MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Engineer's Day Special
Ind vs Afg T20 Series
Bengaluru Metro Stations
Karnataka Power Crisis
Belagavi Cantonment Board
Today's Horoscope in Kannada
Satish Jarkiholi ED Complaint
BRICS Summit 2026
Agumbe Ghat Road Development
SSLC Toppers Reward
Bengaluru Tunnel Road Project
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Ganesh Festival Restrictions
  • Home
  • Karnataka Districts
  • Belagavi: ಗಂಡನಿರುವಾಗಲೇ ಪತ್ನಿಗೆ ಮತ್ತೊಂದು ಮದುವೆಯ ಸಂಚು? ದೂರು ದಾಖಲಿಸಿದ ಪತಿ

Belagavi: ಗಂಡನಿರುವಾಗಲೇ ಪತ್ನಿಗೆ ಮತ್ತೊಂದು ಮದುವೆಯ ಸಂಚು? ದೂರು ದಾಖಲಿಸಿದ ಪತಿ

ಬೆಳಗಾವಿಯ ವೆಂಕಟೇಶ ರಾಠೋಡ ಎಂಬುವವರು, ತಾನು ಬದುಕಿರುವಾಗಲೇ ತನ್ನ ಪತ್ನಿಯ ಕುಟುಂಬಸ್ಥರು ಆಕೆಗೆ ಬಲವಂತವಾಗಿ ಮತ್ತೊಂದು ಮದುವೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪತ್ನಿಯ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿ, ಅವರಿಂದಲೇ ಹಲ್ಲೆಗೊಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ.

1 Min read
Author : Kannadaprabha News
Published : May 13 2026, 09:12 AM IST
Share this Photo Gallery
  • FB
  • TW
  • Linkdin
  • Whatsapp
14
ಪತ್ನಿಗೆ ಮತ್ತೊಂದು ಮದುವೆ
Image Credit : Gemini AI

ಪತ್ನಿಗೆ ಮತ್ತೊಂದು ಮದುವೆ

ಬೆಳಗಾವಿ:ತಾನು ಬದುಕಿರುವಾಗಲೇ ತನ್ನ ಪತ್ನಿಗೆ ಮತ್ತೊಬ್ಬರೊಂದಿಗೆ ಮದುವೆ ಮಾಡಲು ಪತ್ನಿಯ ಕುಟುಂಬಸ್ಥರು ಮುಂದಾಗಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ನ್ಯಾಯಕ್ಕಾಗಿ ಮನವಿ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. 

ಬೆಳಗಾವಿ ಮೂಲದ ವೆಂಕಟೇಶ ರಾಠೋಡ ಎಂಬಾತ, 2022ರಲ್ಲಿ ಬೆಳಗಾವಿ ತಾಲೂಕಿನ ಯುವತಿಯೊಬ್ಬಳೊಂದಿಗೆ ಪರಸ್ಪರ ಒಪ್ಪಿಗೆಯಿಂದ ಮದುವೆಯಾಗಿದ್ದಾಗಿ ತಿಳಿಸಿದ್ದಾರೆ. ಮದುವೆಯ ಬಳಿಕ ಪತ್ನಿಗೆ ಮನೆ ಖರೀದಿ ಮಾಡಿಕೊಟ್ಟಿದ್ದು, ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ಹಣ ಸಹ ನೀಡಿದ್ದೇನೆ ಎಂದು ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಮದುವೆ ನಿಲ್ಲಿಸುವಂತೆ ಮನವಿ
Image Credit : Asianet News

ಮದುವೆ ನಿಲ್ಲಿಸುವಂತೆ ಮನವಿ

ಹಿರೇಬಾಗೇವಾಡಿಯ ರುದ್ರಪ್ಪ ಹಂಚಿನಮನಿ ಹಾಗೂ ಅವರ ಪುತ್ರ ಪ್ರದೀಪ ಹಂಚಿನಮನಿ ಅವರು ತಮ್ಮ ಪತ್ನಿ ಮಂಜುಳಾ ಹಂಚಿನಮನಿಯನ್ನು ಮನೆಯಲ್ಲೇ ಕೂಡಿ ಹಾಕಿ ಇಟ್ಟಿದ್ದಾರೆ. ಬಲವಂತವಾಗಿ ಆಕೆಗೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಮದುವೆ ಮಾಡಲು ಮುಂದಾಗಿದ್ದಾರೆ ಎಂದು ವೆಂಕಟೇಶ ರಾಠೋಡ ಅಳಲು ತೋಡಿಕೊಂಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಪರಸ್ಪರ ಒಪ್ಪಿಗೆಯಿಂದ ಮದುವೆಯಾಗಿದ್ದೇವೆ. ನಾನು ಬದುಕಿರುವಾಗಲೇ ಪತ್ನಿಗೆ ಮತ್ತೊಂದು ಮದುವೆ ಮಾಡಲು ಯತ್ನಿಸುತ್ತಿದ್ದಾರೆ. ಈ ಮದುವೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

Related Articles

Related image1
ವೇದಿಕೆಯಿಂದ ಜಿಗಿದು ಓಡಿ ಹೋಗಿ ಪ್ರಿಯಕರನನ್ನು ತಬ್ಬಿಕೊಂಡು ಹಾರ ಹಾಕಿದ ವಧು; ವರ ಶಾಕ್
Related image2
Hassan: ಕಲ್ಯಾಣಕ್ಕೆ ವಧು ಸಿಗದ್ದಕ್ಕೆ ಕಲ್ಯಾಣಿಗೆ ಬಿದ್ದು ಪ್ರಾಣ ಬಿಟ್ಟ ಹಾಸನದ ಯುವಕ
34
ಸುಳ್ಳು ಪ್ರಕರಣ ದಾಖಲಿಸಿರುವ ಆರೋಪ
Image Credit : Asianet News

ಸುಳ್ಳು ಪ್ರಕರಣ ದಾಖಲಿಸಿರುವ ಆರೋಪ

ಪತ್ನಿಯ ಮನೆಯವರು ತಮ್ಮ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಷಡ್ಯಂತ್ರ ರೂಪಿಸಿ ಜೈಲಿಗೂ ಕಳುಹಿಸಿದ್ದರು ಎಂದು ಆರೋಪಿಸಿದ್ದಾರೆ. ಮನೆ ನಿರ್ಮಾಣಕ್ಕಾಗಿ ಸಹಾಯಧನ ನೀಡಿದ್ದೇನೆ. ನನ್ನಿಂದ ಎಲ್ಲ ರೀತಿಯ ಸೌಲಭ್ಯ ಪಡೆದುಕೊಂಡ ಬಳಿಕ ಈಗ ನನ್ನ ಗಮನಕ್ಕೆ ತರದೇ ಮತ್ತೊಂದು ಮದುವೆ ಮಾಡಲು ಮುಂದಾಗಿದ್ದಾರೆ ಎಂದು ದೂರಿದ್ದಾರೆ.

44
ನನಗೆ ನ್ಯಾಯ ಬೇಕು
Image Credit : instagram

ನನಗೆ ನ್ಯಾಯ ಬೇಕು

ಕೆಲ ದಿನಗಳ ಹಿಂದೆ ಹಿರೇಬಾಗೇವಾಡಿ ಪ್ರದೇಶದಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿ, ಬಂಗಾರ ಹಾಗೂ ಹಣ ಸುಲಿಗೆ ಮಾಡಲಾಗಿದೆ. ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ನನಗೆ ನ್ಯಾಯ ಬೇಕು. ನನ್ನ ಪತ್ನಿಯ ಮತ್ತೊಂದು ಮದುವೆಯನ್ನು ತಡೆಯಬೇಕು ಎಂದು ವೆಂಕಟೇಶ ರಾಠೋಡ ಅವರು ಮನವಿ ಮಾಡಿಕೊಂಡಿದ್ದಾರೆ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಗಂಡ
ಪತ್ನಿ
ಬೆಳಗಾವಿ

Latest Videos
Recommended Stories
Recommended image1
ಗುತ್ತಿಗೆ ಅವಧಿ ಮುಗಿದರೂ ಬೆಂಗಳೂರು ಪ್ರಾಧಿಕಾರಕ್ಕೆ ಸಿಗದ 119 ಬೆಲೆಬಾಳುವ ಆಸ್ತಿಗಳು, ಪಾಲಿಕೆಗೆ ಕೋಟ್ಯಂತರ ಆದಾಯ ನಷ್ಟ
Recommended image2
1905ರಲ್ಲಿ ದೇಶದಲ್ಲೇ ಮೊದಲು ವಿದ್ಯುತ್ ಪಡೆದ ಬೆಂಗಳೂರಿಗೆ KGFನಿಂದ ಬಂದಿತ್ತು ಕರೆಂಟ್! ಅಂದು ಒಂದೇ ಬಲ್ಬ್‌ಗೆ ತಿಂಗಳಿಗೆ 1 ರೂ!
Recommended image3
ವಿಜಯನಗರದಲ್ಲಿ ದುರ್ಘಟನೆ, ಗಣೇಶ ಮೂರ್ತಿ ಕೊಂಡೊಯ್ಯುವ ವೇಳೆ ವಿದ್ಯುತ್ ಶಾಕ್
Related Stories
Recommended image1
ವೇದಿಕೆಯಿಂದ ಜಿಗಿದು ಓಡಿ ಹೋಗಿ ಪ್ರಿಯಕರನನ್ನು ತಬ್ಬಿಕೊಂಡು ಹಾರ ಹಾಕಿದ ವಧು; ವರ ಶಾಕ್
Recommended image2
Hassan: ಕಲ್ಯಾಣಕ್ಕೆ ವಧು ಸಿಗದ್ದಕ್ಕೆ ಕಲ್ಯಾಣಿಗೆ ಬಿದ್ದು ಪ್ರಾಣ ಬಿಟ್ಟ ಹಾಸನದ ಯುವಕ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved