IPL 2020: ಬಲಿಷ್ಠ ತಂಡ ಪ್ರಕಟಿಸಿದ ಅಗರ್ಕರ್; ರಾಹುಲ್, ಕೊಹ್ಲಿ, ಆರ್ಚರ್‌ಗಿಲ್ಲ ಸ್ಥಾನ..!

First Published 14, Nov 2020, 3:45 PM

ಮುಂಬೈ: ಮಳೆ ನಿಂತರೂ ತಕ್ಷಣಕ್ಕೆ ಮಳೆ ಹನಿ ನಿಲ್ಲಲ್ಲ ಎನ್ನುವ ಮಾತಿನಂತೆ, 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಮುಗಿದು ಮೂರ್ನಾಲ್ಕು ದಿನಗಳೇ ಕಳೆದರೂ, ಅಭಿಮಾನಿಗಳು, ಕ್ರಿಕೆಟ್ ವಿಶ್ಲೇಷಕರು, ಮಾಜಿ ಆಟಗಾರರು ಐಪಿಎಲ್‌ ಗುಂಗಿನಿಂದ ಹೊರಬಂದಂತೆ ಕಾಣುತ್ತಿಲ್ಲ.
ಹೌದು, ಟೀಂ ಇಂಡಿಯಾ ಮಾಜಿ ವೇಗದ ಬೌಲರ್‌ ಅಜಿತ್ ಅಗರ್ಕರ್, 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆಡಿದ ಆಟಗಾರರ ಪೈಕಿ ತಮ್ಮ ನೆಚ್ಚಿನ ಬಲಿಷ್ಠ ತಂಡವನ್ನು ಪ್ರಕಟಿಸಿದ್ದಾರೆ. ಅಗರ್ಕರ್ ನೆಚ್ಚಿನ ತಂಡದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ 2 ಆಟಗಾರರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಮುಂಬೈ ಮಾಜಿ ವೇಗಿಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಇದಷ್ಟೇ ಅಲ್ಲ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿ ಆರೆಂಜ್ ಕ್ಯಾಪ್ ಪಡೆದ ಕೆ.ಎಲ್. ರಾಹುಲ್, ಟೂರ್ನಿಯ ಅತ್ಯಂತ ಮೌಲ್ಯಯುತ ಆಟಗಾರ ಎನಿಸಿಕೊಂಡ ಜೋಫ್ರಾ ಆರ್ಚರ್‌ಗೂ ಅಗರ್ಕರ್‌ ತಂಡದಲ್ಲಿ ಸ್ಥಾನ ನೀಡಿಲ್ಲ.

1. ಡೇವಿಡ್ ವಾರ್ನರ್‌

1. ಡೇವಿಡ್ ವಾರ್ನರ್‌

ಸನ್‌ರೈಸರ್ಸ್ ಹೈದರಾಬಾದ್‌ ತಂಡದ ನಾಯಕ ವಾರ್ನರ್‌ 548 ರನ್ ಬಾರಿಸುವ ಮೂಲಕ ಟೂರ್ನಿಯಲ್ಲಿ 3ನೇ ಗರಿಷ್ಠ ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದರು.

2. ಶಿಖರ್ ಧವನ್

2. ಶಿಖರ್ ಧವನ್

ಗಬ್ಬರ್ ಸಿಂಗ್ ಖ್ಯಾತಿಯ ಧವನ್ ಟೂರ್ನಿಯಲ್ಲಿ 2 ಶತಕ ಹಾಗೂ 4 ಅರ್ಧಶತಕ ಸಹಿತ 548 ರನ್ ಬಾರಿಸಿ ಟೂರ್ನಿಯಲ್ಲಿ ಎರಡನೇ ಗರಿಷ್ಠ ರನ್‌ ಸರದಾರನಾಗಿದ್ದರು.

3. ಇಶಾನ್ ಕಿಶನ್

3. ಇಶಾನ್ ಕಿಶನ್

ಮುಂಬೈ ಇಂಡಿಯನ್ಸ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಟೂರ್ನಿಯಲ್ಲಿ 516 ರನ್ ಬಾರಿಸಿ ಗಮನ ಸೆಳೆದಿದ್ದು, ಅಗರ್ಕರ್‌ ತಂಡದಲ್ಲಿ 3ನೇ ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದಾರೆ.

4. ಸೂರ್ಯಕುಮಾರ್ ಯಾದವ್

4. ಸೂರ್ಯಕುಮಾರ್ ಯಾದವ್

ಮುಂಬೈ ಇಂಡಿಯನ್ಸ್‌ ತಂಡದ ಮತ್ತೋರ್ವ ನಂಬಿಕಸ್ಥ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್ 480 ರನ್ ಬಾರಿಸಿದ್ದು, ಮುಂಬೈ ಮಾಜಿ ವೇಗಿಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

5. ಎಬಿ ಡಿವಿಲಿಯರ್ಸ್

5. ಎಬಿ ಡಿವಿಲಿಯರ್ಸ್

ಮಿಸ್ಟರ್ 360 ಖ್ಯಾತಿಯ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್‌ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರೂಪದಲ್ಲಿ ಸ್ಥಾನ ಪಡೆದಿದ್ದಾರೆ.

6. ಹಾರ್ದಿಕ್ ಪಾಂಡ್ಯ

6. ಹಾರ್ದಿಕ್ ಪಾಂಡ್ಯ

ಡೆತ್ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್‌ ನಡೆಸುವ ಮುಂಬೈ ಇಂಡಿಯನ್ಸ್‌ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮಾಜಿ ಟೀಂ ಇಂಡಿಯಾ ವೇಗಿಯ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

7. ಮಾರ್ಕಸ್ ಸ್ಟೋಯ್ನಿಸ್

7. ಮಾರ್ಕಸ್ ಸ್ಟೋಯ್ನಿಸ್

ಡೆಲ್ಲಿ ಕ್ಯಾಪಿಟಲ್ಸ್‌ ಸ್ಟಾರ್ ಆಲ್ರೌಂಡರ್.ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಆಟಗಾರ

8. ಕಗಿಸೋ ರಬಾಡ

8. ಕಗಿಸೋ ರಬಾಡ

ಟೂರ್ನಿಯ ಪರ್ಪಲ್‌ ಕ್ಯಾಪ್ ವಿಜೇತ ಡೆಲ್ಲಿ ವೇಗಿ ರಬಾಡ ವೇಗದ ಬೌಲರ್ ರೂಪದಲ್ಲಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

9. ಜಸ್ಪ್ರೀತ್ ಬುಮ್ರಾ

9. ಜಸ್ಪ್ರೀತ್ ಬುಮ್ರಾ

ಡೆತ್ ಓವರ್‌ ಸ್ಪೆಷಲಿಸ್ಟ್ ಬುಮ್ರಾ, ಮುಂಬೈ ಪರ ಮಿಂಚಿನ ದಾಳಿ ನಡೆಸಿ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

10. ಯುಜುವೇಂದ್ರ ಚಹಲ್

10. ಯುಜುವೇಂದ್ರ ಚಹಲ್

ಆರ್‌ಸಿಬಿ ಸ್ಪಿನ್ ಅಸ್ತ್ರ ಚಹಲ್, ಉಪಯುಕ್ತ ಸಂದರ್ಭದಲ್ಲಿ ವಿಕೆಟ್ ಕಬಳಿಸುವ ಸಾಮರ್ಥ್ಯ ಹೊಂದಿದ್ದು, ಅಗರ್ಕರ್‌ ಕನಸಿನ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

11. ವರುಣ್ ಚಕ್ರವರ್ತಿ

11. ವರುಣ್ ಚಕ್ರವರ್ತಿ

13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಇನಿಂಗ್ಸ್‌ವೊಂದರಲ್ಲಿ 5 ವಿಕೆಟ್ ಪಡೆದ ಏಕೈಕ ಬೌಲರ್ ವರುಣ್ ಚಕ್ರವರ್ತಿ 11 ಆಟಗಾರನಾಗಿ ಅಗರ್ಕರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.