MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಬೆಂಗಳೂರು ಫುಟ್‌ಪಾತ್ ಕ್ಲೀನ್ ಅಪ್: ಒಂದೇ ದಿನ 13 KM ಒತ್ತುವರಿ ತೆರವು; ನೂರಾರು ಪೆಟ್ಟಿಅಂಗಡಿ, ತಳ್ಳುಗಾಡಿ ಎತ್ತಂಗಡಿ

ಬೆಂಗಳೂರು ಫುಟ್‌ಪಾತ್ ಕ್ಲೀನ್ ಅಪ್: ಒಂದೇ ದಿನ 13 KM ಒತ್ತುವರಿ ತೆರವು; ನೂರಾರು ಪೆಟ್ಟಿಅಂಗಡಿ, ತಳ್ಳುಗಾಡಿ ಎತ್ತಂಗಡಿ

ಬೆಂಗಳೂರು ಪೂರ್ವ ನಗರ ಪಾಲಿಕೆಯು ಪಾದಚಾರಿಗಳ ಸುರಕ್ಷತೆಗಾಗಿ ಬೃಹತ್ ಕಾರ್ಯಾಚರಣೆ ನಡೆಸಿದೆ. ಒಂದೇ ದಿನದಲ್ಲಿ ವೈಟ್‌ಫೀಲ್ಡ್, ಮಾರತಹಳ್ಳಿ ಸೇರಿದಂತೆ ಹಲವೆಡೆ 13.25 ಕಿ.ಮೀ ಉದ್ದದ ಫುಟ್‌ಪಾತ್‌ಗಳನ್ನು ಒತ್ತುವರಿಯಿಂದ ಮುಕ್ತಗೊಳಿಸಿ, ನೂರಾರು ಪೆಟ್ಟಿ ಅಂಗಡಿಗಳು ಮತ್ತು ಶೆಡ್‌ಗಳನ್ನು ತೆರವುಗೊಳಿಸಲಾಗಿದೆ.

2 Min read
Author : Sathish Kumar KH
Published : Jul 01 2026, 08:38 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ಬೆಂಗಳೂರು (ಜು.01): ಬೆಂಗಳೂರಿನ ನಿವಾಸಿಗಳಿಗೆ ಪಾದಚಾರಿ ಮಾರ್ಗಗಳಲ್ಲಿ ಸುಗಮ ಸಂಚಾರ ಕಲ್ಪಿಸಲು ಬೆಂಗಳೂರು ಪೂರ್ವ ನಗರ ಪಾಲಿಕೆ ಸಮರ ಸಾರಿದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ, ಬುಧವಾರ (ಜುಲೈ 01, 2026) ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೃಹತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದ್ದು, ಕೇವಲ ಒಂದೇ ದಿನದಲ್ಲಿ 13.25 ಕಿ.ಮೀ ಉದ್ದದ ಪಾದಚಾರಿ ಮಾರ್ಗಗಳನ್ನು ಅಕ್ರಮಗಳಿಂದ ಮುಕ್ತಗೊಳಿಸಲಾಗಿದೆ. ಇದರಲ್ಲಿ ನೂರಾರು ಪೆಟ್ಟಿ ಅಂಗಡಿಗಳು, ಶೆಡ್‌ಗಳು ಹಾಗೂ ತಳ್ಳುಗಾಡಿಗಳನ್ನು ತೆರವುಗೊಳಿಸಲಾಗಿದೆ. ಇಲ್ಲಿದೆ ಮತ್ತಷ್ಟು ವಿವರ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : Asianet News

ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ

ನಗರದ ಪ್ರಮುಖ ರಸ್ತೆಗಳಲ್ಲಿ ಫುಟ್‌ಪಾತ್‌ಗಳನ್ನು ವ್ಯಾಪಾರಸ್ಥರು ಮತ್ತು ಕಟ್ಟಡ ಮಾಲೀಕರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದರಿಂದ ಸಾರ್ವಜನಿಕರು ರಸ್ತೆಯ ಮೇಲೆ ನಡೆಯುವಂತಾಗಿದೆ. ಇದು ಸಂಚಾರ ದಟ್ಟಣೆ ಮತ್ತು ಅಪಘಾತಗಳಿಗೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ 'ಅಡೆತಡೆರಹಿತ ಪಾದಚಾರಿ ಮಾರ್ಗ' ಕಲ್ಪಿಸುವ ಉದ್ದೇಶದಿಂದ ಈ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು ಎಂದು ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ತಿಳಿಸಿದ್ದಾರೆ.

Related Articles

Related image1
ಬೈಸಾಕಿ ಹಬ್ಬದಂದೇ ದುರಂತ, ಉಧಮ್‌ಪುರ್ ಪಾದಾಚಾರಿ ಸೇತುವೆ ಕುಸಿತದಿಂದ 80 ಮಂದಿಗೆ ಗಾಯ!
Related image2
ಬೆಂಗಳೂರು ಪ್ರಯಾಣಿಕರೇ ಇಂದಿನಿಂದ ನಗರದ 2 ಪ್ರಮುಖ ರಸ್ತೆಗಳಲ್ಲಿ ಟೋಲ್ ದರ ಹೆಚ್ಚಳ, ಬೈಕ್ ಸವಾರರೂ ಟೋಲ್ ಕಟ್ಟಲೇಬೇಕು!
36
Image Credit : Asianet News

ಎಲ್ಲೆಲ್ಲಿ ಕಾರ್ಯಾಚರಣೆ? (ವಲಯವಾರು ವಿವರ)

ಪಾಲಿಕೆಯು ಎಂಟು ಪ್ರಮುಖ ವಿಭಾಗಗಳಲ್ಲಿ ಏಕಕಾಲಕ್ಕೆ ಜೆಸಿಬಿ, ಟ್ರ್ಯಾಕ್ಟರ್ ಮತ್ತು ಹೈಡ್ರಾ ಯಂತ್ರಗಳೊಂದಿಗೆ ದಾಳಿ ನಡೆಸಿದೆ:

ವೈಟ್‌ಫೀಲ್ಡ್: ಹೋಪ್ ಫಾರಂ ಜಂಕ್ಷನ್‌ನಿಂದ ವರ್ತೂರು ಕೋಡಿವರೆಗೆ (1.5 ಕಿ.ಮೀ)

ಮಾರತಹಳ್ಳಿ: ಮಾರತಹಳ್ಳಿ ಜಂಕ್ಷನ್‌ನಿಂದ ಇಬ್ಬಲೂರು ಜಂಕ್ಷನ್‌ವರೆಗೆ (3.5 ಕಿ.ಮೀ)

ಕೆ.ಆರ್.ಪುರ: ಐಟಿಪಿಎಲ್ ಮುಖ್ಯರಸ್ತೆಯಿಂದ ದೇವಸಂದ್ರವರೆಗೆ (1 ಕಿ.ಮೀ)

ಹೊರಮಾವು: ಹೊರಮಾವು ಮುಖ್ಯ ರಸ್ತೆ (3 ಕಿ.ಮೀ)

ಎಚ್.ಎ.ಎಲ್: ಕೆ.ಆರ್.ಪುರ ಮೆಟ್ರೋದಿಂದ ಬೆನ್ನಿಗಾನಹಳ್ಳಿ ಮೆಟ್ರೋವರೆಗೆ (1.5 ಕಿ.ಮೀ)

ರಾಮಮೂರ್ತಿನಗರ: ಮುಖ್ಯ ರಸ್ತೆಯ 2 ಕಿ.ಮೀ ವ್ಯಾಪ್ತಿ.

ದೊಡ್ಡನೆಕ್ಕುಂದಿ ಹಾಗೂ ಕಾಡುಗೋಡಿ: ಐಟಿಪಿಎಲ್ ಮತ್ತು ಹೂಡಿ ವೃತ್ತದ ಸುತ್ತಮುತ್ತಲ ಪ್ರದೇಶಗಳು.

46
Image Credit : Asianet News

ತೆರವುಗೊಳಿಸಲಾದ ಒತ್ತುವರಿಗಳ ಪಟ್ಟಿ:

ಪೆಟ್ಟಿ ಶಾಪ್‌ಗಳು: 59

ತಳ್ಳುವ ಗಾಡಿಗಳು: 65

ಅಕ್ರಮ ತಡೆಗೋಡೆಗಳು: 38

ವಾಣಿಜ್ಯ ಮಳಿಗೆಗಳ ಮೆಟ್ಟಿಲು: 7

ಫ್ಲೆಕ್ಸ್ ಹಾಗೂ ಬ್ಯಾನರ್‌ಗಳು: 156

ಕ್ಯಾನೋಪಿ/ಶೆಡ್‌ಗಳು: 71

ತ್ಯಾಜ್ಯ ಮತ್ತು ಅವಶೇಷ: 25 ಟನ್ ಘನತ್ಯಾಜ್ಯ ಹಾಗೂ 80 ಟನ್ ಕಟ್ಟಡ ಅವಶೇಷಗಳನ್ನು (Debris) ಸ್ಥಳದಿಂದ ತೆರವುಗೊಳಿಸಲಾಗಿದೆ.

56
Image Credit : Asianet News

ಮತ್ತೆ ಒತ್ತುವರಿ ಮಾಡಿದರೆ ಕಠಿಣ ಶಿಕ್ಷೆ:

ಈ ಅಭಿಯಾನಕ್ಕಾಗಿ ಇಂಜಿನಿಯರಿಂಗ್, ಆರೋಗ್ಯ, ಬೆಸ್ಕಾಂ, ಜಲಮಂಡಳಿ ಮತ್ತು ಪೊಲೀಸ್ ಇಲಾಖೆಗಳನ್ನು ಒಳಗೊಂಡ ವಿಶೇಷ ಜಂಟಿ ಕಾರ್ಯಪಡೆಯನ್ನು ರಚಿಸಲಾಗಿದೆ. ಪ್ರತಿ ವಿಭಾಗಕ್ಕೂ ಒಬ್ಬೊಬ್ಬ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಕಾರ್ಯಾಚರಣೆಯ ಸಂಪೂರ್ಣ ಮೇಲ್ವಿಚಾರಣೆಯನ್ನು ಆಯುಕ್ತರೇ ವಹಿಸಿಕೊಂಡಿದ್ದಾರೆ. ತೆರವುಗೊಳಿಸಲಾದ ಜಾಗವನ್ನು ಮತ್ತೆ ಒತ್ತುವರಿ ಮಾಡದಂತೆ ತಡೆಯಲು ಪಾಲಿಕೆಯ ಮಾರ್ಷಲ್ ತಂಡಗಳು ಹಗಲು-ರಾತ್ರಿ ಗಸ್ತು ತಿರುಗಲಿವೆ. ಮರು ಒತ್ತುವರಿ ಕಂಡುಬಂದಲ್ಲಿ ಭಾರಿ ಮೊತ್ತದ ದಂಡ ವಿಧಿಸುವುದಲ್ಲದೆ, ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ.

66
Image Credit : Asianet News

ಸಾರ್ವಜನಿಕರಲ್ಲಿ ಮನವಿ:

'ಪಾದಚಾರಿ ಮಾರ್ಗಗಳು ಸಾರ್ವಜನಿಕರ ಹಕ್ಕು. ಅಂಗಡಿ ಮಾಲೀಕರು ಮತ್ತು ಬೀದಿಬದಿ ವ್ಯಾಪಾರಿಗಳು ಸ್ವಯಂಪ್ರೇರಿತವಾಗಿ ಒತ್ತುವರಿ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಪಾಲಿಕೆಯು ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಿದೆ' ಎಂದು ಡಿ.ಎಸ್. ರಮೇಶ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಬೆಂಗಳೂರು ಪೂರ್ವ ನಗರ ಪಾಲಿಕೆಯ ನಿರ್ಧಾರದಿಂದಾಗಿ ಹಲವು ವರ್ಷಗಳಿಂದ ಒತ್ತುವರಿಯಾಗಿದ್ದ ಪ್ರಮುಖ ರಸ್ತೆಗಳು ಈಗ ಪಾದಚಾರಿಗಳಿಗೆ ನಿರಾಳವಾಗಿವೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಬೆಂಗಳೂರು
ಕರ್ನಾಟಕ ಸುದ್ದಿ
ಬಿಬಿಎಂಪಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ

Latest Videos
Recommended Stories
Recommended image1
Kottur Bindu: ಉಗಾಂಡಾದಲ್ಲಿ ಕೊಟ್ಟೂರು ಮೂಲದ ಯುವತಿ ಸಾವು: ಪಾರ್ಥಿವ ಶರೀರ ತರಲು ನೆರವಾದ ತರಳಬಾಳು ಶ್ರೀಗಳು
Recommended image2
’BOSS’ ಚಿತ್ರ ನಮ್ಮ ಮೇಲೆ ಪ್ರಭಾವ ಬೀರುತ್ತೆ ಅಂದುಕೊಂಡ್ರಾ? ದರ್ಶನ್‌ ವಕೀಲರನ್ನು ಪ್ರಶ್ನಿಸಿದ ಹೈಕೋರ್ಟ್
Recommended image3
School Holiday: ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ; ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ!
Related Stories
Recommended image1
ಬೈಸಾಕಿ ಹಬ್ಬದಂದೇ ದುರಂತ, ಉಧಮ್‌ಪುರ್ ಪಾದಾಚಾರಿ ಸೇತುವೆ ಕುಸಿತದಿಂದ 80 ಮಂದಿಗೆ ಗಾಯ!
Recommended image2
ಬೆಂಗಳೂರು ಪ್ರಯಾಣಿಕರೇ ಇಂದಿನಿಂದ ನಗರದ 2 ಪ್ರಮುಖ ರಸ್ತೆಗಳಲ್ಲಿ ಟೋಲ್ ದರ ಹೆಚ್ಚಳ, ಬೈಕ್ ಸವಾರರೂ ಟೋಲ್ ಕಟ್ಟಲೇಬೇಕು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved