IPL 2025: ಅಂದು ನಕ್ಕವರು ಈಗ ಕ್ಷಮೆ ಕೇಳಿದ್ರು! ಕೊಟ್ಟ ಮಾತು ಉಳಿಸಿಕೊಂಡ ಜಿತೇಶ್ ಶರ್ಮಾ!
RCB ಆಟಗಾರ ಜಿತೇಶ್ ಶರ್ಮಾ ಅವರು ಈ ಹಿಂದೆ ನೀಡಿದ್ದ ಸಂದರ್ಶನವೊಂದು ಭಾರೀ ವೈರಲ್ ಆಗಿ, ಸಾಕಷ್ಟು ಜನರು ಅವರನ್ನು ನೋಡಿ ನಕ್ಕಿದ್ದರು. ಈಗ ಅವರನ್ನು ನೋಡಿದವರು ಕ್ಷಮೆ ಕೇಳುವ ಸಮಯ ಬಂದಿದೆ. ಹಾಗಾದರೆ ಏನಾಯ್ತು?

ಮೇ 27 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಆಟದಲ್ಲಿ ಕೇವಲ 33 ಎಸೆತಗಳಲ್ಲಿ ಜಿತೇಶ್ ಶರ್ಮಾ ಅವರು ಅಜೇಯ 85 ರನ್‌ಗಳ ಸ್ಫೋಟಕ ಇನಿಂಗ್ಸ್ ಆಡಿದರು. ವಿರಾಟ್ ಕೊಹ್ಲಿ ಔಟ್ ಆದಬಳಿಕ ಮಯಾಂಕ್ ಅಗರ್‌ವಾಲ್ ಜೊತೆ ಸೇರಿ ಜೊತೆಯಾಟ ಆಡಿದರು. ಇದರಿಂದಲೇ ಆರ್‌ಸಿಬಿ ಗೆಲ್ಲಲು ಸಾಧ್ಯವಾಯ್ತು.
ಪಂದ್ಯದ ಬಳಿಕ, ಈ ಸೀಸನ್ ಆರಂಭದಲ್ಲಿ ಜಿತೇಶ್ ಶರ್ಮಾ ಅವರು ನೀಡಿದ್ದ ಹಳೆಯ ಸಂದರ್ಶನವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕ್ರಿಕ್‌ಎಕ್ಸ್‌ಟಾಸಿಗೆ ನೀಡಿದ ಸಂದರ್ಶನದಲ್ಲಿ, ಜಿತೇಶ್ ಶರ್ಮಾ ಅವರು ಆರ್‌ಸಿಬಿ ಅಭಿಮಾನಿಗಳಿಗೆ ಸಂದೇಶ ಕೊಡಿ ಎಂದು ಹೇಳಲಾಗಿತ್ತು, ಆಗ ಅವರು “ಎಲ್ಲರಿಗೂ ಹಾಯ್. ಚಿಂತೆ ಬೇಡ. ಜಿತೇಶ್ ಶರ್ಮಾ ಇಲ್ಲಿದ್ದಾನೆ. ಅವನು ಎಲ್ಲವನ್ನೂ ನೋಡಿಕೊಳ್ಳುತ್ತಾನೆ” ಎಂದು ಹೇಳಿದ್ದರು. ಈ ಮಾತು ಜಿತೇಶ್ ಹೇಳಿದ್ದಾಗ ನಕ್ಕಿದ್ದ ಜನರು ಈಗ ಕ್ಷಮೆ ಕೇಳುತ್ತಿದ್ದಾರೆ, ಅಷ್ಟೇ ಅಲ್ಲದೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಏಕಾನಾ ಕ್ರೀಡಾಂಗಣದಲ್ಲಿ ಆಡುತ್ತಿದ್ದ ಜಿತೇಶ್ ಅವರು, ಆರ್‌ಸಿಬಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್ ಹಿಡಿದು ಬಂದರು. ಅಸಾಧಾರಣ ಸಂಯಮ ಇಟ್ಟುಕೊಂಡ ಅವರು ಒಂದಾದ ಮೇಲೆ ಒಂದರಂತೆ ಫೋರ್ ಬಾರಿಸಿದರು. ಆಕರ್ಷಕ ಶಾಟ್‌ಗಳೊಂದಿಗೆ ಸ್ಫೋಟಕ ಇನಿಂಗ್ಸ್ ಆಡಿದರು, ಆರು ಸಿಕ್ಸರ್‌ಗಳು, ಎಂಟು ಬೌಂಡರಿಗಳನ್ನು ಬಾರಿಸಿದರು.
ಜಿತೇಶ್ ಅವರ ಈ ಆಟದಿಂದ ಆರ್‌ಸಿಬಿ ಕೇವಲ 18.4 ಓವರ್‌ಗಳಲ್ಲಿ ಪಂದ್ಯವನ್ನು ಮುಗಿಸಿತು, ಏಕಾನಾ ಕ್ರೀಡಾಂಗಣದಲ್ಲಿ ಇದುವರೆಗಿನ ( 228 ರನ್ ) ಅತ್ಯಂತ ಯಶಸ್ವಿ ರನ್ ಚೇಸ್ ಆಗಿದೆ.
ಈ ಗೆಲುವಿನೊಂದಿಗೆ, RCB ಕ್ವಾಲಿಫೈಯರ್ 1ಕ್ಕೆ ಅರ್ಹತೆ ಪಡೆಯಿತು, ಅಲ್ಲಿ ಅವರು ಪಂಜಾಬ್ ಕಿಂಗ್ಸ್ ವಿರುದ್ಧ ಆಟ ಆಡಿದ್ದಾರೆ. ವಿಕೆಟ್‌ಕೀಪರ್ ಜಿತೇಶ್ ಶರ್ಮಾ ಚಂಡೀಗಢದಲ್ಲಿ ಪಂಜಾಬ್‌ನ 15ನೇ ಓವರ್‌ನ ಆರಂಭಿಕ ಹಂತದಲ್ಲಿ ಒಂದು ಕೈಯಿಂದ ಅದ್ಭುತ ಕ್ಯಾಚ್ ಹಿಡಿದು ಅವರನ್ನು ಮಕಾಡೆ ಮಲಗಿಸಿದರು.
ಇದು ಜಿತೇಶ್‌ರ ಐಪಿಎಲ್ ವೃತ್ತಿಜೀವನದ ಅತ್ಯುತ್ತಮ ಇನಿಂಗ್ಸ್ ಆಗಿದ್ದು, ಇದು ಅವರ ಮೊದಲ ಅರ್ಧಶತಕವಾಗಿತ್ತು 2025 ರ ಐಪಿಎಲ್ ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಅವರನ್ನು ರಿಲೀಸ್ ಮಾಡಿದ ಬಳಿಕ, ಆರ್‌ಸಿಬಿ ಅವರನ್ನು 11 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಜಿತೇಶ್ ಈ ಸೀಸನ್‌ನಲ್ಲಿ ಬ್ಯಾಟ್‌ನಿಂದ ಮಾತ್ರವಲ್ಲ, ರಜತ್ ಪಟಿದಾರ್ ಇಲ್ಲದಿದ್ದಾಗಲೂ ಕೂಡ ಹಂಗಾಮಿ ಕ್ಯಾಪ್ಟನ್ ಆಗಿ ತಂಡ ಮುನ್ನಡೆಸಿದ್ದಾರೆ.