- Home
- Karnataka Districts
- ಬೆಂಗಳೂರು ಲೋಕಲ್ ರೌಡಿ ಆಟೋ ನಾಗನ ದುರಂತ ಅಂತ್ಯ! ಎಣ್ಣೆ ಪಾರ್ಟಿಗೆ ಕರೆದೊಯ್ದು ಫಾರ್ಮ್‌ಹೌಸಲ್ಲಿ ಮರ್ಡರ್
ಬೆಂಗಳೂರು ಲೋಕಲ್ ರೌಡಿ ಆಟೋ ನಾಗನ ದುರಂತ ಅಂತ್ಯ! ಎಣ್ಣೆ ಪಾರ್ಟಿಗೆ ಕರೆದೊಯ್ದು ಫಾರ್ಮ್‌ಹೌಸಲ್ಲಿ ಮರ್ಡರ್
Bengaluru rowdy sheeter ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫಾರ್ಮ್ ಹೌಸ್‌ನಲ್ಲಿ ಆಟೋ ಚಾಲಕ ನಾಗ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರು ಗ್ರಾಮಾಂತರ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಫಾರ್ಮ್ ಹೌಸ್‌ನಲ್ಲಿ ಆಟೋ ಚಾಲಕ ನಾಗ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಹಣಕಾಸಿನ ವ್ಯವಹಾರವೇ ಈ ಕೊಲೆಗೆ ಪ್ರಮುಖ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮೃತ ನಾಗ
ಮೃತ ನಾಗ ಅಂದರ್-ಬಾಹರ್ ಹಣಕಾಸು ವ್ಯವಹಾರ ನಡೆಸುತ್ತಿದ್ದು, ಅಭಿ ಎಂಬ ವ್ಯಕ್ತಿಗೆ ಸುಮಾರು 22 ಲಕ್ಷ ರೂಪಾಯಿ ಸಾಲ ನೀಡಿದ್ದನು ಎನ್ನಲಾಗಿದೆ. ಈ ಹಣವನ್ನು ವಾಪಸ್ ಕೇಳುತ್ತಿದ್ದ ಹಿನ್ನೆಲೆಯಲ್ಲಿ ಆರೋಪಿಗಳು ನಾಗನನ್ನು ಕೊಲೆ ಮಾಡುವ ಪ್ಲಾನ್ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಬೆಂಗಳೂರು ಫಾರ್ಮ್ ಹೌಸ್‌ಗೆ
ಹಣದ ವಿಚಾರವಾಗಿ ಒತ್ತಡ ಹೆಚ್ಚಾಗುತ್ತಿದ್ದಂತೆ, ಪಾರ್ಟಿ ಮಾಡಿ ಮಾತನಾಡೋಣ ಎಂಬ ನೆಪದಲ್ಲಿ ನಾಗನನ್ನು ಫಾರ್ಮ್ ಹೌಸ್‌ಗೆ ಕರೆಸಿಕೊಂಡಿದ್ದಾರೆ. ಈ ಸಮಯದಲ್ಲಿ ಎರಡು ರೂಮ್‌ಗಳನ್ನು ಬುಕ್ ಮಾಡಲಾಗಿದ್ದು, ಒಂದು ರೂಮ್ ಅನ್ನು ನಾಗನೇ ಬುಕ್ ಮಾಡಿದ್ದರೆ, ಮತ್ತೊಂದು ರೂಮ್ ಅನ್ನು ಮೂವರು ಆರೋಪಿಗಳು ಬುಕ್ ಮಾಡಿಕೊಂಡಿದ್ದರು.
ಮದ್ಯವನ್ನು ಕುಡಿಸಿ ಕೊಲೆ
ಮೊದಲೇ ಪ್ಲಾನ್ ಮಾಡಿದಂತೆ ಡ್ರಾಗರ್ ಸೇರಿದಂತೆ ಆಯುಧಗಳನ್ನು ಹಿಡಿದು ಸ್ಥಳಕ್ಕೆ ಬಂದ ಆರೋಪಿಗಳು, ನಾಗನಿಗೆ ಮದ್ಯವನ್ನು ಕಂಠಪೂರ್ತಿ ಕುಡಿಸಿ, ನಂತರ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ಮಾದನಾಯಕನಹಳ್ಳಿ ಪೊಲೀಸರು ಬಲೆ ಬೀಸಿದ್ದು, ತನಿಖೆ ತೀವ್ರಗೊಳಿಸಲಾಗಿದೆ. ಕೊಲೆಯ ಹಿಂದೆ ಇನ್ನಷ್ಟು ವ್ಯಕ್ತಿಗಳ ಪಾತ್ರವಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.