MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಬೆಳಗಾವಿಯನ್ನು ನಡುಗಿಸಿದ ಶಿವಂ ಅಸೋಸಿಯೇಟ್‌ನ 4600 ಕೋಟಿ ವಂಚನೆ ಪ್ರಕರಣ, ಕಚೇರಿ ಮೇಲೆ ದಾಳಿ ಹಣ ಹಾಕಿದವ್ರಿಗೆ ಚಿಂತೆ!

ಬೆಳಗಾವಿಯನ್ನು ನಡುಗಿಸಿದ ಶಿವಂ ಅಸೋಸಿಯೇಟ್‌ನ 4600 ಕೋಟಿ ವಂಚನೆ ಪ್ರಕರಣ, ಕಚೇರಿ ಮೇಲೆ ದಾಳಿ ಹಣ ಹಾಕಿದವ್ರಿಗೆ ಚಿಂತೆ!

ಬೆಳಗಾವಿಯಲ್ಲಿ ಜನರಿಗೆ 4,600 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣನವರ್‌ಗೆ ಸೇರಿದ ಕಚೇರಿಗಳಲ್ಲಿ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಸುಮಾರು 45,000 ಹೂಡಿಕೆದಾರರಲ್ಲಿ ಆತಂಕ ಸೃಷ್ಟಿ.

3 Min read
Author : Gowthami K
Published : May 15 2026, 04:44 PM IST
Share this Photo Gallery
  • FB
  • TW
  • Linkdin
  • Whatsapp
17
ಬೆಳಗಾವಿಯಲ್ಲಿ 4,600ಕೋಟಿ ವಂಚನೆ
Image Credit : Asianet News

ಬೆಳಗಾವಿಯಲ್ಲಿ 4,600ಕೋಟಿ ವಂಚನೆ

ಬೆಳಗಾವಿ: ಕೆಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಚಾರ, ದೊಡ್ಡ ಕಾರ್ಯಕ್ರಮ, ಹೆಚ್ಚಿನ ಬಡ್ಡಿದರದ ಭರವಸೆ ಹಾಗೂ ವಿವಾದಾತ್ಮಕ ಭಾಷಣಗಳ ಮೂಲಕ ಚರ್ಚೆಗೆ ಗ್ರಾಸವಾಗಿದ್ದ ಶಿವಂ ಅಸೋಸಿಯೇಟ್ ಸಂಸ್ಥೆ ಇದೀಗ ತನಿಖೆಯ ಕೇಂದ್ರಬಿಂದುವಾಗಿದೆ. ಬೆಳಗಾವಿಯಲ್ಲಿ 4,600ಕೋಟಿ ವಂಚನೆ ಆರೋಪ ಪ್ರಕರಣದಲ್ಲಿ ಸಂಸ್ಥೆಯ ಮಾಲೀಕ ಶಿವಾನಂದ ನೀಲಣ್ಣನವರ್‌ಗೆ ಸೇರಿದ ಕಚೇರಿಗಳ ಮೇಲೆ ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ ನೇತೃತ್ವದಲ್ಲಿ ಸಹಕಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗಾವಿಯ ಶಿವಬಸವ ನಗರದಲ್ಲಿರುವ ಕಚೇರಿ ಸೇರಿದಂತೆ ಎರಡು ಕಡೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಕಚೇರಿಗಳಲ್ಲಿದ್ದ ಹಣಕಾಸು ವ್ಯವಹಾರಗಳ ದಾಖಲೆಗಳು, ಹೂಡಿಕೆ ವಿವರಗಳು, ಸಾರ್ವಜನಿಕರಿಂದ ಸಂಗ್ರಹಿಸಿರುವ ಹಣದ ಮಾಹಿತಿ ಹಾಗೂ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿರುವ ಮಾಹಿತಿ ಲಭ್ಯವಾಗಿದೆ. ಈ ಬೆಳವಣಿಗೆ ಜಿಲ್ಲಾದ್ಯಂತ ಕುತೂಹಲಕ್ಕೆ ಕಾರಣವಾಗಿದ್ದರೆ, ಹೂಡಿಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.

Add Asianetnews Kannada as a Preferred SourcegooglePreferred
27
45 ಸಾವಿರ ಜನರಿಂದ ಅಂದಾಜು 4600 ಕೋಟಿ ಹೂಡಿಕೆ
Image Credit : Asianet News

45 ಸಾವಿರ ಜನರಿಂದ ಅಂದಾಜು 4600 ಕೋಟಿ ಹೂಡಿಕೆ

ನಿನ್ನೆ ಮಧ್ಯರಾತ್ರಿ ಎರಡು ಗಂಟೆವರೆಗೂ ದಾಳಿ ನಡೆದಿತ್ತು. ಇಂದು ಮತ್ತೆ ದಾಳಿ ನಡೆಸಿ ಮೇ 15ರ ಸಂಜೆ ವೇಳೆಗೆ ಬೆಳಗಾವಿ ಎಸಿ ನೇತೃತ್ವದ ತಂಡ ತನಿಖೆ ಪೂರ್ಣಗೊಳಿಸಿದೆ. 45 ಸಾವಿರ ಜನರಿಂದ ಅಂದಾಜು 4600 ಕೋಟಿ ಹೂಡಿಕೆ ಆಗಿದ್ದು, RBI ನಿಯಮಗಳನ್ನ ಗಾಳಿಗೆ ತೂರಿ ಕೋಟ್ಯಾಂತರ ರುಪಾಯಿ ಹೂಡಿಕೆ ಮಾಡಿದ ಆರೋಪವಿದೆ. ಡಿಸಿ ಮೊಹಮ್ಮದ್ ರೋಷನ್ ಆದೇಶ ಮೇರೆಗೆ ಈ ದಾಳಿ ನಡೆದಿತ್ತು.ಕಂದಾಯ ಮತ್ತು ಸಹಕಾರ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಖಲೆ ಪರಿಶೀಲನೆ ನಡೆಸಿದ್ದರು. ನಾಲ್ಕು ಬ್ಯಾಂಕ್ ಅಕೌಂಟ್, ಎರಡು ಕಚೇರಿ, ಒಂದು ಅಪಾರ್ಟ್ಮೆಂಟ್ ನಿವಾಸ, ಮನೆಯಲ್ಲಿ ದಾಖಲೆ ಪರಿಶೀಲನೆ ಮಾಡಲಾಗಿದ್ದು. ಇದೀಗ 24 ಗಂಟೆಯಲ್ಲಿ ತನಿಖೆ ಪೂರ್ಣಗೊಳಿಸಿದ್ದು, ಬೆಳಗಾವಿ ಎಸಿ ಶ್ರವಣಕುಮಾರ ಇಂದೇ ಡಿಸಿಗೆ ವರದಿ ಸಲ್ಲಿಸಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

Related Articles

Related image1
ಬೆಂಗಳೂರಿನಲ್ಲಿ ₹2384 ಕೋಟಿ ನಕಲಿ ಬಿಲ್ಲಿಂಗ್ ದಂಧೆ ಸ್ಫೋಟ: ತೆರಿಗೆ ಇಲಾಖೆ ಬಲೆಗೆ ಬಿದ್ದ GST ವಂಚನೆ ತಿಮಿಂಗಲಗಳು!
Related image2
ಚಿಕ್ಕಮಗಳೂರು ಸೈಬರ್ ವಂಚನೆ: ಗೋಲ್ಡ್ ಲೋನ್ ಪಡೆದು ಬ್ಯಾಂಕ್ ನಿಂದ ಹೊರಬಂದ ತಕ್ಷಣ ಹಣ ಮಾಯ!
37
ವಿವಾದಾತ್ಮಕ ಭಾಷಣ ವೈರಲ್
Image Credit : Asianet News

ವಿವಾದಾತ್ಮಕ ಭಾಷಣ ವೈರಲ್

ಇತ್ತೀಚೆಗೆ ಶಿವಾನಂದ ನೀಲಣ್ಣನವರ್ ಮಾಡಿದ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ನಮ್ಮ ಬಳಿ 15 ಸಾವಿರ ಬಂದೂಕುಗಳಿವೆ, ದೊಡ್ಡ ಸಾಮ್ರಾಜ್ಯ ಕಟ್ಟಿದ್ದೇನೆ, ನಾನು ಯಾರಿಗೂ ಹೆದರಲ್ಲ, ನಿಮ್ಮನ್ನು ಗಂಡಸರನ್ನಾಗಿ ಮಾಡಲು ಬಂದಿದ್ದೇನೆ ಎಂಬ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದವು. ಇದೇ ಭಾಷಣದಲ್ಲಿ 2028ರಲ್ಲಿ ಒಂದೇ ಸಲ 224 ಸ್ಥಾನ ಗೆದ್ದು ಮುಖ್ಯಮಂತ್ರಿ ಆಗುತ್ತೇನೆ ಎಂಬ ರಾಜಕೀಯ ಹೇಳಿಕೆಯೂ ವ್ಯಾಪಕ ಗಮನ ಸೆಳೆದಿತ್ತು. ಕಡೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಭಾಷಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಹೇಳಿಕೆಗಳು ಕೇವಲ ಪ್ರಚಾರಕ್ಕಾಗಿ ಮಾಡಲ್ಪಟ್ಟವೆಯೇ ಅಥವಾ ಅದರ ಹಿಂದೆ ಬೇರೆ ಉದ್ದೇಶಗಳಿವೆಯೇ ಎಂಬ ಪ್ರಶ್ನೆಗಳೂ ಉದ್ಭವಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ ಆಡಳಿತಾತ್ಮಕ ವಲಯದಲ್ಲೂ ಚರ್ಚೆ ಆರಂಭವಾಗಿತ್ತು.

47
ಬೆಳಗಾವಿ ಸಂಭ್ರಮ ಹೆಸರಿನಲ್ಲಿ ಬೃಹತ್ ಕಾರ್ಯಕ್ರಮ
Image Credit : Asianet News

ಬೆಳಗಾವಿ ಸಂಭ್ರಮ ಹೆಸರಿನಲ್ಲಿ ಬೃಹತ್ ಕಾರ್ಯಕ್ರಮ

ಶಿವಾನಂದ ನೀಲಣ್ಣನವರ್ ನೇತೃತ್ವದಲ್ಲಿ ಮೇ 17ರಂದು ಸ್ವಚ್ಛ ಬೆಳಗಾವಿ ಸಂಭ್ರಮ ಹೆಸರಿನಲ್ಲಿ ಸುಮಾರು 25 ಸಾವಿರ ಜನರನ್ನು ಸೇರಿಸಿ ಬೃಹತ್ ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ನಡೆಸಲಾಗಿತ್ತು. ಸರ್ದಾರ್ಸ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸಲಾಗಿದ್ದು, ನಗರಾದ್ಯಂತ ಭಾರೀ ಪ್ರಮಾಣದಲ್ಲಿ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಆದರೆ, ಅಗತ್ಯ ಆಡಳಿತಾತ್ಮಕ ಅನುಮತಿ, ಭದ್ರತಾ ಕ್ರಮಗಳು ಹಾಗೂ ಕಾನೂನು ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿತು. ಬಳಿಕ ಬೆಳಗಾವಿ ಮಹಾನಗರ ಪಾಲಿಕೆಯೂ ಅನುಮತಿ ಇಲ್ಲದೇ ಅಳವಡಿಸಿದ್ದ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿತು.

57
ಅಧಿಕಾರಿಗಳ ನಿಗಾ:
Image Credit : Asianet News

ಅಧಿಕಾರಿಗಳ ನಿಗಾ:

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಪ್ರಭಾವ, ದೊಡ್ಡ ಮಟ್ಟದ ಹಣಕಾಸು ವ್ಯವಹಾರ, ಸಾವಿರಾರು ಜನರನ್ನು ಸೇರಿಸುವ ಪ್ರಯತ್ನ ಹಾಗೂ ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆಯಲ್ಲಿ ಆಡಳಿತ ಯಂತ್ರ ಈಗ ಶಿವಂ ಅಸೋಸಿಯೇಟ್ ಚಟುವಟಿಕೆಗಳ ಮೇಲೆ ಹೆಚ್ಚಿನ ನಿಗಾ ವಹಿಸಿದೆ. ಸಹಕಾರ ಇಲಾಖೆ, ಜಿಲ್ಲಾಡಳಿತ ಹಾಗೂ ಇತರ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಪೊಲೀಸರ ಬಿಗಿ ಭದ್ರತೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದು, ಹೂಡಿಕೆ ಸಂಗ್ರಹ ಕಾನೂನು ಬದ್ಧವಾಗಿತ್ತೇ?, ಹಣವನ್ನು ಯಾವ ಉದ್ದೇಶಕ್ಕೆ ಬಳಸಲಾಗಿದೆ?, ಸಾರ್ವಜನಿಕರಿಗೆ ನೀಡಿದ ಭರವಸೆಗಳ ಸ್ವರೂಪ ಏನು? ಎಂಬ ಅಂಶಗಳ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.

67
ಸಾರ್ವಜನಿಕರಲ್ಲಿ ಆತಂಕ
Image Credit : Asianet News

ಸಾರ್ವಜನಿಕರಲ್ಲಿ ಆತಂಕ

ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿರುವ ಹಲವರಲ್ಲಿ ಈಗ ಆತಂಕ ಮನೆ ಮಾಡಿದೆ. ಕೆಲವು ಹೂಡಿಕೆದಾರರು ತಮ್ಮ ಹಣದ ಭದ್ರತೆ ಬಗ್ಗೆ ಪ್ರಶ್ನೆ ಕೇಳತೊಡಗಿದ್ದು, ಇನ್ನೂ ಕೆಲವರು ಪರಿಸ್ಥಿತಿ ಗಮನಿಸುತ್ತಿದ್ದಾರೆ. ಅಧಿಕಾರಿಗಳ ತನಿಖೆಯ ಬಳಿಕವೇ ಶಿವಂ ಅಸೋಸಿಯೇಟ್‌ನ ನಿಜಸ್ವರೂಪ ಮತ್ತು ಹಣಕಾಸು ಚಟುವಟಿಕೆಗಳ ಕುರಿತು ಸ್ಪಷ್ಟ ಚಿತ್ರಣ ಹೊರಬರುವ ಸಾಧ್ಯತೆ ಇದೆ. 46,000ಸಾವಿರ ಜನರಿಂದ‌ ಹಣ ಹೂಡಿಕೆ ತನಿಖೆಯಲ್ಲಿ ಬಯಲಾಗಿದ್ದು, ಅಂದಾಜು 4,500ಕೋಟಿಗೂ ಅಧಿಕ ಹಣ ಹೂಡಿಕೆಯಾಗಿರುವ ಬಗ್ಗೆ ಶಂಕೆ ಇದ್ದು ನೀಲಣ್ಣವರ್ ಗೆ ಸೇರಿದ ನಾಲ್ಕು ಅಕೌಂಟ್ ಗಳನ್ನ‌ ಫ್ರೀಜ್ ಮಾಡಲಾಗಿದೆ. ಪ್ರತಿಯೊಂದು ಅಕೌಂಟ್ ನಲ್ಲಿ 50ಕೋಟಿ, 120ಕೋಟಿ ಹಣ ಕೂಡ ಪತ್ತೆಯಾಗಿದೆ.

77
ಹೆಚ್ಚಿನ ಬಡ್ಡಿದರದ ಆಮಿಷ
Image Credit : Asianet News

ಹೆಚ್ಚಿನ ಬಡ್ಡಿದರದ ಆಮಿಷ

ಶಿವಂ ಅಸೋಸಿಯೇಟ್ ಸಂಸ್ಥೆ ಹೆಸರಿನಲ್ಲಿ ಶಿವಾನಂದ ನೀಲಣ್ಣವರ್ ಹೆಚ್ಚಿನ ಬಡ್ಡಿ ದರ ಕೊಡುವುದಾಗಿ ನಂಬಿಸಿ ಜನರಿಂದ ಹಣ ಹೂಡಿಕೆ ಮಾಡಿಕೊಳ್ಳುತ್ತಿದ್ದ. ಮಾಜಿ ಸೈನಿಕರು, ಯುವಕರು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿದರ ನೀಡುವುದಾಗಿ ಭರವಸೆ ನೀಡಿ ದೊಡ್ಡ ಪ್ರಮಾಣದಲ್ಲಿ ಹಣ ಸಂಗ್ರಹಿಸಿದೆ ಎಂಬ ಆರೋಪಗಳು ಕೇಳಿಬಂದಿವೆ. ಸಾವಿರಾರು ಕೋಟಿ ರುಪಾಯಿ ಹೂಡಿಕೆ ಸಂಗ್ರಹವಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಹಣದ ಬಳಕೆ ಹಾಗೂ ವ್ಯವಹಾರಗಳ ಕುರಿತು ಈಗ ತನಿಖೆ ಆರಂಭವಾಗಿದೆ.ಕೆಲವು ಹೂಡಿಕೆದಾರರು ಸಂಸ್ಥೆಯ ಮೇಲಿನ ನಂಬಿಕೆಯಿಂದ ಹಣ ಹೂಡಿದ್ದರೆ, ಇನ್ನೂ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಪ್ರಚಾರದ ವಿಡಿಯೋಗಳು ಮತ್ತು ಸಾರ್ವಜನಿಕ ಸಭೆಗಳಿಂದ ಪ್ರಭಾವಿತರಾಗಿ ಹೂಡಿಕೆ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಸಂಸ್ಥೆಯ ಕಾರ್ಯವೈಖರಿ, ಹಣಕಾಸು ಮೂಲಗಳು ಹಾಗೂ ವಹಿವಾಟಿನ ಪಾರದರ್ಶಕತೆ ಬಗ್ಗೆ ಈಗ ಪ್ರಶ್ನೆಗಳು ಉದ್ಭವಿಸಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ವಂಚನೆ
ಬೆಳಗಾವಿ
ಹಗರಣ
ಕರ್ನಾಟಕ ಸುದ್ದಿ

Latest Videos
Recommended Stories
Recommended image1
ಟಿಬಿ ಡ್ಯಾಂ ಬಳಿ ಟ್ಯಾಂಕರ್, ಟ್ರಾಕ್ಟರ್ ಭೀಕರ ಅಪಘಾತ, ಮಗು ಸೇರಿ ಒಂದೇ ಕುಟುಂಬದ 6 ಸಾವು
Recommended image2
Bengaluru Rent: 'ತಮ್ಮ ಬರ್ತಾನೆ' ಅಂತ ಸುಳ್ಳು ಹೇಳಿ ₹4,000 ಬಾಡಿಗೆ ಏರಿಸಿದ ಓನರ್! ಯುವತಿ ವಿಡಿಯೋ ವೈರಲ್
Recommended image3
ಮೈಸೂರು ಬೆಳಗಾವಿ ಎಕ್ಸ್‌ಪ್ರೆಸ್‌ ರೈಲು ಹರಿಹರ ನಿಲ್ದಾಣದಲ್ಲಿ ದುರಂತ, ಯಶಸ್ವಿ ಅಣಕು ಪ್ರದರ್ಶನ
Related Stories
Recommended image1
ಬೆಂಗಳೂರಿನಲ್ಲಿ ₹2384 ಕೋಟಿ ನಕಲಿ ಬಿಲ್ಲಿಂಗ್ ದಂಧೆ ಸ್ಫೋಟ: ತೆರಿಗೆ ಇಲಾಖೆ ಬಲೆಗೆ ಬಿದ್ದ GST ವಂಚನೆ ತಿಮಿಂಗಲಗಳು!
Recommended image2
ಚಿಕ್ಕಮಗಳೂರು ಸೈಬರ್ ವಂಚನೆ: ಗೋಲ್ಡ್ ಲೋನ್ ಪಡೆದು ಬ್ಯಾಂಕ್ ನಿಂದ ಹೊರಬಂದ ತಕ್ಷಣ ಹಣ ಮಾಯ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved