MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಕಮಲಾಕರ ಭಟ್‌ನ ರಾಣಿ ಸುಚಿತ್ರಾಳನ್ನ ಡುಡುಂ ಎನ್ನಿಸಿದ್ದ ಬುಲೆಟ್ ಮಹೇಶ; ಸ್ಕೆಚ್ ಉಲ್ಟಾ ಆಗಿ ಅಣ್ಣ ಹೋಗ್ಬಿಟ್ಟ!

ಕಮಲಾಕರ ಭಟ್‌ನ ರಾಣಿ ಸುಚಿತ್ರಾಳನ್ನ ಡುಡುಂ ಎನ್ನಿಸಿದ್ದ ಬುಲೆಟ್ ಮಹೇಶ; ಸ್ಕೆಚ್ ಉಲ್ಟಾ ಆಗಿ ಅಣ್ಣ ಹೋಗ್ಬಿಟ್ಟ!

ಪರ ಪುರುಷರೊಂದಿಗೆ ಸಂಬಂಧ ಬೆಳೆಸುವುದನ್ನೇ ರೂಢಿಸಿಕೊಂಡಿದ್ದ ಹೆಂಡತಿ ಸುಚಿತ್ರಾಳನ್ನ ಮುಗಿಸಿಲು ಮಹೇಶ್ ಮಹೂರ್ತ ಇಟ್ಟಿದ್ದನು. ಮಚ್ಚಿನೇಟು ತಿಂದರೂ ಬದುಕಿದ ಸುಚಿತ್ರಾ, ಶನಿಶಾಂತಿ ಮಾಡಲು ಬಂದ ಜ್ಯೋತಿಷಿ ಕಮಲಾಕರ ಭಟ್‌ನೊಂದಿಗೆ ಸೇರಿ ಗಂಡನ ಮುಗಿಸಲು ಸ್ಕೆಚ್ ಹಾಕಿದ್ದಳು. ಆದರೆ, ಭಾವ ಬಲಿಯಾದರು.

3 Min read
Author : Sathish Kumar KH
Published : Feb 10 2026, 09:51 PM IST
Share this Photo Gallery
  • FB
  • TW
  • Linkdin
  • Whatsapp
18
Image Credit : Asianet News

ಉತ್ತರ ಕನ್ನಡ (ಫೆ.10): ಹೂವಿನಿಂದ ಹೂವಿಗೆ ಹಾರುವ ದುಂಬಿಯಂತೆ ಗಂಡಸರನ್ನು ಬದಲಿಸುತ್ತಿದ್ದ ಹೆಂಡತಿ ಸುಚಿತ್ರಾಳ ಕಾಮವಾಂಛೆಗೆ ಪಿತ್ತ ನೆತ್ತಿಗೇರಿಸಿಕೊಂಡಿದ್ದ ಗಂಡ ಮಹೇಶ್ ಜಟ್ಯಾ ನಾಯ್ಕ್ ಇವಳನ್ನು ನಾನೇ ಕೊಂದು ಜೈಲಿಗೆ ಹೋಗುತ್ತೇನೆಂದು ಮಚ್ಚಿನಿಂದ ತಲೆಗೆ ಹೊಡೆದಿದ್ದನು. ಆದರೆ, ಮಚ್ಚಿನೇಟಿನಿಂದ ಗಾಯಗೊಂಡಿದ್ದ ಸುಚಿತ್ರಾ ಚಿಕಿತ್ಸೆ ಬದುಕುಳಿದಿದ್ದಳು. ಇದಾದ ನಂತರ ಜೀವನ ಸರಿ ಹೋಗುತ್ತದೆ ಎಂದುಕೊಂಡಿದ್ದ ಮಹೇಶ ಇದೀಗ ಮಗಳಿಗೆ ಆಶ್ರಯ ಕೊಟ್ಟ ಅಣ್ಣನನ್ನು ಕಳೆದುಕೊಂಡಿದ್ದಾನೆ. ಕಮಲಾಕರ ಭಟ್‌ನ ಕೀಚಕ ಬುದ್ಧಿಗೆ ಸುಂದರ ಸಂಸಾರ ಬೀದಿಗೆ ಬಿದ್ದಿದೆ.

28
Image Credit : Asianet News

ರಾಜ್ಯಕ್ಕೆ ಜ್ಯೋತಿಷ್ಯ ಹೇಳುತ್ತಿದ್ದ ಗುರೂಜಿ ಕಮಲಾಕರ ಭಟ್‌ನನ್ನು ಶನಿಶಾಂತಿ ಮಾಡಿಸಲು ಮನೆಗೆ ಕರೆಸಿಕೊಂಡು ಬುಟ್ಟಿಗೆ ಹಾಕಿಕೊಂಡ ಸುಚಿತ್ರಾಳ ಪರಪುರುಷರೊಂದಿಗನ ಸಾಂಗತ್ಯಕ್ಕೆ ಸ್ವತಃ ಸುಚಿತ್ರಾಳ ಗಂಡ ಮಹೇಶ್ ಜಟ್ಯಾ ನಾಯ್ಕ್ ರೋಸಿ ಹೋಗಿದ್ದನು. ಗಂಡಸರನ್ನ ಹೂವಿನ ಹಾಗೆ ಬದಲಿಸುವ ಪಾತರಗಿತ್ತಿಯಂತಾಗಿದ್ದ ಸುಚಿತ್ರಾಳ ಕಥೆ ಮುಗಿಸಲು ಮಹೇಶ್ ಮುಹೂರ್ತ ಇಟ್ಟಿದ್ದನು.

Related Articles

Related image1
ಮಹೇಶನ ಬುಲೆಟ್ ನೋಡಿ 17 ವರ್ಷಕ್ಕೆ ಗರ್ಭಿಣಿಯಾಗಿದ್ದ ಸುಚಿತ್ರಾ; ಪತಿ ಊರು ಬಿಡ್ತಿದ್ದಂತೆ ಪಾತರಗಿತ್ತಿಯಾದ ಪತ್ನಿ!
Related image2
ಕಮಲಾಕರ ಭಟ್‌ಗೆ ಸುಚಿತ್ರಾಳನ್ನು ಪರಿಚಯ ಮಾಡಿದ್ದೇ ಈ ಸುಮಾ; ಶನಿಶಾಂತಿ ಮಾಡಿ ಅಂದ್ರೆ, ಶನಿಯಂತೆ ಹೆಗಲೇರಿದ!
38
Image Credit : Asianet News

ಒಂದು ದಿನ ಸಿಟ್ಟಿನಲ್ಲಿ ಹೆಂಡತಿ ತಲೆಗೆ ಮಚ್ಚಿನೇಟು ಕೊಟ್ಟಿದ್ದನು. ಆಗ ಸುಚಿತ್ರಾ ಜಸ್ಟ್ ಮಿಸ್ ಆಗಿ ಆಸ್ಪತ್ರೆ ಸೇರಿದರೆ, ಹಲ್ಲೆ ಮಾಡಿದ್ದ ಮಹೇಶ್ ಹಾಫ್ ಮರ್ಡರ್ ಕೇಸಿನಲ್ಲಿ ಜೈಲು ಸೇರಿದ್ದನು. ಕೊನೆಗೆ, ಗಂಡ ಬಿಟ್ಟವಳು ಎಂದಿನಿಸಿಕೊಳ್ಳಲಾರದೇ ಗಂಡ-ಹೆಂಡತಿ ಜಗಳದಲ್ಲಿ ತನ್ನದೇ ತಪ್ಪು ಎಂದು ಸುಚಿತ್ರಾ ಗಂಡನಿಗೆ ಜಾಮೀನು ಕೊಟ್ಟು ಜೈಲಿನಿಂದ ಬಿಡಿಸಿಕೊಂಡು ಬಂದಿದ್ದಳು.

48
Image Credit : Asianet News

ಇದಾದ ನಂತರ ಜೀವನ ಸರಿಹೋಗುತ್ತದೆ ಎಂದು ಸಂತಸದಿಂದಿದ್ದ ಮಹೇಶ್‌ನಿಗೆ ಮತ್ತೊಂದು ಶಾಕ್ ಕಾದಿತ್ತು. ಮಗಳ ಜಾತಕದಲ್ಲಿ ದೋಷವಿದೆ ಎಂದು ಶನಿಶಾಂತಿ ಮಾಡಿಸಬೇಕು ಎಂದು ಸುಚಿತ್ರಾ ಜ್ಯೋತಿಷಿಗಾಗಿ ಹುಡುಕಿದ್ದಳು. ಆಗ ಸ್ನೇಹಿತೆ ಸುಮಾಳಿಂದ ಟಿವಿಯಲ್ಲಿ ಜ್ಯೋತಿಷ್ಯ ಹೇಳಲು ಬರುತ್ತಿದ್ದ ಕಮಲಾಕರ ಭಟ್‌ನ ಸಂಪರ್ಕ ಸಿಗುತ್ತದೆ. ಗಂಡ-ಹೆಂಡತಿ ಹಾಗೂ ಮಗುವನ್ನು ಕೂರಿಸಿ ಮನೆಯಲ್ಲಿ ಶಾಂತಿ ಹೋಮ ಮಾಡಿದ ಕಮಲಾಕರ ಭಟ್, ನಂತರ ಸುಚಿತ್ರಾಳ ಕುಟುಂಬಕ್ಕೆ ಶನಿಯಾಗಿ ಹೆಗಲೇರಿದ್ದಾನೆ. 

ಸುಂದರ ಮಹಿಳೆ ನೋಡಿದ ಸ್ತ್ರೀಲೋಲ ಕಮಲಾಕರ ಭಟ್, ಒಂದು ದಿನಕ್ಕೆ 2 ಲಕ್ಷ ರೂ. ಕೊಡುವುದಾಗಿ ಹಣದ ಆಮಿಷವೊಡ್ಡಿ ಸುಚಿತ್ರಾಳನ್ನು ಮಂಚಕ್ಕೆ ಕರೆಸಿದ್ದಾನೆ. ಆದರೆ, ಕಮಲಾಕರನಿಗಿಂದ ಭಲೇ ಕಿಲಾಡಿಯಾಗಿದ್ದ ಸುಚಿತ್ರಾ ಸ್ವಾಮೀಜಿಯೊಂದಿಗೆ ಕಳೆದ ಖಾಸಗಿ ಕ್ಷಣಗಳ ಅಶ್ಲೀಲ ಫೋಟ ಮತ್ತು ವಿಡಿಯೋಗಳನ್ನು ಗುಪ್ತವಾಗಿ ಸೆರೆ ಹಿಡಿದುಕೊಂಡಿದ್ದಾಳೆ.

58
Image Credit : Asianet News

ಕೆಲವು ದಿನಗಳ ನಂತರ ಕಮಲಾಕರ ಭಟ್‌ನಿಗೆ ಅಶ್ಲೀಲ ವಿಡಿಯೋ ತುಣುಕು ಕಳಿಸಿದ ಸುಚಿತ್ರಾ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ನಂತರ, ನಾನು ಗಂಡನ ಮನೆಯನ್ನು ಬಿಟ್ಟು ನಿನ್ನೊಂದಿಗೆ ಇರುತ್ತೇನೆ. ನಮಗೊಂದು ಮನೆ ಮಾಡಿಕೊಡು ಎಂದು ಕೇಳಿದ್ದಾಳೆ. ಗಂಡನನ್ನು ಬಿಟ್ಟು ಬರಲು ಮುಂದಾದ ಸುಚಿತ್ರಾಳಿಗೆ ತಾನೇ ಗಂಡನಾಗಲು ಕಮಲಾಕರ ಭಟ್ ಕುತಂತ್ರ ನಡೆಸಿದ್ದಾನೆ. ಗಂಡನನ್ನು ಬಿಟ್ಟು ಇಬ್ಬರು ಹೆಣ್ಣು ಮಕ್ಕಳನ್ನು ಕರೆದುಕೊಂಡು ಬಂದ ಸುಚಿತ್ರಾಳಿಗೋಸ್ಕರ ಶಿವಮೊಗ್ಗದಲ್ಲಿ ಕಮಲಾಕರ ಮನೆ ಮಾಡಿ ಅವರೊಂದಿಗೆ ಒಂದೇ ಕುಟುಂಬದಂತೆ ವಾಸಿಸಲು ಆರಂಭಿಸಿದ್ದಾನೆ

68
Image Credit : Asianet News

ಇಲ್ಲಿ ಮಾಡಿದ ಒಂದು ಎಡವಟ್ಟೆಂದರೆ ಸುಚಿತ್ರಾಳ ಹಿರಿಯ ಮಗಳಿಗೆ, ಇವರ ಅನೈತಿಕ ಸಂಬಂಧದ ಬಗ್ಗೆ ಸ್ಪಷ್ಟ ಅರಿವಿದ್ದರಿಂದ ಆಕೆಯನ್ನು ಅಪ್ಪನ ಜೊತೆಗೆ ಕಳಿಸಲು ಬೆದರಿಕೆ ಹಾಕಿದ್ದರು. ಇದರಿಂದ ಹೆದರಿಕೊಂಡು ಮಗಳು ಅಪ್ಪನಿಗೆ ಇರುವ ವಿಚಾರ ಹೇಳಿ ದೊಡ್ಡಪ್ಪನ ಮನೆಯಲ್ಲಿ ಆಶ್ರಯ ಪಡೆದಿದ್ದಳು. ಆದರೆ, ಅಪ್ಪನೊಂದಿಗೆ ಹೋದ ಮಗಳಿಂದ ತಮ್ಮ ರಾಸಲೀಲೆ ಎಲ್ಲಿ ಬಹಿರಂಗ ಆಗುತ್ತದೆ ಎಂಬ ಭಯದಿಂದ ಸುಚಿತ್ರಾ ಹಾಗೂ ಕಮಲಾಕರ ಇಬ್ಬರೂ ದೊಡ್ಡ ಮಗಳನ್ನು ವಾಪಸ್ ಮನೆಗೆ ಕರೆತರಲು ಮುಂದಾಗಿದ್ದಾರೆ. ಇದಕ್ಕೆ ವಿನಯ್ ಎಂಬಾತನ ಸಹಾಯ ಕೇಳಿದ್ದು, ಆತ ಮೂವರು ಮುಸ್ಲಿಂ ದಾಂಡಿಗರನ್ನು ಜ್ಯೋತಿಷಿ ಜೊತೆಗೆ ಹೋಗುವಂತೆ ಕಳಿಸಿದ್ದಾನೆ.

78
Image Credit : Asianet News

ಕಮಲಾಕರ ಭಟ್, ಸುಚಿತ್ರಾ, ಸುಚಿತ್ರಾಳ ಅಪ್ಪ ಲೋಕನಾಥ ಹಾಗೂ ಮೂವರು ದಾಂಡಿಗರು ಸೇರಿ ಮಹೇಶನ ಅಣ್ಣ ವಸಂತ ನಾಯ್ಕ್‌ನ ಮನೆಗೆ ಬಂದಿದ್ದಾರೆ. ಅಲ್ಲಿದ್ದ ಮಗಳನ್ನು ತಮ್ಮೊಂದಿಗೆ ಬಲವಂತವಾಗಿ ಕರೆದೊಯ್ಯಲು ಮುಂದಾದಾಗ ಮಹೇಶ್ ಮತ್ತು ವಸಂತ್ ನಾಯ್ಕ್ ಒಬ್ಬರೂ ಅಡ್ಡಿಪಡಿಸಿದ್ದಾರೆ. ಆಗ ಮುಸ್ಲಿಂ ದಾಂಡಿಗರು ಅಡ್ಡ ಬಂದ ವಸಂತನಿಗೆ ಚಾಕು ಇರಿದಿದ್ದಾರೆ. ಮಹೇಶ್ ಮತ್ತು ಪಕ್ಕದ ಮನೆಯಿಂದ ಗಲಾಟೆ ಬಿಡಿಸಲು ಬಂದಿದ್ದ ಕುಮಾರ್ ಎಂಬ ಯುವಕನಿಗೂ ಥಳಿಸಿದ್ದಾರೆ.

88
Image Credit : Asianet News

ವಸಂತ ನಾಯ್ಕ್‌ನ ಮನೆಯಲ್ಲಿ ನಡೆಯುತ್ತಿದ್ದ ಗಲಾಟೆ ವಿಕೋಪಕ್ಕೆ ತಿರುಗಿ ಚಾಕು ಇರಿತಕ್ಕೊಳಗಾದ ವಸಂತ್ ಅವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಗಲಾಟೆಯಿಂದ ಒಂದು ಹೆಣ ಬೀಳಿಸಿದ ನಂತರ ಕಮಲಾಕರನ ಗ್ಯಾಂಗ್‌ಗೆ ಭಯವಾಗಿ ಅಲ್ಲಿಂದ ಪರಾರಿ ಆಗಿದೆ. ಕೊನೆಗೆ ಪೊಲೀಸರು ಪ್ರಕರಣ ಬೇಧಿಸಿದಾಗ ಅನೈತಿಕ ಸಂಬಂಧದ ಗುಟ್ಟುಗಳು ಬಟಾ ಬಯಲಾಗಿವೆ. ಇದೀಗ ಹೆಂಡತಿಗೆ ಬುದ್ಧಿ ಕಲಿಸಲಾಗದೇ ಆಕೆಯಿಂದ ಅಣ್ಣನನ್ನು ಕಳೆದುಕೊಂಡ ಮಹೇಶ್, ಎರಡೂ ಕುಟುಂಬಗಳ ಹೊಣೆ ಹೊತ್ತುಕೊಳ್ಳುವುದು ಅನಿವಾರ್ಯ ಆಗಿದೆ.

ಈ ಕೊಲೆ ಕೇಸಿನಲ್ಲಿ ಪಾಲ್ಗೊಂಡ ಎಲ್ಲ 7 ಜನ ಆರೋಪಿಗಳು ಕೂಡ  ಜೈಲು ಸೇರಿದ್ದಾರೆ. ಗಂಡನನ್ನು ಕಳೆದುಕೊಂಡ ಕುಟುಂಬ ಕಣ್ಣೀರು ಹಾಕುತ್ತಿದೆ. ಮಕ್ಕಳು ಅಮ್ಮನಿಲ್ಲದೆ ಅನಾಥ ಭಾವ ಅನುಭವಿಸುತ್ತಿವೆ. 

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಸಂಬಂಧಗಳು
ಉತ್ತರ ಕನ್ನಡ

Latest Videos
Recommended Stories
Recommended image1
Bengaluru power cut ಬೆಂಗಳೂರಿನ ಹಲವೆಡೆ ಫೆ.11ರಂದು ಕತ್ತಲು ಭಾಗ್ಯ, ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿಕೊಳ್ಳಿ
Recommended image2
ಅಂಕೋಲಾದಲ್ಲಿ 12ನೇ ಶತಮಾನದ ಅಪರೂಪದ ವೀರಗಲ್ಲು ಪತ್ತೆ, ರತಿಕ್ರೀಡೆಯಲ್ಲಿರುವ ದಂಪತಿ ಸಹಿತ ವಿವಿಧ ಚಿತ್ರ!
Recommended image3
ಪ್ರಯಾಣಿಕರ ಗಮನಕ್ಕೆ, ಫೆಬ್ರವರಿ 11 ಮತ್ತು 12 ರಂದು ಹುಬ್ಬಳ್ಳಿ-ಉಣಕಲ್ ರೈಲು ಸಂಚಾರದಲ್ಲಿ ವ್ಯತ್ಯಯ
Related Stories
Recommended image1
ಮಹೇಶನ ಬುಲೆಟ್ ನೋಡಿ 17 ವರ್ಷಕ್ಕೆ ಗರ್ಭಿಣಿಯಾಗಿದ್ದ ಸುಚಿತ್ರಾ; ಪತಿ ಊರು ಬಿಡ್ತಿದ್ದಂತೆ ಪಾತರಗಿತ್ತಿಯಾದ ಪತ್ನಿ!
Recommended image2
ಕಮಲಾಕರ ಭಟ್‌ಗೆ ಸುಚಿತ್ರಾಳನ್ನು ಪರಿಚಯ ಮಾಡಿದ್ದೇ ಈ ಸುಮಾ; ಶನಿಶಾಂತಿ ಮಾಡಿ ಅಂದ್ರೆ, ಶನಿಯಂತೆ ಹೆಗಲೇರಿದ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved