- Home
- Sports
- IPL
- Kohli vs Digvesh Rathi: ಬೇಕು ಅಂತಲೇ ಮೈದಾನದಲ್ಲೇ ವಿರಾಟ್ ಕೊಹ್ಲಿಯನ್ನು ಕೆಣಕಿದ ದಿಗ್ವೇಶ್ ರಾಥಿ! ಇನ್ಮುಂದೆ ಐತೆ ಮಾರಿಹಬ್ಬ!
Kohli vs Digvesh Rathi: ಬೇಕು ಅಂತಲೇ ಮೈದಾನದಲ್ಲೇ ವಿರಾಟ್ ಕೊಹ್ಲಿಯನ್ನು ಕೆಣಕಿದ ದಿಗ್ವೇಶ್ ರಾಥಿ! ಇನ್ಮುಂದೆ ಐತೆ ಮಾರಿಹಬ್ಬ!
ಭಾರತೀಯ ಕ್ರಿಕೆಟರ್ ದಿಗ್ವೇಶ್ ರಾಥಿ ಅವರು ವಿರಾಟ್ ಕೊಹ್ಲಿಯನ್ನು ಕೆಣಕಿದ್ದಾರೆ. ಮೈದಾನದಲ್ಲಿ ಕೆಣಕಿದವರನ್ನು ವಿರಾಟ್ ಕೊಹ್ಲಿ ಹಾಗೆ ಬಿಟ್ಟ ಉದಾಹರಣೆಯೇ ಇಲ್ಲ. ಹಾಗಾದರೆ ನಿಜಕ್ಕೂ ಏನಾಯ್ತು?

ದಿಗ್ವೇಶ್ ಸಿಂಗ್ ರಾಠಿ, ಒಂದು ವಿಕೆಟ್ ತೆಗೆದ ತಕ್ಷಣ ಕೈನಲ್ಲಿ ಒಂದು ಸಹಿ ಹಾಕೋ ಮೂಲಕ ( ನೋಟ್‌ಬುಕ್ ಟಿಕ್ ) ಆಚರಣೆಗೆ ಹೆಸರು ಮಾಡಿದ್ದಾರೆ. ಇದರಿಂದಲೇ ಈ ಐಪಿಎಲ್‌ನಲ್ಲಿ ದಂಡ ಹಾಕಿಸಿಕೊಳ್ಳುವುದಲ್ಲದೆ, ಒಂದು ಪಂದ್ಯದ ನಿಷೇಧವನ್ನೂ ಎದುರಿಸಿದ್ದಾರೆ. ಇತ್ತೀಚೆಗೆ ಒಂದು ಸಂವಹನದಲ್ಲಿ ಅವರು ವಿರಾಟ್ ಕೊಹ್ಲಿಯ ವಿಕೆಟ್ ಪಡೆದರೆ ಸಿಗ್ನೇಚರ್ ಸ್ಟೈಲ್ ಮಾಡಲ್ಲ ಎಂದಿದ್ದರು.
ಐಪಿಎಲ್ 2025 ರ ಕೊನೆಯ ಲೀಗ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಖಾಮುಖಿಯಾಗುವ ಮುನ್ನ, ಎಲ್‌ಎಸ್‌ಜಿಯ ದಿಗ್ವೇಶ್ ರಾಠಿಯನ್ನು, "ಮುಂದಿನ ಸಂಖ್ಯೆ ಯಾರದು ಎಂದು ಕೇಳಲಾಯಿತು. ಲೆಗ್-ಸ್ಪಿನ್ನರ್ ದಿಗ್ವೇಶ್ ನಾಚಿಕೆಯಿಂದ ನಗುತ್ತಾ ತಲೆಯನ್ನು ಸ್ವಲ್ಪ ಬೇರೆ ಕಡೆ ತಿರುಗಿಸಿ, ಕೊಹ್ಲಿಯ ವಿಕೆಟ್ ತೆಗೆದರೆ ಸಿಗ್ನೇಚರ್ ಸ್ಟೈಲ್ ಮಾಡೋದಿಲ್ಲ ಎಂದು ಹೇಳಿದ್ದರು.
ಈ ಬಾರಿ ಐಪಿಎಲ್‌ನಲ್ಲಿ ದಿಗ್ವೇಶ್ ಅವರು 12 ಪಂದ್ಯಗಳಲ್ಲಿ 8.19 ರ ಎಕಾನಮಿ ರೇಟ್‌ನೊಂದಿಗೆ 14 ವಿಕೆಟ್‌ಗಳನ್ನು ಪಡೆದಿದ್ದಾರೆ. ಸಿಗ್ನೇಚರ್ ಸ್ಟೈಲ್ ಮಾಡುತ್ತ ಅವರು ಫೇಮಸ್ ಆಗಿದ್ದಾರೆ.
ದೆಹಲಿಯ ಈ ಆಟಗಾರನಿಗೆ ಈ ರೀತಿ ನಡೆಯಿಂದಲೇ IPL ಕೋಡ್ ಆಫ್ ಕಂಡಕ್ಟ್ ಉಲ್ಲಂಘನೆಗಾಗಿ ಎರಡು ಬಾರಿ ದಂಡ ವಿಧಿಸಲಾಗಿತ್ತು. ಇದರ ಜೊತೆಗೆ ಬಿಸಿಸಿಐ ಎಚ್ಚರಿಕೆ ನೀಡಿದ್ದರೂ ಅವರು ಇನ್ನೂ ಇದನ್ನು ಸರಿಪಡಿಸಿಕೊಂಡಿಲ್ಲ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಕೊನೆಯ ಪಂದ್ಯದಲ್ಲಿ, ಡೈನಾಮಿಕ್ ಓಪನರ್ ಅಭಿಷೇಕ್ ಶರ್ಮಾರನ್ನು ಔಟ್ ಮಾಡಿದ ನಂತರ, ಅವರ ಹೆಸರನ್ನು ಕೈಯಲ್ಲಿ ಬರೆದ ನಂತರ ದಿಗ್ವೇಶ್, ಅಭಿಷೇಕ್‌ಗೂ ಸ್ವಲ್ಪ ಜಟಾಪಟಿ ಆಯ್ತು.
ಮ್ಯಾಚ್ ರೆಫರಿಯಿಂದ ಇದನ್ನು ಮೂರನೇ ಲೆವೆಲ್ 1 ಉಲ್ಲಂಘನೆ ಎಂದು ಪರಿಗಣಿಸಲಾಯಿತು, ಇದು ಐದು ಡಿಮೆರಿಟ್ ಪಾಯಿಂಟ್‌ಗಳನ್ನು ಸಂಗ್ರಹಿಸಿತು. ಐಪಿಎಲ್ ಕೋಡ್ ಆಫ್ ಕಂಡಕ್ಟ್ ಪ್ರಕಾರ, ಐದು ಡಿಮೆರಿಟ್ ಪಾಯಿಂಟ್‌ಗಳು ಆದರೆ ಆಟಗಾರನಿಗೆ ಒಂದು ಪಂದ್ಯದ ನಿಷೇಧ ಆಗುವುದು.
ದಿಗ್ವೇಶ್ ಅವರು ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಮೇ 27ರಂದು ನಡೆ ಮ್ಯಾಚ್‌ನಲ್ಲಿ ಕೊಹ್ಲಿಯನ್ನು ಎದುರಿಸಿದ್ದರು. ಇದು ಈ ಬಾರಿಯ ಎಲ್‌ಎಸ್‌ಜಿ ಮತ್ತು ಆರ್‌ಸಿಬಿಯ ಮೊದಲ ಪಂದ್ಯವಾಗಿತ್ತು. ಎರಡೂ ತಂಡಗಳು ಒಂದೇ ಗುಂಪಿನಲ್ಲಿಲ್ಲ, ಆದ್ದರಿಂದ ಈ ವರ್ಷ ಒಮ್ಮೆ ಮಾತ್ರ ಈ ಎರಡು ತಂಡಗಳು ಆಟ ಆಡಿತ್ತು. ಎಲ್‌ಎಸ್‌ಜಿ ಪ್ಲೇಆಫ್‌ಗೆ ಅರ್ಹತೆ ಪಡೆಯದಿರುವುದರಿಂದ, ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾದ ಕೊಹ್ಲಿಯನ್ನು ಔಟ್ ಮಾಡಲು ದಿಗ್ವೇಶ್‌ಗೆ ಇದು ಏಕೈಕ ಅವಕಾಶವಾಗಿತ್ತು.
RCB v/s LSG ಮ್ಯಾಚ್‌ನಲ್ಲೂ ಕೂಡ ದಿಗ್ವೇಶ್ ಅವರು ಕೈ ಬದಲು ನೆಲದಲ್ಲಿ ಸಹಿ ಹಾಕಿದ್ದರು. ಅಷ್ಟೇ ಅಲ್ಲದೆ ಒಮ್ಮೆ ಅವರು ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುವಾಗ ಬಾಲ್ ಹಾಕ್ತೀನಿ ಅಂತ ಹೋಗಿ ಆಮೇಲೆ ವಾಪಾಸ್ ಹೋಗಿದ್ದರು. ಆಗ ವಿರಾಟ್ ಕೊಹ್ಲಿ ಅವರು ವ್ಯಂಗ್ಯವಾಗಿ ನಕ್ಕಿ ಸುಮ್ಮನಾದರು. ಕೊಹ್ಲಿ ಮುಂದೆ ಸವಾಲ್ ಹಾಕಬೇಡಿ, ಕೆಣಕಬೇಡಿ ಎಂದು ಅನೇಕರು ದಿಗ್ವೇಶ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಬುದ್ಧಿ ಹೇಳ್ತಿರೋದಂತೂ ಸತ್ಯ. ಮೈದಾನದಲ್ಲೇ ಕೆಣಕಿದವರನ್ನು ವಿರಾಟ್ ಕೊಹ್ಲಿ ಸುಮ್ಮನೆ ಬಿಟ್ಟ ಉದಾಹರಣೆಯೇ ಇಲ್ಲ. ಮೈದಾನದಲ್ಲಿ ಕೆಣಕಿದವರನ್ನು ಹೇಗೆ ಉತ್ತರ ಕೊಡಬೇಕೋ ಹಾಗೆ ಕೊಡ್ತೀನಿ ಎಂದು ಕೊಹ್ಲಿ ಒಮ್ಮೆ ಬಾಲಿವುಡ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.