MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಹಿಂಬದಿ ಚಕ್ರ ತುಂಡಾಗಿ ಪಲ್ಟಿ ಹೊಡೆದ ಮಾವು ತುಂಬಿದ ಲಾರಿ; ರಸ್ತೆಯಲ್ಲಿ ಚೆಲ್ಲಿದ ಮಾವಿನ ಹಣ್ಣು!

ಹಿಂಬದಿ ಚಕ್ರ ತುಂಡಾಗಿ ಪಲ್ಟಿ ಹೊಡೆದ ಮಾವು ತುಂಬಿದ ಲಾರಿ; ರಸ್ತೆಯಲ್ಲಿ ಚೆಲ್ಲಿದ ಮಾವಿನ ಹಣ್ಣು!

ಬಾಗಲಕೋಟೆ ಜಿಲ್ಲೆಯ ಇಳಕಲ್ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮಾವು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಲಕ್ಷಾಂತರ ಮೌಲ್ಯದ ಮಾವಿನ ಹಣ್ಣುಗಳು ರಸ್ತೆಗೆ ಚೆಲ್ಲಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

1 Min read
Author : Sathish Kumar KH
Published : May 14 2026, 04:44 PM IST
Share this Photo Gallery
  • FB
  • TW
  • Linkdin
  • Whatsapp
15
ಮಾವು ತುಂಬಿದ ಲಾರಿ ಪಲ್ಟಿ
Image Credit : Asianet News

ಮಾವು ತುಂಬಿದ ಲಾರಿ ಪಲ್ಟಿ

ಬಾಗಲಕೋಟೆ (ಮೇ 14): ಜಿಲ್ಲೆಯ ಇಳಕಲ್ ತಾಲೂಕಿನ ಗೊರಬಾಳ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮಾವು ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ. ಅಪಘಾತದ ತೀವ್ರತೆಗೆ ಲಾರಿಯ ಹಿಂಬದಿಯ ಚಕ್ರಗಳು ವಾಹನದಿಂದ ಪ್ರತ್ಯೇಕವಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಮಾವಿನ ಹಣ್ಣುಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

Add Asianetnews Kannada as a Preferred SourcegooglePreferred
25
ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ:
Image Credit : Asianet News

ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ:

ಮೂಲಗಳ ಪ್ರಕಾರ, ಈ ಲಾರಿಯು ಮಾವಿನ ಹಣ್ಣನ್ನು ತುಂಬಿಕೊಂಡು ಕಲಬುರ್ಗಿ ಕಡೆಗೆ ವೇಗವಾಗಿ ಹೊರಟಿತ್ತು. ಇಳಕಲ್ ತಾಲೂಕಿನ ಗೊರಬಾಳ ಕ್ರಾಸ್ ಬಳಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆಯ ಮಧ್ಯೆ ಇದ್ದ ಡಿವೈಡರ್ ಮೇಲೆ ಹತ್ತಿ ಪಲ್ಟಿಯಾಗಿದೆ. ಲಾರಿ ಅತಿ ವೇಗದಲ್ಲಿದ್ದ ಕಾರಣ ಡಿವೈಡರ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಹಿಂಬದಿಯ ಪಾಟಾ ಕಟ್ ಆಗಿ, ವಾಹನದಿಂದ ಚಕ್ರಗಳೇ ಕಿತ್ತು ಬಂದಿವೆ.

Related Articles

Related image1
ಮಾವು-ಹಲಸು ಮೇಳದಲ್ಲಿ ದೇವೇಗೌಡ, ₹300 ಕೊಟ್ಟು ರೈತನಿಂದ ಹಲಸು ಖರೀದಿಸಿದ ಬಳಿಕ ಸರ್ಕಾರಕ್ಕೆ ಕೊಟ್ಟ ಎಚ್ಚರಿಕೆ ಏನು?!”
Related image2
ಜಗತ್ತಿನ ದುಬಾರಿ ಮಿಯಾ ಜಾಕಿ ಮಾವು ಬೆಳೆದ ಕೊಪ್ಪಳದ ರೈತನಿಗೆ ಸಿಕ್ಕಿದ್ದು ಕೇವಲ 3 ಸಾವಿರ ರೂ!
35
ಅಪಾರ ನಷ್ಟ, ಚಾಲಕ ಪ್ರಾಣಾಪಾಯದಿಂದ ಪಾರು
Image Credit : Asianet News

ಅಪಾರ ನಷ್ಟ, ಚಾಲಕ ಪ್ರಾಣಾಪಾಯದಿಂದ ಪಾರು

ಅಪಘಾತ ಸಂಭವಿಸಿದ ತಕ್ಷಣ ಲಾರಿಯಲ್ಲಿದ್ದ ಮಾವಿನ ಹಣ್ಣಿನ ಬಾಕ್ಸ್‌ಗಳು ಕೆಳಗೆ ಬಿದ್ದಿವೆ. ಇದರಿಂದಾಗಿ ನೂರಾರು ಕೆಜಿ ಮಾವಿನ ಹಣ್ಣುಗಳು ರಸ್ತೆಯ ಮೇಲೆ ಹರಡಿಕೊಂಡಿದ್ದು, ಜಖಂಗೊಂಡಿವೆ.

45
ಲಾರಿ ಚಾಲಕ ಪಾರು
Image Credit : Asianet News

ಲಾರಿ ಚಾಲಕ ಪಾರು

ಘಟನೆಯಲ್ಲಿ ಲಾರಿ ಕೂಡ ಸಂಪೂರ್ಣ ಜಖಂಗೊಂಡಿದ್ದು, ಮಾಲೀಕರಿಗೆ ಅಪಾರ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ. ಅದೃಷ್ಟವಶಾತ್ ಲಾರಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

55
ಸಂಚಾರ ವ್ಯತ್ಯಯ, ಪರ್ಯಾಯ ವ್ಯವಸ್ಥೆ:
Image Credit : Asianet News

ಸಂಚಾರ ವ್ಯತ್ಯಯ, ಪರ್ಯಾಯ ವ್ಯವಸ್ಥೆ:

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಪಲ್ಟಿಯಾಗಿ ಹಣ್ಣುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ನಂತರ ಸ್ಥಳಕ್ಕೆ ಆಗಮಿಸಿದವರು ರಸ್ತೆಯ ಮೇಲೆ ಬಿದ್ದಿದ್ದ ಮಾವಿನ ಹಣ್ಣುಗಳನ್ನು ಮತ್ತು ಬಾಕ್ಸ್‌ಗಳನ್ನು ಪಕ್ಕಕ್ಕೆ ಸರಿಸಿದರು. ಉಳಿದ ಹಣ್ಣುಗಳನ್ನು ಮತ್ತೊಂದು ಲಾರಿಗೆ ತುಂಬಿಸಿ ಸಾಗಿಸುವ ವ್ಯವಸ್ಥೆ ಮಾಡಲಾಯಿತು.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಮಾವು
ಬಾಗಲಕೋಟೆ
ಅಪಘಾತ

Latest Videos
Recommended Stories
Recommended image1
ಕರ್ನಾಟಕಕ್ಕೆ ಲಗ್ಗೆ ಇಟ್ಟ ಟೆಸ್ಲಾ: ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಮೊದಲ ಎಕ್ಸ್‌ಪೀರಿಯೆನ್ಸ್ ಸೆಂಟರ್ ಆರಂಭ
Recommended image2
Now Playing
ಬೆಂಗಳೂರಲ್ಲೇ ಶ್ರೀನಿವಾಸ ಗೋವಿಂದನ ಭವ್ಯ ಕಲ್ಯಾಣೋತ್ಸವ!
Recommended image3
19 ವರ್ಷಗಳ ಸುದೀರ್ಘ ಕಾಯುವಿಕೆ ಅಂತ್ಯ: ಕುಷ್ಟಗಿಯಲ್ಲಿ ತಂದೆ-ಮಗಳ ಭಾವನಾತ್ಮಕ ಮಿಲನ!
Related Stories
Recommended image1
ಮಾವು-ಹಲಸು ಮೇಳದಲ್ಲಿ ದೇವೇಗೌಡ, ₹300 ಕೊಟ್ಟು ರೈತನಿಂದ ಹಲಸು ಖರೀದಿಸಿದ ಬಳಿಕ ಸರ್ಕಾರಕ್ಕೆ ಕೊಟ್ಟ ಎಚ್ಚರಿಕೆ ಏನು?!”
Recommended image2
ಜಗತ್ತಿನ ದುಬಾರಿ ಮಿಯಾ ಜಾಕಿ ಮಾವು ಬೆಳೆದ ಕೊಪ್ಪಳದ ರೈತನಿಗೆ ಸಿಕ್ಕಿದ್ದು ಕೇವಲ 3 ಸಾವಿರ ರೂ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved