MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Bengaluru Urban
  • ಮಗು ಮಾರಾಟ ಮಾಡಿ ಪತ್ನಿ ಕಾಣೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್; ಗಂಡನ ಅಸಲಿ ಕೃತ್ಯ ಬಯಲು

ಮಗು ಮಾರಾಟ ಮಾಡಿ ಪತ್ನಿ ಕಾಣೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್; ಗಂಡನ ಅಸಲಿ ಕೃತ್ಯ ಬಯಲು

ಮಗುವನ್ನು ಮಾರಾಟ ಮಾಡಿ ಪತ್ನಿ ಕಾಣೆಯಾಗಿದ್ದಾಳೆ ಎಂದು ಪತಿ ನೀಡಿದ್ದ ದೂರಿನ ತನಿಖೆ ನಡೆಸಿದಾಗ, ಪತಿಯ ಕಿರುಕುಳದಿಂದ ಬೇಸತ್ತು ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ಮನೆ ಬಿಟ್ಟಿರುವುದು ಬೆಳಕಿಗೆ ಬಂದಿದೆ. ಮಹಿಳೆ ಮತ್ತು ಮಕ್ಕಳು ಸುರಕ್ಷಿತವಾಗಿದ್ದು, ಪತಿಯ ವಿರುದ್ಧವೇ ಆರೋಪ ಮಾಡಿದ್ದಾರೆ.

1 Min read
Author : Kannadaprabha News
Published : May 05 2026, 07:38 AM IST
Share this Photo Gallery
  • FB
  • TW
  • Linkdin
  • Whatsapp
14
ಮಗು ಮಾರಾಟ ಮಾಡಿ ಪತ್ನಿ ಕಾಣೆ ಪ್ರಕರಣ
Image Credit : Gemini

ಮಗು ಮಾರಾಟ ಮಾಡಿ ಪತ್ನಿ ಕಾಣೆ ಪ್ರಕರಣ

ಮಗುವನ್ನು ಮಾರಾಟ ಮಾಡಿ ಪತ್ನಿ ಕಾಣೆಯಾಗಿದ್ದಾಳೆ ಎಂದು ಪತಿ ಆರೋಪಿಸಿ ದೂರು ನೀಡಿದ್ದ ಪ್ರಕರಣ ಸಂಬಂಧ ತನಿಖೆ ಕೈಗೊಂಡಿದ್ದ ವಿವೇಕನಗರ ಠಾಣೆ ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚಿದ್ದು, ಆಕೆ ಪತಿಯ ಕಿರುಕುಳದಿಂದ ಬೇಸತ್ತು ಮೂವರು ಮಕ್ಕಳೊಂದಿಗೆ ಮನೆ ತೊರೆದಿರುವುದು ಗೊತ್ತಾಗಿದೆ. ಪತ್ನಿ ವಿರುದ್ಧ ಆರೋಪಿಸಿ ತಾವರೆಕೆರೆ ನಿವಾಸಿ ರವಿಬಾಬು ಇತ್ತೀಚೆಗೆ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ರವಿಬಾಬು ಪತ್ನಿ ಮಕ್ಕಳೊಂದಿಗೆ ಸುರಕ್ಷಿತವಾಗಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

24
 16 ವರ್ಷದ ಹಿಂದೆ ಮದುವೆ
Image Credit : Gemini Generated

16 ವರ್ಷದ ಹಿಂದೆ ಮದುವೆ

ತಾವರೆಕೆರೆ ನಿವಾಸಿ ರವಿಬಾಬು ಎಂಬುವವರು ನಗರದ ಆಸ್ಟಿನ್ ಟೌನ್ ನಿವಾಸಿ ಮಹಿಳೆಯನ್ನು 16 ವರ್ಷದ ಹಿಂದೆ ಮದುವೆಯಾಗಿದ್ದು, ದಂಪತಿಗೆ ಮೂವರು ಮಕ್ಕಳಿದ್ದಾರೆ. ಮನೆಯಲ್ಲಿ ದಂಪತಿ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಇದರಿಂದ ಬೇಸತ್ತು ರವಿಬಾಬು ಪತ್ನಿ ತನ್ನ ಮೂವರು ಮಕ್ಕಳನ್ನು ಕರೆದುಕೊಂದು ತವರು ಮನೆಗೆ ಹೋಗಿದ್ದಾರೆ.

Related Articles

Related image1
ಬೆಂಗಳೂರು: ಅಪರಿಚಿತ ವೃದ್ದೆಯ ಬರ್ಬರ ಹತ್ಯೆ, ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು!
Related image2
ಬೆಂಗಳೂರು: ಮಗಳ ಬೆನ್ನುಬಿದ್ದಿದ್ದ ಯುವಕನ ಹತ್ಯೆಗೈದು ರಾಜಕಾಲುವೆಗೆ ಎಸೆದ ಅಪ್ಪ; ನಾಲ್ವರು ಅರೆಸ್ಟ್!
34
 ಮಹಿಳೆ ಮತ್ತು ಮೂವರು ಮಕ್ಕಳು ಸುರಕ್ಷಿತ
Image Credit : AI Meta

ಮಹಿಳೆ ಮತ್ತು ಮೂವರು ಮಕ್ಕಳು ಸುರಕ್ಷಿತ

ತನ್ನ ತವರು ಮನೆಯಲ್ಲಿಯೂ ಜಗಳವಾಗಿದ್ದರಿಂದ ಬೇಸತ್ತ ಮನೆ ಬಿಟ್ಟು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ನಿ ಒಂದು ಮಗುವನ್ನು ಮಾರಿ, ಕಾಣೆಯಾಗಿದ್ದಾಳೆಂದು ವಿವೇಕನಗರ ಪೊಲೀಸ್ ಠಾಣೆಗೆ ರವಿಬಾಬು ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡಾಗ ಮಹಿಳೆ ಮತ್ತು ಮೂವರು ಮಕ್ಕಳು ಸುರಕ್ಷಿತವಾಗಿದ್ದು, ಗಂಡನ ಕಿರುಕುಳಕ್ಕೆ ಬೇಸತ್ತು ಮನೆ ಬಿಟ್ಟು ಹೋಗಿದ್ದಾಳೆ ಎಂಬುದು ಪೊಲೀಸ್‌ ಅಧಿಕಾರಿಗಳು ಗೊತ್ತಾಗಿದೆ.

ಇದನ್ನೂ ಓದಿ: ಹಾಸನದಲ್ಲಿ ಘೋರ ಕೃತ್ಯ: ಲೈಂಗಿಕ ಕ್ರಿಯೆಗೆ ಒಪ್ಪದಿದ್ದಕ್ಕೆ ಖಾಸಗಿ ಭಾಗಕ್ಕೆ ಒದ್ದು ಹತ್ಯೆ

44
ಪತಿಯ ವಿರುದ್ಧವೇ ಮಹಿಳೆ ಆರೋಪ
Image Credit : AI Meta

ಪತಿಯ ವಿರುದ್ಧವೇ ಮಹಿಳೆ ಆರೋಪ

ಪತಿ ರವಿಬಾಬುಗೆ ಬೇರೆ ಮಹಿಳೆಯರ ಜತೆ ಸಂಬಂಧವಿದೆ. ಆತ ಎರಡೆರಡು ಮೊಬೈಲ್‌ಗಳನ್ನು ಬಳಸುತ್ತಾನೆ. ಆತನ ಕಿರುಕುಳದಿಂದಲೇ ಮನೆಬಿಟ್ಟು ಬಂದಿರುವುದಾಗಿ ಮಹಿಳೆ ಹೇಳಿಕೆ ನೀಡಿದ್ದಾಳೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕಾಲೇಜಿಗೆ ಹೋಗೋದಾಗಿ ಸುಳ್ಳಿ ಹೇಳಿ ಓಯೋ ರೂಮಿಗೆ ಹೋದ ಮಗಳು; ಬಾಯ್‌ಫ್ರೆಂಡ್ ಸಮೇತ ತಾಯಿಗೆ ಸಿಕ್ಕಿಬಿದ್ದ ವಿಡಿಯೋ ವೈರಲ್

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಬೆಂಗಳೂರು
ದಂಪತಿಗಳು

Latest Videos
Recommended Stories
Recommended image1
ತೆಲಂಗಾಣ ಮಾದರಿ ಒಳಮೀಸಲಾತಿ ನೀತಿ ಬೇಕು: ಮಾದಿಗ ಸಮುದಾಯದ ಮಹತ್ವದ ನಿರ್ಣಯ!
Recommended image2
BSY: ಬಿಎಸ್‌ವೈ ನಮಗೆ ತಂದೆಯಷ್ಟೇ ಅಲ್ಲ, ಆದರ್ಶ ಗುರು - ಸಿಎಂ ಆಗುವ ಕನಸು ಹೊತ್ತು ರಾಜಕಾರಣ ಮಾಡಿದವರಲ್ಲ
Recommended image3
Sharath R Ashok scuba diving: ಸಮುದ್ರದಾಳದಲ್ಲಿ ಆರ್ ಅಶೋಕ್ ಪುತ್ರನ ಗಿನ್ನೆಸ್ ಸಾಹಸ
Related Stories
Recommended image1
ಬೆಂಗಳೂರು: ಅಪರಿಚಿತ ವೃದ್ದೆಯ ಬರ್ಬರ ಹತ್ಯೆ, ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು!
Recommended image2
ಬೆಂಗಳೂರು: ಮಗಳ ಬೆನ್ನುಬಿದ್ದಿದ್ದ ಯುವಕನ ಹತ್ಯೆಗೈದು ರಾಜಕಾಲುವೆಗೆ ಎಸೆದ ಅಪ್ಪ; ನಾಲ್ವರು ಅರೆಸ್ಟ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved