಳ್ಳೇಗಾಲದಲ್ಲಿ ನಡೆಯಬೇಕಿದ್ದ ಮದುವೆಯೊಂದು ವಧು-ವರರ ಕುಟುಂಬಗಳ ನಡುವಿನ ಗಲಾಟೆಯಿಂದ ರಣರಂಗವಾಗಿದೆ. ಚಿನ್ನಾಭರಣ ಮತ್ತು ಕಾರಿನ ಬೇಡಿಕೆ ವಿಚಾರವಾಗಿ ನಡೆದ ಸಂಘರ್ಷದಲ್ಲಿ ಐವರು ತೀವ್ರವಾಗಿ ಗಾಯಗೊಂಡಿದ್ದು, ಪ್ರೀತಿ ಮದುವೆ ಮುರಿದುಬಿದ್ದಿದೆ.

2 Min read
Author : Sathish Kumar KH
Published : Apr 29 2026, 04:48 PM IST
Share this Photo Gallery
  • FB
  • TW
  • Linkdin
  • Whatsapp
15
ರಣಾಂಗಣವಾದ ಮದುವೆ
Image Credit : Asianet News

ರಣಾಂಗಣವಾದ ಮದುವೆ

ಚಾಮರಾಜನಗರ (ಏ.29): ಮದುವೆ ಎಂದರೆ ಅಲ್ಲಿ ಸಂಭ್ರಮ, ಸಡಗರ ಇರಬೇಕು. ಆದರೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದ ಮದುವೆಯೊಂದು ರಣಾಂಗಣವಾಗಿ ಮಾರ್ಪಟ್ಟಿದೆ. ವಧು-ವರನ ಕುಟುಂಬಸ್ಥರ ನಡುವೆ ನಡೆದ ಭೀಕರ ಗಲಾಟೆಯಲ್ಲಿ ಪರಸ್ಪರ ಚಾಕು ಇರಿತ ನಡೆದಿದ್ದು, ಐವರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

25
ಘಟನೆಯ ಹಿನ್ನೆಲೆ:
Image Credit : Asianet News

ಘಟನೆಯ ಹಿನ್ನೆಲೆ:

ಕೊಳ್ಳೇಗಾಲ ಪಟ್ಟಣದ ಆರ್‌ಎಂ (RM) ಛತ್ರದಲ್ಲಿ ಮುದಾಸಿರ್ ಹಾಗೂ ಗುಲ್ನಾಜ್ ಭಾನು ಎಂಬುವವರ ವಿವಾಹ ನಿಗದಿಯಾಗಿತ್ತು. ಆದರೆ ಮದುವೆಯ ಶಾಸ್ತ್ರಗಳ ನಡುವೆಯೇ ಎರಡು ಕುಟುಂಬಗಳ ನಡುವೆ ಭಿನ್ನಾಭಿಪ್ರಾಯ ಶುರುವಾಗಿದೆ. ವಧುವಿಗೆ ಮಾತಿನಂತೆ ಚಿನ್ನಾಭರಣ ನೀಡಿಲ್ಲ ಎಂಬ ಆರೋಪದ ಮೇಲೆ ಮಾತುಕತೆ ನಡೆಸಲು ವರನ ಕಡೆಯವರು ವಧುವಿನ ಮನೆಗೆ ಹೋಗಿದ್ದರು. ಈ ವೇಳೆ ಮಾತುಕತೆ ವಿಕೋಪಕ್ಕೆ ತಿರುಗಿ, ಪರಸ್ಪರ ಚಾಕು ಮತ್ತು ದೊಣ್ಣೆಗಳಿಂದ ಬಡಿದಾಡಿಕೊಂಡಿದ್ದಾರೆ.

Related Articles

Related image1
ರೀಲ್ಸ್ ಮಾಡುತ್ತಿದ್ದಂತೆ ಶುರುವಾದ ಪ್ರೀತಿ, ಇಬ್ಬರು ಮಕ್ಕಳು ಪತಿ ಬಿಟ್ಟು ಯುವತಿ ಮದುವೆಯಾದ ಮಹಿಳೆ
Related image2
ನಿಜವಾದ ಪ್ರೀತಿ ಎಂದ್ರೆ ಇದೇನೆ ಎನ್ನುತ್ತಲೇ ಭಾವಿ ಪತ್ನಿ ಬಗ್ಗೆ Chandan Shetty ರಿವೀಲ್​
35
ಐವರಿಗೆ ತೀವ್ರ ಗಾಯ:
Image Credit : Asianet News

ಐವರಿಗೆ ತೀವ್ರ ಗಾಯ:

ಈ ಭೀಕರ ಸಂಘರ್ಷದಲ್ಲಿ ವರನ ಸೋದರ ಸಂಬಂಧಿಗಳಾದ ಸಮೀರ್ ಮತ್ತು ಶೋಯೆಬ್ ಹಾಗೂ ವಧುವಿನ ಸಂಬಂಧಿಕರಾದ ಪೈರೋಜ್ ಪಾಷಾ, ಅಬ್ದುಲ್ ವಾಯಿದ್ ಮತ್ತು ಅಬ್ದುಲ್ ಆರೀಪ್ ಎಂಬುವವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಲಾಟೆಯ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕುಟುಂಬಸ್ಥರು ಕುರ್ಚಿ ಹಾಗೂ ಚಾಕುಗಳನ್ನು ಹಿಡಿದು ಪರಸ್ಪರ ದಾಳಿ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

45
ಆರೋಪ-ಪ್ರತ್ಯಾರೋಪ:
Image Credit : Asianet News

ಆರೋಪ-ಪ್ರತ್ಯಾರೋಪ:

ಈ ಘಟನೆಯ ಬಗ್ಗೆ ವಧು ಗುಲ್ನಾಜ್ ಭಾನು ಹಾಗೂ ಆಕೆಯ ತಮ್ಮ ಅನ್ವರ್ ಪಾಷಾ ಗಂಭೀರ ಆರೋಪ ಮಾಡಿದ್ದಾರೆ. 'ನಾವು ಚಿನ್ನಾಭರಣಕ್ಕೆ ಡಿಮ್ಯಾಂಡ್ ಮಾಡಿಲ್ಲ. ಇಬ್ಬರೂ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ವರನ ಕಡೆಯವರು ಬೈಕ್ ಬದಲು 15 ಲಕ್ಷ ರೂಪಾಯಿ ಬೆಲೆಬಾಳುವ ಕಾರು ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗದ ಕಾರಣ ನಾವು ಮದುವೆ ಬೇಡ ಎಂದು ನಿರ್ಧರಿಸಿದ್ದೆವು. ಆದರೆ ಅವರು ಮಾತುಕತೆಗೆಂದು ಬಂದು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ' ಎಂದು ವಧುವಿನ ಕಡೆಯವರು ದೂರಿದ್ದಾರೆ.

55
ಪ್ರೀತಿಗೆ ಅಡ್ಡಬಂದ ಚಿನ್ನ-ಕಾರು
Image Credit : Asianet News

ಪ್ರೀತಿಗೆ ಅಡ್ಡಬಂದ ಚಿನ್ನ-ಕಾರು

ಮದುವೆ ಮುರಿದು ಬಿದ್ದಿರುವುದು ಮಾತ್ರವಲ್ಲದೆ, ಬೀದಿಯಲ್ಲಿ ಹೊಡೆದಾಟ ನಡೆಸಿದ ಈ ಘಟನೆ ಕೊಳ್ಳೇಗಾಲ ಪಟ್ಟಣದಲ್ಲಿ ಆತಂಕ ಮೂಡಿಸಿದೆ. ಸದ್ಯ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪ್ರೀತಿಯ ಮದುವೆಯು ಕಾರು ಮತ್ತು ಚಿನ್ನದ ಆಸೆಗೆ ಬಲಿಯಾಗಿ, ರಕ್ತಪಾತದಲ್ಲಿ ಅಂತ್ಯಗೊಂಡಿರುವುದು ವಿಷಾದನೀಯ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಚಾಮರಾಜನಗರ
ಪ್ರೇಮ ವಿವಾಹ
ಪ್ರೀತಿ

Latest Videos
Recommended Stories
Recommended image1
ಹಾಸನದಲ್ಲಿ ಕರುಳು ಹಿಂಡುವ ದುರಂತ: ಧರ್ಮಸ್ಥಳದಿಂದ ಹಿಂತಿರುಗುತ್ತಿದ್ದ ತಾಯಿ-ಮಗುವನ್ನು ಬಲಿ ಪಡೆದ ನಾಲೆ!
Recommended image2
ಬೆಂಗಳೂರಿನ ಕನಸಿನ ಮನೆಗೆ ಕಂಟಕ, ವಸತಿ ಯೋಜನೆಯಡಿ ಫ್ಲಾಟ್ ಖರೀದಿ ಮಾಡಿದ್ದವರಿಗೆ ಶಾಕ್ ಕೊಟ್ಟ ಇಲಾಖೆ!
Recommended image3
ಟ್ರೇಡ್ ಲೈಸೆನ್ಸ್‌ ನೀಡಲು 3 ತಿಂಗಳಿಂದ ಲಂಚಕ್ಕೆ ಸತಾಯಿಸಿದ್ದ SDA: ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾ ಬಲೆಗೆ
Related Stories
Recommended image1
ರೀಲ್ಸ್ ಮಾಡುತ್ತಿದ್ದಂತೆ ಶುರುವಾದ ಪ್ರೀತಿ, ಇಬ್ಬರು ಮಕ್ಕಳು ಪತಿ ಬಿಟ್ಟು ಯುವತಿ ಮದುವೆಯಾದ ಮಹಿಳೆ
Recommended image2
ನಿಜವಾದ ಪ್ರೀತಿ ಎಂದ್ರೆ ಇದೇನೆ ಎನ್ನುತ್ತಲೇ ಭಾವಿ ಪತ್ನಿ ಬಗ್ಗೆ Chandan Shetty ರಿವೀಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved