MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಜಗತ್ತಿನ ದುಬಾರಿ ಮಿಯಾ ಜಾಕಿ ಮಾವು ಬೆಳೆದ ಕೊಪ್ಪಳದ ರೈತನಿಗೆ ಸಿಕ್ಕಿದ್ದು ಕೇವಲ 3 ಸಾವಿರ ರೂ!

ಜಗತ್ತಿನ ದುಬಾರಿ ಮಿಯಾ ಜಾಕಿ ಮಾವು ಬೆಳೆದ ಕೊಪ್ಪಳದ ರೈತನಿಗೆ ಸಿಕ್ಕಿದ್ದು ಕೇವಲ 3 ಸಾವಿರ ರೂ!

ಕೊಪ್ಪಳದ ರೈತರೊಬ್ಬರು ವಿಶ್ವದ ಅತ್ಯಂತ ದುಬಾರಿ ಮಿಯಾ ಜಾಕಿ ಮಾವನ್ನು  ಬೆಳೆದಿದ್ದಾರೆ. ಆದರೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಈ ಮಾವಿಗೆ ಸ್ಥಳೀಯವಾಗಿ ಕೇವಲ 3 ಸಾವಿರ ರೂಪಾಯಿ ಬೆಲೆ ಸಿಕ್ಕಿದ್ದು, ಮಾರುಕಟ್ಟೆಯ ಸವಾಲು ಎದುರಿಸುತ್ತಿದ್ದಾರೆ.

2 Min read
Author : Gowthami K
Published : May 12 2026, 04:18 PM IST
Share this Photo Gallery
  • FB
  • TW
  • Linkdin
  • Whatsapp
15
ವಿಶ್ವದ ದುಬಾರಿ ಮಾವಿಗೆ ಕರ್ನಾಟಕದಲ್ಲಿ ಕೇವಲ 3 ಸಾವಿರ ರೂ!
Image Credit : Asianet News

ವಿಶ್ವದ ದುಬಾರಿ ಮಾವಿಗೆ ಕರ್ನಾಟಕದಲ್ಲಿ ಕೇವಲ 3 ಸಾವಿರ ರೂ!

ಜಗತ್ತಿನ ದುಬಾರಿ ಮಾವು ಎಂದೇ ಪ್ರಸಿದ್ಧಿಯಾಗಿರುವ ಜಪಾನ್ ಮೂಲದ ಮಿಯಾ ಜಾಕಿ ಮಾವು ಕೊಪ್ಪಳದ ರೈತನೋರ್ವ ಬೆಳೆದಿದ್ದು, ಅದು ಈಗ ಬಂಪರ್ ಬೆಳೆ ಬಂದಿದೆ. ಆದರೆ ವಿಶ್ವದ ದುಬಾರಿ ಮಾವಿಗೆ ಈಗ ದರದ ಸಮಸ್ಯೆ ಎದುರಾಗಿದೆ. 2.50 ಲಕ್ಷ ಇದ್ದ ಮೀಯಾ ಜಾಕಿ ಕೊಪ್ಪಳದ ಮಾವು ಮೇಳದಲ್ಲಿ ಪ್ರತಿ ಕೆಜಿಗೆ ಕೇವಲ 3 ಸಾವಿರ ರೂಪಾಯಿ ಮಾರಾಟವಾಗಿದೆ.

Add Asianetnews Kannada as a Preferred SourcegooglePreferred
25
2 ಎಕರೆ ಪ್ರದೇಶದಲ್ಲಿ ಮಿಯಾ ಜಾಕಿ ಬೆಳೆದ ರೈತ
Image Credit : Asianet News

2 ಎಕರೆ ಪ್ರದೇಶದಲ್ಲಿ ಮಿಯಾ ಜಾಕಿ ಬೆಳೆದ ರೈತ

ಈ ಹಿಂದೆ ಕೊಪ್ಪಳ ತೋಟಗಾರಿಕಾ ಇಲಾಖೆ ಹಣ್ಣು ಮಾರಾಟ ಮೇಳದಲ್ಲಿ ಮೂರು ವರ್ಷಗಳ ಹಿಂದೆ ಪ್ರದರ್ಶನಕ್ಕೆ ಇಟ್ಟಿದ್ದ ಮಿಯಾಜಾಕಿ ಮಾವು ನೋಡಿ ಅದರಿಂದ ಪ್ರೇರಣೆಗೊಂಡ ರೈತ ನಾಗಪ್ಪ ಬಗನಾಳ ತಾಲೂಕಿನ ಕಲ್‌ ತಾವರಗೇರಾ ಗ್ರಾಮದಲ್ಲಿರುವ ತಮ್ಮ 2 ಎಕರೆ ಪ್ರದೇಶದಲ್ಲಿ ಮಿಯಾ ಜಾಕಿ ಬೆಳೆದಿದ್ದರು. ಆದರೆ ಸದ್ಯ ನಾಗಪ್ಪ ಬೆಳೆದ ಮಿಯಾ ಜಾಕಿ ಮಾವಿನ ಹಣ್ಣಿಗೆ ಉತ್ತಮ ಬೆಲೆ ಸಿಕ್ಕಿಲ್ಲ. ಕೆಜಿ ಗೆ 2.50 ಲಕ್ಷ ಮೌಲ್ಯದ ಮಾವು ಈಗ ಬರೇ 3 ಸಾವಿರ ರೂಗೆ ಮಾರಾಟವಾಗಿದೆ. ಹೀಗಾಗಿ ಮಿಯಾ ಜಾಕಿಗೆ ಉತ್ತಮ ಬೆಲೆ ಕೊಡಿಸುವಂತೆ ರೈತ ನಾಗಪ್ಪ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Related Articles

Related image1
ಮಿಯಾಝಾಕಿ ಮಾವು ನಮ್ಮ ಸೇಂದೂರಕ್ಕೂ ಸಮವಲ್ಲ, ಇದು ಶಿಫಾರಸು ತಳಿ ಅಲ್ಲ; ರೈತರಿಗೆ ಎಚ್ಚರಿಕೆ ಕೊಟ್ಟ IIHR ವಿಜ್ಞಾನಿಗಳು
Related image2
ಕೊಪ್ಪಳ ರೈತನ ಹೊಲದಲ್ಲಿ ಬೆಳೆದ ಜಪಾನಿನ ಪ್ರಸಿದ್ಧ ಮಿಯಾ ಜಾಕಿ ಮಾವು, ದುಬಾರಿ ಹಣ್ಣಿಗೆ ಮಾರುಕಟ್ಟೆಯದ್ದೇ ಚಿಂತೆ!
35
ಪ್ರತಿ ಸಸಿಗೆ ₹1300 ಕೊಟ್ಟು ಖರೀದಿ ಮಾಡಿದ ರೈತ
Image Credit : Asianet News

ಪ್ರತಿ ಸಸಿಗೆ ₹1300 ಕೊಟ್ಟು ಖರೀದಿ ಮಾಡಿದ ರೈತ

ಮೂರು ವರ್ಷಗಳ ಹಿಂದೆ ದೆಹಲಿಯಿಂದ ರೈಲು ಮೂಲಕ 200 ಮಿಯಾಜಾಕಿ ಮಾವು ಸಸಿಯನ್ನು ನಾಗಪ್ಪ ಬಗನಾಳ ತರಿಸಿದ್ದರು. ಪ್ರತಿ ಸಸಿಗೆ ₹1300 ಕೊಟ್ಟಿದ್ದಾರೆ. ನಾಟಿ ಮಾಡಿದ ಬಳಿಕ 20 ಸಸಿಗಳು ಸತ್ತಿವೆ. 180 ಮಿಯಾಜಾಕಿ ಮಾವಿನ ಗಿಡಗಳು ಭರ್ಜರಿಯಾಗಿ ಬೆಳೆದು ನಿಂತು, ಈ ಪೈಕಿ ಈ ವರ್ಷ ಒಂದಷ್ಟು ಗಿಡಗಳು ನಿರೀಕ್ಷೆಗೂ ಮೀರಿ ಫಸಲು ನೀಡಿವೆ.

45
ಮಾರುಕಟ್ಟೆ ಸವಾಲು:
Image Credit : Asianet News

ಮಾರುಕಟ್ಟೆ ಸವಾಲು:

ಪ್ರತ್ಯೇಕ ಉಪಚಾರವೇನೂ ಇಲ್ಲದೆ ಎಲ್ಲಾ ಮಾವು ಬೆಳೆದಂತೆ ಬೆಳೆದ ಮಿಯಾಜಾಕಿ ಮಾವಿಗೆ ಮಾರುಕಟ್ಟೆಯದ್ದೆ ದೊಡ್ಡ ಸವಾಲು ಆಗಿದೆ. ಈ ವರ್ಷವಷ್ಟೇ ಬೆಳೆದಿರುವ ಮಿಯಾಜಾಕಿ ಮಾವಿಗೆ ಸ್ಥಳೀಯವಾಗಿ ಮಾರುಕಟ್ಟೆ ಇಲ್ಲ. ಹೀಗಾಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೇ ಇದನ್ನು ಮಾರಾಟ ಮಾಡಬೇಕಾಗಿದೆ. ರಫ್ತು ಮಾಡುವುದು ಕೂಡ ಸವಾಲಿನ ಕೆಲಸವಾಗಿದೆ.

55
ಏನಿದು ಮಿಯಾ ಜಾಕಿ ಮಾವು?
Image Credit : Asianet News

ಏನಿದು ಮಿಯಾ ಜಾಕಿ ಮಾವು?

ಜಪಾನ್ ದೇಶದ ಕ್ಯುಶು ಪ್ರಾಂತದ ಮಿಯಾಜಾಕಿ ನಗರದಲ್ಲಿ ಇದನ್ನು ಹೆಚ್ಚಾಗಿ ಬೆಳೆಯುವುದರಿಂದ ಇದಕ್ಕೆ ಮಿಯಾ ಜಾಕಿ ಮಾವು ಎಂದು ಹೆಸರು ಬಂದಿದೆ. ಸಾಮಾನ್ಯವಾಗಿ ಜಪಾನ್ ಸುತ್ತಮುತ್ತಲ ಪ್ರದೇಶದಲ್ಲಿಯೇ ಬೆಳೆಯುವ ಈ ಮಾವು ಜಗತ್ತಿನ ದುಬಾರಿ ಮಾವು ಎಂದೇ ಪ್ರಸಿದ್ಧಿಯಾಗಿದೆ. ಪ್ರತಿ ಕೆಜಿಗೆ ₹2.5 ಲಕ್ಷದಿಂದ ₹3 ಲಕ್ಷಕ್ಕೆ ಇದು ಮಾರಾಟವಾಗುತ್ತದೆ. ದುಬಾರಿ ಮಾವು ಎನ್ನುವ ಕಾರಣಕ್ಕಾಗಿ ಕಷ್ಟಪಟ್ಟು ಬೆಳೆದಿದ್ದೇವೆ. ನಿರೀಕ್ಷೆಗೂ ಮೀರಿ ಉತ್ತಮ ಫಸಲು ಬಂದಿದೆ. ಈಗ ಅದನ್ನು ಮಾರಾಟ ಮಾಡುವುದೇ ದೊಡ್ಡ ಸವಾಲು ಎಂದು ರೈತ ನಾಗಪ್ಪ ಬಗನಾಳ ತಿಳಿಸಿದ್ದಾರೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಮಾವು
ರೈತರು
ಕೊಪ್ಪಳ
ಸುದ್ದಿ
ಮಾರುಕಟ್ಟೆ

Latest Videos
Recommended Stories
Recommended image1
ಚಿಕ್ಕಮಗಳೂರು: ₹1 ಕೋಟಿ ಮೌಲ್ಯದ 'ಎರಡು ತಲೆ ಹಾವು' ಮಾರಾಟಕ್ಕೆ ಯತ್ನ; ಐವರು ಖದೀಮರು ಅರಣ್ಯ ದಳದ ಬಲೆಗೆ!
Recommended image2
ಬೆಂಗಳೂರು ಉಪನಗರ ರೈಲಿಗೆ 153 ಎಸಿ ಬೋಗಿ ಪೂರೈಕೆಗೆ ಐಸಿಎಫ್‌ ಗ್ರೀನ್‌ ಸಿಗ್ನಲ್‌: ರಾಜಧಾನಿಯಲ್ಲಿ ಸಂಚಾರ ಕ್ರಾಂತಿ
Recommended image3
ಶ್ರೀಲಂಕಾದಿಂದ ಭಾರತಕ್ಕೆ ರಾಮಸೇತು ಮಾರ್ಗದಲ್ಲಿ ಈಜಿದ ಮೊದಲ ಜೋಡಿ, ಬೆಂಗಳೂರು ಐಟಿ ದಂಪತಿಯ ಸಾಹಸಗಾಥೆ!
Related Stories
Recommended image1
ಮಿಯಾಝಾಕಿ ಮಾವು ನಮ್ಮ ಸೇಂದೂರಕ್ಕೂ ಸಮವಲ್ಲ, ಇದು ಶಿಫಾರಸು ತಳಿ ಅಲ್ಲ; ರೈತರಿಗೆ ಎಚ್ಚರಿಕೆ ಕೊಟ್ಟ IIHR ವಿಜ್ಞಾನಿಗಳು
Recommended image2
ಕೊಪ್ಪಳ ರೈತನ ಹೊಲದಲ್ಲಿ ಬೆಳೆದ ಜಪಾನಿನ ಪ್ರಸಿದ್ಧ ಮಿಯಾ ಜಾಕಿ ಮಾವು, ದುಬಾರಿ ಹಣ್ಣಿಗೆ ಮಾರುಕಟ್ಟೆಯದ್ದೇ ಚಿಂತೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved