MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಪತ್ರಿಕಾಗೋಷ್ಠಿ ವೇಳೆ ವಿರಾಟ್‌ ಕೊಹ್ಲಿ ನನ್ನ ಫೇವರೆಟ್‌ ಎಂದ ಡಿಜಿಎಂಒ ಲೆ.ಜ. ರಾಜೀವ್ ಘಾಯ್

ಪತ್ರಿಕಾಗೋಷ್ಠಿ ವೇಳೆ ವಿರಾಟ್‌ ಕೊಹ್ಲಿ ನನ್ನ ಫೇವರೆಟ್‌ ಎಂದ ಡಿಜಿಎಂಒ ಲೆ.ಜ. ರಾಜೀವ್ ಘಾಯ್

ಆಪರೇಷನ್ ಸಿಂದೂರ್ ಸಂದರ್ಭದಲ್ಲಿ ಭಾರತದ ರಕ್ಷಣಾ ಸನ್ನದ್ಧತೆಯ ಕುರಿತು ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ವಿವರಿಸಿದರು. ಪಾಕಿಸ್ತಾನದ ದಾಳಿಗೆ ಪ್ರತಿದಾಳಿ ಕುರಿತು ಕ್ರಿಕೆಟ್ ಉದಾಹರಣೆ ನೀಡಿ, ಭಾರತದ ಗಡಿ ದಾಟುವುದು ಕಷ್ಟ ಎಂಬ ಸಂದೇಶ ರವಾನಿಸಿದರು. ಈ ವೇಳೆ ಕೊಹ್ಲಿ ಎಲ್ಲರಂತೆ ನನ್ನ ಪೇವರೆಟ್‌ ಎಂದರು.

2 Min read
Gowthami K
Published : May 12 2025, 08:19 PM IST
Share this Photo Gallery
  • FB
  • TW
  • Linkdin
  • Whatsapp
15

ಆಪರೇಷನ್ ಸಿಂದೂರ್‌ ಸಮಯದಲ್ಲಿ ಭಾರತದ ತೀವ್ರ ಸನ್ನದ್ಧತೆ ಮತ್ತು ಬಲಿಷ್ಠ ರಕ್ಷಣಾ ವ್ಯವಸ್ಥೆಯ ಬಗ್ಗೆ  ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್,  ಪಾಕಿಸ್ತಾನದ ದಾಳಿಗೆ ಪ್ರತಿದಾಳಿಯಾಗಿ ಭಾರತದ ತಂತ್ರದ  ಕುರಿತು ಕ್ರಿಕೆಟ್ ಉದಾಹರಣೆ ನೀಡಿ ವಿವರಿಸಿದರು. ಈ ವೇಳೆ ಟೆಸ್ಟ್ ನಿಂದ ಇಂದು ನಿವೃತ್ತರಾದ ವಿರಾಟ್‌ ಕೊಹ್ಲಿಯನ್ನು ನೆನಪಿಸಿಕೊಂಡು ನನ್ನ ಫೇವರಿಟ್‌ ಆಟಗಾರ ಎಂದರು.

25

ಸೋಮವಾರ ಮಧ್ಯಾಹ್ನ ದೇಶದ ಮೂವರು ಸೇನಾ ಮುಖ್ಯಸ್ಥರೊಂದಿಗೆ ಆಪರೇಷನ್ ಸಿಂದೂರ್ ಕುರಿತು ಮಾಹಿತಿ ನೀಡಿದ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿರುವ ಬಗ್ಗೆ ಕೇಳಿದ್ದೇನೆ ಮತ್ತು ಮಾಜಿ ನಾಯಕ ಬಹಳ ಹಿಂದಿನಿಂದಲೂ ತಮ್ಮ ನೆಚ್ಚಿನ ಕ್ರಿಕೆಟಿಗ ಎಂದು ಹಂಚಿಕೊಂಡರು. ಇಂದು, ಬಹುಶಃ ನಾವು ಕ್ರಿಕೆಟ್ ಬಗ್ಗೆಯೂ ಮಾತನಾಡಬೇಕು, ಏಕೆಂದರೆ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ ಎಂದು ನಾನು ಗಮನಿಸಿದ್ದೇನೆ. ಅನೇಕ ಭಾರತೀಯರಂತೆ, ಅವರು ನನ್ನ ನೆಚ್ಚಿನ ಕ್ರಿಕೆಟಿಗ ಕೂಡ" ಎಂದು ಲೆಫ್ಟಿನೆಂಟ್ ಜನರಲ್ ಘಾಯ್ ಹೇಳಿದರು. 36 ವರ್ಷದ ಕ್ರಿಕೆಟಿಗ 123 ಟೆಸ್ಟ್ ಪಂದ್ಯಗಳನ್ನು ಆಡಿ 30 ಶತಕಗಳನ್ನು ಗಳಿಸಿದ ನಂತರ ನಿವೃತ್ತಿ ಹೊಂದುತ್ತಿದ್ದಾರೆ. ಅವರು 68 ಟೆಸ್ಟ್‌ಗಳಲ್ಲಿ ಭಾರತವನ್ನು ಮುನ್ನಡೆಸಿದರು, ಅವುಗಳಲ್ಲಿ 40 ರಲ್ಲಿ ಜಯಗಳಿಸಿದರು, ಭಾರತದ ಟೆಸ್ಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕ.

Related Articles

Related image1
ಟೆಸ್ಟ್ ನಿವೃತ್ತಿಯ ನಂತರ ವಿರಾಟ್ ಕೊಹ್ಲಿ ಆದಾಯದ 8 ವ್ಯವಹಾರಗಳಿವು
Related image2
ಕಿರಾನಾ ಬೆಟ್ಟದ ಮೇಲೆ ಭಾರತದ ದಾಳಿ ತಳ್ಳಿ ಹಾಕಿದ ಸೇನೆ, ಆ ಬೆಟ್ಟ ಪಾಕಿಸ್ತಾನಕ್ಕೆ ಅಷ್ಟು ಮುಖ್ಯ ಏಕೆ?
35

"ನಮ್ಮ ವಾಯುನೆಲೆಗಳು ಮತ್ತು ಲಾಜಿಸ್ಟಿಕ್ಸ್‌ಗಳನ್ನು ಗುರಿಯಾಗಿಸುವುಸು ಬಹಳ ಕಷ್ಟ. ಅದು 1970 ರ ದಶಕ ಅಂತ ನಾನು ನಂಬುತ್ತೇನೆ. ಆ ಸಮಯದಲ್ಲಿ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಪ್ರಸಿದ್ಧ ಆಶಸ್ ಸರಣಿ ನಡೆಯುತ್ತಿತ್ತು. ಆ ಸಮಯದಲ್ಲಿ, ಆಸ್ಟ್ರೇಲಿಯಾದ ಶ್ರೇಷ್ಠ ವೇಗದ ಬೌಲರ್‌ಗಳಾದ ಜೆಫ್ ಥಾಮ್ಸನ್ ಮತ್ತು ಡೆನ್ನಿಸ್ ಲಿಲ್ಲೆ ಇಂಗ್ಲೆಂಡ್ ಬ್ಯಾಟಿಂಗ್ ಲೈನ್‌ಅಪ್‌ಗೆ ಹೊಡೆತ ನೀಡಿದರು ಎನ್ನುತ್ತಾ ಆಶಸ್ ಕ್ರಿಕೆಟ್‌ ಸರಣಿಯ ಪುರಾತನ ಗಾದೆಯ ಉದಾಹರಣೆಯನ್ನು ಕೊಟ್ಟು, "ಬೂದಿಗೆ ಬೂದಿ, ಧೂಳಿನಿಂದ ಧೂಳಿಗೆ. ಥಾಮ್ಸಗೆ ಆಗದಿದ್ದರೆ, ಲಿಲ್ಲಿಯೇ ಮಾಡಬೇಕು!" (Ashes to ashes, dust to dust, if Thommo don't get ya, then Lillee surely must) ಎಂಬ ಗಾದೆಯನ್ನು ಉಲ್ಲೇಖಿಸಿದರು. ನಾನು ಏನು ಹೇಳಲು ಪ್ರಯತ್ನಿಸುತ್ತಿದ್ದೇನೆಂದು ನಿಮಗೆ ಅರ್ಥವಾಗುತ್ತದೆ. ನಮ್ಮ ಗಡಿರೇಖೆಯನ್ನು ದಾಟಿ ಬರುವುದು ನಿಮಗೆ ಕಷ್ಟ ಎಂಬ ಸ್ಪಷ್ಟ ಸಂದೇಶವನ್ನು ಪಾಕಿಸ್ತಾನಕ್ಕೆ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ನೀಡಿದ್ದಾರೆ.
 

45

ಅವರ ಮಾತು ಕ್ರಿಕೆಟ್ ಅಭಿಮಾನಿಗಳಿಗೆ ಕೇವಲ ನೆನಪು ಮಾತ್ರವಲ್ಲ. ಅದು ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ. ಭಾರತ ತನ್ನ ಹಂತ ಹಂತದ ರಕ್ಷಣಾ ವ್ಯವಸ್ಥೆಯಿಂದ ಯಾವುದೇ ಶತ್ರುವಿನ ದಾಳಿಯನ್ನು ತಡೆಯಲು ತಯಾರಾಗಿರುವುದನ್ನು ಇದು ಸೂಚಿಸುತ್ತದೆ. ಪಾಕಿಸ್ತಾನದ ವಿರುದ್ಧದ ಪ್ರತಿದಾಳಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತೀಯ ವಾಯು ರಕ್ಷಣಾ ವ್ಯವಸ್ಥೆಗಳ ಪರಿಣಾಮಕಾರಿಯಾಗಿ ಹೊಗಳಲು ಅವರ ಆಶಸ್ ಹೋಲಿಕೆಯನ್ನು ಬಳಸಿದ್ದು ಉತ್ತಮವಾಗಿತ್ತು.
 

55

1974-75ರ ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾದ ಡೆನ್ನಿಸ್ ಲಿಲ್ಲಿ ಮತ್ತು ಜೆಫ್ ಥಾಮ್ಸನ್ ಇಂಗ್ಲೆಂಡ್ ವಿರುದ್ಧದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಥಾಮ್ಸನ್ ಅವರ ಎಸೆತ ಶೈಲಿ ಹೆಚ್ಚು ವಿಚಿತ್ರವಾಗಿದ್ದು, ವೇಗದಿಂದ ಎಸೆದು ಇಂಗ್ಲೆಂಡ್ ಆಟಗಾರರಿಗೆ ಸೋಲಿನ ರುಚಿ ತೋರಿಸಿದರು. ಸರಾಸರಿ 17.93 ರಲ್ಲಿ 33 ವಿಕೆಟ್‌ಗಳನ್ನು ಪಡೆದರು. ಗಾಯದಿಂದ ಮರಳಿ ಬಂದ ಲಿಲ್ಲೀ ಕೂಡ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ, ಸರಾಸರಿ 23.84 ರಲ್ಲಿ 25 ವಿಕೆಟ್‌ಗಳನ್ನು ಪಡೆದರು. ಈ ಇಬ್ಬರೂ ಆಟಗಾರರ ಶಾರ್ಟ್ ಪಿಚ್ ಎಸೆತಗಳು ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳಿಗೆ ಭಯ ಹುಟ್ಟಿಸಿದವು. ಕೆಲವರು ಗಾಯಗೊಂಡರು, ಕೆಲವರು ಆತ್ಮವಿಶ್ವಾಸ ಕಳೆದುಕೊಂಡರು. ಇದರ ಪರಿಣಾಮವಾಗಿ ಆಸ್ಟ್ರೇಲಿಯಾ ಸರಣಿಯನ್ನು 4-1ರಿಂದ ಗೆದ್ದು ಬೀಗಿತು. ಈ ಜೋಡಿಯ ದಾಳಿ ಕೇವಲ ಈ ಸರಣಿಗೆ ಮಾತ್ರ ಪ್ರಭಾವ ಬೀರುವುದಿಲ್ಲ; ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದ ಬೌಲಿಂಗ್ ಮಹತ್ವವಿದೆ ಎಂಬುದನ್ನು ತೋರಿಸಿದರು. ಆಟದಲ್ಲಿ ವೇಗ ಮತ್ತು ಬೆದರಿಕೆ ಕೂಡಾ ತಂತ್ರದ ಭಾಗವಾಗಬಹುದು ಎಂಬ ಹೊಸ ಯುಗವನ್ನು  ಪ್ರಾರಂಭಿಸಿದರು.ಇದಾದ ನಂತರ  ಆಸ್ಟ್ರೇಲಿಯಾದಲ್ಲಿ ಆ ಗಾದೆ  ಸೃಷ್ಟಿಯಾಯ್ತು.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಆಪರೇಷನ್ ಸಿಂಧೂರ
ಪಾಕಿಸ್ತಾನ
ಭಾರತ ಸುದ್ದಿ
ಭಾರತೀಯ ಸೇನೆ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved