- Home
- Karnataka Districts
- Bengaluru: ಇನ್‌ಸ್ಟಾಗ್ರಾಂ ಪ್ರೀತಿ, ಆಮೇಲೆ ವಿಕೃತಿ: ಪ್ರೇಯಸಿ, ಆಕೆಯ ಪೋಷಕರಿಗೂ ಬೆಂಕಿ ಹಚ್ಚಿದ ಪಾಪಿ!
Bengaluru: ಇನ್‌ಸ್ಟಾಗ್ರಾಂ ಪ್ರೀತಿ, ಆಮೇಲೆ ವಿಕೃತಿ: ಪ್ರೇಯಸಿ, ಆಕೆಯ ಪೋಷಕರಿಗೂ ಬೆಂಕಿ ಹಚ್ಚಿದ ಪಾಪಿ!
ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಪ್ರೇಯಸಿ ಮತ್ತು ಆಕೆಯ ಪೋಷಕರ ಮೇಲೆ ಚಂದು ಎಂಬ ಆರೋಪಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೈಕ್ ವಿಚಾರವಾಗಿ ನಡೆದ ಗಲಾಟೆಯೇ ಈ ಕೃತ್ಯಕ್ಕೆ ಕಾರಣವಾಗಿದ್ದು, ಗಾಯಾಳುಗಳು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಆರೋಪಿ
ಪ್ರೇಯಸಿ ಸೇರಿದಂತೆ ಮೂವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 6ರಂದು ಬೆಂಗಳೂರಿನ ತರಬನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮೂವರು ಗಾಯಾಳುಗಳು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ರೇಯಸಿ ತಾಯಿ ಮಂಜಮ್ಮ ಆರೋಗ್ಯಸ್ಥಿತಿ ಗಂಭೀರವಾಗಿದೆ.
ಇನ್‌ಸ್ಟಾಗ್ರಾಂ
ಚಂದು ಅಲಿಯಾಸ್ ಪಾಂಡು ಬಂಧಿತ ಆರೋಪಿ. ಪ್ರೇಯಸಿ ಸುಮಲತಾ, ಪ್ರೇಯಸಿ ತಾಯಿ-ತಂದೆಗೆ ಬೆಂಕಿ ಹಚ್ಚಿದ್ದಾನೆ. ಮದುವೆಯಾಗಿ ಮಕ್ಕಳಿದ್ರೂ ಇನ್‌ಸ್ಟಾಗ್ರಾಂ ಮೂಲಕ ಸುಮಲತಾಳ ಪರಿಚಯ ಮಾಡಿಕೊಂಡಿದ್ದನು. ಕಳೆದ ಆರು ವರ್ಷಗಳಿಂದ ಇಬ್ಬರು ಪ್ರೀತಿ-ಪ್ರೇಮ ಅಂತ ಸುತ್ತಾಡಿದ್ದಾರೆ. ಆದ್ರೆ ಸುಮಲತಾಗೆ ಬೇರೊಬ್ಬನ ಜೊತೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಮದುವೆ ಬಳಿಕ ಚಂದುನಿಂದ ಸುಮಲತಾ ದೂರವಾಗಿದ್ದಳು.
ಸಂಬಂಧ
ಗಂಡನಿಗೆ ವಿಷಯ ಗೊತ್ತಾಗ್ತಿದ್ದಂತೆ ಸುಮಲತಾ ಚಂದು ಜೊತೆ ಹೋಗಿದ್ದಳು. ಆರಂಭದಲ್ಲಿ ಸುಮಲತಾಳನ್ನು ಚೆನ್ನಾಗಿಯೇ ನೋಡಿಕೊಂಡಿದ್ದ ಚಂದು ನಂತರ ಕಿರುಕುಳ ನೀಡಲು ಆರಂಭಿಸಿದ್ದನು. ನಂತರ ಮತ್ತೊಬ್ಬ ಮಹಿಳೆಯನ್ನು ಕರೆದುಕೊಂಡು ಬಂದು ಮನೆಯಲ್ಲಿಟ್ಟುಕೊಂಡಿದ್ದಾನೆ. ಇದನ್ನು ಸುಮಲತಾ ಪ್ರಶ್ನೆ ಮಾಡಿದ್ದಾಳೆ. ಚಂದು ಜೊತೆ ಬಂದಿರುವ ಮಹಿಳೆಗೆ 10 ವರ್ಷದ ಮಗನಿದ್ದಾನೆ ಎಂದು ಸುಮಲತಾ ಹೇಳಿದ್ದಾಳೆ. ಇದರಿಂದ ಚಂದುವಿನಿಂದ ಸುಮಲತಾ ದೂರವಾಗಿದ್ದಳು.
ಇದನ್ನೂ ಓದಿ: KSRTCಯಲ್ಲಿ ಕೆಲಸ ಕೊಡಿಸುವ ಆಮಿಷ: ಹೆಂಡತಿ, ಮಕ್ಕಳ ಮೇಲೆ ಆಣೆ ಮಾಡಿ 12 ಲಕ್ಷಕ್ಕೂ ಹೆಚ್ಚು ವಂಚನೆ
ಬೈಕ್ ವಿಚಾರವಾಗಿ ಗಲಾಟೆ
ಶುಕ್ರವಾರ ಸಂಜೆ ಸುಮಾರು 6 ಗಂಟೆಗೆ ಬೈಕ್ ವಿಚಾರವಾಗಿ ಸುಮಲತಾ ಮತ್ತು ಚಂದು ಜೊತೆ ಗಲಾಟೆಯಾಗಿದೆ. ಬೈಕ್ ಕೊಡಲ್ಲ ಎಂದು ಸುಮಲತಾ ಮತ್ತು ತಾಯಿ ಮಂಜಮ್ಮ, ತಂದೆ ಶ್ರೀರಾಮುಲು ಹೇಳಿದ್ದಾರೆ. ಇದರಿಂದ ಕೋಪಗೊಂಡ ಚಂದು ಮೂವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದಾನೆ.
ಇದನ್ನೂ ಓದಿ: ಯಾರನ್ನ ನಂಬೋದು? ಸೈಟ್ ಮಾರಿದ ಹಣಕ್ಕಾಗಿ ಪ್ರಾಣ ಸ್ನೇಹಿತನೇ ನಕಲಿ ಪೊಲೀಸ್ ಬಳಸಿ ದರೋಡೆ ಮಾಡಿಸಿದ!
ವಿಕ್ಟೋರಿಯಾ ಆಸ್ಪತ್ರೆ
ಬೆಂಕಿ ದಾಳಿಗೆ ಒಳಗಾದ ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿ, ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಮೂವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಶ್ರೀರಾಮುಲು ಮತ್ತು ಸುಮಲತಾ ಪ್ರಾಣಾಪಾಯದಿಂದ ಪಾರಾಗಿದ್ದು, ಮಂಜಮ್ಮ ಗಂಭೀರವಾಗಿದ್ದಾರೆ. ಈ ಹಿಂದೆ ಸೋಲದೇವನಹಳ್ಳಿ ಅಲ್ಲಿ ದೂರು ದಾಖಲಾಗಿತ್ತು.

