Worlds Biggest Employers: ವಿಶ್ವದ ಕೆಲ ದೇಶಗಳ ಜನಸಂಖ್ಯೆಗಿಂತ ಹೆಚ್ಚು ಉದ್ಯೋಗಿಳು ಈ ಸಂಸ್ಥೆಗಳಲ್ಲಿದ್ದಾರೆ!
ಜಗತ್ತಿನಲ್ಲಿ ಕೆಲವೇ ಕೆಲವು ಕಂಪನಿಗಳು ಹಾಗೂ ಸರ್ಕಾರಿ ಇಲಾಖೆಗಳಿವೆ. ಅವುಗಳಲ್ಲಿ ಲಕ್ಷ ಲಕ್ಷ ಉದ್ಯೋಗಿಗಳಿದ್ದಾರೆ. ಅದರಲ್ಲೂ ವಿಶ್ವದ ಕೆಲವು ದೇಶಗಳಾದ, ಗ್ರೆನೆಡಾ ಹಾಗೂ ಕೆರಿಬಿಯನ್ ದ್ವೀಪ ಸಮೂಹದಲ್ಲಿರುವ ದೇಶಗಳ ಜನಸಂಖ್ಯೆಗಿಂತ ಹೆಚ್ಚಿನ ಉದ್ಯೋಗಿಗಳು ಈ ಕಂಪನಿಗಳಲ್ಲಿದ್ದಾರೆ. ಅವುಗಳ ಲಿಸ್ಟ್ ಇಲ್ಲಿದೆ.
ಭಾರತದ ರಕ್ಷಣಾ ಇಲಾಖೆ: ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರುವುದು ಭಾರತದ ರಕ್ಷಣಾ ಇಲಾಖೆ. ಹೌದು ಭಾರತದ ರಕ್ಷಣಾ ಇಲಾಖೆಯಲ್ಲಿ ಅಂದಾಜು 29.90 ಲಕ್ಷ ಮಂದಿ ಉದ್ಯೋಗಿಗಳಿದ್ದಾರೆ.
ಅಮೆರಿಕ ರಕ್ಷಣಾ ಇಲಾಖೆ: ವಿಶ್ವದ ಅತಿದೊಡ್ಡ ಮಿಲಿಟರಿ ಶಕ್ತಿಯಾಗಿರುವ ಅಮೆರಿಕದ ರಕ್ಷಣಾ ಇಲಾಖೆ ವಿಶ್ವದ ಅತೀದೊಡ್ಡ ಉದ್ಯೋಗದಾತರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಅಮೆರಿಕ ರಕ್ಷಣಾ ಇಲಾಖೆಯಲ್ಲಿ 29.10 ಲಕ್ಷ ಮಂದಿ ಉದ್ಯೋಗಿಗಳಿದ್ದಾರೆ.
ಪೀಪಲ್ಸ್ ಲಿಬರೇಷನ್ ಆರ್ಮಿ: ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಚೀನಾದ ಪ್ರಮುಖ ಸೈನಿಕ ದಳ. 25.50 ಲಕ್ಷ ಮಂದಿ ಉದ್ಯೋಗಿಗಳು ಇದರಲ್ಲಿದ್ದಾರೆ.
ವಾಲ್‌ಮಾರ್ಟ್: ಸ್ಯಾಮ್ ವಾಲ್ಟನ್ ಹಾಗೂ ಬುಡ್ ವ್ಯಾಲ್ಟನ್‌ರಿಂದ 1962ರಲ್ಲಿ ಆರಂಭವಾದ ಕಂಪನಿ ವಾಲ್‌ಮಾರ್ಟ್. ಅಮೆರಿಕದ ಈ ಕಂಪನಿ 23 ಲಕ್ಷ ನೌಕರರನ್ನು ಹೊಂದಿದೆ.
ಅಮೇಜಾನ್: ಜೆಫ್ ಬೆಜೋಸ್‌ರಿಂದ 1994ರಲ್ಲಿ ಆರಂಭವಾದ ಕಂಪನಿ ಅಮೇಜಾನ್. ಇದು ಬಹುತೇಕ ದೇಶಗಳಲ್ಲಿ ತನ್ನ ನೆಲೆ ಹೊಂದಿರುವ ಈ ಕಂಪನಿ 16.10 ಲಕ್ಷ ಉದ್ಯೋಗಿಗಳನ್ನು ಹೊಂದಿದೆ.
ನ್ಯಾಷನಲ್ ಪೆಟ್ರೋಲಿಯಂ ಕಾರ್ಪೋರೇಷನ್: ಚೀನಾದ ನ್ಯಾಷನಲ್ ಪೆಟ್ರೋಲಿಯಂ ಕಾರ್ಪೋರೇಷನ್ 35 ವರ್ಷಗಳ ಹಿಂದೆ ಆರಂಭವಾದ ಕಂಪನಿ. 14.50 ಲಕ್ಷ ನೌಕರರನ್ನು ಈ ಕಂಪನಿ ಹೊಂದಿದೆ.
ನ್ಯಾಷನಲ್ ಹೆಲ್ತ್ ಸರ್ವೀಸ್: ಇಂಗ್ಲೆಂಡ್‌ನಲ್ಲಿ ಸಾರ್ವಜನಿಕ ಫಂಡ್‌ನಲ್ಲಿ ನಡೆಯತ್ತಿರುವ ಕಂಪನಿ ನ್ಯಾಷನಲ್ ಹೆಲ್ತ್ ಸರ್ವೀಸ್. ಇದು 13.80 ಲಕ್ಷ ನೌಕರರನ್ನು ಹೊಂದಿದೆ.
ಫಾಕ್ಸ್‌ಕಾನ್: ವಿಶ್ವದ ಅತಿದೊಡ್ಡ ಎಲೆಕ್ಟ್ರಾನಿಕ್ಸ್‌ಗಳ ಕಾಂಟ್ರಾಕ್ಟ್ ಉತ್ಪಾದಕ ಕಂಪನಿ. ತೈವಾನ್‌ನ ಈ ಕಂಪನಿಯಲ್ಲಿ 12.90 ಲಕ್ಷ ನೌಕರರು ಕೆಲಸ ಮಾಡುತ್ತಿದ್ದಾರೆ.
ಆತನ ಜೊತೆ ಸೆಕ್ಸ್ ನಿರಾಕರಿಸಿದೆ, ಅರ್ಧ ಶೂಟ್ ಆದ ಚಿತ್ರದಿಂದ ನನ್ನ ಹೊರಹಾಕಿದ್ರು ಎಂದ ನಟಿ
indian railways
ಭಾರತೀಯ ರೈಲ್ವೆ: ವಿಶ್ವದ ಅತಿದೊಡ್ಡ ಉದ್ಯೋಗದಾತ ಕಂಪನಿಗಳಲ್ಲಿ ಭಾರತದ ಇನ್ನೊಂದು ಕಂಪನಿ ಇದ್ದರೆ ಅದು ಭಾರತೀಯ ರೈಲ್ವೆ. 12.12 ಲಕ್ಷ ನೌಕರರನ್ನು ಭಾರತೀಯ ರೈಲ್ವೆ ಹೊಂದಿದೆ.